ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
13ನೇ ಬ್ರಿಕ್ಸ್ ನಗರೀಕರಣ ವೇದಿಕೆಯನ್ನು ಭಾರತವು ನವದೆಹಲಿಯಲ್ಲಿ ಜೂನ್ 11–12, 2026 ರಂದು ಆಯೋಜಿಸಲಿದೆ
‘ಜನರಿಗಾಗಿ ನಗರಗಳು: ಸಮಗ್ರ ಮತ್ತು ಸ್ಥಿತಿಸ್ಥಾಪಕ ನಗರ ಭವಿಷ್ಯಕ್ಕಾಗಿ ಬ್ರಿಕ್ಸ್ ನ ಸಹಕಾರ’
ಪ್ರಕಟಣಾ ದಿನಾಂಕ:
01 JUN 2026 5:42PM by PIB Bengaluru
ಭಾರತವು 13ನೇ ಬ್ರಿಕ್ಸ್ ನಗರೀಕರಣ ವೇದಿಕೆಯನ್ನು ಜೂನ್ 11-12, 2026ರಂದು ನವದೆಹಲಿಯಲ್ಲಿ ಆಯೋಜಿಸಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಇಂದು ಕಾರ್ಯಕ್ರಮದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಈ ವೇದಿಕೆಯು 2026ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಒಂದು ಪ್ರಮುಖ ಸಚಿವ ಕಾರ್ಯಕ್ರಮವಾಗಿದ್ದು, ಪ್ರಧಾನಮಂತ್ರಿಯವರ 'ಮಾನವೀಯತೆ ಮೊದಲು' ಎಂಬ ದೃಷ್ಟಿಕೋನ ಮತ್ತು 'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ' ಎಂಬ ಅಧ್ಯಕ್ಷತೆಯ ಪರಿಕಲ್ಪನೆಯಿಂದ ಸ್ಪೂರ್ತಿಯನ್ನು ಪಡೆಯುತ್ತದೆ.
ನಗರೀಕರಣ ವೇದಿಕೆಯು 'ಜನರಿಗಾಗಿ ನಗರಗಳು: ಸಮಗ್ರ ಮತ್ತು ಸ್ಥಿತಿಸ್ಥಾಪಕ ನಗರ ಭವಿಷ್ಯಕ್ಕಾಗಿ ಬ್ರಿಕ್ಸ್ ಸಹಕಾರ' ಎಂಬ ವಿಷಯದ ಅಡಿಯಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ನಗರಗಳ ಯೋಜನೆ, ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಜನರಿಗೆ ಕೇಂದ್ರೀಯತೆಯನ್ನು ನೀಡುವ ಭಾರತದ ವಿಧಾನವನ್ನು ಈ ಪರಿಕಲ್ಪನೆಯು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಭಾರತದ ಪರಂಪರೆ ಮತ್ತು ತಡೆರಹಿತ ನಾಯಕತ್ವ
ಬ್ರಿಕ್ಸ್ ನಗರೀಕರಣ ವೇದಿಕೆಯನ್ನು ಭಾರತದಲ್ಲಿ ಪ್ರಥಮ ಬಾರಿಗೆ 2013 ರಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದು, ನಗರೀಕರಣವನ್ನು ಔಪಚಾರಿಕವಾಗಿ ಬ್ರಿಕ್ಸ್ ಸಹಕಾರ ಕಾರ್ಯಸೂಚಿಯಲ್ಲಿ ಈ ಸಂದರ್ಭದಲ್ಲಿ ಸೇರಿಸಲಾಗಿತ್ತು. ಸುಸ್ಥಿರ ನಗರ ಅಭಿವೃದ್ಧಿ, ಸ್ಮಾರ್ಟ್ ನಗರಗಳು ಮತ್ತು ನಗರ ಸ್ಥಿತಿಸ್ಥಾಪಕತ್ವದ ಮೇಲೆ ಕೇಂದ್ರೀಕರಿಸಿ ಭಾರತವು 2016ರಲ್ಲಿ ವಿಶಾಖಪಟ್ಟಣದಲ್ಲಿ ವೇದಿಕೆಯನ್ನು ಮತ್ತೆ ಆಯೋಜಿಸಿತ್ತು. ಜಾಗತಿಕ ಸಾಂಕ್ರಾಮಿಕ ರೋಗದ ನಂತರ ನಗರಗಳ ಶೀಘ್ರ ಚೇತರಿಕೆಗಾಗಿ ಭಾರತವು 2021ರಲ್ಲಿ ಮತ್ತೆ ವೇದಿಕೆಯನ್ನು ವರ್ಚುವಲ್ ಆಗಿ ಆಯೋಜಿಸಿತ್ತು.
2026ರಲ್ಲಿ 13ನೇಬ್ರಿಕ್ಸ್ ನಗರೀಕರಣ ವೇದಿಕೆಯೊಂದಿಗೆ, ಭಾರತವು ನಾಲ್ಕನೇ ಬಾರಿಗೆ ಈ ವೇದಿಕೆಯನ್ನು ಆಯೋಜಿಸುತ್ತಿದೆ. ಪ್ರಾರಂಭದಿಂದಲೂ, ವೇದಿಕೆಯು ಬ್ರಿಕ್ಸ್ ದೇಶಗಳಿಗೆ ನಗರ ನೀತಿ ಅನುಭವವನ್ನು ವಿನಿಮಯ ಮಾಡಿಕೊಳ್ಳಲು, ಹಂಚಿಕೆಯ ಆದ್ಯತೆಗಳನ್ನು ಗುರುತಿಸಲು ಮತ್ತು ವಿಶಾಲವಾದ ಬ್ರಿಕ್ಸ್ ಪ್ರಕ್ರಿಯೆಗೆ ನಗರ ಇನ್‌ಪುಟ್‌ಗಳನ್ನು ಕೊಡುಗೆ ನೀಡಲು ಮೀಸಲಾದ ಪ್ರಮುಖ ಕಾರ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ.
ಬ್ರಿಕ್ಸ್ ರಾಷ್ಟ್ರಗಳಲ್ಲಿ ಹಂಚಿಕೆಯ ನಗರದ ಆದ್ಯತೆಗಳು
ಅನೇಕ ಬ್ರಿಕ್ಸ್ ರಾಷ್ಟ್ರಗಳು ವಸತಿ, ಚಲನಶೀಲತೆ, ಹವಾಮಾನ ಅಪಾಯ, ಪುರಸಭೆಯ ಸಾಮರ್ಥ್ಯ, ನಗರ ಹಣಕಾಸು ಮತ್ತು ಸೇವಾ ವಿತರಣೆಯ ಸಾಮಾನ್ಯ ಸವಾಲುಗಳನ್ನು ಎದುರಿಸುವ ಸಮಯದಲ್ಲಿ ತ್ವರಿತ ನಾಗರೀಕ ಬೆಳವಣಿಗೆಯ ಅನುಭವದಿಂದ ಬ್ರಿಕ್ಸ್ ನಗರೀಕರಣ ವೇದಿಕೆಯು ಒಂದು ಪ್ರಮುಖ ಘಟ್ಟದಲ್ಲಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯ ಪಟ್ಟರು.

ಈ ವೇದಿಕೆಯನ್ನು ಕೆಲವು ವಿಶಾಲ ಆದ್ಯತೆಗಳ ಮೇಲೆ ಕೇಂದ್ರೀಕರಿಸಲಾಗಿದ್ದು, ಅವುಗಳೆಂದರೆ: ಅಂತರ್ಗತ ನಗರ ಅಭಿವೃದ್ಧಿ, ಹವಾಮಾನ ಮತ್ತು ವಿಪತ್ತು-ನಿರೋಧಕ ಮೂಲಸೌಕರ್ಯ, ಬಲವಾದ ಪುರಸಭೆಯ ಸಂಸ್ಥೆಗಳು ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಡಿಜಿಟಲ್ ನಾವೀನ್ಯತೆ.
ನಿಗದಿತ ಕಾರ್ಯಕ್ರಮ ಮತ್ತು ನಿರೀಕ್ಷಿತ ಫಲಿತಾಂಶಗಳು
ಎರಡು ದಿನಗಳ ಕಾಲ ನಡೆಯಲಿರುವ 13ನೇ ಬ್ರಿಕ್ಸ್ ನಗರೀಕರಣ ವೇದಿಕೆಯು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಚಿವರು, ಹಿರಿಯ ಅಧಿಕಾರಿಗಳು, ನೀತಿ ನಿರೂಪಕರು, ನಗರ ವೃತ್ತಿಪರರು ಮತ್ತು ತಜ್ಞರನ್ನು ಒಳಗೊಂಡಿದೆ. ಎಲ್ಲಾ ಹನ್ನೊಂದು ಬ್ರಿಕ್ಸ್ ಸದಸ್ಯ ರಾಷ್ಟ್ರಗಳನ್ನು ಸಚಿವ ಮಟ್ಟದ ನಿಯೋಗಗಳೊಂದಿಗೆ ಭಾಗವಹಿಸಲು ಆಹ್ವಾನಿಸಲಾಗಿದೆ.
ವೇದಿಕೆಯ ಮೊದಲ ದಿನವು ಉದ್ಘಾಟನಾ ಅಧಿವೇಶನ ಮತ್ತು ಹಂಚಿಕೆಯ ಬ್ರಿಕ್ಸ್ ನಗರ ಆದ್ಯತೆಗಳ ಕುರಿತು ಉನ್ನತ ಮಟ್ಟದ ಸಮಗ್ರ ಸಭೆಯನ್ನು ಒಳಗೊಂಡಿರುತ್ತದೆ. ಅಂದು ಭಾರತದ ನಗರ ಪರಿವರ್ತನೆಯ ಅನುಭವವನ್ನು ಪಡೆಯಲು ಪ್ರತಿನಿಧಿಗಳನ್ನು ನವದೆಹಲಿಯ ಆಯ್ದ ಸ್ಥಳಗಳಿಗೆ ಕ್ಷೇತ್ರ ಭೇಟಿಗೆ ಕರೆದೊಯ್ಯಲಾಗುವುದು.
ಎರಡನೇ ದಿನವು ವೇದಿಕೆಯು ಆದ್ಯತೆಯ ಕ್ಷೇತ್ರಗಳ ಕುರಿತಾಗಿ ವಿಷಯಾಧಾರಿತ ಚರ್ಚೆಗಳಲ್ಲಿ ಪಾಲ್ಗೊಳ್ಳಲಿದೆ. ಸದಸ್ಯ ರಾಷ್ಟ್ರಗಳು ತಮ್ಮ ದೇಶದ ಅನುಭವಗಳನ್ನು ಹಂಚಿಕೊಳ್ಳಲು ಈ ಚರ್ಚೆಗಳಲ್ಲಿ ಭಾಗವಹಿಸುತ್ತವೆ. ಇದರ ಜೊತೆಗೆ, ಎಲ್ಲಾ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಚರ್ಚೆಗಳು ಸಹ ನಡೆಯಲಿವೆ.
ನಗರೀಕರಣ ಸವಾಲುಗಳ ಕುರಿತಾಗಿ ಹಂಚಿಕೆಯ ನೀತಿ ಪರಿಹಾರಗಳನ್ನು ಬೆಂಬಲಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ, ಸ್ಥಿತಿಸ್ಥಾಪಕತ್ವ ಮತ್ತು ಜನ-ಕೇಂದ್ರಿತ ನಗರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಬ್ರಿಕ್ಸ್ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯಿದೆ.
ಭಾರತವು ಬ್ರಿಕ್ಸ್ ಕುಟುಂಬ ಸದಸ್ಯ ಪ್ರತಿನಿಧಿಗಳನ್ನು ನವದೆಹಲಿಗೆ ಸ್ವಾಗತಿಸಲು ಮತ್ತು ಜನರಿಗೆ ಅನುಕೂಲಕರವಾದ ನಗರಗಳ ಕುರಿತಾಗಿ ಪರಸ್ಪರ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುವುದಾಗಿ ಕೇಂದ್ರ ಸಚಿವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2267719)
ವಿಸಿಟರ್ ಕೌಂಟರ್ : 19