ಹಣಕಾಸು ಸಚಿವಾಲಯ
azadi ka amrit mahotsav

ಜಿ ಎಸ್ ಟಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಮೇಲ್ಮನವಿ ಸಲ್ಲಿಸಲು ಕೊನೆಯ ದಿನಾಂಕ 2026ರ ಜುಲೈ 31 ರವರೆಗೆ ವಿಸ್ತರಣೆ

प्रविष्टि तिथि: 30 JUN 2026 11:55AM by PIB Bengaluru

ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ಜಿ ಎಸ್ ಟಿ ಎ ಟಿ) ಮುಂದೆ ಮೇಲ್ಮನವಿ ಸಲ್ಲಿಸಲು ಸರ್ಕಾರವು ಸೆಕ್ಷನ್ 112(3) ನೊಂದಿಗೆ ಓದಲಾಗಿ ಸೆಕ್ಷನ್ 112(1) ರ ಅಡಿಯಲ್ಲಿ 2026 ರ ಜುಲೈ 31 ರವರೆಗೆ ಗಡುವನ್ನು ವಿಸ್ತರಿಸಿದೆ.

ಸರ್ಕಾರವು 2025ರ ಸೆಪ್ಟೆಂಬರ್ 17 ರಂದು ಹೊರಡಿಸಿದ್ದ ಹಿಂದಿನ ಅಧಿಸೂಚನೆಯಲ್ಲಿ ಜಿ ಎಸ್ ಟಿ ಎ ಟಿ ಮುಂದೆ ಮೇಲ್ಮನವಿ ಸಲ್ಲಿಸಲು ದಿನಾಂಕ : 30.06.2026 ಅನ್ನು ಕೊನೆಯ ದಿನಾಂಕವೆಂದು ತಿಳಿಸಿತ್ತು.

ಜಿ ಎಸ್ ಟಿ ಎ ಟಿ ಪೋರ್ಟಲ್‌ ನಲ್ಲಿ ಹೆಚ್ಚು ಹೆಚ್ಚು ಜನರು ಒಂದೇ ಸಮಯದಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವುದರಿಂದ ಎದುರಾಗಿರುವ ತಾಂತ್ರಿಕ ತೊಂದರೆಗಳನ್ನು ವಿವರಿಸಿ, ವಿವಿಧ ಸಂಬಂಧಿತರು ಇತ್ತೀಚಿನ ನೀಡಿದ ಮನವಿಯನ್ನು ಪರಿಗಣಿಸಿ ಸರ್ಕಾರವು ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 2025 ರಲ್ಲಿಯೇ ಕೊನೆಯ ದಿನಾಂಕವನ್ನು ಮುಂಚಿತವಾಗಿ ತಿಳಿಸಲಾಗಿದ್ದರೂ, ಕಳೆದ 15 ದಿನಗಳಲ್ಲಿಯೇ 30,000 ಮೇಲ್ಮನವಿಗಳು ಸಲ್ಲಿಸಲ್ಪಟ್ಟಿದ್ದು, ಒಂದೇ ದಿನದಲ್ಲಿ ಸಲ್ಲಿಕೆಯಾದ ಮೇಲ್ಮನವಿಗಳ ಪ್ರಮಾಣವು 5,500ಕ್ಕೆ ತಲುಪಿದೆ ಎಂಬುದನ್ನು ಗಮನಿಸಬಹುದಾಗಿದೆ.

ತೆರಿಗೆದಾರರು ತಮ್ಮ ಮೇಲ್ಮನವಿ ಸಲ್ಲಿಕೆಗಳನ್ನು ಮುಂಚಿತವಾಗಿ ಸಲ್ಲಿಸುವಂತೆಯೂ, ಕೊನೆಯ ದಿನಾಂಕದವರೆಗೂ ಕಾಯದಂತೆ ಸಲಹೆ ನೀಡಲಾಗಿದೆ.

 

*****


(रिलीज़ आईडी: 2279305) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali-TR , Bengali , Gujarati , Tamil , Telugu , Malayalam