ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಮೈಲಿಗಲ್ಲಿನ ಕ್ಷಣವಾಗಿದ್ದು ಅಭಿವೃದ್ಧಿ ಪಾಲುದಾರಿಕೆಗೆ ಅಭೂತಪೂರ್ವ ವೇಗ ನೀಡಲಿದೆ‌ - ಪ್ರಧಾನಮಂತ್ರಿ ಶ್ಲಾಘನೆ

ಪ್ರಕಟಣಾ ದಿನಾಂಕ: 27 APR 2026 5:32PM by PIB Bengaluru

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಉಭಯ ದೇಶಗಳ ನಡುವಿನ ಪಾಲುದಾರಿಕೆಯಲ್ಲಿ ಮೈಲಿಗಲ್ಲಿನ ಕ್ಷಣ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ.

ಈ ಒಪ್ಪಂದವು ಅಭಿವೃದ್ಧಿ ಪಾಲುದಾರಿಕೆಗೆ ಅಭೂತಪೂರ್ವ ಆವೇಗವನ್ನು ನೀಡಲಿದೆ ಮತ್ತು ಎರಡೂ ರಾಷ್ಟ್ರಗಳ ಬಾಂಧವ್ಯದ ಆಳವಾದ ನಂಬಿಕೆ, ಹಂಚಿತ ಮೌಲ್ಯಗಳು ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ಮುಕ್ತ ವ್ಯಾಪಾರ ಒಪ್ಪಂದದಿಂದ ರೈತರು, ಯುವಕರು, ಮಹಿಳೆಯರು, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವಲಯ ಉದ್ದಿಮೆ (ಎಂಎಸ್‌ಎಂಇ)ಗಳು, ಕುಶಲಕರ್ಮಿಗಳು, ಸ್ಟಾರ್ಟ್ ಅಪ್ ಗಳು, ವಿದ್ಯಾರ್ಥಿಗಳು ಮತ್ತು ನವೀನ ಅನ್ವೇಷಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ. ಇದು ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯಲಿದೆ, ಅವಕಾಶಗಳನ್ನು ಸೃಜಿಸಲಿದೆ ಮತ್ತು ವಲಯಗಳಾದ್ಯಂತ ಒಗ್ಗೂಡಿದ ಶಕ್ತಿಯನ್ನು ಗಾಢವಾಗಿಸಲಿದೆ ಎಂದು ಅವರು ವಿವರಿಸಿದ್ದಾರೆ. 

ನ್ಯೂಜಿಲೆಂಡ್‌ ನ 20 ಶತಕೋಟಿ ಡಾಲರ್ ಹೂಡಿಕೆ ಬದ್ಧತೆಯು ಕೃಷಿ, ಉತ್ಪಾದನೆ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಸಹಕಾರವನ್ನು ಬಲಪಡಿಸಲಿದೆ ಮತ್ತು ಎರಡೂ ದೇಶಗಳಿಗೆ ಹೆಚ್ಚು ಸಮೃದ್ಧ ಮತ್ತು ಕ್ರಿಯಾತ್ಮಕ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಶ್ರೀ ಮೋದಿ ಅವರು ವಿಸ್ತೃತತವಾಗಿ ತಿಳಿಸಿದ್ದಾರೆ. 

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಇಂದು ಭಾರತ-ನ್ಯೂಜಿಲೆಂಡ್ ಪಾಲುದಾರಿಕೆಯಲ್ಲಿ ಹೆಗ್ಗುರುತಿನ ಕ್ಷಣವಾಗಿದೆ!

ಇಂದು ಸಹಿ ಹಾಕಲಾಗಿರುವ ಭಾರತ-ನ್ಯೂಜಿಲೆಂಡ್ ಎಫ್‌ಟಿಎ ನಮ್ಮ ಅಭಿವೃದ್ಧಿ ಪಾಲುದಾರಿಕೆಗೆ ಅಭೂತಪೂರ್ವ ವೇಗ ನೀಡಲಿದೆ ಎಂಬುದು ನನಗೆ ಸಂತಸ ತಂದಿದೆ. ಇದು ನಮ್ಮ ಎರಡೂ ರಾಷ್ಟ್ರಗಳನ್ನು ಬೆಸೆಯುವ ಗಾಢವಾದ ನಂಬಿಕೆ, ಹಂಚಿತ ಮೌಲ್ಯಗಳು ಮತ್ತು ಮಹತ್ವಾಕಾಂಕ್ಷೆಯ ಪ್ರತಿಬಿಂಬವಾಗಿದೆ.

ಈ ಒಪ್ಪಂದದಿಂದ ನಮ್ಮ ರೈತರು, ಯುವಕರು, ಮಹಿಳೆಯರು, ಎಂ ಎಸ್ ಎಂ ಇ ಗಳು, ಕುಶಲಕರ್ಮಿಗಳು, ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ನಾವೀನ್ಯಕಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದು ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯಲಿದ್ದು, ಅವಕಾಶಗಳನ್ನು ಸೃಜಿಸಲಿದೆ ಮತ್ತು ವಲಯಗಳಾದ್ಯಂತ ಸಮ್ಮಿಲಿತ ಶಕ್ತಿಯನ್ನು ಗಾಢವಾಗಿಸಲಿದೆ.

ನ್ಯೂಜಿಲೆಂಡ್‌ ನಿಂದ 20 ಶತಕೋಟಿ ಡಾಲರ್ ಹೂಡಿಕೆ ಬದ್ಧತೆಯು ಕೃಷಿ, ಉತ್ಪಾದನೆ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದ್ದು, ಎರಡೂ ದೇಶಗಳಿಗೆ ಇನ್ನಷ್ಟು ಸಮೃದ್ಧ ಮತ್ತು ಕ್ರಿಯಾತ್ಮಕ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ.

@chrisluxonmp”

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ: 

“ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಆಳವಾದ ಜಾಗತಿಕ ಸಹಯೋಗ ಮತ್ತು ಹಂಚಿತ ಸಮೃದ್ಧಿಯತ್ತ ಒಂದು ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಮಂತ್ರಿ @narendramodi  ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಇದು ಎರಡು ರೋಮಾಂಚಕ ಪ್ರಜಾಪ್ರಭುತ್ವಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತಾ, ರೈತರು, ಕುಶಲಕರ್ಮಿಗಳು, ಯುವಕರು, ಉದ್ಯಮಿಗಳು, ಮಹಿಳೆಯರು ಮತ್ತು ಎಂ ಎಸ್ ಎಂ ಇ ಗಳಿಗೆ ಅವಕಾಶಗಳನ್ನು ತೆರೆಯಲಿದೆ.

ಇದು ರೈತರು, ಯುವಕರು, ಎಂ‌ ಎಸ್ ಎಂ ಇ ಗಳು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಸೃಜಿಸಲಿದೆ. #IndiaNZFTA”
 

 

******


(ಪ್ರಕಟಣೆ ಐ.ಡಿ.: 2256085) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati