ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

5 ಕೋಟಿ ಡೌನ್‌ಲೋಡ್‌ಗಳನ್ನು ದಾಟಿದ ಆಧಾರ್ ಅಪ್ಲಿಕೇಷನ್, ಅನುಕೂಲಕರ ಮತ್ತು ಜನಸ್ನೇಹಿ ಡಿಜಿಟಲ್ ಗುರುತಿನ ಸೇವೆಗಳ ಬಲವರ್ಧನೆ


ಆಧಾರ್ ಅಪ್ಲಿಕೇಷನ್ ಬಳಸಿ 60 ಲಕ್ಷಕ್ಕೂ ಅಧಿಕ ಜನರ ಮೊಬೈಲ್ ಸಂಖ್ಯೆಗಳ ನವೀಕರಣ, 15 ಲಕ್ಷಕ್ಕೂ ಅಧಿಕ ಜನರಿಂದ ವಿಳಾಸ ನವೀಕರಣ

ಆಫ್‌ಲೈನ್ ಪರಿಶೀಲನೆ ಹುಡುಕುವ ಘಟಕಗಳಾಗಿ 200 ಘಟಕಗಳು ಆನ್‌ಬೋರ್ಡ್‌ನಲ್ಲಿ (ಒ ವಿ ಎಸ್ ಇಗಳು)

प्रविष्टि तिथि: 20 AUG 2026 1:45PM by PIB Bengaluru

ಆಧಾರ್ ಅಪ್ಲಿಕೇಷನ್ 50 ಮಿಲಿಯನ್ (5 ಕೋಟಿ) ಡೌನ್‌ಲೋಡ್‌ಗಳ ಗಮನಾರ್ಹ ಮೈಲಿಗಲ್ಲನ್ನು ದಾಟಿದೆ, ಇದು ಜನಸಾಮಾನ್ಯರಿಗೆ ಅನುಕೂಲಕರ ಮತ್ತು ಮೊದಲ ಡಿಜಿಟಲ್ ಆಧಾರ್ ಸೇವೆಗಳ ಹೆಚ್ಚುತ್ತಿರುವ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಮೈಲಿಗಲ್ಲು ಜನರು (ನಿವಾಸಿಗಳು) ಮತ್ತು ಯುಐಡಿಎಐ ನಡುವಿನ ಡಿಜಿಟಲ್ ಮುಖಾಮುಖಿ (ಇಂಟರ್ಫೇಸ್) ಆಗಿ ಆಧಾರ್ ಅಪ್ಲಿಕೇಷನ್‌ನ ಪಾತ್ರದ ಗಮನಾರ್ಹ ವಿಸ್ತರಣೆಯನ್ನು ಗುರುತಿಸುತ್ತದೆ, ಆಧಾರ್ ಸಂಖ್ಯೆ ಹೊಂದಿರುವವರು ಮೊಬೈಲ್ ಸಂಖ್ಯೆ ನವೀಕರಣ, ವಿಳಾಸ ನವೀಕರಣ, ಇಮೇಲ್ ನವೀಕರಣ, ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಮತ್ತು ಇ-ಆಧಾರ್ ಡೌನ್‌ಲೋಡ್ ಸೇರಿದಂತೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಬೆಳೆಯುತ್ತಿರುವ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಅಪ್ಲಿಕೇಷನ್ ಆರಂಭವಾದಾಗಿನಿಂದ ಸದೃಢ ಮತ್ತು ನಿರಂತರ ಬಳಕೆಯನ್ನು ಕಂಡಿದೆ. ಆಧಾರ್ ಅಪ್ಲಿಕೇಶನ್ ಬಳಸಿ 60 ಲಕ್ಷಕ್ಕೂ ಅಧಿಕ ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಿದರೆ, ಆಧಾರ್ ಅಪ್ಲಿಕೇಷನ್ ಬಳಸಿ 15 ಲಕ್ಷಕ್ಕೂ ಅಧಿಕ ವಿಳಾಸ ನವೀಕರಣಗಳು ಮತ್ತು 23 ಲಕ್ಷಕ್ಕೂ ಅಧಿಕ ಇಮೇಲ್ ನವೀಕರಣಗಳನ್ನು ಮಾಡಲಾಗಿದೆ.

ಈ ಸೇವೆಗಳ ಹೆಚ್ಚುತ್ತಿರುವ ಅಳವಡಿಕೆಯು, ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿಲ್ಲದೆ, ಆಧಾರ್-ಸಂಬಂಧಿತ ಸೇವೆಗಳನ್ನು ನಿವಾಸಿಗಳು ಡಿಜಿಟಲ್ ರೂಪದಲ್ಲಿ ಪಡೆಯುತ್ತಿರುವುದು ಹೆಚ್ಚಾಗುತ್ತಿರುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಆಧಾರ್ ಅಪ್ಲಿಕೇಷನ್ ಅನ್ನು "ತೋರಿಸು, ಹಂಚಿಕೊಳ್ಳಿ ಮತ್ತು ಪರಿಶೀಲಿಸಿ" (“Show, Share and Verify”) ಎಂಬ ತತ್ವ ಆಧರಿಸಿ ವಿನ್ಯಾಸಗೊಳಿಸಲಾಗಿದೆ, ಇದು ಆಧಾರ್ ಸಂಖ್ಯೆ ಹೊಂದಿರುವವರಿಗೆ ಅನುಕೂಲಕರ ಗುರುತಿನ ಪರಿಶೀಲನೆಯನ್ನು ಸಕ್ರಿಯಗೊಳಿಸುವಾಗ ಅವರ ಆಧಾರ್ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣ ಒದಗಿಸುತ್ತದೆ.

ಆಧಾರ್ ಅಪ್ಲಿಕೇಷನ್‌ನ ಬೆಳವಣಿಗೆಯ ಜೊತೆಗೆ ಯುಐಡಿಎಐ ಸುರಕ್ಷಿತ ಮತ್ತು ಅನುಕೂಲಕರ ಆಫ್‌ಲೈನ್ ಪರಿಶೀಲನೆಗಾಗಿ ಪೂರಕ ವ್ಯವಸ್ಥೆಯನ್ನು ವಿಸ್ತರಿಸುವುದನ್ನು ಮುಂದುವರೆಸಿದೆ. ಜನವರಿಯಲ್ಲಿ ಬಿಡುಗಡೆಯಾದಾಗಿನಿಂದ ಯುಐಡಿಎಐ ಈಗ 200 ಕ್ಕೂ ಹೆಚ್ಚು ಘಟಕಗಳನ್ನು ಆಫ್‌ಲೈನ್ ಪರಿಶೀಲನೆ ಹುಡುಕುವ ಘಟಕಗಳಾಗಿ (ಒವಿಎಸ್ ಇ) ಸೇರಿಸಿಕೊಂಡಿದೆ.

ಆಧಾರ್ ಆಫ್‌ಲೈನ್ ಕಾರ್ಯವಿಧಾನದ ಮೂಲಕ ಸುರಕ್ಷಿತ, ಸಮ್ಮತಿ ಆಧಾರಿತ ಮತ್ತು ಕಾಗದರಹಿತ ಪರಿಶೀಲನೆಯನ್ನು ಸಕ್ರಿಯಗೊಳಿಸುವಲ್ಲಿ ಈ ಮೈಲಿಗಲ್ಲು ಒಂದು ಪ್ರಮುಖ ಪ್ರಗತಿಯನ್ನು ಗುರುತಿಸುತ್ತದೆ , ಆ ಮೂಲಕ ಸೇವಾ ಪೂರೈಕೆದಾರರು ಮತ್ತು ಸಾರ್ವಜನಿಕರು ಇಬ್ಬರನ್ನೂ ಸಮಾನವಾಗಿ ಸಬಲೀಕರಣಗೊಳಿಸುತ್ತದೆ.

ಈ ಒವಿಎಸ್ಇ ಪಾಲುದಾರರ ಆನ್‌ಬೋರ್ಡಿಂಗ್, ಬಳಕೆದಾರ ನಿಯಂತ್ರಣಕ್ಕೆ ಆದ್ಯತೆ ನೀಡುವ ಮತ್ತು  ಸುಲಭ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಆಧಾರ್- ಆಧರಿಸಿದ ಗೌಪ್ಯತೆ-ಮೊದಲ ಡಿಜಿಟಲ್ ಪರಿಶೀಲನಾ ಚೌಕಟ್ಟುಗಳಲ್ಲಿ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

QR ಕೋಡ್-ಆಧಾರಿತ ಪರಿಶೀಲನೆ ಮತ್ತು ಸುರಕ್ಷಿತ ಡಿಜಿಟಲ್ ಸಹಿ ಮಾಡಿದ ದಾಖಲೆಗಳಂತಹ ಆಧಾರ್ ಆಫ್‌ಲೈನ್ ಪರಿಶೀಲನಾ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ, ಈ ಘಟಕಗಳು ಈಗ ಯುಐಡಿಎಐ ನ ಕೇಂದ್ರ ಡೇಟಾಬೇಸ್‌ಗೆ ನೈಜ-ಸಮಯದ ಸಂಪರ್ಕದ ಅಗತ್ಯವಿಲ್ಲದೇ ಗುರುತಿನ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಈ ವಿಧಾನವು ಸದೃಢವಾದ ಜನ ಸ್ನೇಹಿ ವಿಧಾನಕ್ಕೆ ಒತ್ತು ನೀಡುತ್ತದೆ, ಆಧಾರ್ ಸಂಖ್ಯೆ ಹೊಂದಿರುವವರು ಕನಿಷ್ಠ ಅಗತ್ಯ ಡೇಟಾವನ್ನು ಮಾತ್ರ ಹಂಚಿಕೊಳ್ಳಬಹುದು ಎಂದು ಖಚಿತಪಡಿಸುತ್ತದೆ, ಇದರಿಂದಾಗಿ ಗೌಪ್ಯತೆಯನ್ನು ಹೆಚ್ಚಿಸುತ್ತದೆ. ಈ ಸರಳೀಕೃತ ಪರಿಶೀಲನಾ ಪಯಣವು ಪಾರದರ್ಶಕ ಮತ್ತು ಸಮ್ಮತಿ ಆಧಾರಿತ ಸಂವಹನಗಳ ಮೂಲಕ ವಿಶ್ವಾಸವನ್ನು ವೃದ್ಧಿಸುತ್ತದೆ.

ಈ ಉಪಕ್ರಮಗಳು ಸರ್ಕಾರದ ಡಿಜಿಟಲ್ ಇಂಡಿಯಾ ದೂರದೃಷ್ಟಿ ಮತ್ತು ಸುರಕ್ಷಿತ, ಸುಲಭವಾಗಿ ಲಭ್ಯವಾಗಬಹುದಾದ ಮತ್ತು ತಂತ್ರಜ್ಞಾನ ಆಧರಿಸಿದ ಸಾರ್ವಜನಿಕ ಸೇವೆಗಳ ಮೂಲಕ ಜೀವನವನ್ನು ಸುಲಭಗೊಳಿಸುವ ಮತ್ತು ಸುಧಾರಿಸುವ ವಿಶಾಲ ಉದ್ದೇಶದೊಂದಿಗೆ ಹೊಂದಿಕೆಯಾಗುತ್ತವೆ.

 

*****


(रिलीज़ आईडी: 2301497) आगंतुक पटल : 18
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Bengali , Punjabi , Gujarati , Malayalam