MIFF banner

ಹಲವು ಧ್ವನಿಗಳು, ಒಂದು ಪ್ರದೇಶ: ಈಶಾನ್ಯ ಭಾರತದ ಚಲನಚಿತ್ರಗಳನ್ನು ಪ್ರದರ್ಶಿಸಲು 19ನೇ ಎಂಐಎಫ್ ಎಫ್ ನಿಂದ ವಿಶೇಷ ವಿಭಾಗದ ಆಯೋಜನೆ


ಖಾಸಿ ಬೆಟ್ಟಗಳಿಂದ ಮಣಿಪುರದ ತೇಲುವ ಹುಲ್ಲುಗಾವಲುಗಳವರೆಗೆ ಭಾರತದ ಈಶಾನ್ಯದ ಶ್ರೀಮಂತ ಪರಂಪರೆ, ಐತಿಹಾಸಿಕ ಮತ್ತು ಪರಿಸರ ವೈವಿಧ್ಯತೆ ಎತ್ತಿಹಿಡಿಯಲಿರುವ ಎಂ ಐ ಎಫ್ ಎಫ್ 2026

19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (MIFF 2026) 2026ರ ಜೂನ್ 15 ರಿಂದ 21 ರವರೆಗೆ ನಡೆಯುತ್ತಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಈಶಾನ್ಯ ರಾಜ್ಯಗಳ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳಿಗಾಗಿಯೇ ಮೀಸಲಾದ ವಿಶೇಷ ವಿಭಾಗವನ್ನು ಹೊಂದಿದೆ. ಈ ಚಲನಚಿತ್ರಗಳು ಭಾರತದ ಈಶಾನ್ಯ ಭಾಗದ ಶ್ರೀಮಂತ ಪರಂಪರೆ, ಐತಿಹಾಸಿಕ ಮತ್ತು ಪರಿಸರ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ. ಅಪರೂಪದ ವ್ಯಕ್ತಿಗಳ ಚಿತ್ರಣಗಳು, ಶಾಶ್ವತ ಸಂಪ್ರದಾಯಗಳು, ವೈವಿಧ್ಯಮಯ ಸಮುದಾಯಗಳು ಮತ್ತು ಬದಲಾಗುತ್ತಿರುವ ಭೂ ಆಯಾಮಗಳ ಮೂಲಕ ಈ ಚಿತ್ರಗಳು ಈಶಾನ್ಯ ಭಾರತವನ್ನು ವ್ಯಾಖ್ಯಾನಿಸುವ ಹಲವು ಧ್ವನಿಗಳನ್ನು ಅನಾವರಣಗೊಳಿಸಲಿವೆ. ಖಾಸಿ, ನಾಗಾಮೀಸ್, ಆವೋ, ಕೊಕ್ಬೊರೊಕ್, ಭುಟಿಯಾ, ಅಸ್ಸಾಮಿ, ಮಣಿಪುರಿ ಮತ್ತು ಮಿಜೋ ನಂತಹ ಸ್ಥಳೀಯ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಲನಚಿತ್ರಗಳು ಆ ಪ್ರದೇಶದ ದೈನಂದಿನ ಜೀವನದ ಲಯವನ್ನು ರೂಪಿಸುತ್ತಿರುವ ಪರಂಪರೆ, ಅಸ್ಮಿತೆ, ಸ್ಥಿತಿಸ್ಥಾಪಕತ್ವ ಮತ್ತು ಪ್ರಕೃತಿಯ ರೋಮಾಂಚಕ ಚಿತ್ರಣವನ್ನು ಚಲನಚಿತ್ರೋತ್ಸವದ ಪ್ರೇಕ್ಷಕರಿಗೆ ಉಣಬಡಿಸುತ್ತವೆ.

ಕಾ ಪಟೇಂಗ್ (KA PATENG) (ಖಾಸಿ)

ಸಂಕೀರಂಗ್ ಎಲ್. ಖೊಂಗ್ವಿರ್ ನಿರ್ದೇಶಿರುವ ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ಗಾಗಿ (NFDC) ಗಾಗಿ ಪೊನ್ವಿಶಾಲ್ ಚಿದಂಬರನಾಥನ್ ನಿರ್ಮಾಣ ಮಾಡಿದ್ದಾರೆ. 'ಕಾ ಪಟೇಂಗ್' ಭಾರತದ (2023) 30 ನಿಮಿಷಗಳ ಖಾಸಿ ಭಾಷೆಯ ಕಿರುಚಿತ್ರವಾಗಿದೆ.

ತಾಯಿಯ ಮರಣದ ನಂತರ ಹಲವು ವರ್ಷಗಳ ಕಾಲ ದೂರವಿದ್ದ ಮೂವರು ಒಡಹುಟ್ಟಿದವರು ಮತ್ತೆ ಒಂದೇ ಸೂರಿನಡಿ ಒಂದಾಗುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಸುದೀರ್ಘ ನಗರ ವಾಸದ ನಂತರ ಹಿರಿಯ ಅಣ್ಣ ಮನೆಗೆ ಮರಳುತ್ತಾನೆ, ಮಧ್ಯದ ಮಗುವಿನ ಮನಸ್ಸಿನಲ್ಲಿ ನೋವಿನ ಬಾಲ್ಯದ ನೆನಪಿನ ಭಾರವಿರುತ್ತದೆ ಮತ್ತು ಕಿರಿಯ ತಂಗಿ ತಾನು ತಾಯಿಯಾಗಲಿರುವ ಬಗ್ಗೆ ಅನುಮಾನ ಮೂಡಿಸುವ ರಹಸ್ಯವೊಂದನ್ನು ತನ್ನೊಳಗೆ ಅಡಗಿಸಿಟ್ಟಿರುತ್ತಾಳೆ.

ಲೆಂಟಿನಾ ಆವೋ - ಲೈಟ್ ಆನ್ ದಿ ಈಸ್ಟರ್ನ್ ಹೊರೈಜನ್ (LENTINA AO - A LIGHT ON THE EASTERN HORIZON) - ಭಾಷೆ: ಇಂಗ್ಲಿಷ್, ನಾಗಾಮೀಸ್, ಆವೋ

ಸಂಜೀವ್ ಪರಾಶರ್ ಮತ್ತು ನೀಲಾಕ್ಷಿ ಮೇಧಿ ನಿರ್ದೇಶನದ ಚಿತ್ರವನ್ನು ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NFDC) ನಿರ್ಮಾಣ ಮಾಡಿದೆ. 2023ರ ಈ ಸಾಕ್ಷ್ಯಚಿತ್ರವನ್ನು ಇಂಗ್ಲಿಷ್, ನಾಗಾಮೀಸ್ ಮತ್ತು ಆವೋ ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗಿದೆ.

ಈ ಚಿತ್ರವು ನಾಗಾ ಜನರ ಕಲ್ಯಾಣ ಮತ್ತು ಉದ್ಧಾರಕ್ಕಾಗಿ ತನ್ನನ್ನು ತಾನು ಮುಡಿಪಾಗಿಟ್ಟುಕೊಂಡ ಸಾಮಾಜಿಕ ಕಾರ್ಯಕರ್ತೆ ಲೆಂಟಿನಾ ಆವೋ ಅವರ ಅಸಾಧಾರಣ ಜೀವನ ಮತ್ತು ಪರಂಪರೆಯನ್ನು ದಾಖಲಿಸುತ್ತದೆ. 1955 ರಲ್ಲಿ ದೂರದ ನಾಗಾ ಬೆಟ್ಟಗಳಲ್ಲಿ ಸೂಲಗಿತ್ತಿಯಾಗಿ (midwife) ತನ್ನ ಪಯಣವನ್ನು ಆರಂಭಿಸಿದ ಲೆಂಟಿನಾ ಆವೋ ದಶಕಗಳ ಕಾಲ ತನ್ನ ಸಮುದಾಯದ ಸೇವೆಗೆ ಮುಡಿಪಾಗಿಟ್ಟರು. ಈ ಹಾದಿಯಲ್ಲಿ ಅವರು ಸಾಮಾಜಿಕ ಅನ್ಯಾಯಗಳು, ಜನಾಂಗದಲ್ಲಿ ಬೇರೂರಿದ್ದ ಪೂರ್ವಾಗ್ರಹಗಳು ಮತ್ತು ವೈಯಕ್ತಿಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿದರು.

ಮೈ ಲಾಸ್ಟ್ ಫೇಸ್: ಫ್ಲಾಟ್-ನೋಸ್ (ಮೈ ಲಾಸ್ಟ್ ಫೇಸ್: ಕುಂಗ್ಬರಾ) - ಭಾಷೆ: ಕೊಕ್ಬೊರೊಕ್, ಕೌಬ್ರು

2024ರ ಈ ಸಾಕ್ಷ್ಯಚಿತ್ರವನ್ನು ಸುಜಿತ್ ದೆಬ್ಬರ್ಮಾ ಮತ್ತು ಪ್ರಣಬ್ ಜ್ಯೋತಿ ದೇಕಾ ನಿರ್ದೇಶನ ಮಾಡಿದ್ದು, ಪ್ರಣಬ್ ಜ್ಯೋತಿ ದೇಕಾ, ದಿಲೀಪ್ ದೆಬ್ಬರ್ಮಾ ಮತ್ತು ಸುಜಿತ್ ದೆಬ್ಬರ್ಮಾ ನಿರ್ಮಾಣ ಮಾಡಿದ್ದು, ಅದು ಕೊಕ್ಬೊರೊಕ್ ಮತ್ತು ಕೌಬ್ರು ಭಾಷೆಗಳಲ್ಲಿದೆ. ತ್ರಿಪುರಾದ ಹಸಿರು ಭೂದೃಶ್ಯಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರವು, ರಿಯಾಂಗ್ (Reang) ಸಮುದಾಯದ ಸಾಂಪ್ರದಾಯಿಕ ಉಡುಪುಗಳು ಮತ್ತು ಆಭರಣಗಳ ಮೂಲಕ ಅವರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸುತ್ತದೆ. ಕೇವಲ ಅಲಂಕಾರಿಕ ವಸ್ತುಗಳಿಗಿಂತ ಮಿಗಿಲಾಗಿ ಈ ಉಡುಪುಗಳು ಮತ್ತು ಆಭರಣಗಳು ಸೌಂದರ್ಯ, ಆಧ್ಯಾತ್ಮಿಕತೆ, ಅನನ್ಯತೆ ಮತ್ತು ರಕ್ಷಣೆಯ ಶಾಶ್ವತ ಸಂಕೇತಗಳಾಗಿವೆ. ಇವು ತಲೆಮಾರುಗಳಿಂದ ಕಥೆಗಳು, ನಂಬಿಕೆಗಳು ಮತ್ತು ಪೂರ್ವಜರ ಜ್ಞಾನವನ್ನು ಹೊತ್ತು ತಂದಿವೆರ. ಈ ಜೀವಂತ ಸಂಪ್ರದಾಯಗಳನ್ನು ದಾಖಲಿಸುವ ಮೂಲಕ ಈ ಚಲನಚಿತ್ರವು ಸಮುದಾಯದ ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮೂಹಿಕ ನೆನಪು ಹಾಗೂ ಅಸ್ಮಿತೆಯನ್ನು ಉಳಿಸುವಲ್ಲಿ ಅವು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಸೂಕ್ಷ್ಮವಾದ ಒಳನೋಟವನ್ನು ಕಟ್ಟಿಕೊಡುತ್ತದೆ.

ಶಾಂಗ್ರಿಲಾ - ದಿ ಹಿಡನ್ ಪ್ಯಾರಡೈಸ್ (SHANGRILA - THE HIDDEN PARADISE) - ಭಾಷೆ: ಸಿಕ್ಕಿಮೀಸ್ (ಭುಟಿಯಾ)

2025 ಸಾಕ್ಷ್ಯಚಿತ್ರವನ್ನು ಸ್ಯಾಮ್ಟೆನ್ ಭುಟಿಯಾ ನಿರ್ದೇಶಿಸಿದ್ದು, ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NFDC) ನಿರ್ಮಾಣ ಮಾಡಿದೆ. ಇದು ಸಿಕ್ಕಿಮೀಸ್ (ಭುಟಿಯಾ) ಭಾಷೆಯ 90 ನಿಮಿಷಗಳ ಚಲನಚಿತ್ರವಾಗಿದೆ. ಭವ್ಯವಾದ ಕಾಂಚನಜುಂಗಾ ಪರ್ವತದ ತಪ್ಪಲಿನಲ್ಲಿರುವ ಹಿಮಾಲಯದ ರಾಜ್ಯ ಸಿಕ್ಕಿಂನಲ್ಲಿ ಈ ಚಿತ್ರ ಮೂಡಿಬಂದಿದೆ. ಇದು ಈ ಪ್ರದೇಶದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಭೂದೃಶ್ಯಗಳು ಮತ್ತು ಪ್ರವಾಸೋದ್ಯಮದ ಆಕರ್ಷಣೆಯನ್ನು ಮೀರಿ, ಆದರೆ ಅಷ್ಟಾಗಿ ಪರಿಚಿತವಿಲ್ಲದ ಇತಿಹಾಸ, ಸಂಸ್ಕೃತಿ ಮತ್ತು ಭೌಗೋಳಿಕತೆಯನ್ನು ಕಟ್ಟಿಕೊಡುತ್ತದೆ. ರಾಜ್ಯದ ಪರಂಪರೆ ಮತ್ತು ಅಸ್ಮಿತೆಯ ಆಳವಾದ ಪರಿಶೀಲನೆಯ ಮೂಲಕ, ಈ ಸಾಕ್ಷ್ಯಚಿತ್ರವು ತನ್ನ ಶ್ರೀಮಂತ ಪರಂಪರೆಯನ್ನು ಇಂದಿಗೂ ಹೆಚ್ಚಾಗಿ ಅನ್ವೇಷಿಸದೆಯೇ ಉಳಿಸಿಕೊಂಡಿರುವ ಭೂಮಿಯ ಒಂದು ಆಕರ್ಷಕ ಚಿತ್ರಣವನ್ನು ನೀಡುತ್ತದೆ.

ಟೀನ್ಸ್ ಆಫ್ 1942 (ಬಿಯಾಲ್ಲಿಸರ್ ಲರಾಲಿ) - ಭಾಷೆ: ಅಸ್ಸಾಮಿ

2023 ರಲ್ಲಿ ನಿರ್ಮಾಣವಾದ ಸಮೀರನ್ ದೇಕಾ ನಿರ್ದೇಶನದ ಈ ಚಿತ್ರವನ್ನು ಸಮೀರನ್ ದೇಕಾ ಮತ್ತು ಭಾಸ್ಕರ್ ಜ್ಯೋತಿ ದಾಸ್ ನಿರ್ಮಾಣ ಮಾಡಿದ್ದಾರೆ.  "ಟೀನ್ಸ್ ಆಫ್ 1942" ಎಂಬ ಅಸ್ಸಾಮಿ ಸಾಕ್ಷ್ಯಚಿತ್ರವು ಭಾರತದ ಸ್ವಾತಂತ್ರ್ಯದ 75 ವರ್ಷಗಳ ನೆನಪಿಗಾಗಿ ಒಂದು ಗೌರವ ನಮನವಾಗಿ ಮೂಡಿಬಂದಿದೆ. ಈ ಚಿತ್ರವು ಹದಿಹರೆಯದ ಸ್ವಾತಂತ್ರ್ಯ ಹೋರಾಟಗಾರರಾದ ಭೋಲಾನಾಥ್ ನಗರಿಯಾ ಮತ್ತು ರಾಧಾ ಬೋರಾ ಅವರ ಅಸಾಧಾರಣ ದೇಶಭಕ್ತಿಯನ್ನು ಕೊಂಡಾಡುತ್ತದೆ. ಅವರ ತುಣುಕು ನೆನಪುಗಳ ಸೂಕ್ಷ್ಮವಾದ ಮರುಸೃಷ್ಟಿಯ ಮೂಲಕ, ಈ ಸಾಕ್ಷ್ಯಚಿತ್ರವು ಧೈರ್ಯಶಾಲಿ ಆದರೆ ತೆರೆಮರೆಯಲ್ಲಿದ್ದ ವೀರರನ್ನು ಗೌರವಿಸುತ್ತದೆ. ಅವರ ಕಥೆಗಳನ್ನು ಸಂರಕ್ಷಿಸುವ ಮೂಲಕ, ಅವರ ಧೈರ್ಯ, ತ್ಯಾಗ ಮತ್ತು ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಬದ್ಧತೆಯೊಂದಿಗೆ ಭವಿಷ್ಯದ ಪೀಳಿಗೆಗೆ ಪ್ರೇರಣೆ ನೀಡುತ್ತದೆ.

ದಿ ಹೀಲಿಂಗ್ ಪ್ರೀಸ್ಟ್ (ಪುಯಿಥಿಯಾಮ್) [THE HEALING PRIEST (PUITHIAM)] - ಭಾಷೆ: ಮಿಜೋ

2026ರ ಈ ಮಿಜೋ ಭಾಷೆಯ ಕಿರುಚಿತ್ರವನ್ನು ನೆಪೋಲಿಯನ್ ಆರ್.ಜೆಡ್. ಥಾಂಗಾ ನಿರ್ದೇಶಿಸಿದ್ದು, ಸಂಪ್ರದಾಯ, ನಂಬಿಕೆ ಮತ್ತು ಸಮಕಾಲೀನ ಆತಂಕಗಳ 9 ನಿಮಿಷಗಳ ಸುಂದರ ಅನ್ವೇಷಣೆಯಾಗಿದೆ. ಕಾಯಿಲೆಗೆ ಕಾರಣವಾಗುವ ದುಷ್ಟಶಕ್ತಿಗಳನ್ನು ಓಡಿಸಲು 'ಪುಯಿಥಿಯಾಮ್' (ಗುಣಪಡಿಸುವ ಅರ್ಚಕ) ಆಚರಣೆಗಳನ್ನು ನಡೆಸಿ 'ಲೆಂಗ್ಲೆಪ್' ಅನ್ನು ನೇತುಹಾಕುವ ಪ್ರಾಚೀನ ಮಿಜೋ ಗುಣಪಡಿಸುವ ಆಚರಣೆಯಾದ 'ದೈಬಾಲ್' (Daibawl) ಅನ್ನು ಆಧರಿಸಿ ಈ ಚಿತ್ರವು ಭೂತಕಾಲ ಮತ್ತು ವರ್ತಮಾನವನ್ನು ಬೆಸೆಯುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಯನ್ನು ಗುಣಪಡಿಸಲು ದಾರಿಯನ್ನು ಹುಡುಕುತ್ತಿರುವ ಹತಾಶ ಯುವಕನ ಕಥೆಯನ್ನು ಇದು ಅನುಸರಿಸುತ್ತದೆ. ಇದು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು ಮತ್ತು ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಇರುವ ಆಧುನಿಕ ಆಸೆಗಳ ನಡುವಿನ ಸಂಘರ್ಷ ಪ್ರತಿಬಿಂಬಿಸುತ್ತದೆ. ಈ ನಿರೂಪಣೆಯ ಮೂಲಕ ಚಿತ್ರವು ಮಿಜೋ ಸಾಂಸ್ಕೃತಿಕ ಪರಂಪರೆ ಮತ್ತು ಅನಾರೋಗ್ಯ ಹಾಗೂ ಗುಣಪಡಿಸುವಿಕೆಯ ಸುತ್ತಲಿನ ಶಾಶ್ವತ ನಂಬಿಕೆಗಳ ಒಂದು ನೋಟವನ್ನು ನೀಡುತ್ತದೆ.

MANIPUR BROW ANTLERED DEER (SANGAI) (Manipuri and English)

ಮಣಿಪುರ್ ಬ್ರೋ ಆಂಟ್ಲರ್ಡ್ ಡೀರ್ (ಸಂಗಾಯ್) [MANIPUR BROW ANTLERED DEER (SANGAI)] - ಭಾಷೆ: ಮಣಿಪುರಿ ಮತ್ತು ಇಂಗ್ಲಿಷ್

2025 ಈ ಸಾಕ್ಷ್ಯಚಿತ್ರವನ್ನು ಆಕಾಂಕ್ಷಾ ಸೂದ್ ಸಿಂಗ್ ನಿರ್ದೇಶನ ಮಾಡಿದ್ದು, ರೋಶ್ನಿ ನಾಡರ್ ಮಲ್ಹೋತ್ರಾ ಮತ್ತು ಋಷಿಕೇಶ್ ಆತ್ಮಾರಾಮ್ ಚವಾಣ್ ನಿರ್ಮಾಣ ಮಾಡಿದ್ದಾರೆ.  ಮಣಿಪುರಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬಂದಿರುವ 30 ನಿಮಿಷಗಳ ದ್ವಿಭಾಷಾ ಚಿತ್ರವಾಗಿದೆ. ಇದು ಮಣಿಪುರ ರಾಜ್ಯದ ಸಾಂಪ್ರದಾಯಿಕ ಸಂಕೇತವಾಗಿರುವ ಅಳಿವಿನ ಅಂಚಿನಲ್ಲಿರುವ ಜಿಂಕೆ ಉಪಪ್ರಭೇದವಾದ 'ಸಂಗಾಯ್' (Sangai) ಕಥೆಯನ್ನು ಒಳಗೊಂಡಿದೆ. ಜನಾಂಗೀಯ ಮತ್ತು ರಾಜಕೀಯ ಸಂಘರ್ಘಗಳಿಂದ ಕೂಡಿದ ಪ್ರದೇಶದ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದ್ದು, ಈ ಸುಂದರ ಪ್ರಾಣಿಯು ರಾಜ್ಯದ ವಿಶಿಷ್ಟವಾದ ತೇಲುವ ಹುಲ್ಲುಗಾವಲುಗಳಲ್ಲಿ ಸಂಚರಿಸುವುದನ್ನು ಸೆರೆಹಿಡಿಯುವುದರ ಜೊತೆಗೆ ಅದರ ಉಳಿವಿಗಾಗಿ ನಡೆಯುತ್ತಿರುವ ಸುದೀರ್ಘ ಹೋರಾಟವನ್ನು ಎತ್ತಿ ತೋರಿಸುತ್ತದೆ. ಸಂಗಾಯ್ ಜಿಂಕೆಯ ಕಥೆಯ ಮೂಲಕ ಈ ಚಲನಚಿತ್ರವು ವನ್ಯಜೀವಿಗಳು, ಆವಾಸಸ್ಥಾನ ಸಂರಕ್ಷಣೆ ಮತ್ತು ಆ ಪ್ರದೇಶದ ಸಾಮಾಜಿಕ-ರಾಜಕೀಯ ವಾಸ್ತವಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ಬಿಂಬಿಸುತ್ತದೆ.

 

ಎಂ ಐ ಎಫ್ ಎಫ್ ನ ಪ್ರತಿದಿನದ ಕಾರ್ಯಕ್ರಮಗಳ ಉನ್ನತ ಗುಣಮಟ್ಟದ ಫೋಟೋಗಳು ಮತ್ತು ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ ಮಾಡಿ Click here

 

*****


Great films resonate through passionate voices. Share your love for cinema with #MIFF2026. Tag us @pibmumbai on X, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at miff.mediadesk@pib.gov.in with the subject line: Take One with PIB.


रिलीज़ आईडी: 2274100   |   Visitor Counter: 10