ಸಂವಹನ ಸಚಿವಾಲಯ
ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು 12ನೇ ಬ್ರಿಕ್ಸ್ ಸಂವಹನ ಸಚಿವರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ
प्रविष्टि तिथि:
20 AUG 2026 12:43PM by PIB Bengaluru
ಭಾರತವು ತನ್ನ 'ಬ್ರಿಕ್ಸ್' ಅಧ್ಯಕ್ಷತೆಯಲ್ಲಿ 2026ರ ಆಗಸ್ಟ್ 21ರಂದು 12ನೇ ಬ್ರಿಕ್ಸ್ ಸಂವಹನ ಸಚಿವರ ಸಭೆಯನ್ನು ಆಯೋಜಿಸಲಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು (ಐಸಿಟಿ), ಡಿಜಿಟಲ್ ಪರಿವರ್ತನೆ, ನಾವೀನ್ಯತೆ ಮತ್ತು ಸದೃಢ ಡಿಜಿಟಲ್ ಮೂಲಸೌಕರ್ಯದಲ್ಲಿನ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ಈ ಸಭೆಯಲ್ಲಿ ಸಂವಹನ ಸಚಿವರು ಮತ್ತು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಹಿರಿಯ ಪ್ರತಿನಿಧಿಗಳು ಒಟ್ಟುಗೂಡಲಿದ್ದಾರೆ.
ಭಾರತ ಸರ್ಕಾರದ ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು 12ನೇ 'ಬ್ರಿಕ್ಸ್ ಸಂವಹನ ಸಚಿವರ ಸಭೆ'ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಧ್ಯೇಯವಾಕ್ಯ "ಸದೃಢತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ಹಾಗೂ ಐಸಿಟಿ ಟ್ರ್ಯಾಕ್‌ನ - "ಸದೃ ಭವಿಷ್ಯಕ್ಕಾಗಿ ನಾವೀನ್ಯತೆ, ಸಹಕಾರ ಮತ್ತು ಪರಿವರ್ತನೆ (ಐಸಿಟಿ)" ಎಂಬ ಧ್ಯೇಯವಾಕ್ಯದಡಿಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಈ ಆದ್ಯತೆಗಳು ಎಲ್ಲರನ್ನೂ ಒಳಗೊಂಡ, ಸುರಕ್ಷಿತ ಮತ್ತು ಸುಸ್ಥಿರ ಡಿಜಿಟಲ್ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು 'ಬ್ರಿಕ್ಸ್' ದೇಶಗಳ ನಡುವೆ ತಂತ್ರಜ್ಞಾನ ಸಹಕಾರವನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತವೆ.
12ನೇ ಬ್ರಿಕ್ಸ್ ಸಂವಹನ ಸಚಿವರ ಸಭೆಯು ಸದಸ್ಯ ರಾಷ್ಟ್ರಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಭವಿಷ್ಯದ ಜಾಲಗಳು, ಸೈಬರ್ ಭದ್ರತೆ, ಸಾಮರ್ಥ್ಯ ವರ್ಧನೆ ಮತ್ತು ಎಲ್ಲರನ್ನೂ ಒಳಗೊಂಡ ಡಿಜಿಟಲ್ ಸಂಪರ್ಕದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. ಬ್ರಿಕ್ಸ್ ದೇಶಗಳು ಮತ್ತು ಜಾಗತಿಕ ದಕ್ಷಿಣದಾದ್ಯಂತ ಡಿಜಿಟಲ್ ರೂಪಾಂತರವನ್ನು ಬೆಂಬಲಿಸಲು ಪ್ರಾಯೋಗಿಕ ಸಹಕಾರವನ್ನು ಮುನ್ನಡೆಸಲು ಹಾಗೂ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವತ್ತ ಈ ಚರ್ಚೆಗಳು ಗಮನ ಹರಿಸಲಿವೆ.
ಭಾರತವು ತನ್ನ ಬ್ರಿಕ್ಸ್ ಅಧ್ಯಕ್ಷತೆಯ ಅವಧಿಯಲ್ಲಿ, ಸದೃ ಡಿಜಿಟಲ್ ಮೂಲಸೌಕರ್ಯ, ಭವಿಷ್ಯದ ಸಂಪರ್ಕ ಜಾಲಗಳು, ಸೈಬರ್ ಭದ್ರತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ), ನಾವೀನ್ಯತೆ ಮತ್ತು ಸಾಮರ್ಥ್ಯ ವರ್ಧನೆಯ ಮೇಲೆ ಗಮನ ಕೇಂದ್ರೀಕರಿಸಿದ ಉಪಕ್ರಮಗಳ ಮೂಲಕ 'ಐಸಿಟಿ'ಯಲ್ಲಿ ಸಹಕಾರವನ್ನು ಬಲಪಡಿಸಲು ಬಲವಾದ ಒತ್ತು ನೀಡಿದೆ. ಪ್ರಸ್ತಾವಿತ 'ಬ್ರಿಕ್ಸ್ ಸಾಮರ್ಥ್ಯ ನಿರ್ಮಾಣ ಕೇಂದ್ರಗಳು' ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸುಧಾರಿತ ಸಹಕಾರ ಸೇರಿದಂತೆ 'ಐಸಿಟಿ'ಯಲ್ಲಿ ಸಹಕಾರಕ್ಕಾಗಿ ಬ್ರಿಕ್ಸ್ ಕಾರ್ಯಪಡೆ ಅಡಿಯಲ್ಲಿ ದೂರಸಂಪರ್ಕ ಇಲಾಖೆಯು ಚರ್ಚೆಗಳನ್ನು ಮುನ್ನಡೆಸುತ್ತಿದೆ.
2025ರಲ್ಲಿ ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆದ 11ನೇ ಬ್ರಿಕ್ಸ್ ಸಂವಹನ ಸಚಿವರ ಸಭೆಯ ಫಲಿತಾಂಶಗಳು ಮತ್ತು ಗುರುತಿಸಲಾದ ಸಹಕಾರದ ಕ್ಷೇತ್ರಗಳ ತಳ ಹದಿಯ ಮೇಲೆ ಈ ಸಭೆ ನಡೆಯಲಿದೆ. ಹಿಂದಿನ ಸಭೆಯು 'ಐಸಿಟಿ', ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಜಾಗತಿಕ ಡಿಜಿಟಲ್ ಆಡಳಿತದಲ್ಲಿ ಬ್ರಿಕ್ಸ್ ಸದಸ್ಯರ ನಡುವೆ ನಿರಂತರ ಸಹಕಾರದ ಮಹತ್ವವನ್ನು ಪುನರುಚ್ಚರಿಸಿತು.
ಕಾರ್ಯಕ್ರಮದ ಭಾಗವಾಗಿ, ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಮಾಧ್ಯಮಗೋಷ್ಠಿಯನ್ನು ಸಹ ನಡೆಸಲಿದ್ದು, 12ನೇ ಬ್ರಿಕ್ಸ್ ಸಂವಹನ ಸಚಿವರ ಸಭೆಯ ಚರ್ಚೆಗಳು ಮತ್ತು ಪ್ರಮುಖ ಫಲಿತಾಂಶಗಳ ಅವಲೋಕನವನ್ನು ಒದಗಿಸಲಿದ್ದಾರೆ.
ಕೇಂದ್ರ ಸಚಿವರು 'ಡಿಜಿಟಲ್ ಬ್ರಿಕ್ಸ್ ಫೋರಂ ಪ್ರದರ್ಶನ ಮೇಳಕ್ಕೂ ಭೇಟಿ ನೀಡಲಿದ್ದಾರೆ, ಇಲ್ಲಿ ಬ್ರಿಕ್ಸ್ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಡಿಜಿಟಲ್ ತಂತ್ರಜ್ಞಾನಗಳು, ನಾವೀನ್ಯತೆಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಲಾಗುವುದು.
ಈ ಪ್ರದರ್ಶನವು ಭಾರತದ ತಾಂತ್ರಿಕ ಸಾಮರ್ಥ್ಯಗಳನ್ನು ಉಲ್ಲೇಖಿಸಲು ಮತ್ತು ಭಾಗವಹಿಸುವ ದೇಶಗಳು ಹಾಗೂ ಮಧ್ಯಸ್ಥಗಾರರ ನಡುವೆ ಹೆಚ್ಚಿನ ಸಂವಹನ ಮತ್ತು ಜ್ಞಾನ ವಿನಿಮಯವನ್ನು ಸುಗಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
12ನೇ ಬ್ರಿಕ್ಸ್ ಸಂವಹನ ಸಚಿವರ ಸಭೆಯು ಭಾರತದ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ. ಇದು ಡಿಜಿಟಲ್ ಡೊಮೇನ್‌ನಲ್ಲಿ ಬಲವಾದ ಪಾಲುದಾರಿಕೆಯನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 'ಐಸಿಟಿ'ಗಳಲ್ಲಿ ಹೆಚ್ಚಿನ ಸಹಕಾರದ ಮೂಲಕ, ಬ್ರಿಕ್ಸ್ ರಾಷ್ಟ್ರಗಳು ಹೆಚ್ಚು ಸದೃಢ, ಎಲ್ಲರನ್ನೂ ಒಳಗೊಂಡ, ಸುರಕ್ಷಿತ ಮತ್ತು ಸುಸ್ಥಿರ ಡಿಜಿಟಲ್ ಭವಿಷ್ಯಕ್ಕೆ ಕೊಡುಗೆ ನೀಡಬಹುದು.
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(रिलीज़ आईडी: 2301485)
आगंतुक पटल : 23