ಪ್ರಧಾನ ಮಂತ್ರಿಯವರ ಕಛೇರಿ
ಪುತ್ತಾಂಡು ಹಬ್ಬದ ಮಹತ್ವ ಮತ್ತು ಭಾರತದ ಸಾಂಸ್ಕೃತಿಕ ಮೌಲ್ಯಗಳ ಕುರಿತ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
14 APR 2026 12:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮಾನ್ಯ ಉಪ ರಾಷ್ಟ್ರಪತಿ ತಿರು ಸಿ. ಪಿ. ರಾಧಾಕೃಷ್ಣನ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನವು ಭಾರತದ ವೈವಿಧ್ಯಮಯ ಹಬ್ಬಗಳ ಶ್ರೀಮಂತಿಕೆಯನ್ನು ವಿವರಿಸುತ್ತದೆ ಮತ್ತು ತಮಿಳರ ಹೊಸ ವರ್ಷ ಪುತ್ತಾಂಡು ಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಶುಭಾಶಯಗಳನ್ನು ತಿಳಿಸುತ್ತದೆ. ಈ ಹಬ್ಬ ಸಂಪ್ರದಾಯ, ಕುಟುಂಬ, ಆಧ್ಯಾತ್ಮಿಕತೆ ಮತ್ತು ಶಿಸ್ತಿನ ಜೀವನಶೈಲಿಯನ್ನು ಒಗ್ಗೂಡಿಸುವ ಮಹತ್ವದ ಸಾರವನ್ನು ತೋರಿಸುತ್ತದೆ.
ಇದಲ್ಲದೆ, ಇಂದಿನ ಯುವ ಪೀಳಿಗೆ ಏಕ್ ಭಾರತ್ ಎಂಬ ಆದರ್ಶದೊಂದಿಗೆ ಬದುಕು ಸಾಗಿಸಿ 2047ರೊಳಗೆ ಶ್ರೇಷ್ಠ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತದೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;
“ಭಾರತದ ವೈವಿಧ್ಯಮಯ ಹಬ್ಬಗಳ ಶ್ರೀಮಂತಿಕೆಯನ್ನು ತೋರಿಸುವ ಉಪ ರಾಷ್ಟ್ರಪತಿ ಶ್ರೀ ತಿರು ಸಿ. ಪಿ. ರಾಧಾಕೃಷ್ಣನ್ ಅವರು ಪುತ್ಥಂಡು ಹಬ್ಬದ ಸಂದರ್ಭದಲ್ಲಿ ಭಾರತದ ಜನತೆಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತೀಯರು ಸಂಪ್ರದಾಯ, ಕುಟುಂಬ, ಆಧ್ಯಾತ್ಮಿಕತೆ ಹಾಗೂ ಶಿಸ್ತಿನ ಜೀವನಶೈಲಿಯನ್ನು ಒಗ್ಗೂಡಿಸುವ ಹಬ್ಬವೆಂಬ ಅದರ ಸಾರವನ್ನು ಒತ್ತಿಹೇಳುತ್ತಾರೆ.
ಯುವ ಪೀಳಿಗೆ ಏಕ್ ಭಾರತ್ ಆದರ್ಶಗಳೊಂದಿಗೆ ಮುಂದುವರಿದು 2047ರೊಳಗೆ ಶ್ರೇಷ್ಠ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಲೇಖನದ ಕೊಂಡಿ ಇಲ್ಲಿದೆ''.
https://www.hindustantimes.com/opinion/indias-many-new-years-reflect-ancient-knowledge-101776093540420.html”
*****
(ಪ್ರಕಟಣೆ ಐ.ಡಿ.: 2251881)
ವಿಸಿಟರ್ ಕೌಂಟರ್ : 6