ಗೃಹ ವ್ಯವಹಾರಗಳ ಸಚಿವಾಲಯ
ಕೋಲ್ಕತ್ತಾದಲ್ಲಿಂದು ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ರಾಜ್ಯದ ಭದ್ರತಾ ಸ್ಥಿತಿಗತಿ, ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸ್ ಸಾಮರ್ಥ್ಯಗಳನ್ನು ಬಲಪಡಿಸಲು ಹಲವು ಪ್ರಮುಖ ನಿರ್ದೇಶನ ನೀಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ 'ಮಹಿಳಾ ಸಂಪರ್ಕ ಕಾರ್ಯಕ್ರಮ' ನಡೆಸಬೇಕು
ಗ್ರಾಮೀಣ ಮಹಿಳೆಯರೊಂದಿಗೆ ನಿಗದಿತ ಸಂವಾದಗಳನ್ನು ನಡೆಸಲು ಮತ್ತು ಅವರಿಗೆ ಜಾಗೃತಿ ಮೂಡಿಸಲು ಮತ್ತು ಅವರ ಸಬಲೀಕರಣಕ್ಕೆ ಶ್ರಮಿಸಲು ಅಧಿಕಾರಿಗಳಿಗೆ ನಿರ್ದೇಶನ
ರಾಜ್ಯದೊಳಗೆ ಎನ್ ಐಎ ಮಾದರಿಯಲ್ಲಿ ಎಎನ್ ಟಿಎಫ್, ಎಟಿಎಸ್ ಮತ್ತು 'ವಿಶೇಷ ತನಿಖಾ ಸಂಸ್ಥೆ (ಎಸ್ ಐ ಎ)' ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತು
ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಭಯೋತ್ಪಾದನೆ ಮತ್ತು ಯುಎಪಿಎ-ಸಂಬಂಧಿತ ಪ್ರಕರಣಗಳ ಸಂಪೂರ್ಣ ಪರಿಶೀಲನೆ ನಡೆಸಲು ಎನ್ ಐಎ ಗೆ ವಹಿಸಲು ನಿರ್ಧಾರ
ಗಡಿ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯ ಅಕ್ರಮ ಅತಿಕ್ರಮಣ ತೆರವಿಗೆ ತಾಕೀತು
ರಾಜ್ಯ ಪೊಲೀಸರ ಆಧುನೀಕರಣ ಮತ್ತು ಸೇವಾ ವಿತರಣಾ ವ್ಯವಸ್ಥೆಗಳ ಸುಧಾರಣೆಗೆ ಸಾಕಷ್ಟು ಬಜೆಟ್ ಬೆಂಬಲ ನೀಡುವುದಾಗಿ ಕೇಂದ್ರ ಗೃಹ ಸಚಿವರ ಭರವಸೆ
ಹಿಂದೆ ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿದ್ದ ಪ್ರದೇಶಗಳಲ್ಲಿ ಸ್ಥಾಪಿಸಲಾದ ಭದ್ರತಾ ಶಿಬಿರಗಳಲ್ಲಿ ಮೂರನೇ ಒಂದು ಭಾಗವನ್ನು ಸಾರ್ವಜನಿಕ ಸೇವಾ ಕೇಂದ್ರಗಳಾಗಿ ಪರಿವರ್ತಿಸಿ, ಸರ್ಕಾರಿ ಸೇವೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಕರೆ
ಸೈಬರ್ ಭದ್ರತಾ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ ಬಲವರ್ಧನೆಗೊಳಿಸಬೇಕು, ನಿಗದಿತವಾಗಿ ಎನ್ ಸಿ ಒ ಆರ್ ಡಿ ಸಭೆಗಳನ್ನು ನಡೆಸಬೇಕು ಮತ್ತು ಕೋಲ್ಕತ್ತಾಗೆ ಸಮಗ್ರ ಪ್ರವಾಹ ನಿರ್ವಹಣಾ ಯೋಜನೆ ಸಿದ್ಧಪಡಿಸಲು ಅಮಿತ್ ಶಾ ಸೂಚನೆ
प्रविष्टि तिथि:
19 JUL 2026 7:02PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೋಲ್ಕತ್ತಾದಲ್ಲಿಂದು ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಸಚಿವಾಲಯ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜ್ಯದ ಭದ್ರತಾ ಸ್ಥಿತಿಗತಿ, ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸ್ ಸಾಮರ್ಥ್ಯಗಳನ್ನು ಬಲಪಡಿಸಲು ಹಲವು ಪ್ರಮುಖ ಸೂಚನೆಗಳನ್ನು ನೀಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದ ಕೇಂದ್ರ ಗೃಹ ಸಚಿವರು 'ಮಹಿಳಾ ಸಂಪರ್ಕ ಕಾರ್ಯಕ್ರಮ'ಗಳನ್ನು ಆರಂಭಿಸುವಂತೆ ನಿರ್ದೇಶನ ನೀಡಿದರು. ಅಧಿಕಾರಿಗಳೊಂದಿಗೆ ನಿಗದಿತ ಸಂವಹನದ ಮೂಲಕ ಜಾಗೃತಿ ಮೂಡಿಸುವ ಮತ್ತು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಯಾವುದೇ ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಗೃಹ ಸಚಿವಾಲಯವನ್ನು (ಎಂಎಚ್ ಎ) ನೇರವಾಗಿ ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ರಾಜ್ಯದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ರಾಜ್ಯದೊಳಗೆ 'ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎಎನ್ ಟಿಎಫ್),' 'ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು 'ವಿಶೇಷ ತನಿಖಾ ಸಂಸ್ಥೆ (ಎಸ್ ಐಎ)' – ಗಳನ್ನು ಎನ್ ಐಎ ಮಾದರಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿಒತ್ತು ನೀಡಲಾಯಿತು. ಹೆಚ್ಚುವರಿಯಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಭಯೋತ್ಪಾದನೆ ಮತ್ತು ಯುಎಪಿಎ-ಸಂಬಂಧಿತ ಪ್ರಕರಣಗಳ ಸಂಪೂರ್ಣ ಪರಿಶೀಲನೆ ನಡೆಸಲು ನಿರ್ಧರಿಸಲಾಯಿತು. ರಾಜ್ಯದ ಗಡಿ ಪ್ರದೇಶಗಳಲ್ಲಿನ ಸರ್ಕಾರಿ ಭೂಮಿಯ ಮೇಲಿನ ಅಕ್ರಮ ಅತಿಕ್ರಮಣಗಳನ್ನು ತೆರವುಗೊಳಿಸಲು ಕೇಂದ್ರ ಸಚಿವರು ನಿರ್ದೇಶನ ನೀಡಿದರು.

ಪಶ್ಚಿಮ ಬಂಗಾಳ ಪೊಲೀಸರ ಸಾಮರ್ಥ್ಯ ಬಲವರ್ಧನೆ, ಮೂಲಸೌಕರ್ಯ ಬಲವರ್ಧನೆ ಮತ್ತು ಅತ್ಯಾಧುನಿಕ ಸೌಲಭ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಯಿತು. ರಾಜ್ಯ ಪೊಲೀಸರ ಆಧುನೀಕರಣ ಮತ್ತು ಸೇವಾ ವಿತರಣಾ ವ್ಯವಸ್ಥೆಗಳ ಸುಧಾರಣೆಗೆ ಸಾಕಷ್ಟು ಬಜೆಟ್ ಬೆಂಬಲವನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭರವಸೆ ನೀಡಿದರು. ಈ ಪ್ರಕ್ರಿಯೆಯಲ್ಲಿ, ರಾಷ್ಟ್ರೀಯ ಸರಾಸರಿಗೆ ಅನುಗುಣವಾಗಿ ಪೊಲೀಸ್ ಪಡೆ ಕೇಡರ್‌ನ ಸಮಗ್ರ ಪರಿಶೀಲನೆಯನ್ನು ನಡೆಸಲಾಗುವುದು ಮತ್ತು ಜಿಲ್ಲೆಗಳಲ್ಲಿ ಪೊಲೀಸರ ಸಂಖ್ಯೆಯನ್ನು ತರ್ಕಬದ್ಧಗೊಳಿಸಲಾಗುತ್ತದೆ. ಹೆಚ್ಚುವರಿಯಾಗಿ, ಎಲ್ಲಾ ಖಾಲಿ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡುವುದು, ತರಬೇತಿ ಸಾಮರ್ಥ್ಯಗಳನ್ನು ಪರಿಶೀಲಿಸುವುದು, ನಾಗರಿಕ ಸ್ವಯಂಸೇವಕರ ಮೇಲಿನ ಅವಲಂಬನೆ ಹಂತಹಂತವಾಗಿ ತೆಗೆದುಹಾಕುವುದು ಮತ್ತು ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಆದ್ಯತೆ ನೀಡುವುದರ ಮೇಲಿನ ಚರ್ಚೆಗೆ ಸಭೆಯಲ್ಲಿ ಒತ್ತು ನೀಡಲಾಯಿತು.
ಹಿಂದೆ ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾದ ಭದ್ರತಾ ಶಿಬಿರಗಳಲ್ಲಿ ಮೂರನೇ ಒಂದು ಭಾಗವನ್ನು ಸಾರ್ವಜನಿಕ ಸೇವಾ ಕೇಂದ್ರಗಳಾಗಿ ಪರಿವರ್ತಿಸಿ ಸರ್ಕಾರಿ ಸೇವೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೆ, ಸೈಬರ್ ಭದ್ರತಾ ವಲಯದಲ್ಲಿ ಸಾಮರ್ಥ್ಯ ವೃದ್ಧಿ, ಮಾದಕವಸ್ತು ಕಳ್ಳಸಾಗಣೆ ನಿಗ್ರಹಕ್ಕೆ ನಿಯಮಿತವಾಗಿ ಎನ್ ಸಿ ಒ ಆರ್ ಡಿ (NCORD) ಸಭೆಗಳನ್ನು ನಡೆಸುವುದು ಮತ್ತು ಕೋಲ್ಕತ್ತಾಗೆ ಸಮಗ್ರ ಪ್ರವಾಹ ನಿರ್ವಹಣಾ ಯೋಜನೆಯನ್ನು ರೂಪಿಸುವ ಬಗ್ಗೆ ಕೇಂದ್ರ ಸಚಿವರು ನಿರ್ದೇಶನಗಳನ್ನು ನೀಡಿದರು. ಸಭೆಯ ಕೊನೆಯಲ್ಲಿ ತಕ್ಷಣದ ಕ್ರಮಕ್ಕಾಗಿ ಪ್ರಮುಖ ಆದ್ಯತೆಗಳನ್ನು ಗುರುತಿಸಲಾಯಿತು ಮತ್ತು ಸಂಬಂಧಿತ ಸಂಸ್ಥೆಗಳು ಅವುಗಳ ಕಾಲಮಿತಿಯಲ್ಲಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ನಿರ್ದೇಶಿಸಲಾಯಿತು.
*****
(रिलीज़ आईडी: 2286463)
आगंतुक पटल : 8