ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರ ಭಾರತ ಭೇಟಿಯ ಫಲಿತಾಂಶಗಳ ಪಟ್ಟಿ

प्रविष्टि तिथि: 22 MAY 2026 4:11PM by PIB Bengaluru

ತಿಳುವಳಿಕೆ ಒಪ್ಪಂದಗಳು / ಒಪ್ಪಂದಗಳು :

ಕ್ರ. ಸಂ.

ತಿಳುವಳಿಕೆ ಒಪ್ಪಂದ / ಒಪ್ಪಂದ

1.

ಭಯೋತ್ಪಾದನೆ ನಿಗ್ರಹಕ್ಕಾಗಿ ಜಂಟಿ ಕಾರ್ಯ ಗುಂಪು ಸ್ಥಾಪಿಸುವ ತಿಳುವಳಿಕೆ ಒಪ್ಪಂದ

2.

ಭಾರತದ ಸುಷ್ಮಾ ಸ್ವರಾಜ್ ವಿದೇಶಾಂಗ ಸೇವೆಯ ಸಂಸ್ಥೆ ಮತ್ತು ಸೈಪ್ರಸ್‌ನ ರಾಜತಾಂತ್ರಿಕ ಅಕಾಡೆಮಿ ನಡುವೆ ರಾಜತಾಂತ್ರಿಕ ತರಬೇತಿ ಕ್ಷೇತ್ರದಲ್ಲಿ ತಿಳುವಳಿಕೆ ಒಪ್ಪಂದ

3.

ಸೈಪ್ರಸ್‌ನ ಸಂಶೋಧನೆ, ನಾವೀನ್ಯತೆ ಮತ್ತು ಡಿಜಿಟಲ್ ನೀತಿ ಉಪ ಸಚಿವಾಲಯ ಮತ್ತು ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ನಾವೀನ್ಯತೆ ಮತ್ತು ತಂತ್ರಜ್ಞಾನ ಕುರಿತಂತೆ ತಿಳುವಳಿಕೆ ಒಪ್ಪಂದ

4.

ಸೈಪ್ರಸ್‌ನ ಲಾರ್ನಾಕಾ ಜಂಟಿ ರಕ್ಷಣಾ ಸಮನ್ವಯ ಕೇಂದ್ರ ಮತ್ತು ಭಾರತದ ರಕ್ಷಣಾ ಸಚಿವಾಲಯದ ನಡುವೆ ಶೋಧ ಮತ್ತು ರಕ್ಷಣಾ (ಎಸ್.ಎ.ಆರ್.) ವಿಷಯಗಳ ಕುರಿತು ಅಧಿಕೃತ ಸಮನ್ವಯ ಮತ್ತು ಸಹಕಾರ ಸ್ಥಾಪನೆಗೆ ತಾಂತ್ರಿಕ ವ್ಯವಸ್ಥೆ

5.

ಭಾರತದ ಶಿಕ್ಷಣ ಸಚಿವಾಲಯ ಮತ್ತು ಸೈಪ್ರಸ್ ಸರ್ಕಾರದ ಶಿಕ್ಷಣ, ಕ್ರೀಡೆ ಮತ್ತು ಯುವಜನ ಸಚಿವಾಲಯದ ನಡುವೆ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ

6.

ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ಸೈಪ್ರಸ್‌ನ ಉಪ ಸಂಸ್ಕೃತಿ ಸಚಿವಾಲಯದ ನಡುವೆ 2026-2030 ನೇ ಸಾಲಿಗೆ ಸಾಂಸ್ಕೃತಿಕ ಸಹಕಾರ ಕುರಿತು ತಿಳುವಳಿಕೆ ಒಪ್ಪಂದ

ಪ್ರಕಟಣೆಗಳು:

ಕ್ರ. ಸಂ.

ಶೀರ್ಷಿಕೆ

1.

ವ್ಯೂಹಾತ್ಮಕ ಪಾಲುದಾರಿಕೆಗೆ ದ್ವಿಪಕ್ಷೀಯ ಸಂಬಂಧಗಳ ಉನ್ನತಿ

2.

2026-2031ನೇ ಸಾಲಿಗೆ ಭಾರತ ಮತ್ತು ಸೈಪ್ರಸ್ ನಡುವಿನ ರಕ್ಷಣಾ ಸಹಕಾರಕ್ಕಾಗಿ ಮಾರ್ಗಸೂಚಿ

3.

ಭಾರತ ಮತ್ತು ಸೈಪ್ರಸ್ ನಡುವೆ ಸೈಬರ್ ಭದ್ರತೆ ಮಾತುಕತೆ ಸ್ಥಾಪನೆ

4.

ಭಾರತ ಮತ್ತು ಸೈಪ್ರಸ್ ನಡುವೆ ಕಾನ್ಸುಲರ್ ಮಾತುಕತೆ ಸ್ಥಾಪನೆ

5.

'ವ್ಯಾಪಾರ, ಸಂಪರ್ಕ ಮತ್ತು ಕಡಲ ಸಾರಿಗೆ' ಆಧಾರಸ್ತಂಭದ ಅಡಿಯಲ್ಲಿ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಸೈಪ್ರಸ್ ಸೇರ್ಪಡೆಯಾಗಿದೆ

6.

ಸೈಪ್ರಸ್ ಗಣರಾಜ್ಯಕ್ಕೆ ಸಹಯೋಗ್ ಹಿತ ಮತ್ತು ಮೈತ್ರಿ (ಬಿಎಚ್ಐಎಸ್ಎಂ - BHISM) ಕ್ಯೂಬ್‌ಗಾಗಿ ಭಾರತ್ ಹೆಲ್ತ್ ಇನಿಶಿಯೇಟಿವ್ ಉಡುಗೊರೆ

7.

2026ರ ಮೇ 18ರಂದು ಮೊಟ್ಟಮೊದಲ ಭಾರತ-ಸೈಪ್ರಸ್ ಬಾಹ್ಯಾಕಾಶ ದಿನದ ಆಚರಣೆ

8.

ಮುಂಬೈನಲ್ಲಿ ಸೈಪ್ರಸ್ ವ್ಯಾಪಾರ ಕೇಂದ್ರ ತೆರೆಯುವ ಸೈಪ್ರಸ್ ಕಡೆಯಿಂದ ಉದ್ದೇಶದ ಘೋಷಣೆ

 

*****


(रिलीज़ आईडी: 2264215) आगंतुक पटल : 47
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam