ಶಿಕ್ಷಣ ಸಚಿವಾಲಯ
ಶಿಕ್ಷಕರ ದಿನ 2026 ರಂದು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳ 21 ಶಿಕ್ಷಕರು/ಬೋಧಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಿರುವ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು
प्रविष्टि तिथि:
24 AUG 2026 3:49PM by PIB Bengaluru
ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 5, 2026 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು (HEIs) ಮತ್ತು ಪಾಲಿಟೆಕ್ನಿಕ್‌ಗಳ 21 ಶಿಕ್ಷಕರು/ಬೋಧಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗಳನ್ನು (NAT) ಪ್ರದಾನ ಮಾಡಲಿದ್ದಾರೆ.
ಈ ವರ್ಷ, ಕೇಂದ್ರ ಉನ್ನತ ಶಿಕ್ಷಣ ಸಂಸ್ಥೆಗಳ 12 ಶಿಕ್ಷಕರು/ಬೋಧಕರು, ಮೂರು ಸರ್ಕಾರಿ ಮತ್ತು ಎರಡು ಖಾಸಗಿ ಕಾಲೇಜುಗಳು ಸೇರಿದಂತೆ ರಾಜ್ಯ ವಿಶ್ವವಿದ್ಯಾಲಯಗಳ ಐದು ಹಾಗೂ ಎರಡು ಸರ್ಕಾರಿ ಮತ್ತು ಎರಡು ಖಾಸಗಿ ಪಾಲಿಟೆಕ್ನಿಕ್‌ಗಳು ಸೇರಿದಂತೆ ಪಾಲಿಟೆಕ್ನಿಕ್‌ಗಳ ನಾಲ್ವರು ಶಿಕ್ಷಕರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಎನ್‌ಎಟಿ (NAT), 2026 ಕ್ಕಾಗಿ ನಾಮನಿರ್ದೇಶನಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ - @www.awards.gov.in ಮೂಲಕ ಆನ್‌ಲೈನ್ ನಲ್ಲಿ ಆಹ್ವಾನಿಸಲಾಗಿತ್ತು ಮತ್ತು ಜನ ಭಾಗಿದಾರಿಯ ಭಾಗವಾಗಿ ಸ್ವಯಂ, ಸಾಂಸ್ಥಿಕ ಮತ್ತು ಸಹೋದ್ಯೋಗಿ ನಾಮನಿರ್ದೇಶನದ ನಿಬಂಧನೆಗಳನ್ನು ಒಳಗೊಂಡಿತ್ತು. 2026 ರ ಮೇ 26 ರಿಂದ ಜುಲೈ 20 ರವರೆಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು.
ಮಾದರಿ ಶಿಕ್ಷಕರು/ಬೋಧಕ ಸಿಬ್ಬಂದಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಮತ್ತು ಬೋಧನಾ-ಕಲಿಕೆಯ ಪರಿಣಾಮಕಾರಿತ್ವ, ಪ್ರಸಾರ ಚಟುವಟಿಕೆಗಳು, ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ಪ್ರಾಯೋಜಿತ ಸಂಶೋಧನೆ/ಬೋಧಕರ ಅಭಿವೃದ್ಧಿ ಕಾರ್ಯಕ್ರಮಗಳು/ಸಮಾಲೋಚನಾ ಬೋಧನೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಅವರ ಸಾಧನೆಯನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳ ಪ್ರಕ್ರಿಯೆಯನ್ನು ಒಳಗೊಂಡಿದೆ:
- ನಾಮನಿರ್ದೇಶಿತರ ಪ್ರಾಥಮಿಕ ಶಾರ್ಟ್‌ಲಿಸ್ಟ್‌ಗಾಗಿ ಪ್ರಾಥಮಿಕ ಹುಡುಕಾಟ-ಸಹಿತ ತನಿಖಾ ಸಮಿತಿಯಿಂದ ಮೌಲ್ಯಮಾಪನ ಮತ್ತು
- ತೀರ್ಪುಗಾರರ ಸಮಿತಿಯಿಂದ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಂದ ಪ್ರಶಸ್ತಿ ವಿಜೇತರ ಆಯ್ಕೆ.
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯ ಅಡಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳಿಗಾಗಿ ಎರಡು ವರ್ಗದ ಪ್ರಶಸ್ತಿಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು 2023 ರಲ್ಲಿ. ಅಲ್ಲಿಯವರೆಗೆ, ಪ್ರಶಸ್ತಿಗಳನ್ನು ಶಾಲಾ ಶಿಕ್ಷಕರಿಗೆ ಮಾತ್ರ ಪ್ರಧಾನ ಮಾಡಲಾಗುತ್ತಿತ್ತು. ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸಲು ಪುರಸ್ಕಾರಗಳು ಮತ್ತು ಮನ್ನಣೆಗಳಂತಹ ಪ್ರೋತ್ಸಾಹಕಗಳನ್ನು ನೀಡಬೇಕು ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಶಸ್ತಿಗಳ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.
ಪ್ರಶಸ್ತಿ ವಿಜೇತರ ಪಟ್ಟಿಯನ್ನು ಲಗತ್ತಿಸಲಾಗಿದೆ.
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗಳು - 2026 - ಉನ್ನತ ಶಿಕ್ಷಣ ಇಲಾಖೆ
|
ಕ್ರ. ಸಂ.
|
ಹೆಸರು
|
ಸಂಸ್ಥೆ
|
ವಿಷಯ/ವಿಭಾಗ
|
ಲಿಂಗ
|
|
1.
|
ಪ್ರೊ. ಅವಲೋಕಿತಾ ಅಗರ್‌ವಾಲ್
|
ಐಐಟಿ ರೂರ್ಕಿ, ಉತ್ತರಾಖಂಡ
|
ಸುಸ್ಥಿರ ವಾಸ್ತುಶಿಲ್ಪ ಮತ್ತು ನಿರ್ಮಿತ ಪರಿಸರ
|
ಮಹಿಳೆ
|
|
2.
|
ಪ್ರೊ. ಕೀರ್ತಿ ಚಂದ್ರ ಸಾಹು
|
ಐಐಟಿ ಹೈದರಾಬಾದ್, ತೆಲಂಗಾಣ
|
ಕೆಮಿಕಲ್ ಇಂಜಿನಿಯರಿಂಗ್
|
ಪುರುಷ
|
|
3.
|
ಪ್ರೊ. ವಿನಯ್ ಚಮೋಲಾ
|
ಬಿಟ್ಸ್ ಪಿಲಾನಿ, ರಾಜಸ್ಥಾನ
|
ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
|
ಪುರುಷ
|
|
4.
|
ಡಾ. ಶ್ರೀಕಾಂತ್ ಗೊಲ್ಲಪುಡಿ
|
ಐಐಟಿ ಭುವನೇಶ್ವರ, ಒಡಿಶಾ
|
ಲೋಹಶಾಸ್ತ್ರ ಮತ್ತು ಸಾಮಗ್ರಿ ವಿಜ್ಞಾನ
|
ಪುರುಷ
|
|
5.
|
ಡಾ. ಮಿಥುನ್ ರಾಧಾಕೃಷ್ಣನ್
|
ಐಐಟಿ ಗಾಂಧಿನಗರ, ಗುಜರಾತ್
|
ಕೆಮಿಕಲ್ ಇಂಜಿನಿಯರಿಂಗ್
|
ಪುರುಷ
|
|
6.
|
ಪ್ರೊ. ಸೌರವ್ ದತ್ತಾ
|
ಐಐಎಸ್‌ಇಆರ್ ಭೋಪಾಲ್, ಮಧ್ಯಪ್ರದೇಶ
|
ಸಸ್ಯ ವಿಜ್ಞಾನ
|
ಪುರುಷ
|
|
7.
|
ಪ್ರೊ. ವಿಕ್ರಮ್ ವಿಶಾಲ್
|
ಐಐಟಿ ಬಾಂಬೆ, ಮಹಾರಾಷ್ಟ್ರ
|
ಭೂ ವಿಜ್ಞಾನ
|
ಪುರುಷ
|
|
8.
|
ಪ್ರೊ. ಸರ್ವಯ್ಯ ಜಯರಾಜ್‌ಸಿಂಹ ಇಂದ್ರಜಿತ್‌ಸಿಂಹ
|
ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ, ಗಾಂಧಿನಗರ, ಗುಜರಾತ್
|
ಫೊರೆನ್ಸಿಕ್ ಫಾರ್ಮಸಿ ಮತ್ತು ಫುಡ್ ಫೊರೆನ್ಸಿಕ್ಸ್
|
ಪುರುಷ
|
|
9.
|
ಪ್ರೊ. ಶಂಕರ್ ಪ್ರಸಾದ್ ರಥ್
|
ಐಐಟಿ ಕಾನ್ಪುರ, ಉತ್ತರ ಪ್ರದೇಶ
|
ರಾಸಾಯನಿಕ ವಿಜ್ಞಾನ
|
ಪುರುಷ
|
|
10.
|
ಡಾ. ಮನೀಷಾ ನಿಗಮ್
|
ಹೇಮಾವತಿ ನಂದನ್ ಬಹುಗುಣ ಗಡ್ವಾಲ್ ವಿಶ್ವವಿದ್ಯಾಲಯ, ಶ್ರೀನಗರ, ಉತ್ತರಾಖಂಡ
|
ಜೈವಿಕ ರಸಾಯನಶಾಸ್ತ್ರ (ಬಯೋಕೆಮಿಸ್ಟ್ರಿ)
|
ಮಹಿಳೆ
|
|
11.
|
ಡಾ. ಅಮರ್ ಮೋಹನ್‌ರಾವ್ ತಕ್ಸಂಡೆ
|
ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು (JNMC), ವರ್ಧಾ, ಮಹಾರಾಷ್ಟ್ರ
|
ವೈದ್ಯಕೀಯ- ಮಕ್ಕಳ ಚಿಕಿತ್ಸಾಶಾಸ್ತ್ರ (ಪೀಡಿಯಾಟ್ರಿಕ್ಸ್)
|
ಪುರುಷ
|
|
12.
|
ಡಾ. ಅರುಣ್ ಬಾಬು
|
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ಮಂಗಳಗಿರಿ, ಆಂಧ್ರಪ್ರದೇಶ
|
ವೈದ್ಯಕೀಯ- ಮಕ್ಕಳ ಚಿಕಿತ್ಸಾಶಾಸ್ತ್ರ (ಪೀಡಿಯಾಟ್ರಿಕ್ಸ್)
|
ಪುರುಷ
|
|
13.
|
ಡಾ. ಪುಖ್ರಂಬಮ್ ಲಿಲಾಬತಿ ದೇವಿ
|
ನೃತ್ಯ ಮತ್ತು ಸಂಗೀತ ಇಲಾಖೆ, ಮಣಿಪುರ ವಿಶ್ವವಿದ್ಯಾಲಯ, ಇಂಫಾಲ, ಮಣಿಪುರ
|
ಮಣಿಪುರಿ ನೃತ್ಯ
|
ಮಹಿಳೆ
|
|
14.
|
ಪ್ರೊ. ಡಾ. ಅಶುತೋಷ್ ಮೋಹನ್
|
ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ವಾರಾಣಸಿ
|
ನಿರ್ವಹಣೆ (ಮ್ಯಾನೇಜ್‌ಮೆಂಟ್)
|
ಪುರುಷ
|
|
15.
|
ಪ್ರೊ. ಅಂಕುರನ್ ದತ್ತಾ
|
ಗೌಹಾಟಿ ವಿಶ್ವವಿದ್ಯಾಲಯ, ಗುವಾಹಾಟಿ, ಅಸ್ಸಾಂ
|
ಸಮೂಹ ಸಂವಹನ (ಮಾಸ್ ಕಮ್ಯುನಿಕೇಷನ್)
|
ಪುರುಷ
|
|
16.
|
ಶ್ರೀಮತಿ ಶಿವಾನಿ ವಿ.
|
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
|
ಸಂಸ್ಕೃತ
|
ಮಹಿಳೆ
|
|
17.
|
ಪ್ರೊ. ರಾಜೀವ್ ಚೌಧರಿ
|
ಪಂಡಿತ್ ರವಿಶಂಕರ್ ಶುಕ್ಲ ವಿಶ್ವವಿದ್ಯಾಲಯ, ರಾಯ್‌ಪುರ, ಛತ್ತೀಸ್‌ಗಢ
|
ದೈಹಿಕ ಶಿಕ್ಷಣ, ಯೋಗ ಶಿಕ್ಷಣ
|
ಪುರುಷ
|
|
18.
|
ಡಾ. ವಿಶ್ವನಾಥ ಎಚ್. ಎಸ್.
|
ಎಂ.ಇ.ಐ. ಪಾಲಿಟೆಕ್ನಿಕ್, ಬೆಂಗಳೂರು, ಕರ್ನಾಟಕ
|
ಸಿವಿಲ್ ಇಂಜಿನಿಯರಿಂಗ್
|
ಪುರುಷ
|
|
19.
|
ಡಾ. ಶಶಿಕಲಾ ಎಸ್.
|
ಪಿಎಸ್‌ಜಿ ಪಾಲಿಟೆಕ್ನಿಕ್ ಕಾಲೇಜು, ಕೊಯಮತ್ತೂರು, ತಮಿಳುನಾಡು
|
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
|
ಮಹಿಳೆ
|
|
20.
|
ಡಾ. ಕಣ್ಣನ್ ರತ್ನಂ
|
ಶಕ್ತಿ ಪಾಲಿಟೆಕ್ನಿಕ್ ಕಾಲೇಜು (ಸರ್ಕಾರಿ ಅನುದಾನಿತ), ಈರೋಡ್, ತಮಿಳುನಾಡು
|
ಭೌತಶಾಸ್ತ್ರ
|
ಪುರುಷ
|
|
21.
|
ಡಾ. ಸಂದೀಪನ್ ಪ್ರಹ್ಲಾದ್ ನರೋಟೆ
|
ಸರ್ಕಾರಿ ಪಾಲಿಟೆಕ್ನಿಕ್, ಸೋಲಾಪುರ, ಮಹಾರಾಷ್ಟ್ರ
|
ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ದೂರಸಂಪರ್ಕ
|
ಪುರುಷ
|
*****
(रिलीज़ आईडी: 2302767)
आगंतुक पटल : 25