ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026ರ ಯು18 ಏಷ್ಯಾ ಕಪ್‌ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಯು18 ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ 

प्रविष्टि तिथि: 06 JUN 2026 6:16PM by PIB Bengaluru

2026ರ ಯು18 ಏಷ್ಯಾ ಕಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಯು18 ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ಪಂದ್ಯಾವಳಿಯಾದ್ಯಂತ ತಂಡವು ಗಮನಾರ್ಹ ಧೈರ್ಯವನ್ನು ಪ್ರದರ್ಶಿಸಿದೆ ಎಂದು ಪ್ರಧಾನಮಂತ್ರಿ ಅವರು ಗಮನಿಸಿದರು.

ಈ ಸಾಧನೆಯು ಭಾರತದಲ್ಲಿ ಮಹಿಳಾ ಹಾಕಿಯ ಬೆಳೆಯುತ್ತಿರುವ ಶಕ್ತಿ ಮತ್ತು ಆಟಗಾರ್ತಿಯರ ಅಪಾರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಅವರು ಗಮನಿಸಿದರು.  ತಂಡಕ್ಕೆ ಅವರುಗಳ ಮುಂಬರುವ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಶುಭ ಹಾರೈಸಿದರು.

 ಪ್ರಧಾನಮಂತ್ರಿ ಅವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ;:

"ಯು18 ಏಷ್ಯಾ ಕಪ್ 2026ರಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಯು18 ಹಾಕಿ ತಂಡಕ್ಕೆ ಅಭಿನಂದನೆಗಳು. ತಂಡವು ಪಂದ್ಯಾವಳಿಯಾದ್ಯಂತ ಗಮನಾರ್ಹ ಧೈರ್ಯವನ್ನು ಪ್ರದರ್ಶಿಸಿತು. ಈ ಸಾಧನೆಯು ಭಾರತದಲ್ಲಿ ಮಹಿಳಾ ಹಾಕಿಯ ಬೆಳೆಯುತ್ತಿರುವ ಶಕ್ತಿ ಮತ್ತು ನಮ್ಮ ಆಟಗಾರ್ತಿಯರ ಅಪಾರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ತಂಡದ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸುತ್ತದೆ."

 

*****


(रिलीज़ आईडी: 2269862) आगंतुक पटल : 21
इस विज्ञप्ति को इन भाषाओं में पढ़ें: Marathi , Tamil , Assamese , English , Urdu , हिन्दी , Manipuri , Bengali , Punjabi , Gujarati , Telugu , Malayalam