ಪ್ರಧಾನ ಮಂತ್ರಿಯವರ ಕಛೇರಿ
ಬೌದ್ಧ ಧರ್ಮದ ಖ್ಯಾತ ವಿದ್ವಾಂಸರಾದ ರಾಬರ್ಟ್ ಎ. ಎಫ್. ಥರ್ಮನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
18 JUN 2026 5:30AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೌದ್ಧ ಧರ್ಮದ ಖ್ಯಾತ ವಿದ್ವಾಂಸ ರಾಬರ್ಟ್ ಎ. ಎಫ್. ಥರ್ಮನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಬರ್ಟ್ ಥರ್ಮನ್ ಅವರನ್ನು ಬೌದ್ಧ ಧರ್ಮದ ಪ್ರಮುಖ ವಿದ್ವಾಂಸರು, ತಜ್ಞರು, ವಿಶಿಷ್ಟ ಶಿಕ್ಷಕ ಹಾಗೂ ಭಾರತದ ಜೀವಮಾನ ಸ್ನೇಹಿತ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಬಣ್ಣಿಸಿದ್ದಾರೆ. ತಮ್ಮ ಕೃತಿಗಳ ಮೂಲಕ ಅವರು ಬೌದ್ಧ ಧರ್ಮದ ಚಿಂತನೆಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದು, ವಿವಿಧ ಸಂಸ್ಕೃತಿಗಳ ನಡುವೆ ಪರಸ್ಪರ ಅರ್ಥೈಸಿಕೊಳ್ಳುವ ಶಾಶ್ವತ ಸೇತುವೆ ನಿರ್ಮಿಸಿದ್ದಾರೆ ಎಂದು ಹೇಳಿದರು.
ಕೆಲ ವರ್ಷಗಳ ಹಿಂದೆ ನ್ಯೂಯಾರ್ಕ್ ಸಿಟಿಯಲ್ಲಿ ರಾಬರ್ಟ್ ಥರ್ಮನ್ ಅವರನ್ನು ಭೇಟಿಯಾದ ಸಂದರ್ಭವನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿ ಶ್ರೀ ಮೋದಿ, ಆ ಸಂದರ್ಭದಲ್ಲಿ ತಮ್ಮ ನಡುವೆ ಅತ್ಯುತ್ತಮ ಸಂವಾದ ಏರ್ಪಟ್ಟಿತ್ತು ಎಂದು ತಿಳಿಸಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ಥರ್ಮನ್ ಅವರ ಕುಟುಂಬಸ್ಥರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“ಬೌದ್ಧ ಧರ್ಮದ ಖ್ಯಾತ ವಿದ್ವಾಂಸ, ವಿಶಿಷ್ಟ ಶಿಕ್ಷಕ ಹಾಗೂ ಭಾರತದ ಜೀವಮಾನ ಸ್ನೇಹಿತರಾದ ಶ್ರೀ ರಾಬರ್ಟ್ ಎ. ಎಫ್. ಥರ್ಮನ್ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ತಮ್ಮ ಕೃತಿಗಳ ಮೂಲಕ ಅವರು ಬೌದ್ಧ ಚಿಂತನೆಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದು ಮಾತ್ರವಲ್ಲದೆ, ವಿವಿಧ ಸಂಸ್ಕೃತಿಗಳ ನಡುವೆ ಪರಸ್ಪರ ಅರ್ಥೈಸಿಕೊಳ್ಳುವ ಶಾಶ್ವತ ಸೇತುವೆ ನಿರ್ಮಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ನ್ಯೂಯಾರ್ಕ್ ನಗರದಲ್ಲಿ ಅವರನ್ನು ಭೇಟಿಯಾದ ಸಂದರ್ಭವನ್ನು ನಾನು ಆತ್ಮೀಯವಾಗಿ ನೆನಪಿಸಿಕೊಳ್ಳುತ್ತೇನೆ. ಅಂದು ನಮ್ಮ ನಡುವೆ ಅತ್ಯುತ್ತಮ ಸಂವಾದ ನಡೆದಿತ್ತು. ಈ ದುಃಖದ ಘಳಿಗೆಯಲ್ಲಿ ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವಿದೆ.”
*****
(रिलीज़ आईडी: 2274530)
आगंतुक पटल : 9
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam