ಪ್ರಧಾನ ಮಂತ್ರಿಯವರ ಕಛೇರಿ
ಆಡಳಿತವು ನಾಗರಿಕರಿಗೆ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತನೆಗೊಳ್ಳುವ ಬಗ್ಗೆ ಒತ್ತು ನೀಡುವ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
10 JUN 2026 10:01PM by PIB Bengaluru
ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದರಾದ ಶ್ರೀ ನಿತೀಶ್ ಕುಮಾರ್ ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ಪ್ರಜಾಪ್ರಭುತ್ವದ ಮೂಲಕ ಸತತವಾಗಿ ಅತಿ ಹೆಚ್ಚು ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಈ ಲೇಖನವು ಶ್ಲಾಘಿಸುತ್ತದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಹೋರಾಟಗಳನ್ನು ಇದು ನೆನಪಿಸುತ್ತಾ, ಸರ್ಕಾರದ ಅನೇಕ ಸಾಧನೆಗಳನ್ನು ಪಟ್ಟಿ ಮಾಡುತ್ತದೆ. ಮೋದಿಯವರ ಆಡಳಿತವು ನಾಗರಿಕರಿಗೆ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ, ಇದು ಪ್ರಧಾನಮಂತ್ರಿ ಮೋದಿಯವರ ನಾಯಕತ್ವದ ನಿರ್ಣಾಯಕ ಲಕ್ಷಣವಾಗಿದೆ ಎಂದು ಈ ಲೇಖನವು ಗಮನಿಸುತ್ತದೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದರಾದ ಶ್ರೀ @NitishKumar ಅವರು ಬರೆದ ಈ ಲೇಖನವು ಪ್ರಧಾನಮಂತ್ರಿ @narendramodi ಯವರನ್ನು ಭಾರತದ ಪ್ರಜಾಪ್ರಭುತ್ವದ ಮೂಲಕ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸುತ್ತದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಹೋರಾಟಗಳನ್ನು ಶ್ರೀ ನಿತೀಶ್ ಕುಮಾರ್ ಅವರು ನೆನಪಿಸಿಕೊಂಡು, NDA ಸರ್ಕಾರದ ಅನೇಕ ಸಾಧನೆಗಳನ್ನು ಅವರು ಪಟ್ಟಿ ಮಾಡುತ್ತಾರೆ. ಪ್ರಧಾನಮಂತ್ರಿ ಮೋದಿಯವರ ನಾಯಕತ್ವದ ನಿರ್ಣಾಯಕ ಲಕ್ಷಣವೆಂದರೆ ಅವರ ಆಡಳಿತವು ನಾಗರಿಕರಿಗೆ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಸುತ್ತದೆ ಎಂದು ಅವರು ಈ ಲೇಖನದಲ್ಲಿ ಬರೆದಿದ್ದಾರೆ."
*****
(रिलीज़ आईडी: 2271593)
आगंतुक पटल : 3