ಪ್ರಧಾನ ಮಂತ್ರಿಯವರ ಕಛೇರಿ
ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ರಾಬ್ ಜೆಟ್ಟನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ
ಪ್ರಕಟಣಾ ದಿನಾಂಕ:
16 MAY 2026 11:58PM by PIB Bengaluru
ಸನ್ಮಾನ್ಯರೆ,
ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸುಮಾರು 1 ದಶಕದ ನಂತರ ನೆದರ್‌ಲ್ಯಾಂಡ್ಸ್ ಗೆ ಭೇಟಿ ನೀಡಿರುವುದು ನನಗೆ ಸಂತೋಷ ತಂದಿದೆ. ಕಳೆದ 10 ವರ್ಷಗಳಲ್ಲಿ ಭಾರತ- ನೆದರ್‌ಲ್ಯಾಂಡ್ಸ್ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
ಸನ್ಮಾನ್ಯರೆ,
ನಾವು ನೆದರ್‌ಲ್ಯಾಂಡ್ಸ್ ಅನ್ನು ಭಾರತದ ಪ್ರಮುಖ ಪಾಲುದಾರರಲ್ಲಿ ಒಬ್ಬರೆಂದು ಪರಿಗಣಿಸುತ್ತೇವೆ. ನೆದರ್‌ಲ್ಯಾಂಡ್ಸ್ ಭಾರತದ 5 ಪ್ರಮುಖ ಹೂಡಿಕೆದಾರರಲ್ಲಿ ಒಂದಾಗಿದೆ. ನಮ್ಮ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ಇರುವ ಸಂಬಂಧಗಳು ಸಹ ಬಹಳ ಆಳವಾದವು. ಪ್ರಜಾಪ್ರಭುತ್ವ ಮೌಲ್ಯಗಳು, ಮಾರುಕಟ್ಟೆ ಆರ್ಥಿಕತೆ ಮತ್ತು ಜವಾಬ್ದಾರಿಯುತ ನಡವಳಿಕೆಯು ನಮ್ಮ ಹಂಚಿಕೆಯ ದೃಷ್ಟಿಕೋನದ ಭಾಗವಾಗಿದೆ. ನೀರು, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರವು ನಮ್ಮ ಜನರ ಜೀವನವನ್ನು ಸುಧಾರಿಸುತ್ತಿದೆ. ಈ ಬೆಳೆಯುತ್ತಿರುವ ಸಹಯೋಗದ ದೃಷ್ಟಿಯಿಂದ 2023ರಲ್ಲಿ ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ನಾವು ನೆದರ್‌ಲ್ಯಾಂಡ್ಸ್ ಅನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಿದ್ದೇವೆ. ಫೆಬ್ರವರಿಯಲ್ಲಿ ನೆದರ್‌ಲ್ಯಾಂಡ್ಸ್‌ನ ಮಾಜಿ ಪ್ರಧಾನ ಮಂತ್ರಿಗಳು ಭಾರತದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ.
ಸನ್ಮಾನ್ಯರೆ,
ಭಾರತವು ವಿಶ್ವದಲ್ಲೇ ಹೆಚ್ಚಿನ ಯುವಜನರನ್ನು ಹೊಂದಿರುವ ದೇಶ ಮತ್ತು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ನೀವು ನೆದರ್‌ಲ್ಯಾಂಡ್ಸ್ ಮತ್ತು ಯುರೋಪ್‌ನಲ್ಲಿ ಹೊಸ ಪೀಳಿಗೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದೀರಿ. ನಾವು ನೆದರ್‌ಲ್ಯಾಂಡ್ಸ್ ಪರಿಣತಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ವೇಗ ಮತ್ತು ಪ್ರಮಾಣದೊಂದಿಗೆ ಸಂಯೋಜಿಸಬೇಕು. ನಾವೀನ್ಯತೆ, ಹೂಡಿಕೆ, ಸುಸ್ಥಿರತೆ ಮತ್ತು ರಕ್ಷಣೆಯಲ್ಲಿ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಈ ಹಂಚಿಕೆಯ ದೃಷ್ಟಿಕೋನದೊಂದಿಗೆ, ಇಂದು ನಾವು ಭಾರತ- ನೆದರ್‌ಲ್ಯಾಂಡ್ಸ್ ಸಂಬಂಧಗಳನ್ನು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸುತ್ತಿದ್ದೇವೆ. ಮತ್ತೊಮ್ಮೆ, ನಿಮ್ಮ ಸೌಹಾರ್ದಯುತ ಸ್ವಾಗತಕ್ಕಾಗಿ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
*****
(ಪ್ರಕಟಣೆ ಐ.ಡಿ.: 2262729)
ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Telugu
,
Malayalam