ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ʻಆಧಾರ್ ಆ್ಯಪ್ʼ (ಆಧಾರ್ ತಂತ್ರಾಂಶ) ಡೌನ್‌ಲೋಡ್‌ಗಳ ಸಂಖ್ಯೆ 31 ದಶಲಕ್ಷ ದಾಟಿದ್ದು, ಇದು ನಿವಾಸಿಗಳಿಗೆ ಹೆಚ್ಚುತ್ತಿರುವ ಉಪಯುಕ್ತತೆಯನ್ನು ಸೂಚಿಸುತ್ತದೆ
ಸುಮಾರು 40 ಲಕ್ಷ ಜನರು ಹೊಸ ʻಆಧಾರ್ ಆ್ಯಪ್ʼ ಬಳಸಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಿದ್ದಾರೆ
ಸುಮಾರು 8.5 ಲಕ್ಷ ಜನರು ʻಆಧಾರ್ ಆ್ಯಪ್ʼ ಬಳಸಿ ವಿಳಾಸವನ್ನು ನವೀಕರಿಸಿದ್ದಾರೆ
प्रविष्टि तिथि:
22 JUN 2026 3:29PM by PIB Bengaluru
ಕೇವಲ ಐದು ತಿಂಗಳಿಗೂ ಕಡಿಮೆ ಅವಧಿಯ ಹಿಂದೆ ಚಾಲನೆ ನೀಡಲಾದ ʻಆಧಾರ್ ಆ್ಯಪ್ʼ (ಆಧಾರ್ ತಂತ್ರಾಂಶ), ಪ್ರಾರಂಭವಾದಾಗಿನಿಂದ ಇದುವರೆಗೂ ಭಾರತದಾದ್ಯಂತ 31 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ಜು ಕಂಡಿದೆ. ಆ ಮೂಲಕ ಇದು ಜನರಲ್ಲಿ ದೃಢವಾದ ಸ್ವೀಕಾರಕ್ಕೆ ಸಾಕ್ಷಿಯಾಗಿದೆ. ಹೆಚ್ಚುತ್ತಿರುವ ತಂತ್ರಾಂಶದ ಅಳವಡಿಕೆಯು ತಮ್ಮ ಬೆರಳ ತುದಿಯಲ್ಲಿ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂತ್ರಾಂಶದ ಬಗ್ಗೆ ಹೆಚ್ಚುತ್ತಿರುವ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಜೀವನವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ಹೊಸ ಆಧಾರ್ ತಂತ್ರಾಂಶವು ಜನರು ತಮ್ಮ ಸ್ಮಾರ್ಟ್ ಫೋನ್‌ಗಳಿಂದ ನೇರವಾಗಿ ಮೊಬೈಲ್ ಸಂಖ್ಯೆ ನವೀಕರಣ ಮತ್ತು ವಿಳಾಸ ನವೀಕರಣ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಇಲ್ಲಿಯವರೆಗೆ, ಸುಮಾರು 4 ದಶಲಕ್ಷ ಜನರು ಹೊಸ ಆಧಾರ್ ತಂತ್ರಾಂಶ ಬಳಸಿ ತಮ್ಮ ಮೊಬೈಲ್ ಸಂಖ್ಯೆಗಳನ್ನು ನವೀಕರಿಸಿದ್ದಾರೆ. ಇದೇ ವೇಳೆ, ಸುಮಾರು 850,000 ಜನರು ತಮ್ಮ ವಿಳಾಸವನ್ನು ನವೀಕರಿಸಲು ತಂತ್ರಾಂಶವನ್ನು ಬಳಸಿದ್ದಾರೆ.
ʻಆಧಾರ್ʼ ಸಂಖ್ಯೆ ಹೊಂದಿರುವವರಿಗೆ (ಎಎನ್ಎಚ್) ತಮ್ಮ ಗುರುತನ್ನು ತೋರಿಸಲು, ಹಂಚಿಕೊಳ್ಳಲು ಮತ್ತು ಪರಿಶೀಲಿಸಲು ಅನುಕೂಲಕರ ಮತ್ತು ಗೌಪ್ಯತೆ ಮೊದಲ ಮಾರ್ಗವನ್ನು ಒದಗಿಸಲು ಆಧಾರ್ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಒಂದೇ ಕ್ಲಿಕ್ ಮೂಲಕ ಬಯೋಮೆಟ್ರಿಕ್ ಲಾಕ್/ಅನ್ಲಾಕ್, ಉಪಸ್ಥಿತಿಯ ಪುರಾವೆಗಾಗಿ ಮುಖ ಪರಿಶೀಲನೆ, ದೃಢೀಕರಣ ಇತಿಹಾಸ ಮತ್ತು ಭೌತಿಕ ವಿಸಿಟಿಂಗ್ ಕಾರ್ಡ್‌ಗಳ ಬದಲಿಗೆ ಸಂಪರ್ಕವನ್ನು ಸುಲಭವಾಗಿ ಹಂಚಿಕೊಳ್ಳಲು ʻಕ್ಯೂಆರ್ʼ ಆಧಾರಿತ ಸಂಪಾದಿಸಬಹುದಾದ ಸಂಪರ್ಕ ಕಾರ್ಡ್ ಸೇರಿದಂತೆ ಹಲವಾರು ಜನಪರ ವೈಶಿಷ್ಟ್ಯಗಳನ್ನು ಈ ತಂತ್ರಾಂಶವು ಹೊಂದಿದೆ. ಇದು ʻಇ-ಆಧಾರ್ʼ ಡೌನ್ಲೋಡ್ ಮಾಡಲು ಅನುಮತಿಸುತ್ತದೆ ಮತ್ತು ಆಧಾರ್ ಸೇವಾ ಕೇಂದ್ರಗಳಿಗೆ (ಎಎಸ್‌ಕೆ) ಭೇಟಿ ನೀಡಲು ಆನ್‌ಲೈನ್ ಮೂಲಕ ಅಪಾಯಿಂಟ್ಮೆಂಟ್ ಬುಕಿಂಗ್ ಅನ್ನು ಸುಗಮಗೊಳಿಸುತ್ತದೆ.
ಆಧಾರ್ ತಂತ್ರಾಂಶವು ವ್ಯಾಪಕ ಶ್ರೇಣಿಯ ನಿಜ ಜೀವನದ ಬಳಕೆಯ ಪ್ರಕರಣಗಳನ್ನು ಬೆಂಬಲಿಸುತ್ತದೆ. ಇವುಗಳಲ್ಲಿ ʻಆಫ್ ಲೈನ್ ವೆರಿಫಿಕೇಶನ್ ಸೀಕಿಂಗ್ ಎಂಟಿಟಿʼಯ (ಒವಿಎಸ್‌ಇ) ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಹೋಟೆಲ್ ಚೆಕ್-ಇನ್ ಗಳು ಸೇರಿವೆ. ಇದು ಆಸ್ಪತ್ರೆ ದಾಖಲಾತಿ, ಸಂದರ್ಶಕರ ನಿರ್ವಹಣೆ, ಈವೆಂಟ್ ನಮೂದುಗಳು, ಗಿಗ್ ಕಾರ್ಮಿಕರು ಮತ್ತು ಸೇವಾ ಪಾಲುದಾರರ ಗುರುತಿನ ಪರಿಶೀಲನೆಯನ್ನು ಸುಗಮಗೊಳಿಸುತ್ತದೆ.
ಹೊಸ ಆಧಾರ್ ತಂತ್ರಾಂಶವು ಆಂಡ್ರಾಯ್ಡ್ ಮತ್ತು ಆಪಲ್ ಐಒಎಸ್ ವೇದಿಕೆಗಳಲ್ಲಿ ಲಭ್ಯವಿದೆ. ಸಾರ್ವಜನಿಕರು ಇದನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು:
Android: https://play.google.com/store/apps/details?id=in.gov.uidai.pehchaan&hl=en_IN
iOS - https://apps.apple.com/in/app/aadhaar/id6744029871
*****
(रिलीज़ आईडी: 2276692)
आगंतुक पटल : 17
इस विज्ञप्ति को इन भाषाओं में पढ़ें:
Telugu
,
Assamese
,
Gujarati
,
English
,
Urdu
,
हिन्दी
,
Marathi
,
Bengali
,
Bengali-TR
,
Punjabi
,
Tamil