ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಯುಐಡಿಎಐ ನ ವಿಶೇಷ ಅಭಿಯಾನವು ದೇಶಾದ್ಯಂತ ಸುಮಾರು 1.6 ಲಕ್ಷ ಶಾಲೆಗಳನ್ನು ಒಳಗೊಂಡ ಎಲ್ಲಾ ಶಾಲಾ ಮಕ್ಕಳಿಗೆ ಆಧಾರ್‌ನಲ್ಲಿ 2 ಕೋಟಿಗೂ ಹೆಚ್ಚು ಕಡ್ಡಾಯ ಬಯೋಮೆಟ್ರಿಕ್ ನವೀಕರಣಗಳನ್ನು (MBU) ಪೂರ್ಣಗೊಳಿಸಿದೆ
ಈ ಉಪಕ್ರಮದ ಭಾಗವಾಗಿ, ಸೆಪ್ಟೆಂಬರ್ 30, 2026 ರವರೆಗೆ 5 ರಿಂದ 17 ವರ್ಷ ವಯಸ್ಸಿನವರಿಗೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣಗಳನ್ನು ಉಚಿತವಾಗಿ ಮಾಡಲಾಗುವುದು
प्रविष्टि तिथि:
18 AUG 2026 2:36PM by PIB Bengaluru
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ದೇಶಾದ್ಯಂತ ಶಾಲಾ ಮಕ್ಕಳಿಗೆ 20 ಮಿಲಿಯನ್ (2 ಕೋಟಿ) ಗೂ ಹೆಚ್ಚು MBU ಗಳನ್ನು ಪೂರ್ಣಗೊಳಿಸುವ ಮೂಲಕ ಕಡ್ಡಾಯ ಬಯೋಮೆಟ್ರಿಕ್ ನವೀಕರಣಗಳಿಗಾಗಿ (MBU) ತನ್ನ ರಾಷ್ಟ್ರವ್ಯಾಪಿ ಮಿಷನ್-ಮೋಡ್ ಅಭಿಯಾನದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಶಾಲೆಗಳಲ್ಲಿ ಮಕ್ಕಳ MBU ಸ್ಥಿತಿಯ ಗೋಚರತೆಯನ್ನು ಒದಗಿಸುವ ಏಕೀಕೃತ ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆಯೊಂದಿಗೆ (UDISE+) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ತಾಂತ್ರಿಕ ಏಕೀಕರಣದಿಂದ ಈ ಉಪಕ್ರಮವನ್ನು ಸಕ್ರಿಯಗೊಳಿಸಲಾಗಿದೆ.
ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭಿಸಲಾದ ಈ ವಿಶೇಷ ಅಭಿಯಾನವು ಈಗ 1.56 ಲಕ್ಷಕ್ಕೂ ಹೆಚ್ಚು ಶಾಲೆಗಳನ್ನು ಒಳಗೊಂಡಿದ್ದು, ಶಾಲಾ ಮಕ್ಕಳು ತಮ್ಮ ಆಧಾರ್ ಬಯೋಮೆಟ್ರಿಕ್ ನವೀಕರಣಗಳನ್ನು ಮೀಸಲಾದ ಶಾಲಾ ಮಟ್ಟದ ಶಿಬಿರಗಳು ಮತ್ತು ಯುಐಡಿಎಐ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ ಶಿಕ್ಷಣ ಇಲಾಖೆಗಳ ಸಂಘಟಿತ ಸಂಪರ್ಕದ ಮೂಲಕ ಅನುಕೂಲಕರವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಇದು MBU ಸೇವೆಯು ಮಕ್ಕಳಿಗೆ ನೇರವಾಗಿ ಅವರ ಶಾಲೆಗಳಲ್ಲಿ ತಲುಪಲು ಸಹಾಯ ಮಾಡಿ, ಕೋಟ್ಯಂತರ ವಿದ್ಯಾರ್ಥಿಗಳಿಗೆ ಪ್ರಕ್ರಿಯೆಯನ್ನು ಹೆಚ್ಚು ಸುಲಭವಾಗಿ ಮತ್ತು ಅನುಕೂಲಕರವಾಗಿಸುತ್ತದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂದರ್ಭದಲ್ಲಿ ಆಧಾರ್ ದಾಖಲಾತಿಯು ಜನಸಂಖ್ಯಾ ಮಾಹಿತಿ ಮತ್ತು ಛಾಯಾಚಿತ್ರವನ್ನು ಸೆರೆಹಿಡಿಯುತ್ತದೆ, ಆದರೆ ಈ ಬಯೋಮೆಟ್ರಿಕ್‌ಗಳು ಇನ್ನೂ ಅಭಿವೃದ್ಧಿ ಹೊಂದುತ್ತಿರುವುದರಿಂದ ಆ ವಯಸ್ಸಿನಲ್ಲಿ ಬೆರಳಚ್ಚುಗಳು ಮತ್ತು ಐರಿಸ್ (ಕಣ್ಣಿನ ಪೊರೆ) ಬಯೋಮೆಟ್ರಿಕ್‌ಗಳನ್ನು ಸೆರೆಹಿಡಿಯಲಾಗುವುದಿಲ್ಲ. ಮಗುವಿನ ಆಧಾರ್ ನವೀಕರಿಸಿದ ಬಯೋಮೆಟ್ರಿಕ್ ಮಾಹಿತಿಯನ್ನು ಮುಂದುವರೆಸಲು MBU ಸಹಾಯ ಮಾಡುತ್ತದೆ.
ಮಗುವಿಗೆ 5 ವರ್ಷ ತುಂಬಿದಾಗ ಮತ್ತು ಮತ್ತೆ 15 ವರ್ಷ ತುಂಬಿದಾಗ MBU ಮಾಡುವ ಅಗತ್ಯವಿದೆ. ಮಕ್ಕಳು ಶಾಲೆ ಮತ್ತು ಉನ್ನತ ಶಿಕ್ಷಣದ ಮೂಲಕ ಪ್ರಗತಿ ಹೊಂದುವಾಗ ಮತ್ತು ಆಧಾರ್ ದೃಢೀಕರಣ ಅಗತ್ಯವಿರುವ ವಿವಿಧ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯುವಾಗ ಸಕಾಲಿಕ ಪೂರ್ಣಗೊಳಿಸುವಿಕೆಯು ಸುಗಮ ಆಧಾರ್ ದೃಢೀಕರಣ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ.
ಸಕಾಲಿಕ ಪೂರ್ಣಗೊಳಿಸುವಿಕೆಯನ್ನು ಉತ್ತೇಜಿಸಲು ಮತ್ತು ಸೇವೆಯನ್ನು ಹೆಚ್ಚು ಸುಲಭ ಮಾಡಲು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 7 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ MBU ಶುಲ್ಕವನ್ನು 1 ಅಕ್ಟೋಬರ್ 2025 ರಿಂದ ಒಂದು ವರ್ಷದ ಅವಧಿಗೆ ಮನ್ನಾ ಮಾಡಿತ್ತು. 5 ರಿಂದ 7 ವರ್ಷಗಳು ಮತ್ತು 15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ MBU ಉಚಿತವಾಗಿ ಮುಂದುವರಿಯುತ್ತದೆ. ಆದ್ದರಿಂದ, ತಾಂತ್ರಿಕವಾಗಿ MBU ಈಗ 5 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸೆಪ್ಟೆಂಬರ್ 30, 2026 ರವರೆಗೆ ಉಚಿತವಾಗಿದೆ.
ಆಧಾರ್‌ನಲ್ಲಿ MBU ಕೊರತೆಯು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು, NEET, JEE, CUET ಮುಂತಾದ ಸ್ಪರ್ಧಾತ್ಮಕ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ನೋಂದಾಯಿಸಲು ದೃಢೀಕರಣವನ್ನು ಪಡೆಯುವ ಸಂದರ್ಭದಲ್ಲಿ ತೊಂದರೆಗಳಿಗೆ ಕಾರಣವಾಗಬಹುದು. ಈ ಕಾರಣದಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ತ೦ದೆತಾಯಿ ಮತ್ತು ಪೋಷಕರನ್ನು ತಮ್ಮ ಮಕ್ಕಳಿಗೆ ಆಧಾರ್‌ನಲ್ಲಿ MBU ಅನ್ನು ಪೂರ್ಣಗೊಳಿಸಲು ಒತ್ತಾಯಿಸುತ್ತಿದೆ.
*****
(रिलीज़ आईडी: 2300840)
आगंतुक पटल : 7