ರೈಲ್ವೇ ಸಚಿವಾಲಯ
azadi ka amrit mahotsav

ಕಾಜಿಪೇಟೆ ರೈಲು ಉತ್ಪಾದನಾ ಘಟಕವು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಇಂಟರ್  ಸಿಟಿ ರೈಲುಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ: ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್

ಪ್ರಕಟಣಾ ದಿನಾಂಕ: 28 MAY 2026 3:59PM by PIB Bengaluru

ಭಾರತೀಯ ರೈಲ್ವೆಯ ಕಾಜಿಪೇಟೆ ರೈಲು ಉತ್ಪಾದನಾ ಘಟಕವು ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಬಹುಮುಖ ಸಾಮರ್ಥ್ಯದ ರೈಲ್ವೆ ರೋಲಿಂಗ್ ಸ್ಟಾಕ್ ಉತ್ಪಾದನಾ ಘಟಕವಾಗಿದೆ. ಆರಂಭದಲ್ಲಿ, ಕಾಜಿಪೇಟೆಯು ಮುಂದಿನ 5 ವರ್ಷಗಳಲ್ಲಿ 200 ಇಂಟರ್ ಸಿಟಿ ರೈಲುಗಳನ್ನು ಉತ್ಪಾದಿಸಲಿದೆ. ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ರವನೀತ್ ಸಿಂಗ್ ಬಿಟ್ಟು ಅವರು ಇಂದು ಹಿರಿಯ ಅಧಿಕಾರಿಗಳೊಂದಿಗೆ ಕಾಜಿಪೇಟೆ ರೈಲು ಉತ್ಪಾದನಾ ಘಟಕವನ್ನು ಕಾರ್ಯಗತಗೊಳಿಸುವ ಯೋಜನೆಗಳನ್ನು ಪರಿಶೀಲಿಸಿದರು

ಈ ರೈಲುಗಳನ್ನು ಕಡಿಮೆ ದೂರದ ಪ್ರಯಾಣಕ್ಕಾಗಿ ದೇಶಾದ್ಯಂತ ನಿಯೋಜಿಸಲಾಗುವುದು. ಇವುಗಳು ಹೆಚ್ಚು ನಿಲುಗಡೆಗಳನ್ನು ಹೊಂದಿರುತ್ತವೆ. ಈ ರೈಲುಗಳು ಸಾಮಾನ್ಯವಾಗಿ ಸುಮಾರು 300 ಕಿ.ಮೀ.ವರೆಗೆ ಸಂಚರಿಸಲಿವೆ. ನಾಗರಿಕರು ಪಟ್ಟಣಗಳು ಮತ್ತು ನಗರಗಳ ನಡುವೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರತಿ ಟ್ರಿಪ್ ನಲ್ಲಿಯೂ ಅನೇಕ ನಿಲುಗಡೆಗಳನ್ನು ನೀಡಲಾಗುತ್ತದೆ. ಪಕ್ಕದ ಪಟ್ಟಣಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹೋಗುವ ವಿದ್ಯಾರ್ಥಿಗಳಾಗಿರಲಿ ಅಥವಾ ತಮ್ಮ ಆರೋಗ್ಯ ಮತ್ತು ಕೆಲಸದ ಅಗತ್ಯಗಳಿಗಾಗಿ ಪ್ರಯಾಣಿಸುವ ಸಾಮಾನ್ಯ ಜನರಾಗಿರಲಿ, ಎಲ್ಲರಿಗೂ ಇದು ಅನುಕೂಲವಾಗಲಿದೆ.

ಈ ರೈಲುಗಳು ಜನರಿಗೆ ನಗರಗಳ ನಡುವಿನ ಪ್ರಯಾಣಕ್ಕೆ ಹೊಸ ಮತ್ತು ಕೈಗೆಟುಕುವ ಬೆಲೆಯ ಆಯ್ಕೆಯನ್ನು ನೀಡಲಿವೆ. ಈ ಇಂಟರ್ ಸಿಟಿ ರೈಲುಗಳು ಭಾರತದಾದ್ಯಂತ ಅಕ್ಕಪಕ್ಕದ ಪಟ್ಟಣಗಳನ್ನು ಸಂಪರ್ಕಿಸುವ ಶಟಲ್ ಸೇವೆಗಳಂತೆ ಕಾರ್ಯನಿರ್ವಹಿಸಲಿವೆ. ಈ ರೈಲುಗಳ ಉತ್ಪಾದನೆಯೊಂದಿಗೆ, ಸ್ಥಳೀಯ ರಸ್ತೆ ಸಂಚಾರದ  ಹೆಚ್ಚಿನ ಪ್ರಮಾಣವು ರೈಲ್ವೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

ಈ ಇಂಟರ್ ಸಿಟಿ ರೈಲುಗಳು ಸ್ವಯಂಚಾಲಿತ ಬಾಗಿಲು ಮುಚ್ಚುವಿಕೆ  ಅತ್ಯುತ್ತಮ ಗಾಳಿಯಾಡುವಿಕೆ ಮತ್ತು 20 ಬೋಗಿಗಳ ವಿನ್ಯಾಸದೊಂದಿಗೆ ಸುರಕ್ಷಿತ ಬೋಗಿ ವಿನ್ಯಾಸದಂತಹ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿವೆ. ಪ್ರತಿ ಬೋಗಿಯಲ್ಲೂ ಎರಡು ಶೌಚಾಲಯಗಳಿದ್ದು, ಇವು ಬೋಗಿಯ ಎರಡೂ ತುದಿಗಳಲ್ಲಿ ತಲಾ ಒಂದರಂತೆ ಇರಲಿವೆ.

ಇದರ ಜೊತೆಗೆ, ಈ ಇಂಟರ್ ಸಿಟಿ ರೈಲುಗಳು ಆಧುನಿಕ ಜರ್ಕ್-ಫ್ರೀ ಸಂಯೋಜಕಗಳು ಮತ್ತು ಬೋಗಿಗಳನ್ನು ಹೊಂದಿರಲಿವೆ. ಈ ರೈಲುಗಳನ್ನು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗುವುದು.

ಈ ರೈಲುಗಳು ರೀಜೆನೆರೇಟಿವ್ ಬ್ರೇಕಿಂಗ್  ವ್ಯವಸ್ಥೆಯನ್ನು ಸಹ ಹೊಂದಿರಲಿವೆ. ಅಂದರೆ ರೈಲು ಬ್ರೇಕ್ ಹಾಕಿದಾಗ, ಅದು ವಿದ್ಯುತ್ ಉತ್ಪಾದಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪುನರುತ್ಪಾದಿತ ವಿದ್ಯುತ್ ಅನ್ನು ಮತ್ತೆ ಗ್ರಿಡ್ ಗೆ ಪೂರೈಸುತ್ತದೆ. ಆದ್ದರಿಂದ, ಇದು ಇಂಧನ ದಕ್ಷತೆಯನ್ನು ಹೊಂದಿದೆ. ಇದು ಹಸಿರು ಸಾರಿಗೆ ವಿಧಾನವಾಗಿದ್ದು, ರಸ್ತೆ ಸಾರಿಗೆಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿರುತ್ತದೆ.

ರೈಲ್ವೆಯಿಂದ ಇಂತಹ ಬೃಹತ್ ರೈಲುಗಳ ಸೇರ್ಪಡೆಯು ದೇಶಾದ್ಯಂತ ಹಸಿರು ಮತ್ತು ಸ್ವಚ್ಛ ಸಾರಿಗೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

 

*****

 


(ಪ್ರಕಟಣೆ ಐ.ಡಿ.: 2266351) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Gujarati , Telugu