ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಆತ್ಮನಿರ್ಭರ ಭಾರತಕ್ಕಾಗಿ ಯೂರಿಯಾ-2026ರ ರಾಷ್ಟ್ರೀಯ ಹೂಡಿಕೆ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ (ಎನ್ಐಪಿಯು-2026)
प्रविष्टि तिथि:
15 JUL 2026 3:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಆತ್ಮನಿರ್ಭರ್ ಭಾರತಕ್ಕಾಗಿ(ಎನ್ಐಪಿಯು-2026) ಯೂರಿಯಾ-2026ರ ರಾಷ್ಟ್ರೀಯ ಹೂಡಿಕೆ ನೀತಿ ಕುರಿತ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಪ್ರಯೋಜನಗಳು:
ದೇಶದಲ್ಲಿ ಅನಿಲ ಆಧಾರಿತ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಸಲುವಾಗಿ ಯೂರಿಯಾ ವಲಯದಲ್ಲಿ ಹೊಸ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ಇದು ಸ್ವಾವಲಂಬನೆಯ ಗುರಿ ಸಾಧಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಎನ್ಐಪಿ-2012ಕ್ಕೆ ಹೋಲಿಸಿದರೆ ಪ್ರಮುಖ ಬದಲಾವಣೆಗಳೆಂದರೆ ಹೆಚ್ಚಿನ ಪಾರದರ್ಶಕತೆ ತರಲು ಸ್ಥಿರ ಮತ್ತು ಬದಲಾಗುವ ವೆಚ್ಚಗಳನ್ನು ಪ್ರತ್ಯೇಕಿಸಲಾಗಿದೆ. ಕನಿಷ್ಠ ಕಾನೂನಾತ್ಮಕ ಬೆಲೆ(ಫ್ಲೋರ್ ಪ್ರೈಸ್) 12% ಹಾಗೂ ಗರಿಷ್ಠ ಕಾನೂನಾತ್ಮಕ ಬೆಲೆ(ಸೀಲಿಂಗ್ ಪ್ರೈಸ್) 16% ಮಿತಿಯೊಂದಿಗೆ ಈಕ್ವಿಟಿ ಮೇಲಿನ ಕಾರ್ಯಸಾಧು ಆದಾಯ(ಆರ್ ಒಇ)ದ ದರಪಟ್ಟಿಯನ್ನು ಪರಿಚಯಿಸಲಾಗಿದೆ. ಚಾಲ್ತಿಯಲ್ಲಿರುವ ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ 4 ವರ್ಷಗಳ ನಂತರ ಸ್ಥಿರ ವೆಚ್ಚವನ್ನು ಭಾರತೀಯ ರೂಪಾಯಿ ಕರೆನ್ಸಿಗೆ ಪರಿವರ್ತಿಸುವ ಮೂಲಕ ವಿದೇಶಿ ವಿನಿಮಯ ಅಪಾಯ ಕಡಿಮೆ ಮಾಡಲಾಗಿದೆ. ಈ ಮೇಲಿನ ಕ್ರಮಗಳು ಎನ್ಐಪಿ-2012ಕ್ಕೆ ಹೋಲಿಸಿದರೆ ಎನ್ಐಪಿ-2026ರ ಅಡಿ ಸ್ಥಾಪಿಸಲಾಗುವ ಪ್ರತಿ ಘಟಕಕ್ಕೆ 250 ಕೋಟಿ ರೂ.ಗಿಂತ ಹೆಚ್ಚಿನ ಉಳಿತಾಯ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ಹೊಸ ಯೂರಿಯಾ ಉತ್ಪಾದನಾ ಘಟಕಗಳ ಸ್ಥಾಪನೆಯು ಆತ್ಮನಿರ್ಭರ ಭಾರತಕ್ಕಾಗಿ ಯೂರಿಯಾ-2026ರ ರಾಷ್ಟ್ರೀಯ ಹೂಡಿಕೆ ನೀತಿ (ಎನ್ಐಪಿಯು-2026) ಅಡಿ ಆಗಲಿದೆ.
ಹಿನ್ನೆಲೆ:
ಯೂರಿಯಾ ವಲಯದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು ರಸಗೊಬ್ಬರ ಇಲಾಖೆಯು 2012ರಲ್ಲಿ ಯೂರಿಯಾ ವಲಯದ ಪುನರುಜ್ಜೀವನ, ವಿಸ್ತರಣೆ, ಪುನರುಜ್ಜೀವನ/ಬ್ರೌನ್‌ಫೀಲ್ಡ್ ಮತ್ತು ಗ್ರೀನ್‌ಫೀಲ್ಡ್ ಯೋಜನೆಗಳ ನೀತಿಯನ್ನು ಅಂತಿಮಗೊಳಿಸಿತು. ಹೊಸ ಹೂಡಿಕೆ ನೀತಿ(ಎನ್ಐಪಿ) - 2012ರ ಅಡಿ, ಒಟ್ಟು 6 ಹೊಸ ಯೂರಿಯಾ ಘಟಕಗಳನ್ನು ಸ್ಥಾಪಿಸಲಾಗಿದೆ, ಇದರಲ್ಲಿ ನಾಮನಿರ್ದೇಶಿತ ಪಿಎಸ್ ಯುಗಳ ಜಂಟಿ ಉದ್ಯಮ ಕಂಪನಿ(ಜೆವಿಸಿ)ಗಳ ಮೂಲಕ ಸ್ಥಾಪಿಸಲಾದ 4 ಯೂರಿಯಾ ಘಟಕಗಳು ಮತ್ತು ಖಾಸಗಿ ಕಂಪನಿಗಳಿಂದ ಸ್ಥಾಪಿಸಲಾದ 2 ಯೂರಿಯಾ ಘಟಕಗಳು ಸೇರಿವೆ. ಎನ್ಐಪಿ-2012ರ ಅಡಿ ಹೊಸ ಹೂಡಿಕೆ ಅವಧಿ 2019 ಅಕ್ಟೋಬರ್ ಗೆ ಮುಕ್ತಾಯಗೊಂಡಿದೆ.
ಪ್ರಸ್ತುತ, 269.42 ಲಕ್ಷ ಮೆಟ್ರಿಕ್ ಟನ್ ಒಟ್ಟು ಮರುಮೌಲ್ಯಮಾಪನ/ಸ್ಥಾಪಿತ ಸಾಮರ್ಥ್ಯದೊಂದಿಗೆ 33 ಕಾರ್ಯ ನಿರ್ವಹಿಸುವ ಯೂರಿಯಾ ಉತ್ಪಾದನಾ ಘಟಕಗಳಿವೆ. ಯೂರಿಯಾದ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ದೇಶದಲ್ಲಿ ಯೂರಿಯಾದ ಸ್ಥಳೀಯ ಉತ್ಪಾದನೆ ಮತ್ತು ಬೇಡಿಕೆಯಲ್ಲಿ ಅಂತರವಿದ್ದು, ಇದನ್ನು ಯೂರಿಯಾ ಆಮದಿನ ಮೂಲಕ ಪೂರೈಸಲಾಗುತ್ತಿದೆ.
ಯೂರಿಯಾ ಘಟಕಗಳನ್ನು ಸ್ಥಾಪಿಸಲು ರಸಗೊಬ್ಬರ ಇಲಾಖೆಯು ವಿವಿಧ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ. ಆದ್ದರಿಂದ, ಯೂರಿಯಾಕ್ಕೆ ರಾಷ್ಟ್ರೀಯ ಹೂಡಿಕೆ ನೀತಿ ಅಗತ್ಯವಿದೆ.
*****
(रिलीज़ आईडी: 2284879)
आगंतुक पटल : 17
इस विज्ञप्ति को इन भाषाओं में पढ़ें:
Telugu
,
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Tamil
,
Malayalam