ಸಂವಹನ ಸಚಿವಾಲಯ
azadi ka amrit mahotsav

ಸಾರ್ವಜನಿಕ ವೈ-ಫೈ ಅನ್ನು ಸರಳ ಮತ್ತು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಪಿಎಂ-ವಾಣಿ (PM-WANI) ಗೆ ಪ್ರಮುಖ ನಾಗರಿಕ ಸ್ನೇಹಿ ಉನ್ನತೀಕರಣ


ಕ್ಯೂಆರ್ ಆಧಾರಿತ ಲ್ಯಾಪ್ಟಾಪ್ಗಳಿಗಾಗಿ ಲಾಗಿನ್, ಅವಶ್ಯಕತೆ ತಕ್ಕಂತೆ ಅಲ್ಪಾವಧಿಯ ಪ್ಲಾನ್ ಗಳು ಮತ್ತು ಏಕರೂಪದ ಪಿಎಂ-ವಾಣಿ ಹಾಟ್ ಸ್ಪಾಟ್ ಹೆಸರುಗಳನ್ನು  ಪರಿಚಯಿಸಲಾಗಿದೆ

ಸಮಗ್ರ ಡಿಜಿಟಲ್ ಸಂಪರ್ಕವನ್ನು ಸಕ್ರಿಯಗೊಳಿಸಲು ಪಿಎಂ-ವಾಣಿ ಪರಿಸರ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ

ಪ್ರಕಟಣಾ ದಿನಾಂಕ: 26 MAY 2026 12:05PM by PIB Bengaluru

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ನಾಗರಿಕರಿಗೆ ಅಂತರ್ಜಾಲದ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ದೂರಸಂಪರ್ಕ ಇಲಾಖೆಯು ಪಿಎಂ-ವಾಣಿ  (PM-WANI ) (ಪ್ರೈಮ್ ಮಿನಿಸ್ಟರ್ಸ್ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಚೌಕಟ್ಟಿನ ಅಡಿಯಲ್ಲಿ ಬಳಕೆದಾರ-ಸ್ನೇಹಿ ಸುಧಾರಣೆಗಳನ್ನು ಪರಿಚಯಿಸಿದೆ.

ಹೊಸ ಕ್ರಮಗಳು ಈ ಕೆಳಗಿನಂತಿವೆ:

  • ಲ್ಯಾಪ್ ಟಾಪ್ ಗಳು  ಮತ್ತು ಇತರ ಸಂಬಂಧಿಸಿದ ಜೊತೆಯಿರುವ ಸಾಧನಗಳಿಗಾಗಿ ಕ್ಯೂಆರ್  ಆಧಾರಿತ ದೃಢೀಕರಣ
  • 15, 30 ಮತ್ತು 60 ನಿಮಿಷಗಳ ಅವಶ್ಯಕತೆ ತಕ್ಕಂತೆ  ಅಲ್ಪಾವಧಿಯ ವೈ-ಫೈ ಪ್ಲಾನ್ ಗಳ ಪರಿಚಯ
  • ಸುಲಭ ಗುರುತಿಸುವಿಕೆ ಮತ್ತು ಹೆಚ್ಚಿನ ವಿಶ್ವಾಸಾರ್ಹತೆಗಾಗಿ ಪಿಎಂ-ವಾಣಿ ಹಾಟ್ ಸ್ಪಾಟ್ ಹೆಸರುಗಳ (SSIDs) ಪ್ರಮಾಣೀಕರಣ

ಈ ಸುಧಾರಣೆಗಳನ್ನು 22 ಮೇ 2026 ರ ದಿನಾಂಕದ ದೂರಸಂಪರ್ಕ ಇಲಾಖೆಯ  ಸುತ್ತೋಲೆ ಸಂಖ್ಯೆ 1/PM-WANI/2026 ಮತ್ತು 2/PM-WANI/2026 ರ ಮೂಲಕ ಪರಿಚಯಿಸಲಾಗಿದೆ.

ಎಲ್ಲಾ ಪಿಎಂ-ವಾಣಿ ಪಾಲುದಾರರಿಗೆ ಸುತ್ತೋಲೆಗಳನ್ನು ಹೊರಡಿಸಿದ ದಿನಾಂಕದಿಂದ ಎಂಟು ವಾರಗಳ ಒಳಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಸೂಚಿಸಲಾಗಿದೆ, ಇದರಿಂದಾಗಿ ಜುಲೈ 2026 ರ ವೇಳೆಗೆ ಈ ಹೊಸ ಬಳಕೆದಾರ-ಸ್ನೇಹಿ ವೈಶಿಷ್ಟ್ಯಗಳು ಇಡೀ ವ್ಯವಸ್ಥೆಯಾದ್ಯಂತ ಕಾರ್ಯರೂಪಕ್ಕೆ ಬರಲಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ ಸಿಗುವ ಮತ್ತು ಕೈಗೆಟುಕುವ ಡಿಜಿಟಲ್ ಸಂಪರ್ಕವನ್ನಾಗಿ ಪರಿವರ್ತಿಸಲು ಸರ್ಕಾರವು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ಸುಧಾರಣೆಗಳನ್ನು ತರಲಾಗಿದೆ.

ಕೇಂದ್ರ ಸಂವಹನ ಮತ್ತು ಈಶಾನ್ಯ ವಲಯದ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಾಯಕತ್ವದಲ್ಲಿ, ಪಿಎಂ-ವಾಣಿ ಪರಿಸರ ವ್ಯವಸ್ಥೆಯು ಲಭ್ಯತೆ, ಪರಸ್ಪರ ಕಾರ್ಯಸಾಧ್ಯತೆ, ಬಳಸುವುದರಲ್ಲಿ ಸುಲಭವಾಗಿರುವುದು ಮತ್ತು ನಾಗರಿಕರು ಬಳಸುವುದನ್ನು ಸುಧಾರಿಸುವುದರ ಮೇಲೆ ಕೇಂದ್ರೀಕೃತವಾದ ಸಮಗ್ರ ಬದಲಾವಣೆಗೆ ಸಾಕ್ಷಿಯಾಗುತ್ತಿದೆ.

ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಇತ್ತೀಚೆಗೆ ಪಿಎಂ-ವಾಣಿ ಅಡಿಯಲ್ಲಿ ಅನುಷ್ಠಾನವನ್ನು ತೀವ್ರಗೊಳಿಸಲು ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸಲು ಇಲಾಖೆಯ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ವ್ಯಾಪಕ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ.

ಸುಧಾರಣೆಗಳ ಕುರಿತು ಮಾತನಾಡಿದ ಡಾ. ಪೆಮ್ಮಸಾನಿ, "ಪಿಎಂ-ವಾಣಿ ಸಾರ್ವತ್ರಿಕ ಸಾರ್ವಜನಿಕ ವೈ-ಫೈ ಸುಲಭಲಭ್ಯತೆಗಾಗಿ ನಮ್ಮ ವೇದಿಕೆಯಾಗಿದೆ — ಮತ್ತು ನಾವು ಅದನ್ನು ಬಳಸುವುದನ್ನು ಸುಲಭಗೊಳಿಸುತ್ತಿದ್ದೇವೆ. ಕ್ಯೂಆರ್-ಆಧಾರಿತ ಲಾಗಿನ್ ಈಗ ನಿಮ್ಮ ಫೋನ್ ನಲ್ಲಿ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಲ್ಯಾಪ್ ಟಾಪ್ ಅನ್ನು ಸರಳವಾಗಿ ಸಂಪರ್ಕಿಸಲು ಅನುಮತಿಸುತ್ತದೆ. ಅಲ್ಪಾವಧಿಗೆ ಇಂಟರ್ನೆಟ್ ಪ್ರವೇಶದ ಅಗತ್ಯವಿರುವ ಬಳಕೆದಾರರಿಗಾಗಿ 15, 30 ಮತ್ತು 60 ನಿಮಿಷಗಳ ಅಲ್ಪಾವಧಿಯ ಪ್ಲಾನ್ ಗಳನ್ನು ನೀಡಲು ನಾವು ಹಾಟ್ ಸ್ಪಾಟ್ ಆಪರೇಟರ್ಗಳಿಗೆ ಸಲಹೆ ನೀಡಿದ್ದೇವೆ," ಎಂದು ಹೇಳಿದರು.

ಇಂದಿನ ಡಿಜಿಟಲ್ ಯುಗದಲ್ಲಿ, ದೇಶಾದ್ಯಂತ ವಿದ್ಯಾರ್ಥಿಗಳು, ಪ್ರವಾಸಿಗರು, ಪ್ರಯಾಣಿಕರು, ವೃತ್ತಿಪರರು ಮತ್ತು ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವ ಪ್ರಮುಖ ಸಾರ್ವಜನಿಕ ಸೌಲಭ್ಯವಾಗಿ ಸಾರ್ವಜನಿಕ ವೈ-ಫೈ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.

ಕ್ಯೂಆರ್ ದೃಢೀಕರಣದ ಮೂಲಕ ಸರಳೀಕೃತ ಲ್ಯಾಪ್ ಟಾಪ್ ಸಂಪರ್ಕ

ದೂರಸಂಪರ್ಕ ಇಲಾಖೆಯು ಈಗ ಪಿಎಂ-ವಾಣಿ ಪ್ರವೇಶವನ್ನು ಸುಲಭಗೊಳಿಸಲು ಲ್ಯಾಪ್ ಟಾಪ್ ಗಳಂತಹ ಸಾಧನಗಳಿಗಾಗಿ ಕ್ಯೂಆರ್-ಆಧಾರಿತ ದೃಢೀಕರಣವನ್ನು ಅನುಮತಿಸುತ್ತದೆ. ಬಳಕೆದಾರರು ಲಾಗಿನ್ ಪುಟದಲ್ಲಿರುವ ಕ್ಯೂಆರ್ ಕೋಡ್ ಅನ್ನು ದೃಢೀಕೃತ ಸ್ಮಾರ್ಟ್ಫೋನ್ ಆ್ಯಪ್ ಬಳಸಿ ಸ್ಕ್ಯಾನ್ ಮಾಡುವ ಮೂಲಕ ಸಂಪರ್ಕಿಸಬಹುದು, ಇದು ಅಡೆತಡೆಗಳನ್ನು ಕಡಿಮೆ ಮಾಡಿ ವೇಗದ ಮತ್ತು ಸುರಕ್ಷಿತ ಅನುಭವವನ್ನು ನೀಡುತ್ತದೆ.

ಅವಶ್ಯಕತೆಗೆ ತಕ್ಕಂತೆ ಅಲ್ಪಾವಧಿಯ ಪ್ರವೇಶ ಪ್ಲಾನ್ ಗಳು

ಸಾರಿಗೆ ಕೇಂದ್ರಗಳು ಮತ್ತು ಮಾಲ್ ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಬಳಕೆದಾರರಿಗೆ ಸಹಾಯ ಮಾಡಲು, ದೂರಸಂಪರ್ಕ ಇಲಾಖೆಯು ಆಪರೇಟರ್ ಗಳಿಗೆ ಸ್ಯಾಚೆಟ್ ಮಾದರಿಯ ಯೋಜನೆಗಳನ್ನು ನೀಡಲು ಸಲಹೆ ನೀಡಿದೆ:

  • 15, 30, ಮತ್ತು 60 ನಿಮಿಷಗಳು

ಈ ಯೋಜನೆಗಳು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಕೈಗೆಟುಕುವಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಆಪರೇಟರ್ ಆದಾಯ ಮತ್ತು ಹಾಟ್ ಸ್ಪಾಟ್ ಬಳಕೆಯನ್ನು ಹೆಚ್ಚಿಸುತ್ತವೆ.

ಪ್ರಮಾಣೀಕೃತ ಹಾಟ್ ಸ್ಪಾಟ್ ಗುರುತಿಸುವಿಕೆ

ಬಳಕೆದಾರರು ಅಧಿಕೃತ ನೆಟ್ವರ್ಕ್ಗಳನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡಲು ಎಸ್ಎಸ್ಐಡಿ (SSID) ಹೆಸರಿಡುವುದನ್ನು ಈಗ ಪಿಎಂವಾಣಿ (PMWANI) ಬ್ರ್ಯಾಂಡಿಂಗ್ನೊಂದಿಗೆ ಪ್ರಮಾಣೀಕರಿಸಲಾಗಿದೆ. ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾದ ಪಿಎಂ-ವಾಣಿ, ಪಿಡಿಒಗಳು , ಪಿಡಿಒಎಗಳು  ಮತ್ತು ಆಪ್ ಪೂರೈಕೆದಾರರ ವಿತರಣಾ ವ್ಯವಸ್ಥೆಯ ಮೂಲಕ ವಿಸ್ತರಿಸಬಹುದಾದ, ಕೈಗೆಟುಕುವ ಅಂತರಜಾಲವನ್ನು ಒದಗಿಸುತ್ತದೆ. ಈ ಸುಧಾರಣೆಗಳು ದೇಶಾದ್ಯಂತ ಸಾರ್ವಜನಿಕ ವೈ-ಫೈ ಮೂಲಸೌಕರ್ಯವನ್ನು ಅಳವಡಿಸಿಕೊಳ್ಳಲು ಚಾಲನೆ ನೀಡುವ ಗುರಿಯನ್ನು ಹೊಂದಿವೆ.

 

*****


(ಪ್ರಕಟಣೆ ಐ.ಡಿ.: 2265354) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Bengali , Bengali-TR , Assamese , Tamil , Telugu