ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಇಂದು ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಕೇಂದ್ರ ಸರ್ಕಾರದ ಸಭೆ ನಡೆಯಿತು 


ಸಭೆಯಲ್ಲಿ ವಿವಿಧ 40 ರಾಜಕೀಯ ಪಕ್ಷಗಳ ಒಟ್ಟು 58 ನಾಯಕರು ಭಾಗವಹಿಸಿದ್ದರು

प्रविष्टि तिथि: 19 JUL 2026 4:20PM by PIB Bengaluru

ಮುಂಬರುವ ಸಂಸತ್ತಿನ 2026 ರ ಮಳೆಗಾಲದ ಅಧಿವೇಶನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಇಂದು (ಜುಲೈ 19, 2026) ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿ ಕೇಂದ್ರ ರಕ್ಷಣಾ ಸಚಿವರಾಧ ಶ್ರೀ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಲಾಯಿತು. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಈ ಸಭೆಯನ್ನು ಆಹ್ವಾನಿಸಿದ್ದರು. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಭಾಗವಹಿಸಿದ್ದರು, ಅವರು ರಾಜ್ಯಸಭೆಯಲ್ಲಿ ಸದನದ ನಾಯಕರೂ ಕೂಡ ಆಗಿದ್ದಾರೆ, ಜೊತೆಯಲ್ಲಿ, ಕೇಂದ್ರ ಕಾನೂನು ಮತ್ತು ನ್ಯಾಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಮತ್ತು ಸಂಸದೀಯ ವ್ಯವಹಾರಗಳ ಖಾತೆಗಳ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಸಂಸದೀಯ ವ್ಯವಹಾರಗಳು ಮತ್ತು ಮಾಹಿತಿ ಮತ್ತು ಪ್ರಸಾರದ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ಭಾಗವಹಿಸಿದ್ದರು. ಒಟ್ಟಾರೆಯಾಗಿ, ಸಭೆಯಲ್ಲಿ ಸಚಿವರು ಸೇರಿದಂತೆ 40 ರಾಜಕೀಯ ಪಕ್ಷಗಳ ಒಟ್ಟು 58 ನಾಯಕರು ಭಾಗವಹಿಸಿದ್ದರು.

ಸಭೆಯ ಪ್ರಾರಂಭದಲ್ಲಿ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಮತ್ತು ಸಭೆಗೆ ಹಾಜರಿದ್ದ ಎಲ್ಲಾ ನಾಯಕರನ್ನು ಸ್ವಾಗತಿಸಿದರು ಮತ್ತು ನಂತರ ಸಂಸದೀಯ ವ್ಯವಹಾರಗಳ ಸಚಿವರು ಸಭೆಯನ್ನು ನಡೆಸಿದರು. ಸಂಸತ್ತಿನ 2026 ರ ಮಳೆಗಾಲದ ಅಧಿವೇಶನವು ಜುಲೈ 20, 2026 ರ ಸೋಮವಾರದಂದು ಪ್ರಾರಂಭವಾಗಲಿದೆ ಮತ್ತು ಸರ್ಕಾರಿ ವ್ಯವಹಾರಗಳ ಅಗತ್ಯಗಳಿಗೆ ಒಳಪಟ್ಟು, ಅಧಿವೇಶನವು ಆಗಸ್ಟ್ 13, 2026 ರ ಗುರುವಾರದಂದು ಮುಕ್ತಾಯಗೊಳ್ಳಬಹುದು ಎಂದು ಅವರು ರಾಜಕೀಯ ಪಕ್ಷಗಳ ನಾಯಕರಿಗೆ ತಿಳಿಸಿದರು. ಅಧಿವೇಶನವು 25 ದಿನಗಳ ಅವಧಿಯಲ್ಲಿ ಒಟ್ಟು 19 ಅಧಿವೇಶನಗಳನ್ನು ಒಳಗೊಂಡಿರುತ್ತದೆ.

ಮುಂಬರುವ ಮಳೆಗಾಲದ ಅಧಿವೇಶನದ ಶಾಸಕಾಂಗ ವ್ಯವಹಾರವನ್ನು ಜುಲೈ 16, 2026 ರಂದು ಸಂಸತ್ತಿನ ಎರಡೂ ಸಚಿವಾಲಯಗಳು ಬುಲೆಟಿನ್ ಭಾಗ-II ರಲ್ಲಿ ಪ್ರಕಟಿಸಿವೆ ಎಂದು ಕೇಂದ್ರ ಸಚಿವರಾದ ಶ್ರೀ ರಿಜಿಜು ಅವರು ಹೇಳಿದರು.

ಸಂಸತ್ತಿನ ಸುಗಮ ಕಾರ್ಯನಿರ್ವಹಣೆಗೆ ಎಲ್ಲಾ ನಾಯಕರು ಸಹಕರಿಸಬೇಕೆಂದು ಅವರುಗಳು ವಿನಂತಿಸಿದರು ಮತ್ತು ಸಂಸತ್ತಿನ ಎರಡೂ ಸದನಗಳ ಕಾರ್ಯವಿಧಾನದ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಯಾವುದೇ ಇತರ ಪ್ರಮುಖ ವಿಷಯಗಳ ಕುರಿತು ಸದನಗಳ ಮಹಡಿಗಳಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ಹೇಳಿದರು.  ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಎತ್ತಬಹುದಾದ ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಮತ್ತು ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಸದೀಯ ವ್ಯವಹಾರಗಳ ಸಚಿವರು ನಾಯಕರು ಎತ್ತಿರುವ ಎಲ್ಲಾ ಸಮಸ್ಯೆಗಳನ್ನು ಗಮನಿಸಿದರು ಮತ್ತು ಸಭೆಗೆ ಹಾಜರಾಗಿದ್ದಕ್ಕಾಗಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಅವರ ಸಕ್ರಿಯ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಗಾಗಿ ಎಲ್ಲಾ ನಾಯಕರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಕೊನೆಯದಾಗಿ, ಸಭೆಗೆ ಹಾಜರಾಗಿದ್ದಕ್ಕಾಗಿ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಅವರ ಸಕ್ರಿಯ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಗಾಗಿ ಶ್ರೀ ರಾಜನಾಥ್ ಸಿಂಗ್ ಅವರು ಎಲ್ಲಾ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

 

******


(रिलीज़ आईडी: 2286325) आगंतुक पटल : 37
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Gujarati , Tamil , Telugu , Malayalam