ಪರಿಸರ ಮತ್ತು ಅರಣ್ಯ ಸಚಿವಾಲಯ
2026ನೇ ಸಾಲಿನ ʻವಿಶ್ವ ಆನೆ ದಿನʼದಂದು ಆನೆ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸಿದ ಭಾರತ
ಆನೆಗಳ ಭವಿಷ್ಯವನ್ನು ಭದ್ರಪಡಿಸುವುದು ಎಂದರೆ ನಮ್ಮ ಅರಣ್ಯಗಳು, ಜೀವವೈವಿಧ್ಯತೆ ಮತ್ತು ಪರಿಸರ ಪರಂಪರೆಯನ್ನು ಭದ್ರಪಡಿಸುವುದು: ಶ್ರೀ ಭೂಪೇಂದರ್ ಯಾದವ್
प्रविष्टि तिथि:
12 AUG 2026 11:19AM by PIB Bengaluru
2026ನೇ ಸಾಲಿನ ʻವಿಶ್ವ ಆನೆ ದಿನʼದ ಸಂದರ್ಭದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಆನೆಗಳು ಮತ್ತು ಜನರಿಗೆ ಪರಸ್ಪರ ಹಂಚಿಕೆಯ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತವು 14 ರಾಜ್ಯಗಳಲ್ಲಿ 33 ಆನೆ ಮೀಸಲು ಪ್ರದೇಶಗಳನ್ನು ಹೊಂದಿದೆ ಮತ್ತು 150 ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ʻಆನೆ ಕಾರಿಡಾರ್ʼಗಳನ್ನು ಹೊಂದಿದೆ ಎಂದು ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸುಧಾರಿತ ಆನೆಗಳ ಸಂಖ್ಯೆ ಮೇಲ್ವಿಚಾರಣೆ ಮತ್ತು ಮಾನವ-ಆನೆ ಸಂಘರ್ಷವನ್ನು ತಗ್ಗಿಸುವಲ್ಲಿ ಬಲವಾದ ಕ್ರಮಗಳು ಆನೆಗಳ ಸಂರಕ್ಷಣೆಯನ್ನು ಬಲಪಡಿಸುತ್ತಿವೆ ಎಂದು ಶ್ರೀ ಯಾದವ್ ಹೇಳಿದ್ದಾರೆ.
"ನಾವು ಆನೆಗಳ ಭವಿಷ್ಯವನ್ನು ಭದ್ರಪಡಿಸಿದಾಗ, ನಾವು ನಮ್ಮ ಅರಣ್ಯಗಳು, ಜೀವವೈವಿಧ್ಯತೆ ಮತ್ತು ಪರಿಸರ ಪರಂಪರೆಯನ್ನು ಭದ್ರಪಡಿಸುತ್ತೇವೆ," ಎಂದು ಸಚಿವರು ಹೇಳಿದ್ದಾರೆ. ಮುಂದಿನ ಪೀಳಿಗೆಯಲ್ಲೂ ಆನೆಗಳು ಭಾರತದ ಕಾಡುಗಳು ಮತ್ತು ಪರಿಸರದಲ್ಲಿ ಮುಕ್ತವಾಗಿ ನಡೆದಾಡುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಚಿವರು ಕರೆ ನೀಡಿದ್ದಾರೆ.
ವಿಶ್ವ ಆನೆ ದಿನದ ಅಂಗವಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಹಾಯಕ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರೂ ಸಹ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತವು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಭೂದೃಶ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ವಿಶ್ವದ ಸುಮಾರು 60 ಪ್ರತಿಶತದಷ್ಟು ಏಷ್ಯನ್ ಕಾಡು ಆನೆಗಳು ಭಾರತದಲ್ಲಿ ವಾಸಿಸುತ್ತಿವೆ, ಅವುಗಳನ್ನು ದೇಶದ ಪರಿಸರ ಪರಂಪರೆಯ ಜೀವಂತ ಸಂಕೇತವಾಗಿದೆ ಎಂದು ಶ್ರೀ ಸಿಂಗ್ ಹೇಳಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಆನೆ ಮೀಸಲು ಪ್ರದೇಶಗಳು ವನ್ಯಜೀವಿಗಳ ಸಂರಕ್ಷಣೆಯ ವಿಚಾರದಲ್ಲಿ ದೇಶದ ಬದ್ಧತೆಗೆ ಸಾಕ್ಷಿಯಾಗಿವೆ ಎಂದು ಸಚಿವರು ಹೇಳಿದ್ದಾರೆ.
ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳಾಗಿ ಆನೆಗಳ ಪಾತ್ರವನ್ನು ಶ್ರೀ ಕೃತಿ ವರ್ಧನ್ ಸಿಂಗ್ ಉಲ್ಲೇಖಿಸಿದ್ದಾರೆ. ಆನೆಗಳು ತಿರುಗಾಡುವಾಗ, ಅವು ಬೀಜಗಳನ್ನು ದೂರದವರೆಗೆ ಹರಡುತ್ತವೆ, ಹೊಸ ಸಸ್ಯಗಳು ಹುಟ್ಟಲು ಕಾರಣವಾಗುತ್ತವೆ. ಅಲ್ಲದೆ, ಆನೆಯ ಪ್ರತಿಯೊಂದು ಹೆಜ್ಜೆಯೂ ಪ್ರಕೃತಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎಂದು ಶ್ರೀ ಸಿಂಗ್ ಹೇಳಿದ್ದಾರೆ. ಸೌಮ್ಯ ಸ್ವರೂಪದ ಈ ದೈತ್ಯ ಜೀವಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಎಲ್ಲರೂ ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
*****
(रिलीज़ आईडी: 2298093)
आगंतुक पटल : 37
इस विज्ञप्ति को इन भाषाओं में पढ़ें:
Telugu
,
Assamese
,
English
,
Urdu
,
Marathi
,
हिन्दी
,
Bengali
,
Punjabi
,
Gujarati
,
Tamil
,
Malayalam