ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕರ್ನಾಟಕದ ಮಂಡ್ಯದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಸಂದರ್ಭದ ತಮ್ಮ ಭಾಷಣದ ತುಣುಕುಗಳನ್ನು  ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 15 APR 2026 5:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಮಂಡ್ಯದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ತಾವು ಮಾಡಿದ ಭಾಷಣದ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಅವರು ಹೀಗೆ ಹೇಳಿದ್ದಾರೆ: 

“ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ನಮ್ಮ ಭವ್ಯ ಆಧ್ಯಾತ್ಮಿಕ ಸಂಪ್ರದಾಯಗಳ ಜೀವಂತ ಸಂಕೇತವಾಗಿದೆ. ಸಮುದಾಯ ಸೇವೆಯತ್ತ ಅದರ ಪ್ರಯತ್ನಗಳು ಅತ್ಯಂತ ಪ್ರೇರಣಾದಾಯಕ."

"ಕಾಲಕಾಲಕ್ಕೆ ನಮ್ಮ ಪಥವನ್ನು ಮಾರ್ಗದರ್ಶಿಸುವ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳಿಂದ ನಮ್ಮ ಸಮಾಜವು ಆಶೀರ್ವದಿಸಲ್ಪಟ್ಟಿದೆ."

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಒಂಭತ್ತು ಮಾರ್ಗದರ್ಶಿ ತತ್ವಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.

ಅದೇ ಸ್ಫೂರ್ತಿಯೊಂದಿಗೆ ಎಲ್ಲರೂ, ಈ ಒಂಭತ್ತೂ ಕ್ಷೇತ್ರಗಳಾದ್ಯಂತ  ಸಾಮೂಹಿಕ ಸಂಕಲ್ಪ ಕೈಗೊಳ್ಳುವಂತೆ ನಾನು ಮನವಿ ಮಾಡುತ್ತೇನೆ.”

 

******


(ಪ್ರಕಟಣೆ ಐ.ಡಿ.: 2252338) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Manipuri , Assamese , Punjabi , Gujarati , Telugu , Malayalam