ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಅಹಮದಾಬಾದ್ ನಲ್ಲಿ ಪ್ರಥಮ ವಿಶ್ವ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ಆರಂಭ; ಯೋಗದ ಜಾಗತಿಕ ಜನಪ್ರಿಯತೆಯ ಬಗ್ಗೆ ಪ್ರಧಾನಮಂತ್ರಿ ವಿವರಣೆ
प्रविष्टि तिथि:
03 JUN 2026 10:31PM by PIB Bengaluru
ಗುಜರಾತ್ ನ ಅಹಮದಾಬಾದ್ ನಲ್ಲಿ ಜೂನ್ 4 ರಂದು ಆರಂಭವಾಗಲಿರುವ ಪ್ರಥಮ ವಿಶ್ವ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2026 ಪ್ರಪಂಚದಾದ್ಯಂತ ಯೋಗವು ಅಪಾರ ಜನಪ್ರಿಯತೆ ಗಳಿಸುತ್ತಿದೆ ಎಂಬುದರ ಸೂಚಕವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಜಗತ್ತಿನಾದ್ಯಂತದ ಯೋಗಾಸಕ್ತರನ್ನು ಈ ವೇದಿಕೆ ಒಟ್ಟುಗೂಡಿಸಿದ್ದು, ಯೋಗಾಸನಕ್ಕಾಗಿ ಜಾಗತಿಕ ಕ್ರೀಡಾ ಮಾರ್ಗನಕ್ಷೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದ್ದಾರೆ. ಜೂನ್ 4 ರ ಸಂಜೆ ಸುಮಾರು 6:40 ಗಂಟೆಗೆ ತಂತ್ರಜ್ಞಾನ ಸಾಧನದ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಶ್ರೀ ಮೋದಿ ಅವರು ಘೋಷಿಸಿದ್ದಾರೆ. ವಿನೂತನವಾಗಿ ಕಾರ್ಯಕ್ರಮ ಆಯೋಜಿಸಿದವರಿಗೆ ಅಭಿನಂದನೆ ಸಲ್ಲಿಸಿರುವ ಅವರು, ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಎಲ್ಲರಿಗೂ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ಯೋಗಾಸನವು ವಿಶ್ವಾದ್ಯಂತ ಅಪಾರ ಜನಪ್ರಿಯತೆ ಗಳಿಸುತ್ತಿದೆ! ಜೂನ್ 4 ರಂದು ವಿಶೇಷ ಸ್ಪರ್ಧೆ, ವಿಶ್ವದ ಮೊದಲ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2026, ಅಹಮದಾಬಾದ್ ನಲ್ಲಿ ಆರಂಭವಾಗಲಿದೆ. ಈ ವೇದಿಕೆಯು ಪ್ರಪಂಚದಾದ್ಯಂತದ ಯೋಗ ಉತ್ಸಾಹಿಗಳನ್ನು ಒಟ್ಟುಗೂಡಿಸಿದೆ. ಇದು ಯೋಗಾಸನದ ಜಾಗತಿಕ ಕ್ರೀಡಾ ಮಾರ್ಗನಕ್ಷೆಯ ಮಹತ್ವದ ಮೈಲಿಗಲ್ಲಾಗಿದೆ. ಜೂನ್ 4ರ ಸಂಜೆ ಸುಮಾರು 6:40 ಕ್ಕೆ ನಾನು ತಂತ್ರಜ್ಞಾನ ಸಾಧನದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಇಂತಹ ನವೀನ ಕಾರ್ಯಕ್ರಮವನ್ನು ಆಯೋಜಿಸಿದವರಿಗೆ ನನ್ನ ಅಭಿನಂದನೆಗಳು ಮತ್ತು ಭಾಗವಹಿಸುವ ಎಲ್ಲರಿಗೂ ಶುಭಾಶಯಗಳು.
@yogasanabharat
@worldyogasana"
*****
(रिलीज़ आईडी: 2268796)
आगंतुक पटल : 5