ಗೃಹ ವ್ಯವಹಾರಗಳ ಸಚಿವಾಲಯ
ಕ್ರೀಡಾಕ್ಷೇತ್ರದ ದಂತಕತೆ ಜಸ್ಪಾಲ್ ರಾಣಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಜಸ್ಪಾಲ್ ರಾಣಾ ಅವರ ನಿಧನವು ರಾಷ್ಟ್ರಕ್ಕೆ ಭರಿಸಲಾಗದ ನಷ್ಟ
ಭಾರತ ಶೂಟಿಂಗ್‌ನಲ್ಲಿ ಅದಮ್ಯ ಸಾಮರ್ಥ್ಯ ಸಾಬೀತುಪಡಿಸಲು ಮತ್ತು ತರಬೇತುದಾರರಾಗಿ ಯುವ ಶೂಟರ್‌ಗಳನ್ನು ಪೋಷಿಸಲು ರಾಣಾ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು
ರಾಣಾ ಅವರ ಕುಟುಂಬ ಮತ್ತು ಅವರ ಲಕ್ಷಾಂತರ ಅಭಿಮಾನಿಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದ ಗೃಹ ಸಚಿವರು
प्रविष्टि तिथि:
12 JUN 2026 12:54PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕ್ರೀಡಾಕ್ಷೇತ್ರದ ದಂತಕತೆ ಜಸ್ಪಾಲ್ ರಾಣಾ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಕುಟುಂಬ ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ.
ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ. “ಕ್ರೀಡಾಪಟು ಜಸ್ಪಾಲ್ ರಾಣಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ಗೌರವಗಳನ್ನು ಗೆದ್ದುಕೊಡುವ ಮೂಲಕ ಮತ್ತು ಯುವ ಶೂಟರ್‌ಗಳನ್ನು ತರಬೇತುದಾರರಾಗಿ ಪೋಷಿಸುವ ಮೂಲಕ ಶೂಟಿಂಗ್‌ನಲ್ಲಿ ಭಾರತದ ಅದಮ್ಯ ಸಾಮರ್ಥ್ಯವನ್ನು ಪ್ರದರ್ಶಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ರಾಣಾ ಅವರ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟವಾಗಿದೆ. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ನಾನು ಹೃದಯ ಪೂರ್ವಕ ಸಂತಾಪ ಸೂಚಿಸುತ್ತೇನೆ.’’
*****
(रिलीज़ आईडी: 2272056)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu