ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಫ್‌ಐಎಚ್ ಹಾಕಿ ಮಹಿಳಾ ನೇಷನ್ಸ್ ಕಪ್ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 21 JUN 2026 5:13PM by PIB Bengaluru

ಎಫ್‌ಐಎಚ್ ಹಾಕಿ ಮಹಿಳಾ ನೇಷನ್ಸ್ ಕಪ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇಡೀ ಪಂದ್ಯಾವಳಿಯುದ್ದಕ್ಕೂ ತಂಡವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ತಂಡಕ್ಕೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿರುವ ಶ್ರೀ ಮೋದಿ ಅವರು, ಈ ಗೆಲುವು ಇತರ ಹಲವರಿಗೆ ಹಾಕಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

X ನಲ್ಲಿನ ಪೋಸ್ಟ್‌ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;

“ಭಾರತೀಯ ಹಾಕಿ ಆಟಗಾರ್ತಿಯರು ಹೆಮ್ಮೆ ಮತ್ತು ಸಂತೋಷವನ್ನು ತಂದಿದ್ದಾರೆ!

ಎಫ್‌ಐಎಚ್ ಹಾಕಿ ಮಹಿಳಾ ನೇಷನ್ಸ್ ಕಪ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದ ಮಹಿಳಾ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯುದ್ದಕ್ಕೂ ತಂಡವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದೆ. ತಂಡಕ್ಕೆ ಶುಭ ಹಾರೈಕೆಗಳು.

ಈ ಗೆಲುವು ಹಾಕಿ ಆಡಲು ಇನ್ನು ಅನೇಕರಿಗೆ ಪ್ರೇರಣೆ ನೀಡಲಿ.

@TheHockeyIndia”

 

*****


(रिलीज़ आईडी: 2276988) आगंतुक पटल : 10
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam