ಉಪರಾಷ್ಟ್ರಪತಿಗಳ ಕಾರ್ಯಾಲಯ
‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯ ಸ್ಮರಣಾರ್ಥ ಸಂಸದರ ʻಹರ್ ಘರ್ ತಿರಂಗಾʼ ಬೈಕ್ ಜಾಥಾಗೆ ಉಪರಾಷ್ಟ್ರಪತಿ ಅವರಿಂದ ಚಾಲನೆ
ʻಹರ್ ಘರ್ ತಿರಂಗಾʼ ಜನಾಂದೋಲನವಾಗಿ ಮಾರ್ಪಟ್ಟಿದೆ, ಇದು ʻವಂದೇ ಮಾತರಂʼ ಸ್ಫೂರ್ತಿಗೆ ಗೋಚರ ರೂಪವನ್ನು ನೀಡುತ್ತದೆ: ಉಪರಾಷ್ಟ್ರಪತಿ
ತಾಯ್ನಾಡಿನ ಮೇಲಿನ ಪ್ರೀತಿಯನ್ನು ರಾಷ್ಟ್ರೀಯ ಕರ್ತವ್ಯವಾಗಿ ʻವಂದೇ ಮಾತರಂʼ ಪರಿವರ್ತಿಸಿದೆ: ಉಪರಾಷ್ಟ್ರಪತಿ
प्रविष्टि तिथि:
12 AUG 2026 11:03AM by PIB Bengaluru
ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ 150ನೇ ವರ್ಷಾಚರಣೆಯ ಸ್ಮರಣಾರ್ಥ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ಸಂಸದರು ಮತ್ತು ಇತರೆ ಜನಪ್ರತಿನಿಧಿಗಳ ʻಹರ್ ಘರ್ ತಿರಂಗಾʼ ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿದರು.
ಈ ಜಾಥಾವು ಭಾರತ ಮಂಟಪದಿಂದ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದವರೆಗೆ ರಾಷ್ಟ್ರೀಯ ಹೆಮ್ಮೆ, ಏಕತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಸಂದೇಶವನ್ನು ಹೊತ್ತು ಸಾಗಿತು.
ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ತಾಯ್ನಾಡಿನ ಮೇಲಿನ ಪ್ರೀತಿಯನ್ನು ರಾಷ್ಟ್ರೀಯ ಕರ್ತವ್ಯವಾಗಿ ʻವಂದೇ ಮಾತರಂʼ ಪರಿವರ್ತಿಸಿದೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಪ್ರಬಲ ಅಭಿವ್ಯಕ್ತಿಯಾಗಿದೆಎಂದು ಹೇಳಿದರು. ವಂದೇ ಮಾತರಂನ ಅಮರ ನುಡಿಗಳು ಹೇಗೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈರ್ಯ, ತ್ಯಾಗ ಮತ್ತು ಭರವಸೆಯ ಸ್ಫೂರ್ತಿ ನೀಡಿದವು ಎಂಬುದನ್ನು ಅವರು ಸ್ಮರಿಸಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ತಮ್ಮ ಇತ್ತೀಚಿನ ಭೇಟಿಯನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಮತ್ತು ಐತಿಹಾಸಿಕ ಸೆಲ್ಯುಲಾರ್ ಜೈಲಿಗೆ ತಮ್ಮ ಭೇಟಿಯು ಅತ್ಯಂತ ಹೃದಯಸ್ಪರ್ಶಿ ಅನುಭವ ಎಂದು ಹೇಳಿದರು. 1943ರಲ್ಲಿ ನೇತಾಜಿ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದ್ದನ್ನು ಮತ್ತು ಸೆಲ್ಯುಲಾರ್ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಅವರು ಸ್ಮರಿಸಿದರು, ಅವರಲ್ಲಿ ಅನೇಕರು ʻವಂದೇ ಮಾತರಂʼ ಎಂದು ಕೂಗುತ್ತಲೇ ನೇಣುಗಂಬಕ್ಕೆ ಏರಿದ್ದನ್ನು ಸ್ಮರಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಗೀತೆ ʻವಂದೇ ಮಾತರಂʼ ಬೀರಿದ ರಾಷ್ಟ್ರವ್ಯಾಪಿ ಪ್ರಭಾವವನ್ನು ಎತ್ತಿ ತೋರಿಸಿದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ವಿ.ಒ. ಚಿದಂಬರಂ ಪಿಳ್ಳೈ, ಸುಬ್ರಮಣ್ಯ ಶಿವ, ತಿರುಪ್ಪೂರ್ ಕುಮಾರನ್ ಮತ್ತು ವಂಚಿನಾಥನ್ ಸೇರಿದಂತೆ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಾಯಕರ ಕೊಡುಗೆಗಳು ಮತ್ತು ತ್ಯಾಗಗಳನ್ನು ಸ್ಮರಿಸಿದರು. ಜೊತೆಗೆ ʻವಂದೇ ಮಾತರಂʼನ ಚೈತನ್ಯ ಮತ್ತು ಸಂದೇಶವನ್ನು ಜನರಿಗೆ ತಲುಪಿಸಿದ ರಾಷ್ಟ್ರೀಯ ಕವಿ ಸುಬ್ರಮಣ್ಯ ಭಾರತಿ ಅವರನ್ನು ನೆನೆದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರಲ್ಲಿ ಪ್ರಾರಂಭಿಸಿದ ʻಹರ್ ಘರ್ ತಿರಂಗಾʼ ಅಭಿಯಾನವು ತಿರಂಗಾ ಯಾತ್ರೆಗಳು, ಬೈಕ್ ಮತ್ತು ಸೈಕಲ್ ರ‍್ಯಾಲಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳಲ್ಲಿ ನಾಗರಿಕರು ಭಾಗವಹಿಸುವ ಮೂಲಕ ಜನಾಂದೋಲನವಾಗಿ ವಿಕಸನಗೊಂಡಿದೆ ಎಂದು ಉಪರಾಷ್ಟ್ರಪತಿ ಹೇಳಿದರು. ತ್ರಿವರ್ಣ ಧ್ವಜವು ತಾಯ್ನಾಡಿನ ಭಾವನೆಗೆ ಗೋಚರ ರೂಪವನ್ನು ನೀಡಿದೆ ಎಂದು ಹೇಳಿದ ಅವರು, ಸಂಸದರು ಮತ್ತು ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಅಭಿಯಾನವನ್ನು ಉತ್ತೇಜಿಸಬೇಕು ಮತ್ತು ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಾರಿಸಲು ನಾಗರಿಕರನ್ನು ಪ್ರೇರೇಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ವೀರೇಂದ್ರ ಕುಮಾರ್, ಶ್ರೀ ಜಿ. ಕಿಶನ್ ರೆಡ್ಡಿ, ಶ್ರೀ ಕಿರಣ್ ರಿಜಿಜು ಮತ್ತು ಶ್ರೀ ಜಿತೇಂದ್ರ ಸಿಂಗ್ ಮತ್ತು ಸಂಸತ್ ಸದಸ್ಯರು ಮತ್ತು ಇತರ ಜನಪ್ರತಿನಿಧಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
*****
(रिलीज़ आईडी: 2298092)
आगंतुक पटल : 26