ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಲೈವ್ ಈವೆಂಟ್‌ಗಳ ಅಭಿವೃದ್ಧಿ ಕೋಶದ 4ನೇ ಸಭೆಯು ಭಾರತವನ್ನು ಲೈವ್ ಈವೆಂಟ್‌ಗಳ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಮಾರ್ಗಸೂಚಿಯನ್ನು ಪರಾಮರ್ಶಿಸಿತು


ಲೈವ್ ಈವೆಂಟ್‌ಗಳ ವಲಯವು ಸಂಬಂಧಿತ ವಲಯಗಳಾದ ಉದ್ಯೋಗ, ಪ್ರವಾಸೋದ್ಯಮ ಮತ್ತು ಆರ್ಥಿಕ ಗುಣಕದ ಪ್ರಮುಖ ಚಾಲಕನಾಗಲು ಸಿದ್ಧವಾಗಿದೆ

ವೇಗವಾಗಿ, ಪಾರದರ್ಶಕ ಕ್ಷ ಅನುಮೋದನೆಗಳನ್ನು ಖಚಿತಪಡಿಸಿಕೊಳ್ಳಲು ಇಂಡಿಯಾ ಸಿನಿ ಹಬ್ ಪೋರ್ಟಲ್‌ನಲ್ಲಿ ಲೈವ್ ಈವೆಂಟ್‌ಗಳಿಗೆ ಏಕ-ಗವಾಕ್ಷ ಅನುಮತಿ ವ್ಯವಸ್ಥೆ

ನೇರಪ್ರಸಾರ ಕಾರ್ಯಕ್ರಮಗಳಿಗೆ/ಲೈವ್ ಕಾರ್ಯಕ್ರಮಗಳಿಗೆ  ಪರವಾನಗಿ ಮತ್ತು ಅನುಮತಿಗಳನ್ನು ಸುವ್ಯವಸ್ಥಿತಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2026 ರ ಮೇ 31 ರೊಳಗೆ ಮಾದರಿ ಕಾರ್ಯಾನುಷ್ಠಾನ  ಆದೇಶವನ್ನು ಅಳವಡಿಸಿಕೊಳ್ಳಲು ಒತ್ತಾಯ

ವ್ಯಾಪಾರವನ್ನು ಸುಲಭಗೊಳಿಸುವುದು, ಮೂಲಸೌಕರ್ಯ ಮತ್ತು ಕೌಶಲ್ಯ ಉಪಕ್ರಮಗಳ ಮೂಲಕ ಲೈವ್ ಈವೆಂಟ್‌ಗಳ ವಲಯವನ್ನು ಉತ್ತೇಜಿಸುವ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸುತ್ತದೆ

ಪ್ರಕಟಣಾ ದಿನಾಂಕ: 01 MAY 2026 2:34PM by PIB Bengaluru

ಲೈವ್ ಈವೆಂಟ್ಸ್ ಡೆವಲಪ್‌ಮೆಂಟ್ ಸೆಲ್ (LEDC) ನ 4 ನೇ ಸಭೆಯು ವಿಜ್ಞಾನ ಭವನದಲ್ಲಿ ಏಪ್ರಿಲ್ 30, 2026 ರಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 9 ಕೇಂದ್ರ ಸಚಿವಾಲಯಗಳು, 6 ರಾಜ್ಯಗಳು ಮತ್ತು 12 ಉದ್ಯಮ ಸದಸ್ಯರ ಪ್ರತಿನಿಧಿಗಳು ಭಾಗವಹಿಸಿದ್ದರು.

ಉದ್ಯಮದ ಅಂದಾಜಿನ ಪ್ರಕಾರ 2025 ರಲ್ಲಿ ₹145 ಶತಕೋಟಿ ಮೌಲ್ಯದ ಭಾರತದ ಸಂಘಟಿತ ಲೈವ್ ಈವೆಂಟ್‌ಗಳ ವಲಯವು ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಅತ್ಯಧಿಕ ಬೆಳವಣಿಗೆಯ ವಿಭಾಗವಾಗಿ ಹೊರಹೊಮ್ಮಿದೆ. ಈ ವಲಯವನ್ನು ಉತ್ತೇಜಿಸಲು, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಜುಲೈ 2025ರಲ್ಲಿ ಕಾರ್ಯದರ್ಶಿ, ವಾರ್ತಾ ಮತ್ತು ಪ್ರಸಾರ (I&B) ಅವರ ಅಧ್ಯಕ್ಷತೆಯಲ್ಲಿ ಲೈವ್ ಈವೆಂಟ್ಸ್ ಡೆವಲಪ್‌ಮೆಂಟ್ ಸೆಲ್ (LEDC) ಸ್ಥಾಪಿಸಿದೆ. ಇದು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಕೈಗಾರಿಕಾ ಸಂಸ್ಥೆಗಳು ಮತ್ತು ಇತರ ಪಾಲುದಾರರ ಪ್ರತಿನಿಧಿಗಳನ್ನು ಒಳಗೊಂಡಿದೆ.

ರಾಷ್ಟ್ರೀಯ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಒಂದಾಗಿ ಸಂಗೀತ ರಸಮಂಜರಿ (ಕನ್ಸರ್ಟ್ ) ಆರ್ಥಿಕತೆಯನ್ನು ಇರಿಸುವುದು ಮತ್ತು 2030 ರ ವೇಳೆಗೆ ಭಾರತವನ್ನು ಲೈವ್ ಈವೆಂಟ್‌ಗಳಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಹಾಗು   ವಲಯದಲ್ಲಿ 15-20 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವುದು ಎಲ್.ಇ.ಡಿ.ಸಿ. ಗುರಿಯಾಗಿದೆ. ಈ ವಲಯವು 2028 ರ ವೇಳೆಗೆ 10% ರಷ್ಟು ಬೆಳೆದು ₹196 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ.

ಸಭೆಯ ಸಮಯದಲ್ಲಿ, ಕಾರ್ಯದರ್ಶಿ (ಎಂ.ಐ.ಬಿ) ಭಾರತದ ಲೈವ್ ಈವೆಂಟ್‌ಗಳ ಉದ್ಯಮದ ಬೆಳವಣಿಗೆಗೆ ಸಂಘಟಿತ ಮಾರ್ಗಸೂಚಿಯನ್ನು ರಚಿಸುವಲ್ಲಿ ಎಲ್.ಇ.ಡಿ.ಸಿ.  ಪಾತ್ರವನ್ನು ಉಲ್ಲೇಖಿಸಿದರು. ಲೈವ್ ಈವೆಂಟ್‌ಗಳ ವಲಯವು ಮಾಧ್ಯಮ ಮತ್ತು ಮನರಂಜನಾ ಉದ್ಯಮದ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ, ಇದು ಸಂಬಂಧಿತ ವಲಯಗಳಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಪ್ರಚಾರ ಮತ್ತು ಆರ್ಥಿಕ ಗುಣಕಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂಬುದರತ್ತ ಅವರು ಗಮನ ಸೆಳೆದರು.

ಎಲ್.ಇ.ಡಿ.ಸಿ. ಕೈಗೊಂಡ ವಿವಿಧ ಉಪಕ್ರಮಗಳ ಪ್ರಗತಿಯನ್ನು ಎಂ.ಐ.ಬಿ. ಜಂಟಿ ಕಾರ್ಯದರ್ಶಿ (ಪ್ರಸಾರ) ಶ್ರೀ ಪೃಥುಲ್ ಕುಮಾರ್ ಅವರು ಪ್ರಸ್ತುತಪಡಿಸಿದರು. ಇಂಡಿಯಾ ಸಿನಿ ಹಬ್ (ICH) ಪೋರ್ಟಲ್‌ನಲ್ಲಿ ಲೈವ್ ಈವೆಂಟ್ ಅನುಮತಿಗಳಿಗಾಗಿ ಏಕ-ಗವಾಕ್ಷ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಲಾಯಿತು. ರಾಜ್ಯಗಳು ಐ.ಸಿ.ಎಚ್. ಪೋರ್ಟಲ್ ಅನ್ನು ಅಳವಡಿಸಿಕೊಳ್ಳುವುದರಿಂದ ಲೈವ್ ಈವೆಂಟ್ ಅನುಮತಿ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಸಹಾಯಕವಾಗುತ್ತದೆ ಮತ್ತು ಅದು ಸಕಾಲಿಕ, ಪಾರದರ್ಶಕ ಹಾಗು ಪರಿಣಾಮಕಾರಿ ಅನುಮೋದನೆಗಳನ್ನು ಖಚಿತಪಡಿಸುತ್ತದೆ.

ಇದಲ್ಲದೆ, "ಭಾರತದಲ್ಲಿ ಲೈವ್ ಈವೆಂಟ್‌ಗಳಿಗೆ ಪರವಾನಗಿ ಮತ್ತು ಅನುಮತಿಗಳನ್ನು ಸುವ್ಯವಸ್ಥಿತಗೊಳಿಸಲು 31 ಮೇ 2026ರ ಕಾಲಮಿತಿಯೊಳಗೆ ಮಾದರಿ ಕಾರ್ಯಾನುಷ್ಠಾನ ಆದೇಶ, 2026"  ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಲಾಯಿತು, ಇದನ್ನು ಮಾರ್ಚ್ 13, 2026 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿತ್ತು. ಈ ಚೌಕಟ್ಟು ಭಾರತದಲ್ಲಿ ಲೈವ್ ಈವೆಂಟ್‌ಗಳ ಉದ್ಯಮಕ್ಕಾಗಿ ಸರಳೀಕೃತ ಮತ್ತು ಪ್ರಮಾಣೀಕೃತ ನಿಯಂತ್ರಕ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

"ಗ್ರೀನ್‌ಫೀಲ್ಡ್ ವೆನ್ಯೂ ಡೆವಲಪ್‌ಮೆಂಟ್" ಮತ್ತು ಲೈವ್ ಈವೆಂಟ್‌ಗಳ ವಿಭಾಗಕ್ಕಾಗಿ ಕೌಶಲ್ಯ ಉಪಕ್ರಮಗಳ ಕುರಿತಾದ ಕರಡು ಪರಿಕಲ್ಪನಾ ಟಿಪ್ಪಣಿಯನ್ನು ಎಲ್.ಇ.ಡಿ.ಸಿ. ಚರ್ಚಿಸಿದೆ. ಭಾರತೀಯ ಸಮೂಹ ಸಂವಹನ ಸಂಸ್ಥೆಯು (IIMC), ಎಂ.ಇ.ಎಸ್.ಸಿ. ಮತ್ತು ಇ.ಇ.ಎಂ.ಎ.  ಸಹಯೋಗದೊಂದಿಗೆ ಶೀಘ್ರದಲ್ಲೇ ಲೈವ್ ಈವೆಂಟ್‌ಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪರಿಚಯಿಸಲಿದೆ ಎಂದು ತಿಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್, "ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರದ ಪರವಾಗಿ, ಲೈವ್ ಈವೆಂಟ್‌ಗಳನ್ನು ಆಯೋಜಿಸುವ ಪ್ರಕ್ರಿಯೆಗಳನ್ನು ಬಲಿಷ್ಠ ಮತ್ತು ಪಾರದರ್ಶಕವಾಗಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ" ಎಂದು ಹೇಳಿದರು. "ಎಲ್.ಇ.ಡಿ.ಸಿ.ಯ ಎಲ್ಲಾ ಸದಸ್ಯರ ಉದ್ದೇಶದಲ್ಲಿ ಸಂಪೂರ್ಣ ಹೊಂದಾಣಿಕೆ ಇದೆ, ಈಗ ಗಮನವು ಪರಿಣಾಮಕಾರಿ ಅನುಷ್ಠಾನದ ಮೇಲೆ ಇರಬೇಕು" ಎಂದು ಅವರು ಹೇಳಿದರು.

ಭಾರತದಲ್ಲಿ ಲೈವ್ ಈವೆಂಟ್‌ಗಳ ವಲಯಕ್ಕೆ ಬೆಂಬಲ ನೀಡಲು ಮತ್ತು ಬೆಳವಣಿಗೆ-ಆಧಾರಿತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2257348) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , Marathi , हिन्दी , Assamese , Gujarati , Odia , Telugu , Malayalam