ಸಂಪುಟ
ಒಟ್ಟು ₹5,070 ಕೋಟಿ ವೆಚ್ಚದಲ್ಲಿ ಇಂಧನ ಸಂಗ್ರಹಣಾ ವ್ಯವಸ್ಥೆಗಳೊಂದಿಗೆ ತೇಲುವ ಸೌರ ದ್ಯುತಿವಿದ್ಯುಜ್ಜನಕ (ಫ್ಲೋಟಿಂಗ್ ಸೋಲಾರ್ ಫೋಟೋವೋಲ್ಟಾಯಿಕ್) ಯೋಜನೆಗಳ ಅಭಿವೃದ್ಧಿಗಾಗಿ 'ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ (ಪಿಎಂ-ಎಸ್ ಎಸ್ ವೈ)' ಗೆ ಸಚಿವ ಸಂಪುಟದ ಅನುಮೋದನೆ
प्रविष्टि तिथि:
31 JUL 2026 4:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಒಟ್ಟು ₹5,070 ಕೋಟಿ ವೆಚ್ಚದಲ್ಲಿ ಇಂಧನ ಸಂಗ್ರಹಣಾ ವ್ಯವಸ್ಥೆಗಳೊಂದಿಗೆ (ಇ ಎಸ್ ಎಸ್) ನೊಂದಿಗೆ ತೇಲುವ ಸೌರ ದ್ಯುತಿವಿದ್ಯುಜ್ಜನಕ (ಎಫ್ ಎಸ್ ಪಿ ವಿ) ಯೋಜನೆಗಳ ಅಭಿವೃದ್ಧಿಗಾಗಿ 'ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ (PM-SSY)' ಯನ್ನು ಅನುಮೋದಿಸಿದೆ.
ಈ ಯೋಜನೆಯು ಕನಿಷ್ಠ ಎರಡು ಗಂಟೆಗಳ ಸಂಗ್ರಹಣಾ ಸಾಮರ್ಥ್ಯ, ಅಂದರೆ 10,000 MWh ನೊಂದಿಗೆ ಸಹ-ಸ್ಥಾಪಿತ ಇಂಧನ ಸಂಗ್ರಹಣಾ ವ್ಯವಸ್ಥೆಗಳನ್ನು ಹೊಂದಿರುವ 5,000 ಮೆ.ವ್ಯಾ. ತೇಲುವ ಸೌರ ದ್ಯುತಿವಿದ್ಯುಜ್ಜನಕ ಯೋಜನೆಗಳ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗಳನ್ನು ಆರ್ಥಿಕ ವರ್ಷ 2026-27 ರಿಂದ 2030-31 ರವರೆಗೆ ಮಂಜೂರು ಮಾಡಲಾಗುತ್ತದೆ, ಮತ್ತು ಆರ್ಥಿಕ ನೆರವಿನ ವಿತರಣೆಯು ಆರ್ಥಿಕ ವರ್ಷ 2032-33 ರವರೆಗೆ ಮುಂದುವರಿಯುತ್ತದೆ.
ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (ಎನ್ ಐ ಎಸ್ ಇ) ಇತ್ತೀಚೆಗೆ ನಡೆಸಿದ ಮೌಲ್ಯಮಾಪನವನ್ನು ಆಧರಿಸಿ ಈ ಅನುಮೋದನೆ ನೀಡಲಾಗಿದೆ. ಈ ಮೌಲ್ಯಮಾಪನವು ದೇಶದ ಜಲಾಶಯಗಳು ಮತ್ತು ಇತರ ಸೂಕ್ತವಾದ ಒಳನಾಡಿನ ಜಲಮೂಲಗಳಲ್ಲಿ ಸುಮಾರು 102.18 GWp ತೇಲುವ ಸೌರ ಶಕ್ತಿಯ ಸಾಮರ್ಥ್ಯವಿದೆ ಎಂದು ಅಂದಾಜಿಸಿದೆ.
ಈ ಯೋಜನೆಯಡಿಯಲ್ಲಿ, ಅರ್ಹ ತೇಲುವ ಸೌರ ದ್ಯುತಿವಿದ್ಯುಜ್ಜನಕ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಂತರ ಪ್ರತಿ ಮೆಗಾವ್ಯಾಟ್ ಗೆ ₹1 ಕೋಟಿ ಕೇಂದ್ರ ಧನಸಹಾಯ (ಸಿ ಎಫ್ ಎ) ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಬಾಥಿಮೆಟ್ರಿ ಮತ್ತು ಹೈಡ್ರೋಗ್ರಫಿ ಮೌಲ್ಯಮಾಪನಗಳು, ಪರಿಸರ ಅಧ್ಯಯನಗಳು ಮತ್ತು ಯೋಜನೆಯ ಅಭಿವೃದ್ಧಿಗೆ ಅಗತ್ಯವಿರುವ ಇತರ ಪೂರ್ವಸಿದ್ಧತಾ ಚಟುವಟಿಕೆಗಳನ್ನು ಒಳಗೊಂಡಂತೆ ಕಾರ್ಯಸಾದ್ಯತೆಯ ಅಧ್ಯಯನಗಳನ್ನು ಕೈಗೊಳ್ಳಲು ಪ್ರತಿ ಯೋಜನೆಗೆ ₹50 ಲಕ್ಷದವರೆಗೆ ಸಿ ಎಫ್ ಎ ಲಭ್ಯವಿರುತ್ತದೆ.
ಈ ಯೋಜನೆಯಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಯೋಜನ ಪಡೆಯಲಿವೆ. ಈ ಯೋಜನೆಯು ಪ್ರಸ್ತುತ ಸುಮಾರು 700 ಮೆ.ವ್ಯಾ. ನಷ್ಟಿರುವ ದೇಶದ ತೇಲುವ ಸೌರ ಪಿವಿ ಸಾಮರ್ಥ್ಯವನ್ನು 5,000 ಮೆ.ವ್ಯಾ. ನಷ್ಟು ಹೆಚ್ಚಿಸಲಿದೆ. ಈ ಯೋಜನೆಗಳು ಪ್ರಸ್ತುತ ಇರುವ ಜಲಾಶಯಗಳು ಮತ್ತು ಕೈಗಾರಿಕಾ ಕೊಳಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ಮತ್ತು ಅಪರೂಪದ ಭೂ ಸಂಪನ್ಮೂಲಗಳಿಗಾಗಿ ನಡೆಯುವ ಪೈಪೋಟಿಯನ್ನು ತೊಡೆದುಹಾಕಲು ಒಂದು ಅವಕಾಶವನ್ನು ಒದಗಿಸುತ್ತವೆ. ಇಂಧನ ಸಂಗ್ರಹಣಾ ವ್ಯವಸ್ಥೆಯ ಸಂಯೋಜನೆಯು ಗ್ರಿಡ್ ನ ವಿಶ್ವಾಸಾರ್ಹತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ವಾರ್ಷಿಕವಾಗಿ ಸುಮಾರು 10 ದಶಲಕ್ಷ ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ (CO₂) ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಯೋಜನೆಯ ಮೌಲ್ಯ ಸರಪಳಿಯುದ್ದಕ್ಕೂ ಸರಿಸುಮಾರು 16,000–17,000 ಪೂರ್ಣಕಾಲಿಕ ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವಾಗುತ್ತದೆ. ಈ ಯೋಜನೆಯು ತೇಲುವ ವ್ಯವಸ್ಥೆ ಗಳ ಜೊತೆಗೆ ಯೋಜನೆಗಳ ಸಂಪೂರ್ಣ ಮೌಲ್ಯ ಸರಪಳಿಯಾದ ಪಿವಿV ಸೆಲ್ ಗಳು, ಮಾಡ್ಯೂಲ್ ಗಳು, ಇಂಧನ ಸಂಗ್ರಹಣಾ ವ್ಯವಸ್ಥೆ ಗಳು ಇತ್ಯಾದಿಗಳ ಸ್ವದೇಶದಲ್ಲಿ ತಯಾರು ಮಾಡುವುದನ್ನು ಉತ್ತೇಜಿಸುತ್ತದೆ ಮತ್ತು 'ಆತ್ಮನಿರ್ಭರ ಭಾರತ'ದ ಕಲ್ಪನೆಗೆ ಬೆಂಬಲ ನೀಡುತ್ತದೆ.
ಈ ಯೋಜನೆಯು ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ, ರಾಷ್ಟ್ರೀಯ ಇಂಧನ ಮತ್ತು ಹವಾಮಾನ ಉದ್ದೇಶಗಳ ಸಾಧನೆಗೆ ಬೆಂಬಲ ನೀಡುತ್ತದೆ ಮತ್ತು 'ವಿಕಸಿತ ಭಾರತ'ದ ದೂರದೃಷ್ಟಿಯನ್ನು ಮುನ್ನಡೆಸುವಾಗ ಜಲಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಸುಗಮಗೊಳಿಸುತ್ತದೆ.
*****
(रिलीज़ आईडी: 2292490)
आगंतुक पटल : 11
इस विज्ञप्ति को इन भाषाओं में पढ़ें:
Telugu
,
English
,
Khasi
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Tamil
,
Malayalam