ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

12ನೇ ಬ್ರಿಕ್ಸ್ ಪರಿಸರ ಸಚಿವರ ಸಭೆಯಲ್ಲಿ ಜನ ಕೇಂದ್ರಿತ, ಅನುಷ್ಠಾನ-ಆಧಾರಿತ ಪರಿಸರ ಕ್ರಿಯಾಕ್ರಮಕ್ಕೆ ಭಾರತ ಕರೆ


ಜ್ಞಾನ ಹಂಚಿಕೆ, ತಂತ್ರಜ್ಞಾನ ಸಹಕಾರ ಮತ್ತು ಬಲವಾದ ಸಾಂಸ್ಥಿಕ ಸಹಭಾಗಿತ್ವದ ಮೂಲಕ ಬ್ರಿಕ್ಸ್ ಸಹಕಾರವನ್ನು ಸಾಮರ್ಥ್ಯವಾಗಿ ಪರಿವರ್ತಿಸಬಹುದು: ಶ್ರೀ ಭೂಪೇಂದರ್ ಯಾದವ್

ಸಮುದಾಯಗಳನ್ನು ಕೈಬಿಡದೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು, ಜವಾಬ್ದಾರಿಯೊಂದಿಗೆ ನಾವೀನ್ಯತೆಯನ್ನು ಅನುಸರಿಸುವುದು ಮತ್ತು ಸುಸ್ಥಿರತೆಯನ್ನು ಅಭಿವೃದ್ಧಿಯ ಕೇಂದ್ರಬಿಂದುವಿರಿಸುವುದು ಮುಖ್ಯ: ಕೇಂದ್ರ ಪರಿಸರ ಸಚಿವರು

ಸಚಿವರ ಜಂಟಿ ಹೇಳಿಕೆಗೆ ಒಪ್ಪಿಗೆ ಮತ್ತು ನಾಲ್ಕು ಜ್ಞಾನ ಸಂಕಲನಗಳ ಬಿಡುಗಡೆಯೊಂದಿಗೆ 12ನೇ ಬ್ರಿಕ್ಸ್ ಪರಿಸರ ಸಚಿವರ ಸಭೆ ಮುಕ್ತಾಯಗೊಂಡಿತು

प्रविष्टि तिथि: 18 AUG 2026 3:28PM by PIB Bengaluru

ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಹೊಸದಿಲ್ಲಿಯಲ್ಲಿ ಭಾರತದ ಬ್ರಿಕ್ಸ್ ಅಧ್ಯಕ್ಷತೆ 2026 ರಡಿಯಲ್ಲಿ ನಡೆಯುತ್ತಿರುವ 12 ನೇ ಬ್ರಿಕ್ಸ್ ಪರಿಸರ ಸಚಿವರ ಸಭೆಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಚಿವರು ಮತ್ತು ನಿಯೋಗಗಳ ಮುಖ್ಯಸ್ಥರನ್ನು ಸ್ವಾಗತಿಸಿದರು.

ತಮ್ಮ ದಿಕ್ಸೂಚಿ ಭಾಷಣದಲ್ಲಿ ಶ್ರೀ ಯಾದವ್, ಜಾಗತಿಕ ದಕ್ಷಿಣದ ಕಳವಳಗಳನ್ನು ಕಾರ್ಯಸೂಚಿಯಲ್ಲಿ ಮುಂಚೂಣಿಯಲ್ಲಿರಿಸುವಲ್ಲಿ ಮತ್ತು ಬ್ರಿಕ್ಸ್ ನ್ನು ಜನಕೇಂದ್ರಿತ ಧೋರಣೆ ಹಾಗು “ಮಾನವತೆ ಮೊದಲು ಎಂಬ ನಿಲುವಿನೊಂದಿಗೆ ”"ಸಹಕಾರ ಹಾಗು ಸುಸ್ಥಿರತೆಗಾಗಿ ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯ ನಿರ್ಮಾಣ" ಎಂದು ಮರುವ್ಯಾಖ್ಯಾನಿಸುವಲ್ಲಿ ಭಾರತದ ಅಧ್ಯಕ್ಷತೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಹೇಳಿದರು.

ಹವಾಮಾನ ಬದಲಾವಣೆ, ಜೀವವೈವಿಧ್ಯ ನಷ್ಟ, ಮಾಲಿನ್ಯ ಮತ್ತು ವಿಪತ್ತು ಅಪಾಯಗಳ ಹೆಚ್ಚುತ್ತಿರುವ ಜಾಗತಿಕ ಪರಿಸರ ಸವಾಲುಗಳನ್ನು ಶ್ರೀ ಯಾದವ್ ಎತ್ತಿ ತೋರಿಸಿದರು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಸರ ದುರ್ಬಲತೆಯು ವಿಶಾಲವಾದ ಅಭಿವೃದ್ಧಿ ಆದ್ಯತೆಗಳೊಂದಿಗೆ ನಿಕಟವಾಗಿ ಹೆಣೆದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಕಾಡ್ಗಿಚ್ಚು ತಡೆಗಟ್ಟುವಿಕೆ, ಸನ್ನದ್ಧತೆ, ಮುನ್ನೆಚ್ಚರಿಕೆ, ಪ್ರತಿಕ್ರಿಯೆ ಮತ್ತು ಬೆಂಕಿಯ/ಕಾಡ್ಗಿಚ್ಚು ನಂತರದ ಚೇತರಿಕೆಯಲ್ಲಿ ಬ್ರಿಕ್ಸ್ ನಲ್ಲಿ ಬಲವಾದ ಸಹಕಾರಕ್ಕೆ ಅವರು ಕರೆ ನೀಡಿದರು, ಜೊತೆಗೆ ಹವಾಮಾನ ಹಣಕಾಸು, ಹೊಂದಾಣಿಕೆಯ ಮಹತ್ವವನ್ನು ಒತ್ತಿ ಹೇಳಿದರು

ಭಾರತದ ವಿಧಾನವನ್ನು ಒತ್ತಿ ಹೇಳಿದ ಸಚಿವರು, "ಪರಿಸರ ಪುನಃಸ್ಥಾಪನೆ ಮತ್ತು ಮಾನವ ಅಭಿವೃದ್ಧಿ ಜೊತೆ ಜೊತೆಗೆ ಮುಂದುವರಿಯಬಹುದು" ಎಂದು ಹೇಳಿದರು, ಮಿಷನ್ ಲೈಫ್ ಮತ್ತು ಏಕ್ ಪೆಡ್ ಮಾ ಕೆ ನಾಮ್ ಅನ್ನು ಪರಿಸರ ಪುನಃಸ್ಥಾಪನೆ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಸಮುದಾಯ ಮಾಲೀಕತ್ವವನ್ನು ಸಂಯೋಜಿಸುವ ಉದಾಹರಣೆಗಳಾಗಿವೆ ಎಂದು ಅವರು ಬಣ್ಣಿಸಿದರು. ಪರಿಹಾರಗಳು "ವೈಜ್ಞಾನಿಕವಾಗಿ ದೃಢವಾದ, ಸ್ಥಳೀಯವಾಗಿ ಪ್ರಸ್ತುತವಾದ ಮತ್ತು ಸಾಮಾಜಿಕವಾಗಿ ಅಂತರ್ಗತ" ಎಂದು ಖಚಿತಪಡಿಸಿಕೊಳ್ಳಲು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಜೊತೆಗೆ ತರಲು ಅವರು ಕರೆ ನೀಡಿದರು. 2031-2035ರ ಅವಧಿಯಲ್ಲಿ ಭಾರತದ ಹೊಸ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯು ಅಂತರ್ಗತ ಅಭಿವೃದ್ಧಿ ಮತ್ತು ಇಂಧನ ಭದ್ರತೆಯನ್ನು ಬೆಂಬಲಿಸುವಾಗ ಹವಾಮಾನ ಕ್ರಮವನ್ನು ಮುನ್ನಡೆಸುವ ಮಹತ್ವಾಕಾಂಕ್ಷೆಯ ಬದ್ಧತೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಕುರಿತೂ ಸಚಿವರು ಮಾತನಾಡಿದರು.

ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ನಾಲ್ಕು ಆದ್ಯತೆಗಳನ್ನು ಸಚಿವರು ವಿವರಿಸಿದರು: ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವುದು; ಅರಣ್ಯೀಕರಣ, ಕಾಡ್ಗಿಚ್ಚು ನಿರ್ವಹಣೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ; ವೃತ್ತಾಕಾರದ ಆರ್ಥಿಕತೆ; ಮತ್ತು ಹೊಂದಾಣಿಕೆ. "ಒಟ್ಟಾಗಿ, ಈ ನಾಲ್ಕು ಆದ್ಯತೆಗಳು ಸರಳ ಮತ್ತು ಶಕ್ತಿಯುತ ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತವೆ - ಪರಿಸರ ಕ್ರಿಯೆಯು ಜನ-ಕೇಂದ್ರಿತ ಮತ್ತು ಸುಸ್ಥಿರವಾಗಿರಬೇಕು, ಅನುಷ್ಠಾನ ಅಥವಾ ಕ್ರಿಯಾ-ಆಧಾರಿತ ಕ್ರಮವು  ಅಭಿವೃದ್ಧಿಶೀಲ ರಾಷ್ಟ್ರಗಳ ವಾಸ್ತವಗಳಿಗೆ ಸ್ಪಂದಿಸಬೇಕು" ಎಂದು ಅವರು ಹೇಳಿದರು.

ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಸಾಧಿಸಿದ ಪ್ರಗತಿಯು ತಿಂಗಳುಗಳ ಕಾಲದ ಮಾತುಕತೆ, ಸಂಧಾನ ಮತ್ತು ಸಹಯೋಗವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಯಾದವ್ ಹೇಳಿದರು. ಸಮುದಾಯಗಳನ್ನು ಹಿಂದೆ ಬಿಡದೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು, ಜವಾಬ್ದಾರಿಯೊಂದಿಗೆ ನಾವೀನ್ಯತೆಯನ್ನು ಅನುಸರಿಸಲು ಮತ್ತು ಸುಸ್ಥಿರತೆಯನ್ನು ಅಭಿವೃದ್ಧಿಯ ಕೇಂದ್ರದಲ್ಲಿ ಇರಿಸಲು ಸಚಿವರು ಕರೆ ನೀಡಿದರು. ಜ್ಞಾನ ಜಾಲಗಳು, ತಾಂತ್ರಿಕ ವಿನಿಮಯಗಳು, ತರಬೇತಿ, ತಂತ್ರಜ್ಞಾನ ಸಹಕಾರ ಮತ್ತು ಬಲವಾದ ಸಾಂಸ್ಥಿಕ ಸಹಭಾಗಿತ್ವದ ಮೂಲಕ ಬ್ರಿಕ್ಸ್ ಸಹಕಾರವನ್ನು "ಸಾಮೂಹಿಕ ಮತ್ತು ಸಹಕಾರಿ ಸಾಮರ್ಥ್ಯವಾಗಿ ಪರಿವರ್ತಿಸಬಹುದು" ಎಂದು ಅವರು ಒತ್ತಿ ಹೇಳಿದರು.

12ನೇ ಬ್ರಿಕ್ಸ್ ಪರಿಸರ ಸಚಿವರ ಸಭೆಯು ಜಂಟಿ ಸಚಿವರ ಹೇಳಿಕೆಗೆ (ಜೆಎಂಎಸ್) ಒಪ್ಪಿಗೆ ಮತ್ತು ನಾಲ್ಕು ಜ್ಞಾನ ಸಂಕಲನಗಳ ಬಿಡುಗಡೆಯೊಂದಿಗೆ ಮುಕ್ತಾಯಗೊಂಡಿತು. ಜೆಎಂಎಸ್ ನಾಲ್ಕು ಫಲಿತಾಂಶ ದಾಖಲೆಗಳನ್ನು ಒಳಗೊಂಡಿದೆ, ಅವು ಕೆಳಗಿನಂತಿವೆ:

  • ಉಲ್ಲೇಖಿತ ನಿಯಮಗಳು (ಟಿಒಆರ್) - ಸುಸ್ಥಿರ ಜೀವನಶೈಲಿಯಲ್ಲಿ ಜ್ಞಾನ ಹಂಚಿಕೆ, ಸಂಶೋಧನೆ ಮತ್ತು ನಾವಿನ್ಯತೆಯನ್ನು ಮುಂದುವರಿಸಲು ಬ್ರಿಕ್ಸ್ ಸಂಸ್ಥೆಗಳ ಜಾಲ
  • ಮರುಭೂಮೀಕರಣ ನಿಭಾಯಿಸಲು, ಸುಸ್ಥಿರ ಭೂ ನಿರ್ವಹಣೆ ಮತ್ತು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವಕ್ಕಾಗಿ ಸಮಗ್ರ ಭೂದೃಶ್ಯ ನಿರ್ವಹಣೆಗಾಗಿ ಬ್ರಿಕ್ಸ್ ತತ್ವಗಳು
  • ಬ್ರಿಕ್ಸ್ ನಾದ್ಯಂತ ಕಾಡ್ಗಿಚ್ಚು ಸನ್ನದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಸಾಮಾನ್ಯ ತಿಳಿವಳಿಕೆ
  • ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ ಜನ-ಕೇಂದ್ರಿತ ಮತ್ತು ಸಮುದಾಯ ಆಧಾರಿತ ಹೊಂದಾಣಿಕೆಯ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಮುನ್ನಡೆಸಲು ಬ್ರಿಕ್ಸ್ ತತ್ವಗಳು.

ಪರಿಸರ ಸಚಿವರ ಸಭೆಯು ಪ್ಯಾನಲ್ ಚರ್ಚೆಗಳು ಮತ್ತು ಪೂರಕ ನೇಪಥ್ಯದ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು:

  • ಹವಾಮಾನ ಬದಲಾವಣೆ ಕುರಿತು ಬ್ರಿಕ್ಸ್ ಉನ್ನತ ಮಟ್ಟದ ಸಂವಾದ - ಜನ ಕೇಂದ್ರಿತ, ಸಮುದಾಯ ಆಧಾರಿತ ಹೊಂದಾಣಿಕೆ: ಜನ ಕೇಂದ್ರಿತ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಚೌಕಟ್ಟಿನ ಮೂಲಕ ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಸಾಂಪ್ರದಾಯಿಕ ಜ್ಞಾನ ಮತ್ತು ಸ್ಥಳೀಯ ಅಭ್ಯಾಸಗಳ ಏಕೀಕರಣವನ್ನು ಉತ್ತೇಜಿಸುವ ಮೂಲಕ ಹವಾಮಾನ ಹೊಂದಾಣಿಕೆಯನ್ನು ಮುನ್ನಡೆಸುವುದು.
  • ಸಮಗ್ರ ಭೂದೃಶ್ಯ ಆಧಾರಿತ ಹಸಿರೀಕರಣ ಸ್ಥಿತಿಸ್ಥಾಪಕ ಭೂದೃಶ್ಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಬ್ರಿಕ್ಸ್ ಅನುಭವಗಳನ್ನು ಹಂಚಿಕೊಳ್ಳುವುದು: ಯಶಸ್ವಿ ಸಮಗ್ರ ಭೂದೃಶ್ಯ ಪುನಃಸ್ಥಾಪನೆ ಉಪಕ್ರಮಗಳನ್ನು ಪ್ರದರ್ಶಿಸುವುದು ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಜ್ಞಾನ ಹಂಚಿಕೆ.

ಈ ಸಂದರ್ಭದಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಡಿಜಿಟಲ್ ಮತ್ತು ಸಂವಾದಾತ್ಮಕ ಮಿಷನ್ ಲೈಫ್ ಪೆವಿಲಿಯನ್  ಸ್ಥಾಪಿಸಿತ್ತು, ಇದು ತಲ್ಲೀನಗೊಳಿಸುವ ಗೇಮಿಂಗ್ ಮತ್ತು ಸಂವಾದಾತ್ಮಕ ತಂತ್ರಜ್ಞಾನಗಳ ಮೂಲಕ ಭಾರತದ ಪ್ರಮುಖ ಉಪಕ್ರಮವನ್ನು ಪ್ರದರ್ಶಿಸುತ್ತದೆ. ಇದು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಭಾರತದ ಪ್ರಯತ್ನಗಳ 360 ಡಿಗ್ರಿ ಸಮಗ್ರ ಅನುಭವವನ್ನು ನೀಡಿತು. ಇದಲ್ಲದೆ, 2 ದಿನಗಳ ಸಭೆಗಳಿಗೆ ಹೊಂದಾಣಿಕೆಯಾಗುವಂತೆ, ಭಾರತೀಯ ಕಲಾವಿದರ ಸಾಂಸ್ಕೃತಿಕವಾಗಿ ಕಲಾತ್ಮಕ ಮತ್ತು ಮೋಡಿಮಾಡುವ ಪ್ರದರ್ಶನಕ್ಕೆ ಸಾಕ್ಷಿಯಾದರು. ಆಕರ್ಷಕ ಪ್ರದರ್ಶನವು ಭಾರತೀಯ ಸಂಸ್ಕೃತಿಯ ಮಂತ್ರಮುಗ್ದಗೊಳಿಸುವ ಮತ್ತು ರೋಮಾಂಚಕ ನೋಟವನ್ನು ನೀಡಿತು.

 

*****


(रिलीज़ आईडी: 2301033) आगंतुक पटल : 7
इस विज्ञप्ति को इन भाषाओं में पढ़ें: Marathi , हिन्दी , Tamil , Malayalam , English , Urdu , Bengali , Bengali-TR , Gujarati , Telugu