ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಂಸತ್ತಿನ ಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ಸಂಸತ್ತಿನ ಉಭಯ ಸದನಗಳಿಂದ 12 ವಿಧೇಯಕಗಳು ಅಂಗೀಕಾರ

प्रविष्टि तिथि: 13 AUG 2026 3:58PM by PIB Bengaluru

ಸೋಮವಾರ, ಜುಲೈ 20, 2026 ರಂದು ಪ್ರಾರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ, 2026 ಅನ್ನು ಗುರುವಾರ, ಆಗಸ್ಟ್ 13, 2026 ರಂದು ಅನಿರ್ದಿಷ್ಟಾವಧಿಗೆ (sine die) ಮುಂದೂಡಲಾಗಿದೆ. ಈ ಅಧಿವೇಶನವು 25 ದಿನಗಳ ಅವಧಿಯಲ್ಲಿ 19 ಕಲಾಪಗಳನ್ನು ನಡೆಸಿತು.

ಅಧಿವೇಶನದ ಅವಧಿಯಲ್ಲಿ, ಲೋಕಸಭೆಯಲ್ಲಿ 11 ವಿಧೇಯಕಗಳನ್ನು ಮತ್ತು ರಾಜ್ಯಸಭೆಯಲ್ಲಿ 2 ವಿಧೇಯಕಗಳನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ 12 ವಿಧೇಯಕಗಳು ಮತ್ತು ರಾಜ್ಯಸಭೆಯಲ್ಲಿ 12 ವಿಧೇಯಕಗಳು ಅಂಗೀಕಾರಗೊಂಡವು. ಅಧಿವೇಶನದ ಅವಧಿಯಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಒಟ್ಟು ವಿಧೇಯಕಗಳ ಸಂಖ್ಯೆ 12.

ಮುಂಗಾರು ಅಧಿವೇಶನಕ್ಕೂ ಮುನ್ನ ಸನ್ಮಾನ್ಯ ರಾಷ್ಟ್ರಪತಿಗಳು ಹೊರಡಿಸಿದ್ದ ಸುಗ್ರೀವಾಜ್ಞೆಗಳ ನಿಬಂಧನೆಗಳನ್ನು ಬದಲಾಯಿಸುವ ಮತ್ತು ಒಳಗೊಂಡಿರುವ ಎರಡು ವಿಧೇಯಕಗಳನ್ನು, ಅಂದರೆ ಸರ್ವೋಚ್ಚ ನ್ಯಾಯಾಲಯ  (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ, 2026 ಮತ್ತು ಆದಾಯ ತೆರಿಗೆ (ತಿದ್ದುಪಡಿ) ಸುಗ್ರೀವಾಜ್ಞೆ, 2026 ಅನ್ನು ಉಭಯ ಸದನಗಳು ಪರಿಗಣಿಸಿ ಅಂಗೀಕರಿಸಿದವು.

2022-23 ನೇ ಸಾಲಿನ ಹೆಚ್ಚುವರಿ ಅನುದಾನಗಳ ಬೇಡಿಕೆಗಳನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಸಂಬಂಧಿತ ವಿನಿಯೋಗ ವಿಧೇಯಕವನ್ನು ಲೋಕಸಭೆಯು 04.08.2026 ರಂದು ಮಂಡಿಸಿ, ಪರಿಗಣಿಸಿ ಅಂಗೀಕರಿಸಿತು ಮತ್ತು ರಾಜ್ಯಸಭೆಯು 06.08.2026 ರಂದು ಹಿಂತಿರುಗಿಸಿತು.

ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 ಅನ್ನು ಪರಿಶೀಲನೆ ಮತ್ತು ವರದಿಗಾಗಿ ಉಭಯ ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಕಳವಳಗಳನ್ನು ತಕ್ಷಣವೇ ಪರಿಹರಿಸುವ ಸಲುವಾಗಿ, ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಬಲಪಡಿಸುವ ಪ್ರಮುಖ ಉಪಕ್ರಮವಾಗಿ 2024 ರ ಮೂಲ ಕಾಯಿದೆಗೆ ತಿದ್ದುಪಡಿ ತರಲು ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ವಿಧೇಯಕ, 2026 ಅನ್ನು ಮಂಡಿಸಲಾಯಿತು. ಈ ವಿಧೇಯಕವು ಕಾಯಿದೆಯಡಿಯಲ್ಲಿನ ಅಪರಾಧಗಳ ತ್ವರಿತ ತನಿಖೆ ಮತ್ತು ಕಾಲಮಿತಿಯ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ; ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ನಿಗದಿಪಡಿಸಲು ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಅಧಿಕಾರ ನೀಡುತ್ತದೆ; ಎರಡು ತಿಂಗಳೊಳಗೆ ತನಿಖೆಗಳನ್ನು ಮತ್ತು ಮೂರು ತಿಂಗಳೊಳಗೆ ವಿಚಾರಣೆಗಳನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ; ಅಗತ್ಯವಿರುವಲ್ಲೆಲ್ಲಾ ತನಿಖೆಗಾಗಿ ವಿಶೇಷ ಕಾರ್ಯಪಡೆಗಳನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ; ಅಪರಾಧಗಳಿಗೆ ಶಿಕ್ಷೆಯನ್ನು ಹೆಚ್ಚಿಸುತ್ತದೆ; ಮತ್ತು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಕಾಲಮಿತಿಯ ಮೇಲ್ಮನವಿ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ವಿಧೇಯಕವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು, ಸನ್ಮಾನ್ಯ ರಾಷ್ಟ್ರಪತಿಗಳ ಒಪ್ಪಿಗೆ ದೊರೆತಿದೆ.

ಅಧಿವೇಶನದ ಅವಧಿಯಲ್ಲಿ ಉಭಯ ಸದನಗಳು ಅಂಗೀಕರಿಸಿದ ಇತರ ಕೆಲವು ಪ್ರಮುಖ ವಿಧೇಯಕಗಳು ಈ ಕೆಳಗಿನಂತಿವೆ:

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ವಿಧೇಯಕ, 2026 ರಾಷ್ಟ್ರೀಯ ಗೀತೆ ಎಂದು ಗೌರವಿಸಲ್ಪಡುವ ವಂದೇ ಮಾತರಂ ಅನ್ನು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ಕಾಯಿದೆ, 1971 ರ ವಿಭಾಗ 3 ರ ವ್ಯಾಪ್ತಿಗೆ ತರಲು 1971 ರ ಕಾಯಿದೆಗೆ ತಿದ್ದುಪಡಿ ತರಲು ಶ್ರಮಿಸುತ್ತದೆ ಮತ್ತು ವಂದೇ ಮಾತರಂ ಗಾಯನವನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅದರ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ಅಡಚಣೆ ಉಂಟುಮಾಡುವುದನ್ನು ಅಪರಾಧವೆಂದು ಪ್ರಸ್ತಾಪಿಸುತ್ತದೆ, ಆ ಮೂಲಕ ರಾಷ್ಟ್ರೀಯ ಗೀತೆಗೆ ಕಾನೂನು ರಕ್ಷಣೆಯನ್ನು ವಿಸ್ತರಿಸುತ್ತದೆ ಮತ್ತು ಅಂತಹ ಕೃತ್ಯಗಳನ್ನು ಕಾಯಿದೆಯಡಿಯಲ್ಲಿ ಶಿಕ್ಷಾರ್ಹಗೊಳಿಸುತ್ತದೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ, 2026 ಸುವ್ಯವಸ್ಥಿತ ಪರಿಶೀಲನಾ ವ್ಯವಸ್ಥೆಯನ್ನು ನಿಗದಿಪಡಿಸುವ ಮೂಲಕ ಜನನ ಮತ್ತು ಮರಣಗಳ ವಿಳಂಬಿತ ನೋಂದಣಿಯ ನಿಬಂಧನೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡಲು 1969 ರ ಮೂಲ ಕಾಯಿದೆಗೆ ತಿದ್ದುಪಡಿ ತರಲು ಶ್ರಮಿಸುತ್ತದೆ. ಈ ವಿಧೇಯಕವು ಒಂದು ವರ್ಷದ ನಂತರ ಮತ್ತು ಎರಡು ವರ್ಷಗಳವರೆಗೆ ಸಮರ್ಥ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರ ಅನುಮೋದನೆಯೊಂದಿಗೆ ಮಾತ್ರ ಮತ್ತು ಎರಡು ವರ್ಷಗಳ ನಂತರ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಅನುಮೋದನೆಯೊಂದಿಗೆ ಮಾತ್ರ ನೋಂದಣಿಗೆ ಅವಕಾಶ ನೀಡುತ್ತದೆ.

Ø ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2026 ಎಂಎಸ್‌ಎಂಇಗಳ (MSMEs) ಉಚಿತ ಮತ್ತು ಸ್ವಯಂಪ್ರೇರಿತ ನೋಂದಣಿಗಾಗಿ ರಾಷ್ಟ್ರೀಯ ಡಿಜಿಟಲ್ ವೇದಿಕೆಯನ್ನು ಒದಗಿಸಲು ಮತ್ತು ಹಣಕಾಸಿನ ಲಭ್ಯತೆಯನ್ನು ಸುಧಾರಿಸುವ ಮೂಲಕ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ವಿಳಂಬಿತ ಪಾವತಿ ವಿವಾದಗಳ ತ್ವರಿತ ಪರಿಹಾರವನ್ನು ಖಚಿತಪಡಿಸುವ ಮೂಲಕ, ಉದ್ಯಮ ಸ್ನೇಹಿ ವಾತಾವರಣವನ್ನು ಉತ್ತೇಜಿಸುವ ಮೂಲಕ ಹಾಗೂ ಕೆಲವು ನಿಬಂಧನೆಗಳ ಉಲ್ಲಂಘನೆಗೆ ಸಂಬಂಧಿಸಿದ ಅಪರಾಧಗಳನ್ನು ಅಪರಾಧ ಮುಕ್ತಗೊಳಿಸಿ, ಮೊದಲ ಬಾರಿಗೆ ಎಚ್ಚರಿಕೆಯನ್ನು ನೀಡುವ ಮೂಲಕ ಶಿಕ್ಷೆ ಆಧಾರಿತ ದಂಡಗಳ ಬದಲಿಗೆ ಶ್ರೇಣೀಕೃತ ದಂಡಗಳನ್ನು ವಿಧಿಸಿ ಎಂಎಸ್‌ಎಂಇ ವಲಯವನ್ನು ಬಲಪಡಿಸಲು 2006 ರ ಕಾಯಿದೆಗೆ ತಿದ್ದುಪಡಿ ತರಲು ಶ್ರಮಿಸುತ್ತದೆ.

Ø ಬ್ಯಾಂಕರ್ಗಳ ಪುಸ್ತಕ ಸಾಕ್ಷ್ಯ ವಿಧೇಯಕ, 2026 ಭೌತಿಕ, ಎಲೆಕ್ಟ್ರಾನಿಕ್, ಡಿಜಿಟಲ್, ವರ್ಚುವಲ್, ಕ್ಲೌಡ್ ಆಧಾರಿತ ಅಥವಾ ಯಾವುದೇ ಇತರ ರೂಪದಲ್ಲಿದ್ದರೂ ಬ್ಯಾಂಕ್‌ಗಳು ನಿರ್ವಹಿಸುವ ಎಲ್ಲಾ ರೀತಿಯ ದಾಖಲೆಗಳನ್ನು ಒಳಗೊಳ್ಳಲು “ಬ್ಯಾಂಕರ್‌ಗಳ ಪುಸ್ತಕಗಳ” ವ್ಯಾಖ್ಯಾನದ ವ್ಯಾಪ್ತಿಯನ್ನು ವಿಸ್ತರಿಸಲು ಶ್ರಮಿಸುತ್ತದೆ, ಆ ಮೂಲಕ ಸಮಗ್ರ, ತಂತ್ರಜ್ಞಾನ-ತಟಸ್ಥ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಇದು ಪ್ರಮಾಣಪತ್ರಗಳನ್ನು ಪ್ರಮಾಣೀಕರಿಸುತ್ತದೆ ಮತ್ತು ಕೈಯಿಂದ ಮಾಡಿದ, ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ದೃಢೀಕರಣವನ್ನು ಗುರುತಿಸುತ್ತದೆ, ಜೊತೆಗೆ ಎಲೆಕ್ಟ್ರಾನಿಕ್ ದಾಖಲೆಗಳನ್ನು ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ಆಗಿ ಹಾಜರುಪಡಿಸಲು ಅನುವು ಮಾಡಿಕೊಡುತ್ತದೆ. ಇದು ಹಣಕಾಸು ವಲಯದಾದ್ಯಂತ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಅಧಿಕಾರ ನೀಡುತ್ತದೆ ಮತ್ತು ನ್ಯಾಯಾಂಗ ಸಲ್ಲಿಕೆಗಾಗಿ "ವಿಶೇಷ ಕಾರಣ"ವನ್ನು ನಿರ್ವಚಿಸುತ್ತದೆ.

Ø ಕೇರಳ (ಹೆಸರು ಬದಲಾವಣೆ) ವಿಧೇಯಕ, 2026 ಸಂವಿಧಾನದ ವಿಧಿ 3 ಕ್ಕೆ ಅನುಗುಣವಾಗಿ ಸಂವಿಧಾನದ ಮೊದಲ ಅನುಸೂಚಿಯನ್ನು ತಿದ್ದುಪಡಿ ಮಾಡುವ ಮೂಲಕ "ಕೇರಳ" ರಾಜ್ಯದ ಹೆಸರನ್ನು "ಕೇರಳಂ" ಎಂದು ಬದಲಾಯಿಸಲು ಶ್ರಮಿಸುತ್ತದೆ.

Ø ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026 ಕೇಂದ್ರ ಸರ್ಕಾರದಿಂದ ಅಧಿಸೂಚಿಸಲ್ಪಡುವ ಯಾವುದೇ ಇತರ ಆಹಾರ ಪದಾರ್ಥಗಳನ್ನು ಒಳಗೊಳ್ಳಲು "ಆಹಾರ ಪದಾರ್ಥಗಳ" ವ್ಯಾಖ್ಯಾನವನ್ನು ವಿಸ್ತರಿಸಲು, ಕೈಗಾರಿಕಾ ಸರಕುಗಳಿಗೆ ಅನ್ವಯಿಸುವ ಭೌಗೋಳಿಕ ನಿರ್ಬಂಧವನ್ನು ತೆಗೆದುಹಾಕಲು, ಶಾಸನಬದ್ಧ ಉಲ್ಲೇಖಗಳನ್ನು ನವೀಕರಿಸುವ ಮೂಲಕ ಸಹಕಾರ ವಲಯವನ್ನು ಬಲಪಡಿಸಲು, ಹಳೆಯ ನಿಬಂಧನೆಗಳನ್ನು ತೆಗೆದುಹಾಕಲು ಮತ್ತು ಅಗತ್ಯ ಅನುಷಂಗಿಕ ಅಧಿಕಾರಗಳೊಂದಿಗೆ ನಿಗಮವನ್ನು ಸಬಲಗೊಳಿಸಲು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಕಾಯಿದೆ, 1962 ಕ್ಕೆ ತಿದ್ದುಪಡಿ ತರಲು ಶ್ರಮಿಸುತ್ತದೆ. ಈ ಕ್ರಮಗಳು ಹೆಚ್ಚಿನ ಸ್ಥಿತಿಸ್ಥಾಪಕತ್ವ, ಕಾನೂನು ಸ್ಪಷ್ಟತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಒದಗಿಸುವ ಜೊತೆಗೆ ಸಹಕಾರ ಅಭಿವೃದ್ಧಿಗೆ ಸಮಯೋಚಿತ, ನೇರ ಮತ್ತು ಸ್ಪಂದನಶೀಲ ಹಣಕಾಸಿನ ನೆರವನ್ನು ನೀಡಲಿದ್ದು, ಅಧಿಕೃತ ಸಂಸ್ಥೆಗಳೊಂದಿಗೆ ಸಾಲ ಮತ್ತು ಇತರ ಸಂಬಂಧಿತ ಮಾಹಿತಿಯ ಸಂಗ್ರಹಣೆ ಹಾಗೂ ಹಂಚಿಕೆಯನ್ನು ಸುಗಮಗೊಳಿಸುತ್ತವೆ.

Ø ನ್ಯಾಯಾಧಿಕರಣಗಳ ಸುಧಾರಣಾ ವಿಧೇಯಕ, 2026 ದಕ್ಷತೆಯನ್ನು ಸುಧಾರಿಸಲು, ವಿವಿಧ ನ್ಯಾಯಾಧಿಕರಣಗಳ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆಗಳು, ನೇಮಕಾತಿ, ಸೇವಾ ನಿಯಮಗಳು ಮತ್ತು ಷರತ್ತುಗಳಲ್ಲಿ ಸ್ವಾಯತ್ತತೆ, ಪಾರದರ್ಶಕತೆ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಧಿಕರಣಗಳ ಆಡಳಿತ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸಲು, ರಾಷ್ಟ್ರೀಯ ನ್ಯಾಯಾಧಿಕರಣಗಳ ಆಯೋಗವನ್ನು ಸ್ಥಾಪಿಸಲು ಮತ್ತು ಸಂಬಂಧಿತ ಶಾಸನಗಳಲ್ಲಿ ತದನುಸಾರ ತಿದ್ದುಪಡಿಗಳನ್ನು ಮಾಡಲು ಹಾಗೂ ಅದಕ್ಕೆ ಸಂಬಂಧಿಸಿದ ಅಥವಾ ಅನುಷಂಗಿಕ ವಿಷಯಗಳಿಗಾಗಿ ಶ್ರಮಿಸುತ್ತದೆ.

Ø ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 ಖನಿಜ ವಲಯದ ರಾಜಸ್ವ ವ್ಯವಸ್ಥೆಯಲ್ಲಿ ನಿಶ್ಚಿತತೆ, ಸ್ಥಿರತೆ ಮತ್ತು ನಿರೀಕ್ಷಿತತೆಯನ್ನು ಒದಗಿಸಲು ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ಕ್ಕೆ ತಿದ್ದುಪಡಿ ತರಲು ಶ್ರಮಿಸುತ್ತದೆ, ಆ ಮೂಲಕ ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಇದು ಸ್ವಾವಲಂಬಿ ಭಾರತದ ಗುರಿಗಳನ್ನು ಸುಗಮಗೊಳಿಸುತ್ತದೆ ಮತ್ತು ಅಂತಿಮವಾಗಿ ವಿಕಸಿತ ಭಾರತ 2047 ರ ದೃಷ್ಟಿಕೋನವನ್ನು ತಲುಪಲು ನೆರವಾಗುತ್ತದೆ.

ಲೋಕಸಭೆಯಲ್ಲಿ ಮಂಡಿಸಲಾದ ವಿಧೇಯಕಗಳು, ಜಂಟಿ ಸಮಿತಿಗೆ ಉಲ್ಲೇಖಿಸಲಾದ ವಿಧೇಯಕ, ಲೋಕಸಭೆ ಅಂಗೀಕರಿಸಿದ ವಿಧೇಯಕಗಳು, ರಾಜ್ಯಸಭೆಯಲ್ಲಿ ಮಂಡಿಸಲಾದ ವಿಧೇಯಕಗಳು, ರಾಜ್ಯಸಭೆ ಅಂಗೀಕರಿಸಿದ ವಿಧೇಯಕಗಳು ಮತ್ತು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ವಿಧೇಯಕಗಳ ಪಟ್ಟಿಗಳನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ.

ಲೋಕಸಭೆಯ ಉತ್ಪಾದಕತೆಯು ಸುಮಾರು 19% ಮತ್ತು ರಾಜ್ಯಸಭೆಯ ಉತ್ಪಾದಕತೆಯು ಸುಮಾರು 39% ಆಗಿತ್ತು.

ಅನುಬಂಧ

 

18ನೇ ಲೋಕಸಭೆಯ 8ನೇ ಅಧಿವೇಶನ ಮತ್ತು ರಾಜ್ಯಸಭೆಯ 271 ನೇ ಅಧಿವೇಶನದಲ್ಲಿ ನಡೆದ ಶಾಸನಬದ್ಧ ವ್ಯವಹಾರಗಳು

I. ಲೋಕಸಭೆಯಲ್ಲಿ ಮಂಡಿಸಲಾದ ವಿಧೇಯಕಗಳು

  1. ಸರ್ವೋಚ್ಚ ನ್ಯಾಯಾಲಯ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026
  2. ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ವಿಧೇಯಕ, 2026
  3. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ, 2026
  4. ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ವಿಧೇಯಕ, 2026
  5. ಬ್ಯಾಂಕರ್‌ಗಳ ಪುಸ್ತಕ ಸಾಕ್ಷ್ಯ ವಿಧೇಯಕ, 2026
  6. ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2026
  7. ವಿನಿಯೋಗ (ಸಂಖ್ಯೆ 3) ವಿಧೇಯಕ, 2026
  8. ನ್ಯಾಯಾಧಿಕರಣಗಳ ಸುಧಾರಣಾ ವಿಧೇಯಕ, 2026
  9. ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026
  10. ಕೇರಳ (ಹೆಸರು ಬದಲಾವಣೆ) ವಿಧೇಯಕ, 2026
  11. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026

II. ರಾಜ್ಯಸಭೆಯಲ್ಲಿ ಮಂಡಿಸಲಾದ ವಿಧೇಯಕಗಳು

  1. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ವಿಧೇಯಕ, 2026
  2. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2026

III. ಉಭಯ ಸಭಾಗೃಹಗಳ ಜಂಟಿ ಸಮಿತಿಗೆ ಉಲ್ಲೇಖಿಸಲಾದ ವಿಧೇಯಕ

  1. ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026

IV. ಲೋಕಸಭೆಯಿಂದ ಅಂಗೀಕಾರಗೊಂಡ ವಿಧೇಯಕಗಳು

  1. ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ವಿಧೇಯಕ, 2026
  2. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ವಿಧೇಯಕ, 2026
  3. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ, 2026
  4. ಸರ್ವೋಚ್ಚ ನ್ಯಾಯಾಲಯ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026
  5. ವಿನಿಯೋಗ (ಸಂಖ್ಯೆ 3) ವಿಧೇಯಕ, 2026
  6. ಬ್ಯಾಂಕರ್‌ಗಳ ಪುಸ್ತಕ ಸಾಕ್ಷ್ಯ ವಿಧೇಯಕ, 2026
  7. ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2026
  8. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2026
  9. ನ್ಯಾಯಾಧಿಕರಣಗಳ ಸುಧಾರಣಾ ವಿಧೇಯಕ, 2026
  10. ಕೇರಳ (ಹೆಸರು ಬದಲಾವಣೆ) ವಿಧೇಯಕ, 2026
  11. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026
  12. ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026

V. ರಾಜ್ಯಸಭೆಯಿಂದ ಅಂಗೀಕಾರಗೊಂಡ ವಿಧೇಯಕಗಳು

  1. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ವಿಧೇಯಕ, 2026
  2. ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ವಿಧೇಯಕ, 2026
  3. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2026
  4. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ, 2026
  5. ಸರ್ವೋಚ್ಚ ನ್ಯಾಯಾಲಯ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026
  6. ವಿನಿಯೋಗ (ಸಂಖ್ಯೆ 3) ವಿಧೇಯಕ, 2026
  7. ಬ್ಯಾಂಕರ್‌ಗಳ ಪುಸ್ತಕ ಸಾಕ್ಷ್ಯ ವಿಧೇಯಕ, 2026
  8. ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2026
  9. ಕೇರಳ (ಹೆಸರು ಬದಲಾವಣೆ) ವಿಧೇಯಕ, 2026
  10. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026
  11. ನ್ಯಾಯಾಧಿಕರಣಗಳ ಸುಧಾರಣಾ ವಿಧೇಯಕ, 2026
  12. ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026

VI. ಸಂಸತ್ತಿನ ಉಭಯ ಸದನಗಳಿಂದ ಅಂಗೀಕಾರಗೊಂಡ ವಿಧೇಯಕಗಳು

  1. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ವಿಧೇಯಕ, 2026
  2. ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ವಿಧೇಯಕ, 2026
  3. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ, 2026
  4. ಸರ್ವೋಚ್ಚ ನ್ಯಾಯಾಲಯ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026
  5. ವಿನಿಯೋಗ (ಸಂಖ್ಯೆ 3) ವಿಧೇಯಕ, 2026
  6. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2026
  7. ಬ್ಯಾಂಕರ್‌ಗಳ ಪುಸ್ತಕ ಸಾಕ್ಷ್ಯ ವಿಧೇಯಕ, 2026
  8. ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2026
  9. ಕೇರಳ (ಹೆಸರು ಬದಲಾವಣೆ) ವಿಧೇಯಕ, 2026
  10. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ವಿಧೇಯಕ, 2026
  11. ನ್ಯಾಯಾಧಿಕರಣಗಳ ಸುಧಾರಣಾ ವಿಧೇಯಕ, 2026
  12. ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, 2026

 

*****

 


(रिलीज़ आईडी: 2299053) आगंतुक पटल : 23
इस विज्ञप्ति को इन भाषाओं में पढ़ें: English , Urdu , हिन्दी , Nepali , Marathi , Bengali , Assamese , Gujarati , Odia , Tamil , Telugu , Malayalam