ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

'ಆಧಾರ್'ಕಾರ್ಡ್'ನ "ಹೊಸ ನೋಟ" ಕುರಿತಾದ ಕೆಲವು  ವರದಿಗಳಿಗೆ ಸ್ಪಷ್ಟೀಕರಣ


प्रविष्टि तिथि: 03 MAY 2026 4:16PM by PIB Bengaluru

ಈ ವರ್ಷದ ಅಂತ್ಯದ ವೇಳೆಗೆ ಆಧಾರ್ ಕಾರ್ಡ್ ನೋಟವು ಬದಲಾಗಲಿದ್ದು, ಅದು ಹೇಗೆ ಕೇವಲ ಫೋಟೋ ಮತ್ತು ಕ್ಯೂಆರ್ ಕೋಡ್ ಮಾತ್ರ ಹೊಂದಿರಲಿದೆ ಎಂಬುದನ್ನು ವಿವರಿಸುವ ವರದಿಗಳು ಹಾಗೂ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಹರಿದಾಡುತ್ತಿವೆ.

ಈ ಸುದ್ದಿ ಆಧಾರರಹಿತ. ಅಂತಹ ಯಾವುದೇ ಬದಲಾವಣೆಗಳ ಯೋಜನೆ ಇಲ್ಲ.

ಇಂತಹ ಸುದ್ದಿ ಅಥವಾ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟುಗಳು  ಜನರಲ್ಲಿ ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತಿವೆ.

ಜನಸಾಮಾನ್ಯರು ಅಂತಹ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ನಿರ್ಲಕ್ಷಿಸುವಂತೆ ಹಾಗೂ 'ಯುಐಡಿಎಐ'ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಮತ್ತು ಪಿಐಬಿ ಪತ್ರಿಕಾ ಪ್ರಕಟಣೆಗಳ ಮೂಲಕ ಹೊರಡಿಸುವ ಅಧಿಕೃತ ಸಂವಹನವನ್ನು ಮಾತ್ರ ಗಮನಿಸುವಂತೆ ಸೂಚಿಸಲಾಗಿದೆ.  ಸುಳ್ಳು ಮಾಹಿತಿಯನ್ನು ಪ್ರೋತ್ಸಾಹಿಸದಂತೆ ಮಾಧ್ಯಮಗಳಿಗೆ ಈ ಮೂಲಕ ಸೂಚಿಸಲಾಗಿದೆ.

******


(रिलीज़ आईडी: 2257661) आगंतुक पटल : 106
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Manipuri , Punjabi , Gujarati , Telugu