ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

50 ಲಕ್ಷಕ್ಕೂ ಅಧಿಕ ಮೇಲ್ಛಾವಣಿ ಸೌರಕೋಶ ಅಳವಡಿಕೆಗಳ ಮೈಲಿಗಲ್ಲನ್ನು ಸಾಧಿಸಿದ ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆ


ಪ್ರತಿ ಆರು ದಿನಗಳಿಗೊಮ್ಮೆ ಒಂದು ಲಕ್ಷ ಫಲಾನುಭವಿ ಮನೆಗಳನ್ನು ಸೇರ್ಪಡೆಗೊಳಿಸುತ್ತಿರುವ ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆ

2026ರ ಜುಲೈ ನಲ್ಲಿ ಯೋಜನೆಯಡಿಯಲ್ಲಿ ಈರೆಗಿನ ಅತ್ಯಧಿಕ ಮಾಸಿಕ ಮೇಲ್ಛಾವಣಿ ಸೌರ ಅಳವಡಿಕೆ ದಾಖಲೆ

ಸುಮಾರು 19 ಲಕ್ಷ ಮನೆಗಳು ಈಗ ಶೂನ್ಯ ವಿದ್ಯುತ್ ಬಿಲ್‌ಗಳನ್ನು ಪಡೆಯುತ್ತಿವೆ; ಈವರೆಗೆ 14.8 ಗಿಗಾವ್ಯಾಟ್ ಮೇಲ್ಛಾವಣಿ ಸೌರ ಸಾಮರ್ಥ್ಯ ಕಾರ್ಯಾಚರಣೆ

ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆಯಡಿಯಲ್ಲಿ 25,000 ಕ್ಕೂ ಅಧಿಕ ಕೇಂದ್ರ ಸರ್ಕಾರಿ ಕಟ್ಟಡಗಳು ಸೌರಶಕ್ತಿಕರಣಗೊಳಿಸಲಾಗಿದೆ

प्रविष्टि तिथि: 04 AUG 2026 2:26PM by PIB Bengaluru

ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆಯು ದೇಶಾದ್ಯಂತ 50.06 ಲಕ್ಷಕ್ಕೂ ಅಧಿಕ ಕುಟುಂಬಗಳು ಮೇಲ್ಛಾವಣಿ ಸೌರಕೋಶ ಅಳವಡಿಕೆಯಿಂದ ಪ್ರಯೋಜನ ಪಡೆಯುತ್ತಿರುವ ಮಹತ್ವದ ಮೈಲಿಗಲ್ಲನ್ನು ದಾಟಿದೆ.

ಯೋಜನೆ ಆರಂಭವಾದ ಕೇವಲ ಎರಡು ವರ್ಷಗಳಲ್ಲಿ ಸಾಧಿಸಿದ ಈ ಮೈಲಿಗಲ್ಲು, ಹಿಂದಿನ ಹತ್ತು ವರ್ಷಗಳಲ್ಲಿ ದಾಖಲಾದ 7.94 ಲಕ್ಷ ಮೇಲ್ಛಾವಣಿ ಸೌರಕೋಶಗಳ ಅಳವಡಿಕೆಗೆ ಹೋಲಿಸಿದರೆ ಗಮನಾರ್ಹ ವೇಗವರ್ಧನೆಯನ್ನು ಸೂಚಿಸುತ್ತದೆ. ಇದು ವಿಶ್ವದ ಅತಿದೊಡ್ಡ ಮೇಲ್ಛಾವಣಿ ಸೌರಶಕ್ತಿ ಕಾರ್ಯಕ್ರಮದ ತ್ವರಿತ ಅನುಷ್ಠಾನವನ್ನು ಪ್ರತಿಬಿಂಬಿಸುತ್ತದೆ, ಇದರ ವೆಚ್ಚ 75,021 ಕೋಟಿ ರೂ. ಪಿಎಂ ಸೂರ್ಯ ಘರ್: ಮಫ್ತ್ ಬಿಜ್ಲಿ ಯೋಜನೆಯು ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಡಿಯಲ್ಲಿನ ಪ್ರಮುಖ ಮೇಲ್ಛಾವಣಿ ಸೌರಶಕ್ತಿ ಯೋಜನೆಯಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಈ ಯೋಜನೆಯು ಇಂದು ಪ್ರತಿ ಆರು ದಿನಗಳಿಗೊಮ್ಮೆ 1 ಲಕ್ಷ ಮನೆಗಳಿಗೆ ಪ್ರಯೋಜನವನ್ನು ಒದಗಿಸುತ್ತಿದೆ, ಇದು ಜಗತ್ತಿನ ಎಲ್ಲೆಡೆ ವೇಗವಾಗಿ ಬೆಳೆಯುತ್ತಿರುವ ಶುದ್ಧ ಇಂಧನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ ಸೌರಕೋಶಗಳ ಅಳವಡಿಕೆಯ ವೇಗವು 3.2 ಪಟ್ಟು ಹೆಚ್ಚಾಗಿದೆ, ಅಕ್ಟೋಬರ್ 2025 ರಲ್ಲಿ ದಿನಕ್ಕೆ 5,038 ಅಳವಡಿಕೆಗಳಿದಿದ್ದು, 2026ರ ಜುಲೈ ನಲ್ಲಿ ದಿನಕ್ಕೆ ಸುಮಾರು 16,328 ಅಳವಡಿಕೆಗೆ ಹೆಚ್ಚಳವಾಗಿದೆ.

2026ರ ಜುಲೈ ನಲ್ಲಿ ಮಾತ್ರ 5.06 ಲಕ್ಷ ಮನೆಗಳು ಪ್ರಯೋಜನವನ್ನು ದಾಖಲಿಸಿವೆ, ಇದು ಯೋಜನೆ ಆರಂಭವಾದಾಗಿನಿಂದ ಈವರೆಗಿನ ಅತ್ಯಧಿಕ ಮಾಸಿಕ ಅಂಕಿ ಅಂಶವಾಗಿದೆ.

ಯೋಜನೆ ಸದ್ಯ ನಡೆಯುತ್ತಿರುವ ಆವೇಗವನ್ನು ಬೆಂಬಲಿಸಲು, ನೇರ ನಗದು ವರ್ಗಾವಣೆ(ಡಿಬಿಟಿ)ಯ ಮೂಲಕ ಫಲಾನುಭವಿಗಳಿಗೆ 28,024 ಕೋಟಿ ರೂ. ಸಬ್ಸಿಡಿಯನ್ನು ನೇರವಾಗಿ ಬಿಡುಗಡೆ ಮಾಡಲಾಗಿದೆ. ಅದರ ಪರಿಣಾಮವಾಗಿ ಸುಮಾರು 19 ಲಕ್ಷ ಕುಟುಂಬಗಳು ಈಗ ಶೂನ್ಯ ವಿದ್ಯುತ್ ಬಿಲ್‌ಗಳನ್ನು ಪಡೆಯುತ್ತಿವೆ, ಇದು ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಗಮನಾರ್ಹವಾಗಿ ಇಳಿಕೆ ಮಾಡುತ್ತದೆ. 2024-25ನೇ ಹಣಕಾಸು ವರ್ಷದಲ್ಲಿ 12 ಲಕ್ಷಕ್ಕೂ ಅಧಿಕ ಕುಟುಂಬಗಳು ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಒಟ್ಟಾಗಿ 421 ಕೋಟಿ ರೂ.ಗಳನ್ನು ಗಳಿಸಿವೆ, ಇದು ಗ್ರಿಡ್‌ಗೆ ವಿದ್ಯುತ್ ಅನ್ನು ಮತ್ತೆ ರಫ್ತು ಮಾಡುವವರಿಗೆ ಪ್ರತಿ ಮನೆಗೆ ವರ್ಷಕ್ಕೆ ಸುಮಾರು 3,500 ರೂ.ಗಳ ಹೆಚ್ಚುವರಿ ಆದಾಯಕ್ಕೆ ಕಾರಣವಾಗುತ್ತದೆ.

ಯುಟಿಲಿಟಿ ಆಧಾರಿತ ಅಗ್ರಿಗೇಷನ್ ಮಾದರಿಯಡಿಯಲ್ಲಿ 4 ರಾಜ್ಯಗಳಲ್ಲಿ ಪಿಎಂಎವೈ, ಬಿಪಿಎಲ್ ಮತ್ತು ಪ.ಜಾ/ಪ.ಪಂ ಕುಟುಂಬಗಳಿಗೆ 1.6 ಲಕ್ಷ ಅಳವಡಿಕೆಗಳನ್ನು ಪೂರ್ಣಗೊಳಿಸಲಾಗಿದೆ, ಈ ಮಾದರಿಯನ್ನು 12 ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಅನುಮೋದಿಸಲಾಗಿದೆ. ಈ ಮಾದರಿಯು ಕಡಿಮೆ ಆದಾಯದ ಕುಟುಂಬಗಳಿಗೆ ಮೇಲ್ಛಾವಣಿಯ ಸೌರಶಕ್ತಿಯನ್ನು ಹೊಂದಲು ಅನುವು ಮಾಡಿಕೊಡುತ್ತದೆ ಮತ್ತು ರಾಜ್ಯಗಳು ತಮ್ಮ ಸುಂಕದ ಸಬ್ಸಿಡಿ ಹೊರೆ ತಗ್ಗಿಸಲು ಸಹಾಯ ಮಾಡುತ್ತದೆ. ರೆಪೊ ದರ ಮತ್ತು 50 ಬೇಸಿಸ್ ಪಾಯಿಂಟ್‌ಗಳಿಗೆ ಮಾನದಂಡವಾಗಿ ಶೇಕಡ 5.75 ರಷ್ಟು ರಿಯಾಯಿತಿ ಸಾಲಗಳನ್ನು 21.87 ಲಕ್ಷ ಅರ್ಜಿದಾರರಿಗೆ ಮಂಜೂರು ಮಾಡಲಾಗಿದೆ, ಅದರಲ್ಲಿ 17.5 ಲಕ್ಷ ಸೌರಕೋಶಗಳ ಅಳವಡಿಕೆಗೆ ಈಗಾಗಲೇ ಸಾಲ ಹಣಕಾಸು ಮೂಲಕ ಪೂರ್ಣಗೊಂಡಿವೆ, ಜನ್ ಸಮರ್ಥ್ ಏಕೀಕರಣವು ಕಾಗದರಹಿತ ಸಾಲ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ.

ಈ ಯೋಜನೆಯು ವ್ಯಾಪಕವಾದ ಮಾರಾಟಗಾರ ಮತ್ತು ಉದ್ಯೋಗ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಿದೆ, ದೇಶಾದ್ಯಂತ 34,219 ನೋಂದಾಯಿತ ಮಾರಾಟಗಾರರ ಪೈಕಿ 29,469 ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಲ್ಛಾವಣಿ ಸೌರ ಮೌಲ್ಯ ಸರಣಿಯನ್ನು ಬೆಂಬಲಿಸುವ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳ ಅಡಿಯಲ್ಲಿ 2.32 ಲಕ್ಷಕ್ಕೂ ಅಧಿಕ ಜನರಿಗೆ ತರಬೇತಿ ನೀಡಲಾಗಿದೆ. ಒಟ್ಟಾರೆ ಈ ಯೋಜನೆಯಡಿಯಲ್ಲಿ ಈವರೆಗೆ 14.8 ಗಿಗಾವ್ಯಾಟ್ ಮೇಲ್ಛಾವಣಿ ಸೌರ ಸಾಮರ್ಥ್ಯವನ್ನು ಕಾರ್ಯಾಚರಣೆಗೊಳಿಸಲಾಗಿದೆ.

ಈ ಯೋಜನೆಯು ಅರ್ಜಿಯಿಂದ ಸಬ್ಸಿಡಿ ಬಿಡುಗಡೆಯವರೆಗೆ ಶೇ.100 ರಷ್ಟು ಆನ್‌ಲೈನ್, ಆರಂಭದಿಂದ ಅಂತ್ಯದವರೆಗೆ ಡಿಜಿಟಲ್ ಪ್ರಕ್ರಿಯೆಯಲ್ಲಿ ನಡೆಯುತ್ತದೆ, ಗ್ರಾಹಕರಿಂದ ಯಾವುದೇ ಭೌತಿಕ ದಾಖಲೆಗಳು ಅಥವಾ ಕಚೇರಿ ಭೇಟಿಗಳು ಅಗತ್ಯವಿಲ್ಲ. ಕಾಗದರಹಿತ ಸಾಲಗಳಿಗಾಗಿ ಜನ ಸಮರ್ಥ್ ಏಕೀಕರಣ, 15 ದಿನಗಳಲ್ಲಿ ಸಬ್ಸಿಡಿ ಬಿಡುಗಡೆಗೆ ಅವಕಾಶ ನೀಡುವ ಪಿಎಫ್‌ಎಂಎಸ್ ಏಕೀಕರಣ, ತಡೆರಹಿತ ಪ್ರಕ್ರಿಯೆಗಾಗಿ 80ಕ್ಕೂ ಅಧಿಕ ವಿದ್ಯುತ್ ಸರಬರಾಜು ಕಂಪನಿ( ಡಿಸ್ಕಾಮ್‌) ಗಳೊಂದಿಗೆ ಎಪಿಐ ಏಕೀಕರಣ, ರಾಷ್ಟ್ರೀಯ ಪೋರ್ಟಲ್ ಮೂಲಕ ಡಿಜಿಟಲ್ ನೆಟ್ ಮೀಟರಿಂಗ್ ಒಪ್ಪಂದ ಮತ್ತು ಗ್ರಾಹಕರಿಗೆ ಗೋಚರಿಸುವ ಸ್ಟಾರ್ ರೇಟಿಂಗ್‌ಗಳನ್ನು ನೀಡುವ ಮಾರಾಟಗಾರರ ಶ್ರೇಯಾಂಕ (ರೇಟಿಂಗ್) ಚೌಕಟ್ಟಿನ ಮೂಲಕ ಇದನ್ನು ಸಕ್ರಿಯಗೊಳಿಸಲಾಗಿದೆ. ಡಿಸಿಆರ್ ಪೋರ್ಟಲ್‌ನೊಂದಿಗೆ ಏಕೀಕರಣವು ದೇಶೀಯ ಕಂಟೆಂಟ್ ಪಾಲನೆಯನ್ನು ಖಾತ್ರಿಪಡಿಸುತ್ತದೆ.

ಸೌರಶಕ್ತಿ ಬಳಕೆಯನ್ನು ಸುಲಭ ಮಾಡುವ ಕುರಿತಂತೆ ಹೇಳುವುದಾದರೆ, 10 ಕಿ.ವ್ಯಾಟ್ ವರೆಗಿನ ಮೇಲ್ಛಾವಣಿ ಸೌರಶಕ್ತಿಗೆ ಡೀಮ್ಡ್ ಅನುಮೋದನೆ ಮತ್ತು ಕಾರ್ಯಸಾಧ್ಯತಾ ಮನ್ನಾ ಪರಿಚಯಿಸಲಾಗಿದೆ ಮತ್ತು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೇಲ್ಛಾವಣಿ ಸೌರಶಕ್ತಿಗಾಗಿ ಅರ್ಜಿ ಮತ್ತು ನಿವ್ವಳ ಮೀಟರಿಂಗ್ ಶುಲ್ಕಗಳನ್ನು ತೆಗೆದುಹಾಕಿವೆ. ವಿದ್ಯುತ್ ಸರಬರಾಜು ಕಂಪನಿ (ಡಿಸ್ಕಾಮ್‌)ಗಳಿಗೆ ಪ್ರೋತ್ಸಾಹಕವಾಗಿ 3,807.6 ಕೋಟಿ ರೂ.ಗಳನ್ನು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸುಮಾರು 104 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 46 ನಗರಗಳಲ್ಲಿ ನಗರ ವೇಗವರ್ಧಕ ಕಾರ್ಯಕ್ರಮ ಆರಂಭಿಸಲಾಗಿದೆ ಮತ್ತು ಮಾರಾಟಗಾರರ ಹೊಣೆಗಾರಿಕೆ ಚೌಕಟ್ಟಿನಡಿಯಲ್ಲಿ ಸುಮಾರು 23,000 ಮೂರನೇ ವ್ಯಕ್ತಿಯ ಗುಣಮಟ್ಟದ ತಪಾಸಣೆಗಳನ್ನು ನಡೆಸಲಾಗಿದೆ.

ಕೇಂದ್ರ ಸಚಿವಾಲಯಗಳು 1,418 ಮೆಗಾವ್ಯಾಟ್ ಸಾಮರ್ಥ್ಯವಿರುವ ಸುಮಾರು 41,542 ಕಾರ್ಯಸಾಧ್ಯ ಸರ್ಕಾರಿ ಕಟ್ಟಡಗಳನ್ನು ಗುರುತಿಸಿವೆ, ಅದರಲ್ಲಿ 872 ಮೆಗಾವ್ಯಾಟ್ ಸಾಮರ್ಥ್ಯವಿರುವ 25,255 ಕಟ್ಟಡಗಳನ್ನು ಈಗಾಗಲೇ ಸೌರಶಕ್ತಿಕರಣಗೊಳಿಸಲಾಗಿದೆ. ರಾಜ್ಯಗಳು 4,400 ಮೆಗಾವ್ಯಾಟ್ ಸಾಮರ್ಥ್ಯವಿರುವ ಸುಮಾರು 3,20,000 ಕಾರ್ಯಸಾಧ್ಯ ಸರ್ಕಾರಿ ಕಟ್ಟಡಗಳನ್ನು ಗುರುತಿಸಿವೆ, ಅದರಲ್ಲಿ 1,450 ಮೆಗಾವ್ಯಾಟ್ ಸಾಮರ್ಥ್ಯವಿರುವ 81,329 ಕಟ್ಟಡಗಳನ್ನು ಈಗಾಗಲೇ ಸೌರಶಕ್ತಿಕರಣಗೊಳಿಸಲಾಗಿದೆ. ಒಟ್ಟಾರೆ ಈವರೆಗೆ 1.06 ಲಕ್ಷ ಸರ್ಕಾರಿ ಕಟ್ಟಡಗಳನ್ನು ಸೌರೀಕರಣಗೊಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸೌರೀಕರಣ ಯೋಜನೆಗಳಲ್ಲಿ ಪಾವತಿ ಅಪಾಯವನ್ನು ತಗ್ಗಿಸುವ ಮೂಲಕ ಮತ್ತು ಸಕಾಲಿಕ ಪಾವತಿಗಳನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ರೆಸ್ಕೋ (RESCO )ಬಿಡ್ಡರ್‌ಗಳನ್ನು ಪ್ರೋತ್ಸಾಹಿಸಲು ಪಾವತಿ ಭದ್ರತಾ ಕಾರ್ಯವಿಧಾನವನ್ನು ಸಹ ಪರಿಚಯಿಸಲಾಗಿದೆ.

50 ಲಕ್ಷಕ್ಕೂ ಅಧಿಕ ಮನೆಗಳು ಈಗ ಪ್ರಯೋಜನ ಪಡೆಯುತ್ತಿರುವುದರಿಂದ ಮತ್ತು ಸೌರಕೋಶ ಅಳವಡಿಕೆಗಳು ವೇಗಗೊಳ್ಳುತ್ತಿರುವುದರಿಂದ, ಪಿಎಂ ಸೂರ್ಯ ಘರ್: ಮುಫ್ತ್‌ ಬಿಜ್ಲಿ ಯೋಜನೆಯು ವಿಕೇಂದ್ರೀಕೃತ, ನಾಗರಿಕ ಸ್ನೇಹಿ ಶುದ್ಧ ಇಂಧನ ಅಳವಡಿಕೆಯಲ್ಲಿ ಭಾರತದ ಜಾಗತಿಕ ನಾಯಕನ ಸ್ಥಾನವನ್ನು ಬಲಪಡಿಸುತ್ತಿದೆ. ಅದೇ ವೇಳೆ ಭಾರತೀಯ ಮನೆಗಳಿಗೆ ಇಂಧನ ಭದ್ರತೆ ಮತ್ತು ಇಂಧನ ಸ್ವಾತಂತ್ರ್ಯದ ಅವಳಿ ಗುರಿಗಳನ್ನು ಪೂರೈಸುತ್ತಿದೆ.

 

*****


(रिलीज़ आईडी: 2294267) आगंतुक पटल : 19
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Assamese , Gujarati , Tamil , Telugu , Malayalam