ಪ್ರಧಾನ ಮಂತ್ರಿಯವರ ಕಛೇರಿ
ಸ್ಕೈರೂಟ್ ಏರೋಸ್ಪೇಸ್ ನ ಪವನ್ ಚಂದನಾ ಮತ್ತು ನಾಗ ಭರತ್ ದಾಕಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
प्रविष्टि तिथि:
27 JUL 2026 10:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಕೈರೂಟ್ ಏರೋಸ್ಪೇಸ್ ನ ಪವನ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರೊಂದಿಗೆ ಉತ್ತಮ ಸಂವಾದ ನಡೆಸಿರುವುದಾಗಿ ಹಂಚಿಕೊಂಡಿದ್ದಾರೆ.
ವಿಕ್ರಮ್-1 ರ ಯಶಸ್ಸು ಇತರ ಅನೇಕ ಆಸಕ್ತಿದಾಯಕ ವಿಷಯಗಳ ಜತೆಗೆ ಅವರ ಚರ್ಚೆಯಲ್ಲಿ ಸ್ವಾಭಾವಿಕವಾಗಿ ಪ್ರಮುಖವಾಗಿ ಕಾಣಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು. ಅವರ ಇದುವರೆಗಿನ ಪ್ರಯಾಣ ಮತ್ತು ಮುಂದೆ ಏನಿದೆ ಎಂಬುದರ ಬಗ್ಗೆ ಅವರ ಒಳನೋಟಗಳ ಬಗ್ಗೆ ಕೇಳಲು ಅವರು ಸಂತಸ ವ್ಯಕ್ತಪಡಿಸಿದರು.
ಅವರ ಶಕ್ತಿ, ಮಹತ್ವಾಕಾಂಕ್ಷೆ ಮತ್ತು ಸಕಾರಾತ್ಮಕತೆಯು ನಮ್ಮ ಖಾಸಗಿ ಬಾಹ್ಯಾಕಾಶ ಪರಿಸರ ವ್ಯವಸ್ಥೆಯ ರೋಮಾಂಚಕ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ, ಇಡೀ ಸ್ಕೈರೂಟ್ ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹಂಚಿಕೊಂಡಿದ್ದಾರೆ:
"ಸ್ಕೈರೂಟ್ ಏರೋಸ್ಪೇಸ್ ನ ಪವನ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರೊಂದಿಗೆ ಉತ್ತಮ ಸಂವಾದ ನಡೆಸಿದೆ. ವಿಕ್ರಮ್ -1 ರ ಯಶಸ್ಸು ಸ್ವಾಭಾವಿಕವಾಗಿ ನಮ್ಮ ಚರ್ಚೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತು.
ಜತೆಗೆ ಇತರ ಅನೇಕ ಆಸಕ್ತಿದಾಯಕ ವಿಷಯಗಳು ಸೇರಿದ್ದವು. ಅವರ ಇದುವರೆಗಿನ ಪ್ರಯಾಣದ ಬಗ್ಗೆ ಮತ್ತು ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಅವರ ಒಳನೋಟಗಳ ಬಗ್ಗೆ ಕೇಳಲು ಸಂತಸವಾಗಿದೆ. ಅವರ ಶಕ್ತಿ, ಮಹತ್ವಾಕಾಂಕ್ಷೆ ಮತ್ತು ಸಕಾರಾತ್ಮಕತೆಯು ನಮ್ಮ ಖಾಸಗಿ ಬಾಹ್ಯಾಕಾಶ ಪರಿಸರ ವ್ಯವಸ್ಥೆಯ ರೋಮಾಂಚಕ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇಡೀ ಸ್ಕೈರೂಟ್ ತಂಡಕ್ಕೆ ಶುಭ ಹಾರೈಕೆಗಳು."
*****
(रिलीज़ आईडी: 2290292)
आगंतुक पटल : 5