ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಪಚ್‌ಪದ್ರಾದಲ್ಲಿರುವ ಎಚ್ ಪಿ ಸಿ ಎಲ್ ರಾಜಸ್ಥಾನ ರಿಫೈನರಿ ಲಿಮಿಟೆಡ್ (ಎಚ್‌ಆರ್‌ಆರ್‌ಎಲ್) ನ ಷೇರುಗಳಲ್ಲಿನ ವೆಚ್ಚ ಮತ್ತು ಹೂಡಿಕೆಯಲ್ಲಿನ ಪರಿಷ್ಕರಣೆಗೆ ಕೇಂದ್ರ ಸಂಪುಟ ಅನುಮೋದನೆ


{ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿ ಸಿ ಎಲ್) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಉದ್ಯಮ}

ಪ್ರಕಟಣಾ ದಿನಾಂಕ: 08 APR 2026 4:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ(ಸಿಸಿಇಎ) ಸಭೆಯು ಎಚ್ ಪಿಸಿಎಲ್ ರಾಜಸ್ಥಾನ ರಿಫೈನರಿ ಲಿಮಿಟೆಡ್ (ಎಚ್ ಆರ್ ಆರ್ ಎಲ್) ಯೋಜನಾ ವೆಚ್ಚವನ್ನು 43,129 ಕೋಟಿ ರೂಪಾಯಿಗಳಿಂದ 79,459 ಕೋಟಿ ರೂಪಾಯಿಗೆ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿ ಸಿ ಎಲ್) ನಿಂದ 8,962 ಕೋಟಿ ರೂ.ಹೆಚ್ಚುವರಿ (ಷೇರು) ಈಕ್ವಿಟಿ ಹೂಡಿಕೆಯನ್ನು ಪರಿಷ್ಕರಿಸಲು ಅನುಮೋದನೆ ನೀಡಿದೆ. ಹೆಚ್ಚಳದ ನಂತರ ಎಚ್ ಪಿಸಿಎಲ್ ನ ಒಟ್ಟು ಷೇರು ಹೂಡಿಕೆ 19,600 ಕೋಟಿ ರೂ.ಆಗಿರುತ್ತದೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

ಎಚ್ ಆರ್ ಆರ್ ಎಲ್ ಸಂಸ್ಕರಣಾಗಾರವು ಶೇ.26 ಕ್ಕಿಂತ ಹೆಚ್ಚು ಪೆಟ್ರೋಕೆಮಿಕಲ್ ಉತ್ಪನ್ನಗಳೊಂದಿಗೆ ಅತ್ಯಂತ ಸಂಕೀರ್ಣವಾದ ಸಂಸ್ಕರಣಾಗಾರವಾಗಿದೆ. 1 ಎಂಎಂಟಿಪಿಎ MMTPA ಪೆಟ್ರೋಲ್, 4 ಎಂಎಂಟಿಪಿಎ ಡೀಸೆಲ್ ಉತ್ಪಾದನೆಯೊಂದಿಗೆ, ಇದು 1 ಎಂಎಂಟಿಪಿಎ ಪಾಲಿಪ್ರೊಪಿಲೀನ್, 0.5 ಎಂಎಂಟಿಪಿಎ LLPDE (ಲೀನಿಯರ್ ಲೋ ಡೆನ್ಸಿಟಿ ಪಾಲಿಥಿಲೀನ್), 0.5 ಎಂಎಂಟಿಪಿಎ HDPE (ಹೈ ಡೆನ್ಸಿಟಿ ಪಾಲಿಥಿಲೀನ್) ಮತ್ತು ಸುಮಾರು 0.4 ಎಂಎಂಟಿಪಿಎ ಬೆಂಜೀನ್, ಟೊಲುಯೀನ್ ಮತ್ತು ಬ್ಯುಟಾಡಿನ್ ಅನ್ನು ಉತ್ಪಾದಿಸುತ್ತದೆ. ಸಾರಿಗೆ, ಔಷಧ,  ಬಣ್ಣಗಳು, ಪ್ಯಾಕೇಜಿಂಗ್ ಕೈಗಾರಿಕೆಗಳು ಮತ್ತಿತರ ಹಲವು ಕ್ಷೇತ್ರಗಳಲ್ಲಿ ನಮ್ಮ ಇಂಧನ ಮತ್ತು ಕೈಗಾರಿಕಾ ಪೂರಕ ವ್ಯವಸ್ಥೆಗೆ ಈ ಎಲ್ಲಾ ಉತ್ಪನ್ನಗಳು ನಿರ್ಣಾಯಕವಾಗಿವೆ. ಈ ಯೋಜನೆಯು ಇಂಧನ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತದೆ ಮತ್ತು ಪೆಟ್ರೋಕೆಮಿಕಲ್ ವಲಯದ ಆಮದು ಅವಲಂಬನೆ ತಗ್ಗಿಸುತ್ತದೆ. ನಿಗದಿತ ವಾಣಿಜ್ಯ ಕಾರ್ಯಾಚರಣೆ ದಿನಾಂಕ (SCOD) 2026ರ ಜುಲೈ 1ರಿಂದ ಆಗಲಿದೆ.

ಉದ್ಯೋಗ ಸೃಷ್ಟಿ ಸಾಧ್ಯತೆ ಸೇರಿದಂತೆ ಪ್ರಮುಖ ಪರಿಣಾಮ:

ದೇಶದ ಹೆಚ್ಚುತ್ತಿರುವ ಇಂಧನ ಅಗತ್ಯತೆಗಳು ಮತ್ತು ಪೆಟ್ರೋಕೆಮಿಕಲ್ ಅವಶ್ಯಕತೆಗಳು ಮತ್ತು ವಿಶೇಷ ಉತ್ಪನ್ನಗಳ ಉತ್ಪಾದನೆಯನ್ನು ಪರಿಗಣಿಸಿ ಎಚ್ ಆರ್ ಆರ್ ಎಲ್ ಒಂದು ಪ್ರಮುಖ ಯೋಜನೆಯಾಗಿದೆ. ಇದರಿಂದಾಗಿ ದೇಶವು ಆಮದುಗಳ ಮೇಲಿನ ಅವಲಂಬನೆ ತಗ್ಗಿಸುತ್ತದೆ, ಇದು ವಿದೇಶಿ ವಿನಿಮಯವನ್ನು ಉಳಿತಾಯ ಮಾಡುತ್ತದೆ. ಅಲ್ಲದೆ, ಈ ಯೋಜನೆಯು ಹಿಂದುಳಿದ ಪ್ರದೇಶದ ಕೈಗಾರಿಕೀಕರಣಕ್ಕೆ, ಸ್ಥಳೀಯವಾಗಿ ಲಭ್ಯವಿರುವ ಮಂಗಳ ಕಚ್ಚಾ ತೈಲದ ಬಳಕೆಗೆ ಮತ್ತು ಭಾರತವನ್ನು ಸಂಸ್ಕರಣಾ ಕೇಂದ್ರವಾಗಿ ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಯೋಜನೆಯ ಕಾರ್ಯಗತಗೊಳಿಸುವ ವೇಳೆ ಎಚ್ ಆರ್ ಆರ್ ಎಲ್ ಸಂಸ್ಕರಣಾ ಘಟಕಗಳ ನಿರ್ಮಾಣದಲ್ಲಿ ತೊಡಗಿರುವ ವಿವಿಧ ಪಾಲುದಾರರಿಂದ ನಿಯೋಜಿಸಲಾದ ಸುಮಾರು 25,000 ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ

ಹಿನ್ನೆಲೆ:

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಪಚಪದ್ರಾದಲ್ಲಿರುವ ಎಚ್ ಆರ್ ಆರ್ ಎಲ್, 2.4 ಎಂಎಂಟಿಪಿಎ ಪೆಟ್ರೋಕೆಮಿಕಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ 9 ಮಿಲಿಯನ್ ಮೆಟ್ರಿಕ್ ಟನ್ ಪ್ರತಿ ವರ್ಷ (ಎಂಎಂಟಿಪಿಎ) ಗ್ರೀನ್‌ಫೀಲ್ಡ್ ಸಂಸ್ಕರಣಾಗಾರ-ಕಮ್- ಪೆಟ್ರೋಕೆಮಿಕಲ್ ಸಂಕೀರ್ಣವಾಗಿದೆ. ಈ ಯೋಜನೆಯನ್ನು ಎಚ್ ಪಿಸಿಎಲ್ ಮತ್ತು ರಾಜಸ್ಥಾನ ಸರ್ಕಾರದ (ಜಿಒಆರ್) ಜಂಟಿ ಉದ್ಯಮ (ಜೆವಿ) ಎಚ್ ಆರ್ ಆರ್ ಎಲ್ ಅನುಕ್ರಮವಾಗಿ ಶೇ.74 ಮತ್ತು ಶೇ.26ರಷ್ಟು ಷೇರುಗಳ ಪಾಲನ್ನು ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2250084) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Marathi , Bengali , Punjabi , Gujarati , Odia , Telugu , Malayalam