MIFF banner

19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಂ ಐ ಎಫ್‌ ಎಫ್) ಪ್ರತಿನಿಧಿಗಳ ನೋಂದಣಿ ಆರಂಭ


ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಿತ್ರಗಳಿಗಾಗಿ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವವಾದ ಎಂ ಐ ಎಫ್‌ ಎಫ್, 2026ರ ಜೂನ್ 15 ರಿಂದ 21 ರವರೆಗೆ ಮುಂಬೈನಲ್ಲಿ ನಡೆಯಲಿದೆ

ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಎಂ ಐ ಎಫ್‌ ಎಫ್) 19ನೇ ಆವೃತ್ತಿಯು ಪ್ರತಿನಿಧಿಗಳ ನೋಂದಣಿಯನ್ನು ಆರಂಭಿಸಿದೆ. ಈ ಚಲನಚಿತ್ರೋತ್ಸವವು ಮುಂಬೈನ ಪೆಡ್ಡರ್ ರೋಡ್‌ ನಲ್ಲಿರುವ ಎನ್‌ ಎಫ್‌ ಡಿ ಸಿ ಆವರಣದಲ್ಲಿ 2026ರ ಜೂನ್ 15 ರಿಂದ 21 ರವರೆಗೆ ನಡೆಯಲಿದೆ. ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳಿಗಾಗಿ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವ ಎಂ ಐ ಎಫ್‌ ಎಫ್, ವಿಶ್ವದಾದ್ಯಂತದ ಚಲನಚಿತ್ರ ನಿರ್ಮಾಪಕರು, ಕಲಾವಿದರು, ಮಾಧ್ಯಮ ವೃತ್ತಿಪರರು ಮತ್ತು ಸಿನಿಮಾ ಪ್ರೇಮಿಗಳನ್ನು ಒಂದೆಡೆ ಸೇರಿಸುತ್ತದೆ.

ಭಾರತೀಯ ಚಲನಚಿತ್ರೋದ್ಯಮವು ವಿಷಯ ರಚನೆಯಲ್ಲಿ (content creation) ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವುದರಿಂದ, ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ಪ್ರಮುಖ ವೇದಿಕೆಯಾಗಿ ಮತ್ತು ಮೊದಲ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ.

ಎಂ ಎಫ್ಎಫ್ 2026 ಗಾಗಿ ಪ್ರತಿನಿಧಿಗಳ ನೋಂದಣಿ

ಎಂ ಐ ಎಫ್‌ ಎಫ್ ನ ಮುಂಬರುವ ಆವೃತ್ತಿಗಾಗಿ ಪ್ರತಿನಿಧಿಗಳ ನೋಂದಣಿಯು ಅಧಿಕೃತ ಚಲನಚಿತ್ರೋತ್ಸವ ಪೋರ್ಟಲ್ ಮೂಲಕ ಪ್ರಾರಂಭವಾಗಿದೆ. ಆಸಕ್ತ ಭಾಗವಹಿಸುವವರು ಅಧಿಕೃತ ಎಂ ಐ ಎಫ್‌ ಎಫ್ ವೆಬ್‌ಸೈಟ್: https://miff.in/en ಮೂಲಕ ಆನ್‌ಲೈನ್‌ ನಲ್ಲಿ ನೋಂದಾಯಿಸಿಕೊಳ್ಳಬಹುದು.

ನೋಂದಣಿಯನ್ನು ಪೂರ್ಣಗೊಳಿಸಲು, ಪ್ರತಿನಿಧಿಗಳು https://my.miff.in/dashboard/ ಇಲ್ಲಿಗೆ ಭೇಟಿ ನೀಡಬಹುದು.

ಹೊಸ ಬಳಕೆದಾರರು ಖಾತೆಯನ್ನು ರಚಿಸಬೇಕಾಗುತ್ತದೆ, ಆದರೆ ಅಸ್ತಿತ್ವದಲ್ಲಿರುವ ಬಳಕೆದಾರರು ನೇರವಾಗಿ ಸೈನ್-ಇನ್ ಆಗಬಹುದು. ಅರ್ಜಿದಾರರು ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು ಮತ್ತು 500/- ರೂ.ಗಳ ನೋಂದಣಿ ಶುಲ್ಕವನ್ನು ಪಾವತಿಸಬೇಕು.

ವಿದ್ಯಾರ್ಥಿಗಳ ನೋಂದಣಿ ಉಚಿತವಾಗಿರುತ್ತದೆ. ವಿದ್ಯಾರ್ಥಿ ವರ್ಗದ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ವಿವರಗಳು ಮತ್ತು ಪೂರಕ ದಾಖಲೆಗಳ ಪರಿಶೀಲನೆಯ ನಂತರ ಬ್ಯಾಕೆಂಡ್ ತಂಡವು ಪರಿಶೀಲಿಸಿ ಅನುಮೋದಿಸುತ್ತದೆ.

ಪ್ರತಿನಿಧಿ ನೋಂದಣಿಗೆ ಸಂಬಂಧಿಸಿದ ಯಾವುದೇ ಸಹಾಯಕ್ಕಾಗಿ, ಭಾಗವಹಿಸುವವರು registration@miff.in ನಲ್ಲಿ ಬೆಂಬಲ ತಂಡವನ್ನು ಸಂಪರ್ಕಿಸಬಹುದು. ತಾಂತ್ರಿಕ ಪ್ರಶ್ನೆಗಳಿಗಾಗಿ, ದಯವಿಟ್ಟು digitalteam@nfdcindia.com ಅನ್ನು ಸಂಪರ್ಕಿಸಿ.

19ನೇ ಎಂ ಎಫ್ಎಫ್ ಕುರಿತು

ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಎಂ ಐ ಎಫ್‌ ಎಫ್) ಒಂದು ಮೈಲಿಗಲ್ಲು ಕಾರ್ಯಕ್ರಮವಾಗಿದ್ದು, ದಕ್ಷಿಣ ಏಷ್ಯಾದಲ್ಲಿ ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರಗಳಿಗಾಗಿ ಮೀಸಲಾದ ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. 1990 ರಲ್ಲಿ ಸ್ಥಾಪನೆಯಾದ (ಆರಂಭದಲ್ಲಿ ಬಾಂಬೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂದು ಕರೆಯಲಾಗುತ್ತಿತ್ತು) ಎಂ ಐ ಎಫ್‌ ಎಫ್, ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಅತ್ಯುತ್ತಮ ಕೃತಿಗಳನ್ನು ಪ್ರದರ್ಶಿಸುವ ರೋಮಾಂಚಕ ವೇದಿಕೆಯಾಗಿ ವಿಕಸನಗೊಂಡಿದೆ.

19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಭವ್ಯ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸ್ಪರ್ಧಾ ವಿಭಾಗಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಪ್ರತಿಷ್ಠಿತ ಸ್ವರ್ಣ ಮತ್ತು ರಜತ ಶಂಖ ಪ್ರಶಸ್ತಿಗಳು ಮತ್ತು 55 ಲಕ್ಷ ರೂ.ಗಳ ನಗದು ಬಹುಮಾನಗಳು ಇರುತ್ತವೆ. ಪ್ರಮುಖ ಗೌರವಗಳಲ್ಲಿ ವಿ. ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿ, ಅತ್ಯಂತ ನವೀನ/ಪ್ರಾಯೋಗಿಕ ಚಲನಚಿತ್ರಕ್ಕಾಗಿ ಪ್ರಮೋದ್ ಪತಿ ಪ್ರಶಸ್ತಿ, ತಾಂತ್ರಿಕ ಶ್ರೇಷ್ಠತೆಯ ಪ್ರಶಸ್ತಿಗಳು, ಅತ್ಯುತ್ತಮ ವಿದ್ಯಾರ್ಥಿ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗಳು ಸೇರಿವೆ.

ಚಲನಚಿತ್ರೋತ್ಸವವು ಹಲವಾರು ಸ್ಪರ್ಧೇತರ ವಿಭಾಗಗಳನ್ನು ಸಹ ಒಳಗೊಂಡಿರುತ್ತದೆ, ಇದರಲ್ಲಿ ‘ಪ್ರಿಸಮ್’ – ಭಾರತ ಮತ್ತು ವಿಶ್ವದಾದ್ಯಂತದ ಉನ್ನತ ದರ್ಜೆಯ ಮತ್ತು ಪಥ-ಪರಿವರ್ತಕ ಚಿತ್ರಗಳ ಕ್ಯುರೇಟೆಡ್ ಪ್ರದರ್ಶನ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮತ್ತು ಪ್ರಶಸ್ತಿ ವಿಜೇತ ಚಿತ್ರಗಳನ್ನು ಒಳಗೊಂಡ ವಿಶೇಷ ಕ್ಯುರೇಟೆಡ್ ವಿಭಾಗಗಳು; ಸ್ವತಂತ್ರ ಚಿತ್ರಗಳು; ಕಂಟ್ರಿ ಫೋಕಸ್ ಚಿತ್ರಗಳು; ಮರುಸ್ಥಾಪಿಸಲಾದ ಕ್ಲಾಸಿಕ್‌ ಗಳು; ವನ್ಯಜೀವಿ ಚಿತ್ರಗಳು; ವಿದ್ಯಾರ್ಥಿ ಚಿತ್ರಗಳು; ನ್ಯೂ ಮೀಡಿಯಾ ಮತ್ತು ಎಐ ಚಿತ್ರಗಳು; ಮತ್ತು ಇತರ ಹಲವು ವಿಭಾಗಗಳು ಸೇರಿವೆ.

ಎಂ ಐ ಎಫ್‌ ಎಫ್ 2026 ಹೆಚ್ಚುವರಿಯಾಗಿ ಗಾಲಾ ಸ್ಕ್ರೀನಿಂಗ್‌ ಗಳು, ರೆಡ್ ಕಾರ್ಪೆಟ್ ಕಾರ್ಯಕ್ರಮಗಳು, ಮಾಸ್ಟರ್‌ ಕ್ಲಾಸ್‌ ಗಳು, ಪ್ಯಾನಲ್ ಚರ್ಚೆಗಳು ಮತ್ತು ‘ವೇವ್ಸ್ ಡಾಕ್ ಬಜಾರ್’ ಅನ್ನು ಆಯೋಜಿಸುತ್ತದೆ, ಇದು ಸಿನಿಮಾ ಶ್ರೇಷ್ಠತೆ ಮತ್ತು ಸೃಜನಶೀಲ ವಿನಿಮಯದ ಸಮಗ್ರ ಆಚರಣೆಯಾಗಿದೆ. ಮೊದಲ ಬಾರಿಗೆ, ವೇವ್ಸ್ ಡಾಕ್ ಬಜಾರ್ ‘ಇಮರ್ಸಿವ್ ಮಾರ್ಕೆಟ್’ ಅನ್ನು ಸಹ ಪರಿಚಯಿಸುತ್ತದೆ, ಇದು ಇಮರ್ಸಿವ್ ಕಂಟೆಂಟ್ ರಚನೆಕಾರರು, ನಿರ್ಮಾಪಕರು ಮತ್ತು ತಂತ್ರಜ್ಞಾನ ಪಾಲುದಾರರಿಗಾಗಿ ಮೀಸಲಾದ ವೇದಿಕೆಯಾಗಿದೆ. ವಿಆರ್, ಎಆರ್, ಎಕ್ಸ್ ಆರ್ ಮತ್ತು ಸಂವಾದಾತ್ಮಕ ಅನುಭವಗಳ ಮೇಲೆ ಕೇಂದ್ರೀಕರಿಸಿದ ಈ ಮಾರುಕಟ್ಟೆಯು ನವೀನ ಯೋಜನೆಗಳನ್ನು ಪ್ರದರ್ಶಿಸಲು, ಹೊಸ ಕಥೆ ಹೇಳುವ ಸ್ವರೂಪಗಳನ್ನು ಅನ್ವೇಷಿಸಲು ಮತ್ತು ಅರ್ಥಪೂರ್ಣ ಸಹಯೋಗಗಳನ್ನು ಉತ್ತೇಜಿಸಲು ವೇದಿಕೆಯನ್ನು ಒದಗಿಸುತ್ತದೆ.

 

*****


Great films resonate through passionate voices. Share your love for cinema with #MIFF2026. Tag us @pibmumbai on X, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at miff.mediadesk@pib.gov.in with the subject line: Take One with PIB.


रिलीज़ आईडी: 2259385   |   Visitor Counter: 78