ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಬಿಹಾರದಲ್ಲಿ ಒಟ್ಟು 3590.73 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ಎನ್ ಎಚ್-22ರ ಮುಜಫರ್ಪುರ್-ಸೀತಾಮರ್ಹಿ-ಸೋನ್‌ಬಾರ್ಸಾ ವಿಭಾಗವನ್ನು ಹೈಬ್ರಿಡ್ ಅನ್ಯುಟಿ ಮೋಡ್ (ಎಚ್ ಎ ಎಂ) ನಲ್ಲಿ 4-ಪಥಕ್ಕೆ ಮೇಲ್ದರ್ಜೆಗೇರಿಸಲು ಕೇಂದ್ರ ಸಂಪುಟ ಅನುಮೋದನೆ

प्रविष्टि तिथि: 19 AUG 2026 3:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎ) ಬಿಹಾರದಲ್ಲಿ ಎನ್ ಎಚ್-22ರ ಮುಜಫರ್ಪುರ್-ಸೀತಾಮರ್ಹಿ-ಸೋನ್‌ಬಾರ್ಸಾ ವಿಭಾಗವನ್ನು ನಾಲ್ಕು-ಪಥದ ಮಾನದಂಡಕ್ಕೆ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ಅನ್ಯುಟಿ ಮೋಡ್ (ಎಚ್‌ ಎ ಎಂ) ನಲ್ಲಿ ಒಟ್ಟು 82.578 ಕಿ.ಮೀ.ಗಳನ್ನು 3590.73 ಕೋಟಿ ರೂಪಾಯಿ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಉದ್ದೇಶಿತ ಯೋಜನೆಯು ಬಿಹಾರದ ವಿಸ್ತರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಜಾಲದೊಂದಿಗೆ ಏಕೀಕರಣಗೊಳ್ಳುವುದರಿಂದ ಗಮನಾರ್ಹ ಕಾರ್ಯತಾಂತ್ರಿಕ ಮತ್ತು ಆರ್ಥಿಕ ಪ್ರಸ್ತುತತೆಯನ್ನು ಹೊಂದಿದೆ. ಇದು ಭಾರತ-ನೇಪಾಳ ಗಡಿಯನ್ನು ಎನ್ ಎಚ್-27 (ಪೂರ್ವ-ಪಶ್ಚಿಮ ಕಾರಿಡಾರ್) ನಲ್ಲಿ ಮುಜಫರ್ಪುರ್ ನಂತಹ ಆರ್ಥಿಕ ಕೇಂದ್ರಗಳೊಂದಿಗೆ ಸಂಪರ್ಕಿಸುವ ಪ್ರಮುಖ ಫೀಡರ್ ಕಾರಿಡಾರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯು ಮುಜಫರ್‌ಪುರ, ಮುಕ್ಸುದ್‌ಪುರ, ರುನ್ನಿ ಸೈದ್‌ಪುರ, ತುಮ್ಮಾ, ದುಮ್ರಾ, ಭೂತಾಹಿ ಮತ್ತು ಸೋನ್‌ಬರ್ಸಾದ ಜನನಿಬಿಡ ಪ್ರದೇಶಗಳಲ್ಲಿ ದಟ್ಟಣೆಯನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.

ಈ ಯೋಜನೆಯು ಪ್ರಯಾಣಿಕರು ಮತ್ತು ಸರಕು ಸಾಗಣೆಯ ವೇಗವಾದ ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ, ಪ್ರಯಾಣ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಸರಾಸರಿ 80 ಕಿಮೀ ವೇಗದಲ್ಲಿ ಗಂಟೆಗೆ 100 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ, ಮಾರ್ಗ ಮಧ್ಯೆ ಯಾವುದೇ  ಮೀಡಿಯನ್ ಗಳಿರುವುದಿಲ್ಲ, ವೇಗದ ಮತ್ತು ಸುರಕ್ಷಿತ ಪ್ರಯಾಣವನ್ನು ಇದು ಖಾತ್ರಿಪಡಿಸುತ್ತದೆ.

ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆಯ ತತ್ವಗಳಿಗೆ ಅನುಗುಣವಾಗಿ ಯೋಜಿಸಲಾದ ಈ ಯೋಜನೆಯು ಕೈಗಾರಿಕಾ ಪ್ರದೇಶಗಳು ಮತ್ತು ಪ್ರಮುಖ ರೈಲ್ವೆ ನಿಲ್ದಾಣಗಳು ಸೇರಿದಂತೆ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ನೋಡ್‌ಗಳಿಗೆ ಸಂಪರ್ಕವನ್ನು ಸುಧಾರಿಸುವ ಮೂಲಕ ಬಹುಮಾದರಿ ಏಕೀಕರಣವನ್ನು ಹೆಚ್ಚಿಸುತ್ತದೆ. ಸುಧಾರಿತ ಸಂಪರ್ಕವು ಸರಕುಗಳ ಪರಿಣಾಮಕಾರಿ ಚಲನೆ ಮತ್ತು ಕೃಷಿ ಪೂರೈಕೆ ಸರಣಿಗಳನ್ನು ಸುಗಮಗೊಳಿಸುತ್ತದೆ, ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಬೌದ್ಧ ಸರ್ಕ್ಯೂಟ್ ಮತ್ತು ಐತಿಹಾಸಿಕ ಜಾನಕಿ ಪುನೌರ ಧಾಮ್ ದೇವಾಲಯ, ಸೀತಾಮರ್ಹಿಯಂತಹ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳಿಗೆ ಉತ್ತಮ ರಸ್ತೆಯ ಲಭ್ಯತೆಯನ್ನು ಒದಗಿಸುತ್ತದೆ.

ಎನ್ ಎಚ್-22ರ ಮುಜಫರ್ಪುರ್-ಸೀತಾಮರ್ಹಿ-ಸೋನ್‌ಬಾರ್ಸಾ ಮಾರ್ಗವು ಗಮನಾರ್ಹವಾದ ಕಾರ್ಯತಾಂತ್ರಿಕ ಮತ್ತು ಆರ್ಥಿಕ ಪ್ರಸ್ತುತತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸರಕು ಗ್ರಿಡ್‌ಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸುತ್ತದೆ. ಇದು ಎನ್ ಎಚ್-31 ಮತ್ತು ಎನ್ ಎಚ್-122 ನಂತಹ ಅಸ್ತಿತ್ವದಲ್ಲಿರುವ ಕಾರಿಡಾರ್‌ಗಳೊಂದಿಗೆ ಸಮನ್ವಯದಿಂದ ಕೂಡಿದ್ದು, ಬರೌನಿಯಂತಹ ಕೈಗಾರಿಕಾ ವಲಯಗಳು ಮತ್ತು ಗಂಗಾ ನದಿಯ ಉದ್ದಕ್ಕೂ ನದಿ ಲಾಜಿಸ್ಟಿಕ್ಸ್ ಕೇಂದ್ರಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಹತ್ತಿರದ ಭಿತಮೋರ್‌ನಲ್ಲಿರುವ ಭೂ ಬಂದರು ಮೂಲಕ ಗಡಿಯಾಚೆಗಿನ ಪ್ರಯಾಣಿಕರ ಮತ್ತು ಸರಕು ಸಾಗಣೆಯನ್ನು ಹೆಚ್ಚಿಸುತ್ತದೆ.

ಅಲ್ಲದೆ, ಸುಗಮ ಸಂಚಾರವನ್ನು ನಿರ್ವಹಿಸಲು ಮತ್ತು ಸುರಕ್ಷಿತ, ಹೆಚ್ಚಿನ ವೇಗದ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಏಳು ಪ್ರಮುಖ ಸೇತುವೆಗಳು (ಸಾರ್ವಕಾಲಿಕ ಬಾಗ್ಮತಿ ನದಿಯ ಮೇಲೆ 340 ಮೀ ಉದ್ದದ ಪ್ರಮುಖ ಸೇತುವೆ ಸೇರಿದಂತೆ), ಮೂರು ರೈಲ್ವೆ ಓವರ್ ಸೇತುವೆಗಳು (ROB ಗಳು) ಮತ್ತು ಎರಡು ಫ್ಲೈಓವರ್‌ಗಳಿಗೆ (1170 ಮೀ ಮತ್ತು 270 ಮೀ) ಅವಕಾಶವನ್ನು ಈ ಯೋಜನೆಯು ಹೊಂದಿದೆ.

ಈ ಯೋಜನೆಯು ಸರಾಸರಿ ಪ್ರಯಾಣ ವೇಗವನ್ನು ಹೆಚ್ಚಿಸುತ್ತದೆ, ಪ್ರಯಾಣದ ಸಮಯ ತಗ್ಗಿಸುತ್ತದೆ ಮತ್ತು ಒಟ್ಟಾರೆ ರಸ್ತೆ ಸುರಕ್ಷತೆ, ಇಂಧನ ದಕ್ಷತೆ ಮತ್ತು ವಾಹನ ನಿರ್ವಹಣಾ ವೆಚ್ಚಗಳನ್ನು ಸುಧಾರಿಸುತ್ತದೆ, ಇದರಿಂದಾಗಿ ಪ್ರಾದೇಶಿಕ ಮೊಬಿಲಿಟಿ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

ಈ ಯೋಜನೆಯು ಬಿಹಾರದಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ನೋಡ್‌ಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ನವೀಕರಿಸಿದ ಕಾರಿಡಾರ್ ಐದು ಪಿಎಂ ಗತಿ-ಶಕ್ತಿ ಆರ್ಥಿಕ ನೋಡ್‌ಗಳು (ನಾಲ್ಕು ಕೈಗಾರಿಕಾ ಎಸ್ಟೇಟ್‌ಗಳು ಮತ್ತು ಒಂದು ಮೆಗಾ ಫುಡ್ ಪಾರ್ಕ್), ನಾಲ್ಕು ಸಾಮಾಜಿಕ ನೋಡ್‌ಗಳು (ಬಾಬಾ ಗರೀಬ್‌ನಾಥ ದೇವಸ್ಥಾನ, ಮಾತಾ ಜಾನಕಿ ದೇವಸ್ಥಾನ, ಪುನೌರಾ ಧಾಮ್, ಮುಜಫರ್‌ಪುರ ಮತ್ತು ಸೀತಾಮರ್ಹಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು) ಮತ್ತು ಎರಡು ಲಾಜಿಸ್ಟಿಕ್ ನೋಡ್‌ಗಳಿಗೆ (ಮುಜಫರ್‌ಪುರ ಮತ್ತು ಸೀತಾಮರ್ಹಿ ರೈಲ್ವೆ ನಿಲ್ದಾಣಗಳು) ಸಂಪರ್ಕವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಈ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ವೇಗದ ಸಂಚಾರಕ್ಕೆ ಅನುಕೂಲವಾಗುತ್ತದೆ.

 

*****


(रिलीज़ आईडी: 2301173) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Assamese , Punjabi , Gujarati , Odia , Tamil , Malayalam