ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಕೊನೆಗೊಳಿಸುವ ಕುರಿತಾದ ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಸ್ವಾಗತಿಸಿರುವ ಪ್ರಧಾನಮಂತ್ರಿ

प्रविष्टि तिथि: 15 JUN 2026 1:21PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಕುರಿತಾದ ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ.

ಈ ಸಂಘರ್ಷವು ಪ್ರಪಂಚದಾದ್ಯಂತ ಆರ್ಥಿಕತೆಗೆ ಗಂಭೀರ ಅಡ್ಡಿ ಉಂಟುಮಾಡಿದ್ದು, ಅನೇಕ ದೇಶಗಳಲ್ಲಿ ಜೀವಹಾನಿಗೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಈ ತಿಳುವಳಿಕೆಯ ಅನುಷ್ಠಾನದಿಂದ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಪುನಃಸ್ಥಾಪನೆ ಸಾಧ್ಯವಾಗಲಿದೆ ಹಾಗೂ ಸಂಚಾರ ಸ್ವಾತಂತ್ರ್ಯ ಮತ್ತು ವಾಣಿಜ್ಯ ವಹಿವಾಟಿನ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನೆರವಾಗಲಿದೆ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ.

ಉಳಿದ ವಿಷಯಗಳ ಕುರಿತ ಚರ್ಚೆ ಮತ್ತು ಸ್ಥಿರವಾದ ಅಂತಿಮ ಒಪ್ಪಂದಕ್ಕೆ ತಲುಪಲು ಭಾರತ ಎದುರು ನೋಡುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

"ಪ್ರಪಂಚದಾದ್ಯಂತ ಆರ್ಥಿಕತೆಗೆ ಗಂಭೀರ ಅಡ್ಡಿ ಉಂಟುಮಾಡಿರುವ ಮತ್ತು ಅನೇಕ ದೇಶಗಳಲ್ಲಿ ಜೀವಹಾನಿಗೆ ಕಾರಣವಾಗಿರುವ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಕುರಿತಾದ ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆಯನ್ನು ನಾನು ಸ್ವಾಗತಿಸುತ್ತೇನೆ.

ಈ ಸಹಮತದ ಅನುಷ್ಠಾನವು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಲು ಹಾಗೂ ಸಂಚಾರ ಮತ್ತು ವಾಣಿಜ್ಯದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಪೂರಕವಾಗಲಿದೆ ಎಂದು ಭಾರತ ಆಶಿಸಿದೆ.

ಉಳಿದ ವಿಷಯಗಳ ಕುರಿತ ಚರ್ಚೆಗಳು ಮತ್ತು ಸ್ಥಿರವಾದ ಅಂತಿಮ ಒಪ್ಪಂದವನ್ನು ತಲುಪಲು ನಾವು ಎದುರು ನೋಡುತ್ತಿದ್ದೇವೆ.”

 

*****


(रिलीज़ आईडी: 2272945) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Bengali-TR , Manipuri , Punjabi , Gujarati , Tamil , Telugu , Malayalam