ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಜುಲೈ 31 ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2026 ಕ್ಕೆ ನಾಮನಿರ್ದೇಶನ ಸಲ್ಲಿಕ್ಕೆಗೆ ಕೊನೆಯ ದಿನಾಂಕ
5 ರಿಂದ 18 ವರ್ಷ ವಯಸ್ಸಿನ ಮಕ್ಕಳು ಅರ್ಹರು
ಸ್ವಯಂ ನಾಮನಿರ್ದೇಶನಗಳು ಮತ್ತು ಮೂರನೇ ವ್ಯಕ್ತಿಯ ಶಿಫಾರಸುಗಳು ಸ್ವೀಕಾರ
प्रविष्टि तिथि:
09 JUN 2026 3:48PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಬಿಆರ್ ಪಿ) 2026 ಕ್ಕೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಪ್ರಶಸ್ತಿಗಾಗಿ ಅರ್ಜಿಗಳ ಸ್ವೀಕಾರವು 2026ರ ಏಪ್ರಿಲ್ 1 ರಂದು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2026ರ ಜುಲೈ 31 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿದೆ. ಎಲ್ಲಾ ನಮೂದುಗಳನ್ನು https://awards.gov.in ನಲ್ಲಿ ಸಲ್ಲಿಸಬೇಕು.
ಭಾರತದಲ್ಲಿ ಪ್ರಸ್ತುತ ವಾಸಿಸುತ್ತಿರುವ ಭಾರತೀಯ ನಾಗರಿಕರಾಗಿರುವ 5 ರಿಂದ 18 ವರ್ಷ ವಯಸ್ಸಿನ (2026ರ ಜುಲೈ 31 ರಂತೆ) ಮಕ್ಕಳು ಅರ್ಹರು. ಸ್ವಯಂ ನಾಮನಿರ್ದೇಶನಗಳು ಮತ್ತು ಮೂರನೇ ವ್ಯಕ್ತಿಯ ಶಿಫಾರಸುಗಳನ್ನು ಸ್ವೀಕರಿಸಲಾಗುತ್ತದೆ. ಅರ್ಜಿದಾರರು ಮೂಲಭೂತ ವೈಯಕ್ತಿಕ ವಿವರಗಳು ಮತ್ತು ಪ್ರಶಸ್ತಿಯ ವರ್ಗವನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ನಂತರ ಇತ್ತೀಚಿನ ಛಾಯಾಚಿತ್ರ ಮತ್ತು ಪೋಷಕ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಅವರು ಸಾಧನೆ ಮತ್ತು ಅದರ ಪ್ರಭಾವದ ಬಗ್ಗೆ (1000 ಪದಗಳವರೆಗೆ) ಬರಹವನ್ನು ಸಲ್ಲಿಸಬೇಕಾಗುತ್ತದೆ.


ಪಿಎಂಬಿಆರ್ ಪಿ ಪ್ರಶಸ್ತಿಯು ಆರು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸುತ್ತದೆ. ನಾಮನಿರ್ದೇಶನಕ್ಕಾಗಿ ವರ್ಗಗಳು ಈ ಕೆಳಗಿನಂತಿವೆ:
• ಶೌರ್ಯ: ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅಥವಾ ಅತ್ಯುತ್ತಮ ಧೈರ್ಯವನ್ನು ತೋರಿಸಿದ ಮಕ್ಕಳು
• ಕ್ರೀಡೆ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ ಮಕ್ಕಳು.
• ಸಮಾಜ ಸೇವೆ: ಸಮಾಜದ ಅಂಶಗಳನ್ನು ಸುಧಾರಿಸಲು, ಪರಿಸರವನ್ನು ಸಂರಕ್ಷಿಸಲು, ಹಿಂದುಳಿದವರಿಗೆ ಸಹಾಯ ಮಾಡಲು ಮತ್ತು ರಾಷ್ಟ್ರೀಯ ಉದ್ದೇಶಗಳಿಗಾಗಿ ನಿಂತ ಮಕ್ಕಳು
• ವಿಜ್ಞಾನ ಮತ್ತು ತಂತ್ರಜ್ಞಾನ: ಮಕ್ಕಳಿಂದ ನಿರ್ಮಿಸಲಾದ ನಾವೀನ್ಯತೆಗಳು, ಸಂಶೋಧನೆ ಅಥವಾ ಮೂಲಮಾದರಿಗಳು.
• ಪರಿಸರ: ಸುಸ್ಥಿರ ಅಭ್ಯಾಸಗಳು, ಜಾಗೃತಿ ಅಭಿಯಾನಗಳು ಅಥವಾ ಪರಿಸರ-ನಾವೀನ್ಯತೆಗಳು
• ಕಲೆ ಮತ್ತು ಸಂಸ್ಕೃತಿ: ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದ ಮತ್ತು ಸಂಗೀತ, ನೃತ್ಯ, ಬರವಣಿಗೆ, ಚಿತ್ರಕಲೆ, ಪ್ರದರ್ಶನ ಅಥವಾ ಇತರ ಕಲೆಗಳಲ್ಲಿ ಶ್ರೇಷ್ಠತೆ ಸಾಧಿಸಿದ ಮಕ್ಕಳು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶಾಲೆಗಳು, ಸಂಸ್ಥೆಗಳು, ಪೋಷಕರು, ಮಾರ್ಗದರ್ಶಕರು ಮತ್ತು ಸಾರ್ವಜನಿಕರನ್ನು ಅಂತಹ ಪ್ರತಿಭೆಯನ್ನು ಸಕ್ರಿಯವಾಗಿ ಹುಡುಕಲು ಮತ್ತು ಅವರನ್ನು ನಾಮನಿರ್ದೇಶನ ಮಾಡಲು ಆಹ್ವಾನಿಸುತ್ತದೆ. ಪ್ರತಿ ಅರ್ಹ ಮಗುವೂ ಪ್ರಕಾಶಿಸಲು ರಾಷ್ಟ್ರೀಯ ವೇದಿಕೆಯನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳೋಣ.
*****
(रिलीज़ आईडी: 2270765)
आगंतुक पटल : 12
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Gujarati
,
Tamil
,
Telugu
,
Malayalam