ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಮಧ್ಯಪ್ರದೇಶದಲ್ಲಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯಲ್ಲಿ, ಎನ್‌ ಎಚ್-347B ರಸ್ತೆಯ ಹಿವಾರಖೇಡಿ-ರೋಷ್ನಿ-ಆಶಾಪುರ-ರುಧ್ಯ ವಿಭಾಗದ ಪ್ರಸ್ತುತ ಇರುವ ಮಧ್ಯಂತರ ಪಥವನ್ನು  ಪೇವ್ಡ್ ಶೋಲ್ಡರ್ ಸ್ಟ್ಯಾಂಡರ್ಡ್ ಒಳಗೊಂಡ 2 ಪಥಕ್ಕೆ ಮೇಲ್ದರ್ಜೆಗೇರಿಸಲು (125.01 ಕಿ.ಮೀ.) ಮತ್ತು ದೇಶ್‌ಗಾಂವ್-ಜುಲ್ವಾನಿಯಾ ವಿಭಾಗದ ಪ್ರಸ್ತುತ ಇರುವ 2 ಪಥ ರಸ್ತೆಯನ್ನು ಚತುಷ್ಪಥ (4-ಲೇನ್)ಕ್ಕೆ ವಿಸ್ತರಿಸಲು (108.643 ಕಿ.ಮೀ.) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ


ಒಟ್ಟು ಉದ್ದ - 233.653 ಕಿ.ಮೀ., ವೆಚ್ಚ: 4,415.60 ಕೋಟಿ ರೂ

प्रविष्टि तिथि: 03 JUN 2026 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಮಧ್ಯಪ್ರದೇಶ ರಾಜ್ಯದಲ್ಲಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯಲ್ಲಿ (ಎಚ್‌ಎಎಂ), 4,415.60 ಕೋಟಿ ರೂಪಾಯಿ ವೆಚ್ಚದಲ್ಲಿ ಎನ್‌ಎಚ್ -347B ಹೆದ್ದಾರಿಯ ಹಿವಾರಖೇಡಿ-ರೋಷ್ನಿ-ಆಶಾಪುರ-ರುಧ್ಯ ವಿಭಾಗದ ಪ್ರಸ್ತುತ ಇರುವ ಮಧ್ಯಂತರ ಪಥವನ್ನು ಪೇವ್ಡ್ ಶೋಲ್ಡರ್ ಸ್ಟ್ಯಾಂಡರ್ಡ್ ಒಳಗೊಂಡ 2 ಪಥಕ್ಕೆ ಮೇಲ್ದರ್ಜೆಗೇರಿಸಲು (125.01 ಕಿ.ಮೀ.) ಮತ್ತು ದೇಶ್‌ಗಾಂವ್-ಜುಲ್ವಾನಿಯಾ ವಿಭಾಗದ ಪ್ರಸ್ತುತ ಇರುವ 2 ಪಥದ ರಸ್ತೆಯನ್ನು ಚತುಷ್ಪಥ (4-ಲೇನ್)ಕ್ಕೆ ವಿಸ್ತರಿಸಲು (108.643 ಕಿ.ಮೀ.) ಅನುಮೋದನೆ ನೀಡಿದೆ.

ಮಧ್ಯಪ್ರದೇಶದ ಎನ್‌ಎಚ್ -347B ಹೆದ್ದಾರಿಯ ಹಿವಾರಖೇಡಿ-ರೋಷ್ನಿ-ಆಶಾಪುರ-ರುಧ್ಯ ಮತ್ತು ದೇಶ್‌ಗಾಂವ್-ಜುಲ್ವಾನಿಯಾ ವಿಭಾಗಗಳ ಉದ್ದೇಶಿತ ಮೇಲ್ದರ್ಜೆಗೇರಿಸುವಿಕೆಯು ಬೆತುಲ್, ಖಾಂಡ್ವಾ, ಖಾರ್ಗೋನ್ ಮತ್ತು ಬರ್ವಾನಿ ಜಿಲ್ಲೆಗಳ ಜನನಿಬಿಡ ಪ್ರದೇಶಗಳಲ್ಲಿನ  ಭೂಭಾಗದ   ನ್ಯೂನತೆಗಳು, ಕಡಿದಾದ ತಿರುವುಗಳು ಮತ್ತು ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ನಿವಾರಿಸಲಿದೆ. ಈ ಯೋಜನೆಯ ಭಾಗವಾಗಿ ಖಾರ್ಗೋನ್ ಜಿಲ್ಲೆಯಲ್ಲಿ 16.20 ಕಿ.ಮೀ ಉದ್ದದ ವಿಸ್ತರಿತ ಗ್ರೀನ್‌ಫೀಲ್ಡ್ ಬೈಪಾಸ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯು ಸರಾಸರಿ ಪ್ರಯಾಣದ ವೇಗವನ್ನು ಹೆಚ್ಚಿಸಲಿದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ ಮತ್ತು ಒಟ್ಟಾರೆ ರಸ್ತೆ ಸುರಕ್ಷತೆ, ಇಂಧನ ದಕ್ಷತೆ ಹಾಗೂ ವಾಹನ ನಿರ್ವಹಣಾ ವೆಚ್ಚವನ್ನು ಸುಧಾರಿಸಲಿದೆ. ಇದರ ಮೂಲಕ ಆ ಪ್ರದೇಶಗಳ ಸಂಚಾರವನ್ನು ಹೆಚ್ಚಿಸಲಿದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲಿದೆ.

ಈ ಯೋಜನೆಯು ಮಧ್ಯಪ್ರದೇಶದ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ (ಸಾಗಾಣಿಕೆ) ಕೇಂದ್ರಗಳಿಗೆ ಸುಗಮ ಸಂಪರ್ಕವನ್ನು ಕಲ್ಪಿಸಲಿದೆ. ಮೇಲ್ದರ್ಜೆಗೇರಿಸಲಾದ ಈ ಕಾರಿಡಾರ್ 06 ಪಿಎಂ ಗತಿ-ಶಕ್ತಿ ಆರ್ಥಿಕ ಕೇಂದ್ರಗಳನ್ನು (1 ಟೆಕ್ಸ್ಟ್‌ಟೈಲ್ ಕ್ಲಸ್ಟರ್, 2 ಮೆಗಾ ಫುಡ್ ಪಾರ್ಕ್, 1 ಇಂಡಸ್ಟ್ರಿಯಲ್ ಪಾರ್ಕ್, 2 ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ಗಳು), 5 ಸಾಮಾಜಿಕ ಕೇಂದ್ರಗಳನ್ನು (2 ಮಹತ್ವಾಕಾಂಕ್ಷೆಯ ಜಿಲ್ಲೆಗಳು - ಖಾಂಡ್ವಾ ಮತ್ತು ಬರ್ವಾನಿ, 3 ಬುಡಕಟ್ಟು ಜಿಲ್ಲೆಗಳು - ಬೆತುಲ್, ಖಾಂಡ್ವಾ, ಖಾರ್ಗೋನ್) ಮತ್ತು 5 ಲಾಜಿಸ್ಟಿಕ್ ಕೇಂದ್ರಗಳನ್ನು (2 ಪ್ರಮುಖ ರೈಲ್ವೆ ನಿಲ್ದಾಣಗಳು, 2 ವಿಮಾನ ನಿಲ್ದಾಣಗಳು, 1 ಎಂಎಂಎಲ್‌ಪಿ) ಸಂಪರ್ಕಿಸುವ ಮೂಲಕ ಬಹು-ಮಾದರಿ ಸಂಯೋಜನೆಯನ್ನು ಹೆಚ್ಚಿಸಲಿದೆ. ಇದು ಈ ಪ್ರದೇಶದಲ್ಲಿ ಸರಕು ಮತ್ತು ಪ್ರಯಾಣಿಕರ ವೇಗದ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ.

ಕಾರಿಡಾರ್ ನಕ್ಷೆ

ಅನುಬಂಧ - I: ಯೋಜನೆಯ ವಿವರಗಳು

ವೈಶಿಷ್ಟ್ಯ

ವಿವರಗಳು

ಯೋಜನೆಯ ಹೆಸರು

ಮಧ್ಯಪ್ರದೇಶ ರಾಜ್ಯದಲ್ಲಿ ಹೈಬ್ರಿಡ್ ಅನ್ವಿಟಿ ಮಾದರಿಯಲ್ಲಿ ಎನ್‌ ಎಚ್-347B ರಸ್ತೆಯ ಹಿವಾರಖೇಡಿ-ರೋಷ್ನಿ-ಆಶಾಪುರ-ರುಧ್ಯ ವಿಭಾಗದ ಪ್ರಸ್ತುತ ಇರುವ  ಮಧ್ಯಂತರ (ಇಂಟರ್ಮೀಡಿಯಟ್) ಲೇನ್ ಅನ್ನು ಪೇವ್ಡ್ ಶೋಲ್ಡರ್ ಸ್ಟ್ಯಾಂಡರ್ಡ್ ಒಳಗೊಂಡ 2 ಪಥಕ್ಕೆ  ಮೇಲ್ದರ್ಜೆಗೇರಿಸುವುದು (125.01 ಕಿ.ಮೀ.) ಮತ್ತು ದೇಶ್‌ಗಾಂವ್-ಜುಲ್ವಾನಿಯಾ ವಿಭಾಗದ ಪ್ರಸ್ತುತ ಇರುವ 2 ಪಥ ರಸ್ತೆಯನ್ನು ಚತುಷ್ಪಥಕ್ಕೆ (4 ಲೇನ್‌)ಗೆ ವಿಸ್ತರಿಸುವುದು  (108.643 ಕಿ.ಮೀ.). (ಒಟ್ಟು ಉದ್ದ - 233.653 ಕಿ.ಮೀ.)

ಕಾರಿಡಾರ್

ಬೆತುಲ್ - ಖಾಂಡ್ವಾ – ವಡೋದರಾ

ಉದ್ದ (ಕಿ.ಮೀ.)

233.653

ಒಟ್ಟು ಸಿವಿಲ್ ವೆಚ್ಚ (ಕೋಟಿ ರೂ.ಗಳಲ್ಲಿ)

2705.08

ಭೂಸ್ವಾಧೀನ ವೆಚ್ಚ (ಕೋಟಿ ರೂ.ಗಳಲ್ಲಿ)

432.77

ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.ಗಳಲ್ಲಿ)

4415.60

ಮಾದರಿ

ಹೈಬ್ರಿಡ್ ಅನ್ಯೂಯಿಟಿ ಮಾದರಿ (ಎಚ್‌ ಎ ಎಂ )

ಬೈಪಾಸ್‌ಗಳು

ಹಿವಾರಖೇಡಿ-ರೋಷ್ನಿ-ಆಶಾಪುರ-ರುಧ್ಯ ವಿಭಾಗ:
ಬೈಪಾಸ್ ಉದ್ದ = 70.39 ಕಿ.ಮೀ.

ದೇಶ್‌ಗಾಂವ್-ಜುಲ್ವಾನಿಯಾ ವಿಭಾಗ:
ಬೈಪಾಸ್ ಉದ್ದ = 54.273 ಕಿ.ಮೀ.

ಸಂಪರ್ಕಿಸುವ ಪ್ರಮುಖ ರಸ್ತೆಗಳು

ರಾಷ್ಟ್ರೀಯ ಹೆದ್ದಾರಿಗಳು –ಎನ್‌ ಎಚ್-47, ಎನ್‌ ಎಚ್-753, ಎನ್‌ ಎಚ್ -347ಬಿಜಿ ಮತ್ತು ಎನ್‌ ಎಚ್-52

ರಾಜ್ಯ ಹೆದ್ದಾರಿಗಳು – ಎಸ್‌ ಎಚ್-15 ಮತ್ತುಎಂ ಡಿ ಆರ್

ಸಂಪರ್ಕಿಸುವ ಆರ್ಥಿಕ / ಸಾಮಾಜಿಕ / ಸಾರಿಗೆ ಕೇಂದ್ರಗಳು

ವಿಮಾನ ನಿಲ್ದಾಣ: ಇಂದೋರ್ ಮತ್ತು ನಾಗ್ಪುರ

ರೈಲ್ವೆ ನಿಲ್ದಾಣಗಳು: ಬೆತುಲ್, ಖಾಂಡ್ವಾ


ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್: ಇಂದೋರ್


ಆರ್ಥಿಕ ಕೇಂದ್ರಗಳು: 1 ಟೆಕ್ಸ್ಟ್‌ಟೈಲ್ ಕ್ಲಸ್ಟರ್, 2 ಮೆಗಾ ಫುಡ್ ಪಾರ್ಕ್, 1 ಇಂಡಸ್ಟ್ರಿಯಲ್ ಪಾರ್ಕ್, 2 ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ಗಳು

ಸಂಪರ್ಕಿಸುವ ಪ್ರಮುಖ ನಗರಗಳು / ಪಟ್ಟಣಗಳು

ಬೆತುಲ್, ಖಾಂಡ್ವಾ, ಖಾರ್ಗೋನ್, ಬರ್ವಾನಿ

ಉದ್ಯೋಗ ಸೃಷ್ಟಿ ಸಾಮರ್ಥ್ಯ

19.50 ಲಕ್ಷ ಮಾನವ ದಿನಗಳು (ನೇರ) ಮತ್ತು 23.00 ಲಕ್ಷ ಮಾನವ ದಿನಗಳು (ಪರೋಕ್ಷ)

 

 

*****

 


(रिलीज़ आईडी: 2268518) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Gujarati , Odia , Tamil , Telugu , Malayalam