ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿ.ಬಿ.ಎಫ್.ಸಿ) ನೂತನ ಅಧ್ಯಕ್ಷರಾಗಿ ಶ್ರೀ ಶಶಿ ಶೇಖರ್ ವೆಂಪತಿ ಅವರನ್ನು ನೇಮಿಸಲಾಗಿದೆ

प्रविष्टि तिथि: 06 MAY 2026 3:16PM by PIB Bengaluru

ಭಾರತ ಸರ್ಕಾರವು, ಮೇ 6, 2026 ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಮೂಲಕ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿ.ಬಿ.ಎಫ್.ಸಿ) ಅಧ್ಯಕ್ಷರಾಗಿ ಶ್ರೀ ಶಶಿ ಶೇಖರ್ ವೆಂಪತಿ ಅವರನ್ನು ನೇಮಿಸಿದೆ. ಅವರು ಅಧಿಕಾರ ಸ್ವೀಕರಿಸಿ ಸೇರ್ಪಡೆಯಾದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಹುದ್ದೆ ವಹಿಸಿಕೊಳ್ಳಲಿದ್ದಾರೆ.

ಶ್ರೀ ಪ್ರಸೂನ್ ಜೋಶಿ ಅವರನ್ನು ಪ್ರಸಾರ ಭಾರತಿಯ ಅಧ್ಯಕ್ಷರನ್ನಾಗಿ ಬಡ್ತಿ ನೀಡಿದ ಪರಿಣಾಮವಾಗಿ, ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿ.ಬಿ.ಎಫ್.ಸಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ, ಹಾಗೂ ಈ ಮೂಲಕ ಪ್ರಸ್ತುತ ನೇಮಕಾತಿ ಕಾರ್ಯ ನಡೆದಿದೆ.

ಶ್ರೀ ಶಶಿ ಶೇಖರ್ ವೆಂಪತಿ ಅವರು ಮಾಧ್ಯಮ, ಪ್ರಸಾರ ಮತ್ತು ಸಾರ್ವಜನಿಕ ಸಂವಹನ ಕ್ಷೇತ್ರದಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರ ನೇಮಕಾತಿಯು ಸಿ.ಬಿ.ಎಫ್.ಸಿ.ಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

 

*****


(रिलीज़ आईडी: 2258373) आगंतुक पटल : 95
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali-TR , Manipuri , Assamese , Bengali , Punjabi , Gujarati , Telugu , Malayalam