ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ಕ್ಷೇತ್ರಗಳ ಕುರಿತು ಮಾಹಿತಿ


ವದಂತಿಗಳಿಂದ ದೂರವಿದ್ದು, ಇಂಧನ ಖರೀದಿಯಲ್ಲಿ ಆತಂಕಕ್ಕೆ ಒಳಗಾಗಬಾರದೆಂದು ನಾಗರಿಕರಿಗೆ ಸೂಚನೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಳೊಂದಿಗೆ ಇಂಧನ ಪೂರೈಕೆ ಪರಿಸ್ಥಿತಿಯನ್ನು ಕಾರ್ಯದರ್ಶಿ (MoPNG) ಪರಿಶೀಲಿಸಿದ್ದಾರೆ, ಸಮರ್ಪಕ ಲಭ್ಯತೆಗಾಗಿ ಕೈಗೊಂಡ ಕ್ರಮಗಳ ಪ್ರಸ್ತಾಪ

ಎಲ್‌ಪಿಜಿ ವಿತರಣೆಗೆ ಆದ್ಯತೆ ನೀಡಲು ಮತ್ತು ಸಂಗ್ರಹಣೆ ಹಾಗೂ ತಪ್ಪು ಮಾಹಿತಿ ವಿರುದ್ಧ ಎಚ್ಚರ ವಹಿಸಲು ರಾಜ್ಯಗಳಿಗೆ ನಿರ್ದೇಶನ

ಮಾರ್ಚ್ 23ರಿಂದ 5 Kg FTL ಸಿಲಿಂಡರ್‌ ಮಾರಾಟ 5 ಲಕ್ಷ ದಾಟಿದೆ; ನಿನ್ನೆ 67,000ಕ್ಕೂ ಹೆಚ್ಚು ಮಾರಾಟ

ಪಿಎನ್‌ಜಿ ವಿಸ್ತರಣೆ ಸುಧಾರಣೆಗಳ ಅಡಿಯಲ್ಲಿ 10 ರಾಜ್ಯಗಳಿಗೆ ಹೆಚ್ಚುವರಿ LPG

ವೇಗ ಪಡೆದ ಪಿಎನ್‌ಜಿ ವಿಸ್ತರಣೆ; ಮಾರ್ಚ್ 2026ರಿಂದ 3.42 ಲಕ್ಷ ಸಂಪರ್ಕಗಳಿಗೆ ಅನಿಲ ಪೂರೈಕೆ ಮತ್ತು 3.7 ಲಕ್ಷ ಹೊಸ ನೋಂದಣಿ

ಕಡಲ ಕಾರ್ಯಾಚರಣೆ ಮತ್ತು ನಾವಿಕರ ಸುರಕ್ಷತೆ ಮೇಲೆ ಸರ್ಕಾರದ ನಿರಂತರ ನಿಗಾ; ಬಂದರುಗಳು ಸಾಮಾನ್ಯ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ

ಇದುವರೆಗೆ 1,130ಕ್ಕೂ ಹೆಚ್ಚು ಭಾರತೀಯ ನಾವಿಕರ ಸ್ವದೇಶ ವಾಪಸಾತಿ; ಕಳೆದ 24 ಗಂಟೆಗಳಲ್ಲಿ 155 ಜನ

ಕೊಲ್ಲಿ ಪ್ರದೇಶದ ಭಾರತೀಯ ಸಮುದಾಯಕ್ಕೆ ರಾಯಭಾರ ಕಚೇರಿಗಳು ಮತ್ತು ಪೋಸ್ಟ್‌ಗಳ 24 ಗಂಟೆ ನೆರವು

ವಿಮಾನಯಾನ ಪರಿಸ್ಥಿತಿ ಸುಧಾರಿಸುತ್ತಿದೆ; ಫೆಬ್ರವರಿ 28ರಿಂದ ಸುಮಾರು 6,49,000 ಪ್ರಯಾಣಿಕರು ಭಾರತಕ್ಕೆ ಆಗಮನ

ಪ್ರಕಟಣಾ ದಿನಾಂಕ: 03 APR 2026 6:34PM by PIB Bengaluru

ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಸಮನ್ವಯ ಕ್ರಮಗಳ ಮೂಲಕ ಪ್ರಮುಖ ಕ್ಷೇತ್ರಗಳಲ್ಲಿ ಸನ್ನದ್ಧತೆ ಮತ್ತು ಕಾರ್ಯಚಟುವಟಿಕೆ ಮುಂದುವರಿಸಲು ಸಕ್ರಿಯವಾಗಿ ತೊಡಗಿಕೊಂಡಿದೆ. ಈ ಕೆಳಗಿನ ಮಾಹಿತಿಯಲ್ಲಿ ಇಂಧನ ಪೂರೈಕೆ, ಕಡಲ ಕಾರ್ಯಾಚರಣೆ ಮತ್ತು ಆ ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಬೆಂಬಲದ ಕುರಿತು ಕೈಗೊಳ್ಳಲಾಗುತ್ತಿರುವ ಕ್ರಮಗಳ ವಿವರ ನೀಡಲಾಗಿದೆ:

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ದೇಶದಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು LPG ನಿರಂತರ ಲಭ್ಯತೆಯನ್ನು ಖಾತ್ರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoPNG) ತಿಳಿಸಿದಂತೆ:

ಸಾರ್ವಜನಿಕ ಸೂಚನೆ ಮತ್ತು ನಾಗರಿಕ ಜಾಗೃತಿ

· ಪೆಟ್ರೋಲ್, ಡೀಸೆಲ್ ಮತ್ತು LPG ಲಭ್ಯತೆ ಖಾತ್ರಿಪಡಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ನಾಗರಿಕರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆತಂಕಕ್ಕೆ ಒಳಗಾಗಿ ಸಂಗ್ರಹಣೆ ಮಾಡಿಕೊಳ್ಳದಂತೆ ಹಾಗೂ ಅನಗತ್ಯವಾಗಿ  LPG ಬುಕಿಂಗ್ ಮಾಡದಂತೆ ಸೂಚಿಸಲಾಗಿದೆ.

· ನಾಗರಿಕರು ವದಂತಿಗಳಿಂದ ದೂರವಿದ್ದು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು.

· LPG ವಿಷಯದಲ್ಲಿ ನಾಗರಿಕರು ಸಿಲಿಂಡರ್‌ಗಳನ್ನು ಬುಕಿಂಗ್ ಮಾಡಲು ಡಿಜಿಟಲ್ ವಿಧಾನಗಳನ್ನು ಬಳಸಬೇಕು; ಅಗತ್ಯವಿಲ್ಲದಿದ್ದರೆ LPG ವಿತರಕರ ಬಳಿ ಹೋಗುವುದನ್ನು ತಪ್ಪಿಸಬೇಕು.

· ಸಾಧ್ಯವಾದಲ್ಲೆಲ್ಲಾ ನಾಗರಿಕರು PNG, Induction ಮತ್ತು Electric Cooktop ನಂತಹ ಪರ್ಯಾಯ ಇಂಧನ ಬಳಸಲು ಪ್ರೋತ್ಸಾಹಿಸಲಾಗಿದೆ.

· ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಇಂಧನ ಉಳಿತಾಯ ಮಾಡಲು ಕೋರಲಾಗಿದೆ.

ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

· ಯುದ್ಧ ಪರಿಸ್ಥಿತಿಯ ನಡುವೆಯೂ ಸರ್ಕಾರ ದೇಶೀಯ LPG ಮತ್ತು PNG ಗೆ ಅತ್ಯುನ್ನತ ಆದ್ಯತೆ ನೀಡಿದ್ದು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ.

· ಸಂಸ್ಕರಣಾಗಾರ ಉತ್ಪಾದನೆ ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅಂತರವನ್ನು 21ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ಹೆಚ್ಚಿಸುವುದು ಸೇರಿದಂತೆ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆ ಹಲವು ತರ್ಕಬದ್ಧ ಕ್ರಮಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ.

· LPG ಬೇಡಿಕೆಯ ಮೇಲಿನ ಒತ್ತಡ ಕಡಿಮೆ ಮಾಡಲು Kerosene ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.

· ಸಣ್ಣ, ಮಧ್ಯಮ ಹಾಗೂ ಇತರ ಗ್ರಾಹಕರಿಗೆ ಕಲ್ಲಿದ್ದಲು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣ ನಿಗದಿ ಮಾಡಲು Coal India ಮತ್ತು Singareni Collieries ಗೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಆದೇಶ ನೀಡಿದೆ.

· ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ PNG ಸಂಪರ್ಕ ಕಲ್ಪಿಸಲು ರಾಜ್ಯಗಳಿಗೆ ಸಹಕರಿಸುವಂತೆ ಸೂಚಿಸಲಾಗಿದೆ.

· ಕಾರ್ಯದರ್ಶಿ (MoPNG) ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ (Food & Civil Supplies) ಸಭೆ ನಡೆಸಿ ಇಂಧನ ಪೂರೈಕೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ವಿಶೇಷವಾಗಿ ದೇಶೀಯ ಮತ್ತು ಅಗತ್ಯ ಬಳಕೆಗಾಗಿ LPG ವಿತರಣೆಗೆ ಆದ್ಯತೆ ನೀಡಲು ಮತ್ತು ಸಂಗ್ರಹಣೆ, ವದಂತಿಗಳು ಹಾಗೂ ತಪ್ಪು ಮಾಹಿತಿ ಮೇಲೆ ಕಟ್ಟುನಿಟ್ಟಾದ ನಿಗಾ ಇಡಲು ರಾಜ್ಯಗಳಿಗೆ ನಿರ್ದೇಶಿಸಲಾಯಿತು. ವಲಸೆ ಕಾರ್ಮಿಕರಿಗೆ FTL LPG ಪೂರೈಕೆ ಕುರಿತ ವರದಿಗಳ ಬಗ್ಗೆ, LPG ಪೂರೈಕೆಯಲ್ಲಿ ಯಾವುದೇ ಅಡ್ಡಿ ಇಲ್ಲ ಮತ್ತು ಪೂರೈಕೆ ಸ್ಥಿರವಾಗಿದೆ ಎಂದು ರಾಜ್ಯಗಳು ಸ್ಪಷ್ಟಪಡಿಸಿವೆ. OMC ಗಳ ಸಹಯೋಗದಲ್ಲಿ ಸ್ಥಳೀಯ ಅಗತ್ಯಕ್ಕನುಗುಣವಾಗಿ 5 Kg FTL LPG ಸಿಲಿಂಡರ್‌ ಗಳ ಗುರಿ ವಿತರಣೆ ನಿರ್ವಹಿಸಲು ರಾಜ್ಯಗಳು ಪರಿಗಣಿಸಬಹುದು ಎಂದು ಕಾರ್ಯದರ್ಶಿ ತಿಳಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಳೊಂದಿಗೆ ಸಮನ್ವಯ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

· Essential Commodities Act, 1955 ಮತ್ತು LPG Control Order, 2000 ಅಡಿಯಲ್ಲಿ  ರಾಜ್ಯ ಸರ್ಕಾರಗಳಿಗೆ ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ. ಪೆಟ್ರೋಲ್, ಡೀಸೆಲ್ ಮತ್ತು LPG ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರ ವಹಿಸಬೇಕು. ಭಾರತ ಸರ್ಕಾರ ಎಲ್ಲ ರಾಜ್ಯಗಳಿಗೆ ಅನೇಕ ಪತ್ರಗಳ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಇದನ್ನು ಪುನರ್‌ಸ್ಪಷ್ಟಪಡಿಸಿದೆ.

· ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಎಸಿಎಸ್/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಆಹಾರ ಮತ್ತು ನಾಗರಿಕ ಪೂರೈಕೆ ಅವರನ್ನು ಕೋರಲಾಗಿದೆ:

Ø ರಾಜ್ಯ/ಜಿಲ್ಲಾ ಮಟ್ಟದಲ್ಲಿ ಪ್ರತಿನಿತ್ಯ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಿ ನಿಯಮಿತ ಸಾರ್ವಜನಿಕ ಸೂಚನೆ ನೀಡಲು

Ø ಮೀಸಲಾದ ನಿಯಂತ್ರಣ ಕೊಠಡಿಗಳು/ಸಹಾಯವಾಣಿಗಳನ್ನು ಸ್ಥಾಪಿಸುವುದು

Ø ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ/ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ತಡೆಯುವುದು

Ø ಜಿಲ್ಲಾ ಆಡಳಿತಾಧಿಕಾರಿಗಳಿಂದ ದೈನಂದಿನ ಅಭಿಯಾನಗಳನ್ನು ತೀವ್ರಗೊಳಿಸಲು ಮತ್ತು OMC ಗಳ ಸಮನ್ವಯದೊಂದಿಗೆ ದಾಳಿಗಳು ಮತ್ತು ತಪಾಸಣೆಗಳನ್ನು ಮುಂದುವರಿಸಲು

Ø ತಮ್ಮ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳಲ್ಲಿ Commercial LPG ಹಂಚಿಕೆ ಆದೇಶ ಹೊರಡಿಸಲು

Ø ಹೆಚ್ಚುವರಿ SKO ಹಂಚಿಕೆಗಾಗಿ SKO ಆದೇಶ ಹೊರಡಿಸಲು

Ø CGD ವಿಸ್ತರಣೆ ಮತ್ತು RoW/RoU ಅನುಮತಿ, 24x7 ಕೆಲಸದ ಅನುಮತಿ ಇತ್ಯಾದಿ ಶೀಘ್ರ ಮಂಜೂರು ಮಾಡಲು

Ø PNG ಅಳವಡಿಕೆ ಮತ್ತು ಪರ್ಯಾಯ ಇಂಧನ ಉತ್ತೇಜಿಸಲು

Ø MoPNG ಯೊಂದಿಗೆ ಸಮನ್ವಯಕ್ಕಾಗಿ ಹಿರಿಯ Nodal Officer ನೇಮಿಸಲು

· 27.03.2026 ಮತ್ತು 02.04.2026 ರಂದು ಪತ್ರ ಬರೆದ ಭಾರತ ಸರ್ಕಾರ ಎಲ್ಲ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಾರ್ವಜನಿಕ ಸಂವಹನ ತೀವ್ರಗೊಳಿಸಲು, ಸೂಕ್ತ ಹಿರಿಯ ಮಟ್ಟದಲ್ಲಿ ಪ್ರತಿನಿತ್ಯ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲು ಹಾಗೂ ಸಾಮಾಜಿಕ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನಿಖರ ಮಾಹಿತಿ ಸಕಾಲದಲ್ಲಿ ನೀಡಿ ತಪ್ಪು ಮಾಹಿತಿ ತಡೆಯಲು ಮನವಿ ಮಾಡಿದೆ.

· ಪ್ರಸ್ತುತ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

· LPG ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆ ಪರಿಶೀಲನೆಗಾಗಿ ಅನೇಕ ರಾಜ್ಯಗಳಲ್ಲಿ ದಾಳಿ ಮುಂದುವರಿದಿದೆ. 4,000ಕ್ಕೂ ಹೆಚ್ಚು ದಾಳಿಗಳು ನಡೆದಿದ್ದು, ನಿನ್ನೆ 1,300ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

· ಸಂಗ್ರಹಣೆ/ಕಪ್ಪು ಮಾರಾಟದ ಯಾವುದೇ ಘಟನೆ ತಡೆಯಲು PSU OMC ಅಧಿಕಾರಿಗಳಿಗೆ ತಪಾಸಣೆ ವ್ಯವಸ್ಥೆ ಬಲಪಡಿಸಲು ನಿರ್ದೇಶಿಸಲಾಗಿದೆ.

· PSU OMC ಗಳು ಇಲ್ಲಿಯವರೆಗೆ 670ಕ್ಕೂ ಹೆಚ್ಚು LPG ವಿತರಕರಿಗೆ Show Cause Notice ನೀಡಿವೆ.

ದೇಶೀಯ LPG ಪೂರೈಕೆ ಸ್ಥಿತಿ

· ಭೌಗೋಳಿಕ-ರಾಜಕೀಯ ಸ್ಥಿತಿಯಿಂದ LPG ಪೂರೈಕೆ ಪ್ರಭಾವಿತವಾಗಿದೆ. ಇದರ ಹೊರತಾಗಿಯೂ LPG ವಿತರಕರಲ್ಲಿ ಯಾವುದೇ ಕೊರತೆ ವರದಿಯಾಗಿಲ್ಲ.

· ನಿನ್ನೆ Online LPG ಸಿಲಿಂಡರ್ಬುಕಿಂಗ್ಗಳು ಉದ್ಯಮ ಮಟ್ಟದಲ್ಲಿ 94%ಕ್ಕೆ ಏರಿಕೆಯಾಗಿದೆ.

· ವಿತರಕರ ಮಟ್ಟದಲ್ಲಿ ಬದಲಾವಣೆಯನ್ನು ತಡೆಗಟ್ಟಲು, Delivery Authentication Code (DAC) ಆಧರಿತ ವಿತರಣೆ ಫೆಬ್ರವರಿ 2026 ರ 53%ರಿಂದ ನಿನ್ನೆ 86%ಕ್ಕೆ ಹೆಚ್ಚಾಗಿದೆ.

· ನಿನ್ನೆ ಸುಮಾರು 55 ಲಕ್ಷ ದೇಶೀಯ LPG ಸಿಲಿಂಡರ್‌ಗಳ ವಿತರಣೆ ನಡೆದಿದೆ.

ವಾಣಿಜ್ಯ LPG ಪೂರೈಕೆ ಮತ್ತು ಹಂಚಿಕೆ ಕ್ರಮಗಳು

· 01.04.2026 ರ ಆದೇಶದ ಮೂಲಕ ಭಾರತ ಸರ್ಕಾರ, ಭಾರತದಲ್ಲಿನ ಪೆಟ್ರೋಕೆಮಿಕಲ್ ಸಂಕೀರ್ಣಗಳು ಸೇರಿದಂತೆ ಸಂಸ್ಕರಣಾ ಕಂಪನಿಗಳು ಔಷಧ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಮುಂತಾದ ನಿರ್ಣಾಯಕ ವಲಯಗಳಿಗೆ C3 & C4 Streams ಅನ್ನು ನಿಗದಿತ ಕನಿಷ್ಠ ಪ್ರಮಾಣದಲ್ಲಿ ನೀಡಲು ಅನುಮತಿ ನೀಡಿದೆ.

· ಸರ್ಕಾರ ಈಗಾಗಲೇ ಭಾಗಶಃ ವಾಣಿಜ್ಯ LPG ಪೂರೈಕೆ (20%) ಪುನಃಸ್ಥಾಪಿಸಿದೆ. ಇದಲ್ಲದೆ, 18.03.2026 ರ ಪತ್ರದ ಮೂಲಕ PNG ವಿಸ್ತರಣೆ ಸುಧಾರಣೆ ಆಧರಿಸಿ ರಾಜ್ಯಗಳಿಗೆ ಹೆಚ್ಚುವರಿ 10% ವಾಣಿಜ್ಯ LPG ಹಂಚಿಕೆ ಪ್ರಸ್ತಾಪಿಸಿದ್ದು, 21.03.2026 ರ ಪತ್ರದ ಮೂಲಕ ಮತ್ತೊಂದು 20% ಅನುಮೋದನೆ ನೀಡಿ ಒಟ್ಟು ಹಂಚಿಕೆ 50% (10% ಸುಧಾರಣೆ ಆಧರಿತ ಸೇರಿ) ಕ್ಕೆ ಏರಿಸಲಾಯಿತು. ಜೊತೆಗೆ, 27.03.2026 ರ ಪತ್ರದ ಮೂಲಕ ಹೆಚ್ಚುವರಿ 20% ಹಂಚಿಕೆ ನೀಡಿ ಒಟ್ಟು 70% ಕ್ಕೆ ಏರಿಸಲಾಗಿದ್ದು, ಉಕ್ಕು, ಆಟೋಮೊಬೈಲ್, ಜವಳಿ, ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ.

· ನಿನ್ನೆ 67,000ಕ್ಕೂ ಹೆಚ್ಚು 5 Kg FTL ಸಿಲಿಂಡರ್ಗಳ ಮಾರಾಟವಾಗಿದೆ.

· ಮಾರ್ಚ್ 23, 2026ರಿಂದ ಸುಮಾರು 5 ಲಕ್ಷ 5 Kg FTL ಸಿಲಿಂಡರ್ಗಳ ಮಾರಾಟ ಮಾರಾಟವಾಗಿದೆ.

· ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಭಾರತ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗೃಹೇತರ LPG ಯನ್ನು ಹಂಚಿಕೆ ಮಾಡಲು ಆದೇಶಗಳನ್ನು ಹೊರಡಿಸಿವೆ. ಮಾರ್ಚ್ 14, 2026 ರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾಣಿಜ್ಯ ಘಟಕಗಳಿಂದ ಒಟ್ಟು 66,693 MT ಗಳಷ್ಟು ಅನಿಲವನ್ನು ಹೆಚ್ಚಿಸಲಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು PNG ವಿಸ್ತರಣಾ ಉಪಕ್ರಮಗಳು

· D-PNG ಮತ್ತು CNG-Transport ಗ್ರಾಹಕರಿಗೆ 100% ಪೂರೈಕೆ ಆದ್ಯತೆ ನೀಡಲಾಗಿದೆ.

· Grid ಮೂಲಕ ಸಂಪರ್ಕಿತ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಸರಾಸರಿ ಬಳಕೆಯ 80% ರಷ್ಟು ಪೂರೈಕೆ ಇದೆ.

· ವಾಣಿಜ್ಯ LPG ಲಭ್ಯತೆ ಸಮಸ್ಯೆ ನಿವಾರಿಸಲು ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿನ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಕ್ಯಾಂಟೀನ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ PNG ಸಂಪರ್ಕಗಳಿಗೆ ಆದ್ಯತೆ ನೀಡಲು ನಗರ ಅನಿಲ ವಿತರಣೆ (CGD) ಘಟಕಗಳಿಗೆ ಸೂಚಿಸಲಾಗಿದೆ.

· ರಸಗೊಬ್ಬರ ಘಟಕಗಳು ಸೇರಿದಂತೆ ಎಲ್ಲಾ ಕೈಗಾರಿಕಾ ಗ್ರಾಹಕರು ತಮ್ಮ ಹೆಚ್ಚುವರಿ ಅವಶ್ಯಕತೆಗಳನ್ನು ಸ್ಥಳದಲ್ಲೇ ಒದಗಿಸುವಂತೆ ಸೂಚಿಸಲಾಗಿದೆ, ಇದರಿಂದಾಗಿ ಅನಿಲ ಮಾರುಕಟ್ಟೆ ಕಂಪನಿಗಳು ಅವುಗಳನ್ನು ವ್ಯವಸ್ಥೆಗೊಳಿಸಬಹುದು.

· ಐಜಿಎಲ್, ಎಂಜಿಎಲ್, ಗೈಲ್ ಗ್ಯಾಸ್ ಮತ್ತು ಬಿಪಿಸಿಎಲ್ ನಂತಹ ಸಿಜಿಡಿ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಪಿಎನ್‌ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹ ಧನ ನೀಡಿವೆ.

· ಸಿಜಿಡಿ ಜಾಲ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ಕೋರಿದೆ.

· 18.03.2026 ರ ಪತ್ರದ ಮೂಲಕ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಲ್‌ಪಿಜಿಯಿಂದ ಪಿಎನ್‌ಜಿಗೆ ದೀರ್ಘಾವಧಿಯ ಪರಿವರ್ತನೆಗೆ ಸಹಾಯ ಮಾಡಬಹುದಾದರೆ ರಾಜ್ಯಗಳಿಗೆ ವಾಣಿಜ್ಯ ಎಲ್‌ಪಿಜಿಯ ಹೆಚ್ಚುವರಿ 10% ಹಂಚಿಕೆಯನ್ನು ನೀಡುವುದಾಗಿ ತಿಳಿಸಿದೆ. 10 ರಾಜ್ಯಗಳು PNG ವಿಸ್ತರಣೆ ಸುಧಾರಣಾ ಕ್ರಮಗಳ ಅಡಿ ಹೆಚ್ಚುವರಿ ವಾಣಿಜ್ಯ LPG ಹಂಚಿಕೆ ಪಡೆಯುತ್ತಿವೆ; ಇನ್ನೊಂದು ರಾಜ್ಯದ ಅರ್ಜಿ ಪರಿಶೀಲನೆಯಲ್ಲಿದೆ.

· PNGRB ತನ್ನ 23.03.2026 ರ ಆದೇಶದ ಮೂಲಕ CGD ಸಂಸ್ಥೆಗಳಿಗೆ ಪೈಪ್‌ಲೈನ್ ಮೂಲಸೌಕರ್ಯ ಲಭ್ಯವಿರುವ ವಸತಿ ಶಾಲೆ, ಕಾಲೇಜು, ವಸತಿ ಗೃಹ, ಸಮುದಾಯ ಅಡುಗೆಮನೆಗಳು, ಅಂಗನವಾಡಿ ಅಡುಗೆಮನೆಗಳಿಗೆ 5 ದಿನಗಳಲ್ಲಿ PNG ಸಂಪರ್ಕ ನೀಡಲು ನಿರ್ದೇಶಿಸಿದೆ.

· ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ 24.03.2026 ರ ಪತ್ರದಲ್ಲಿ "ಕಡಿಮೆ ಸಮಯದ ಸಿಜಿಡಿ ಮೂಲಸೌಕರ್ಯಕ್ಕಾಗಿ ವೇಗವರ್ಧಿತ ಅನುಮೋದನೆ ಚೌಕಟ್ಟು" ಅನ್ನು 3 ತಿಂಗಳ ಕಾಲ ವಿಶೇಷ ಕ್ರಮವಾಗಿ ಅಳವಡಿಸಿಕೊಂಡಿದೆ ಎಂದು ತಿಳಿಸಿದೆ. ಇದರಲ್ಲಿ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪ್ರಕ್ರಿಯೆಗೊಳಿಸಲಾಗುತ್ತದೆ.

· ಭಾರತ ಸರ್ಕಾರವು 24.03.2026 ರ ಗೆಜೆಟ್‌ನಲ್ಲಿ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ಗಳು ಮತ್ತು ಇತರ ಸೌಲಭ್ಯಗಳ ಜೋಡಣೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026 ಅನ್ನು ಅಗತ್ಯ ಸರಕುಗಳ ಕಾಯ್ದೆ, 1955 ರ ಅಡಿಯಲ್ಲಿ ಪ್ರಕಟಿಸಿದೆ. ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಹಾಕಲು ಮತ್ತು ವಿಸ್ತರಿಸಲು, ಅನುಮೋದನೆಗಳು ಮತ್ತು ಭೂಮಿಗೆ ಪ್ರವೇಶದಲ್ಲಿನ ವಿಳಂಬವನ್ನು ಪರಿಹರಿಸಲು ಮತ್ತು ವಸತಿ ಪ್ರದೇಶಗಳನ್ನು ಒಳಗೊಂಡಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ತ್ವರಿತ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಈ ಆದೇಶವು ಸುವ್ಯವಸ್ಥಿತ ಮತ್ತು ಸಮಯಕ್ಕೆ ಸೀಮಿತವಾದ ಚೌಕಟ್ಟನ್ನು ಒದಗಿಸುತ್ತದೆ. ಇದು PNG ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಶುದ್ಧ ಇಂಧನಗಳಿಗೆ ಪರಿವರ್ತನೆಯನ್ನು ಬೆಂಬಲಿಸುತ್ತದೆ, ಇದರಿಂದಾಗಿ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ ಎಂದು ನಿರೀಕ್ಷಿಸಲಾಗಿದೆ.

· ರಕ್ಷಣಾ ಸಚಿವಾಲಯವು 27.03.2026 ರ ಪತ್ರದ ಮೂಲಕ ಜೂನ್ 30, 2026 ರವರೆಗೆ ಜಾರಿಗೆ ಬರುವ ಅಲ್ಪಾವಧಿಯ ನೀತಿ ಮಾರ್ಪಾಡನ್ನು ಹೊರಡಿಸಿದೆ, ಇದು ಎಲ್ಲಾ ವಸತಿ ಪ್ರದೇಶಗಳು/ರಕ್ಷಣಾ ಘಟಕ ಮಾರ್ಗಗಳಲ್ಲಿ PNG ಮೂಲಸೌಕರ್ಯ ಸ್ಥಾಪನೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ.

· PNGRB, D-PNG ಸಂಪರ್ಕಗಳನ್ನು ತ್ವರಿತಗೊಳಿಸಲು CGD ಘಟಕಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, PNG ವಿಸ್ತರಣೆಯಲ್ಲಿ ಆವೇಗವನ್ನು ಉಳಿಸಿಕೊಳ್ಳಲು ರಾಷ್ಟ್ರೀಯ PNG ಡ್ರೈವ್ 2.0 (01.01.2026-31.03.2026) ಅನ್ನು ಈಗ 30.06.2026 ರವರೆಗೆ ವಿಸ್ತರಿಸಲಾಗಿದೆ.

· ಕಳೆದ ಒಂದು ವಾರದಲ್ಲಿ 110 ಅನಿಲ ವಿತರಕರಲ್ಲಿ, 75,000ಕ್ಕೂ ಹೆಚ್ಚು ಸಂಪರ್ಕಗಳಿಗೆ ಅನಿಲ ಪೂರೈಕೆ ಮಾಡಲಾಗಿದೆ.

· ಮಾರ್ಚ್ 2026ರಿಂದ 3.42 ಲಕ್ಷಕ್ಕೂ ಹೆಚ್ಚು PNG ಸಂಪರ್ಕಗಳಿಗೆ ಅನಿಲ ಪೂರೈಕೆ ಮಾಡಲಾಗಿದ್ದು, 3.7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಸಂಪರ್ಕಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಕಚ್ಚಾ ತೈಲ ಸ್ಥಿತಿ ಮತ್ತು ಸಂಸ್ಕರಣಾ ಕಾರ್ಯಾಚರಣೆ

· ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳು ಸ್ಥಳದಲ್ಲಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ದಾಸ್ತಾನುಗಳನ್ನು ಸಹ ನಿರ್ವಹಿಸುತ್ತಿದೆ.

· ದೇಶೀಯ ಬಳಕೆ ಬೆಂಬಲಿಸಲು ಸಂಸ್ಕರಣಾಗಾರಗಳಿಂದ ದೇಶೀಯ LPG ಉತ್ಪಾದನೆ ಹೆಚ್ಚಿಸಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

· ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.

· ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಅಸಾಧಾರಣ ಮಟ್ಟದಲ್ಲಿ ಏರಿಕೆಯಾಗಿದೆ. ಗ್ರಾಹಕರನ್ನು ಇದರಿಂದ ರಕ್ಷಿಸಲು ಭಾರತ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ Excise Duty ಅನ್ನು ಪ್ರತಿ ಲೀಟರ್‌ಗೆ ₹10 ರಷ್ಟು ಕಡಿಮೆ ಮಾಡಲು ತೀರ್ಮಾನಿಸಿದೆ.

· ದೇಶೀಯ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ವಿಮಾನ ಟರ್ಬೈನ್ ಇಂಧನ (ATF) ಲಭ್ಯತೆ ಖಾತ್ರಿಗಾಗಿ ಡೀಸೆಲ್ ಮೇಲೆ ₹21.5 ಮತ್ತು ATF ಮೇಲೆ ₹29.5 ಪ್ರತಿ ಲೀಟರ್ ರಫ್ತು ಶುಲ್ಕ ವಿಧಿಸಲಾಗಿದೆ.

· ವದಂತಿಗಳ ಕಾರಣ ಕೆಲ ಪ್ರದೇಶಗಳಲ್ಲಿ ಆತಂಕದ ಖರೀದಿ ಕಂಡುಬಂದಿದ್ದು, ಇದರ ಪರಿಣಾಮವಾಗಿ ಅಸಾಧಾರಣವಾಗಿ ಹೆಚ್ಚಿನ ಮಾರಾಟ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಭಾರೀ ಜನದಟ್ಟಣೆ ಕಂಡುಬಂದಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಸಮರ್ಪಕ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹ ಲಭ್ಯವಿದೆ ಎಂದು ತಿಳಿಸಲಾಗಿದೆ.

· ಪೆಟ್ರೋಲ್ ಮತ್ತು ಡೀಸೆಲ್‌ನ ನಿಯಮಿತ ಚಿಲ್ಲರೆ ಬೆಲೆ ಬದಲಾಗದೆ ಮುಂದುವರಿದಿದ್ದು, PSU OMC ಗಳಿಗೆ ಪೆಟ್ರೋಲ್‌ನಲ್ಲಿ ₹24.40/ಲೀ ಮತ್ತು ಡೀಸೆಲ್ ನಲ್ಲಿ ₹104.99/ಲೀ ವಸೂಲಾತಿ ಹಂತದಲ್ಲಿದೆ.

· ವದಂತಿಗಳನ್ನು ನಂಬಬೇಡಿ ಎಂದು ಸರ್ಕಾರ ತನ್ನ ಸಲಹೆಯನ್ನು ಪುನರುಚ್ಚರಿಸುತ್ತದೆ. ವದಂತಿಗಳನ್ನು ನಿಗ್ರಹಿಸುವ ಸಲುವಾಗಿ, ಪತ್ರಿಕಾ ಗೋಷ್ಠಿಗಳ ಮೂಲಕ ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

· ಎಲ್ಲ ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿ 48,000 KL ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.

· ಭಾರತ ಸರ್ಕಾರವು 29.03.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕಾಗಿ ಮಾತ್ರ PDS SKO ಮುಕ್ತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ PDS SKO ವಿತರಣೆಯನ್ನು ಸುಗಮಗೊಳಿಸಿದೆ.

· ಪ್ರತಿ ಜಿಲ್ಲೆಗೆ ಗರಿಷ್ಠ ಎರಡು PSU OMC ಸೇವಾ ಕೇಂದ್ರಗಳು (ಆದ್ಯತೆ ಕಂಪನಿ ಸ್ವಾಮ್ಯದ ಕಂಪನಿ ನಿರ್ವಹಿಸುವುದು) 5,000 ಲೀಟರ್‌ಗಳವರೆಗೆ PDS SKO ಅನ್ನು ಸಂಗ್ರಹಿಸಲು ಅನುಮತಿಸಲಾಗಿದೆ.

· ಈ PSU OMC ಸೇವಾ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಅಥವಾ UT ಆಡಳಿತವು ಗೊತ್ತುಪಡಿಸುತ್ತದೆ.

· 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು SKO ಹಂಚಿಕೆ ಆದೇಶ ಹೊರಡಿಸಿವೆ. ಇದಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ರಾಜ್ಯಗಳು ಯಾವುದೇ SKO ಅಗತ್ಯ ಇಲ್ಲ ಎಂದು ತಿಳಿಸಿವೆ.

ಸಮುದ್ರ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆ

ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಚಿವಾಲಯ ತಿಳಿಸಿದ ಪ್ರಕಾರ:

· ಕಡಲು ವ್ಯಾಪಾರ ಮುಂದುವರಿಯುವಂತೆ ಖಾತ್ರಿ ಮಾಡುತ್ತ, ಹಡಗಿನ ಚಲನೆ, ಬಂದರು ಕಾರ್ಯಾಚರಣೆ ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ.

· ಈ ಪ್ರದೇಶದ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ಯಾವ ಹಡಗಿಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

· ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ 485 ಭಾರತೀಯ ನಾವಿಕರನ್ನೊಳಗೊಂಡ 18 ಭಾರತೀಯ ಧ್ವಜ ಹೊಂದಿರುವ ಹಡಗುಗಳಿದ್ದು, ಹಡಗು ನಿರ್ದೇಶನಾಲಯ (DG Shipping), ಹಡಗು ಮಾಲೀಕರು, RPSL ಸಂಸ್ಥೆಗಳು ಮತ್ತು ಭಾರತೀಯ Mission ಗಳ ಸಹಯೋಗದಲ್ಲಿ ಸ್ಥಿತಿ ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

· DG Shipping Control Room 24x7 ಕಾರ್ಯ ನಿರ್ವಹಿಸುತ್ತಿದ್ದು, ಆರಂಭದಿಂದ ಇಲ್ಲಿಯವರೆಗೆ 4,984 ಕರೆಗಳು ಮತ್ತು 10,296 ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ; ಕಳೆದ 24 ಗಂಟೆಗಳಲ್ಲಿ 99 ಕರೆಗಳು ಮತ್ತು 362 ಇಮೇಲ್‌ಗಳು ಬಂದಿವೆ.

· DG Shipping ಇದುವರೆಗೆ 1130 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಅನುಕೂಲ ಮಾಡಿಕೊಟ್ಟಿದೆ, ಕಳೆದ 24 ಗಂಟೆಗಳಲ್ಲಿ ಕೊಲ್ಲಿ ಪ್ರದೇಶದ ವಿಮಾನ ನಿಲ್ದಾಣಗಳು ಮತ್ತು ವಿವಿಧ ಪ್ರಾದೇಶಿಕ ಸ್ಥಳಗಳಿಂದ 155 ಮಂದಿ ವಾಪಸಾಗಿದ್ದಾರೆ.

· ಭಾರತದ ಬಂದರು ಕಾರ್ಯಾಚರಣೆ ಸಾಮಾನ್ಯ ಸ್ಥಿತಿಯಲ್ಲಿದ್ದು, ಯಾವ ಅಡಚಣೆಯೂ ವರದಿಯಾಗಿಲ್ಲ. ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ನಾವಿಕ ಮಂಡಳಿಗಳು ಸುಗಮ ಕಾರ್ಯಾಚರಣೆ ದೃಢಪಡಿಸಿವೆ.

· ನಾವಿಕರ ಕಲ್ಯಾಣ ಮತ್ತು ನಿರಂತರ ನಾವಿಕ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ನಾವಿಕ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವುದನ್ನು ಮುಂದುವರೆಸಿದೆ.

ಪ್ರದೇಶದಲ್ಲಿ ಭಾರತೀಯ ನಾಗರಿಕರ ಸುರಕ್ಷತೆ

ಈ ಪ್ರದೇಶದಾದ್ಯಂತ ಭಾರತೀಯ ರಾಯಭಾರ ಕಚೇರಿಗಳು ಮತ್ತು ಪೋಸ್ಟ್‌ಗಳು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನೆರವು ಮತ್ತು ಅಗತ್ಯ ಸೂಚನೆ ನೀಡುವುದನ್ನು ಮುಂದುವರಿಸುತ್ತಿವೆ. ಸಚಿವಾಲಯ ತಿಳಿಸಿದಂತೆ:

· ಏಪ್ರಿಲ್ 02, 2026 ರಂದು, ಭಾರತ-ರಷ್ಯಾ ಅಂತರ-ಸರ್ಕಾರಿ ಆಯೋಗದ (IRIGC-TEC) ಸಹ-ಅಧ್ಯಕ್ಷರಾದ ರಷ್ಯಾದ ಮೊದಲ ಉಪ-ಪ್ರಧಾನ ಮಂತ್ರಿ ಡೆನಿಸ್ ಮಾಂಟುರೊವ್ ಅವರು ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು; ಉಭಯ ನಾಯಕರು ವ್ಯಾಪಾರ, ರಸಗೊಬ್ಬರ, ಸಂಪರ್ಕ ಮತ್ತು ಜನರಿಂದ ಜನರಿಗೆ ಸಂಬಂಧಗಳ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಇಬ್ಬರೂ ಚರ್ಚಿಸಿದರು ಮತ್ತು ಕಳೆದ ಡಿಸೆಂಬರ್ನಲ್ಲಿ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ನಡೆದ 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಫಲಿತಾಂಶಗಳನ್ನು ಅನುಷ್ಠಾನಗೊಳಿಸುವಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.

· ಅದೇ ದಿನ, EAM ಅವರು ಮೊದಲ ಉಪ ಪ್ರಧಾನ ಮಂತ್ರಿ ಡೆನಿಸ್ ಮಾಂಟುರೊವ್ ಅವರೊಂದಿಗೆ ವ್ಯಾಪಾರ, ಕೈಗಾರಿಕೆ, ಇಂಧನ, ರಸಗೊಬ್ಬರಗಳು, ಸಂಪರ್ಕ ಮತ್ತು ಚಲನಶೀಲತೆ ಸೇರಿದಂತೆ ಭಾರತ-ರಷ್ಯಾ ದ್ವಿಪಕ್ಷೀಯ ಸಹಕಾರದ ಕುರಿತು ಆಳವಾದ ಸಂಭಾಷಣೆ ನಡೆಸಿದರು ಮತ್ತು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

· ವಿದೇಶಾಂಗ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದೆ, ದೊಡ್ಡ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವು ಹೆಚ್ಚಿನ ಆದ್ಯತೆಯಾಗಿದೆ; ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಮೀಸಲಾದ ವಿಶೇಷ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಾಗೂ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳೊಂದಿಗೆ ನಿಯಮಿತ ಸಮನ್ವಯವನ್ನು ನಿರ್ವಹಿಸಲಾಗುತ್ತಿದೆ.

· ಆ ಪ್ರದೇಶದ ರಾಯಭಾರ ಕಚೇರಿಗಳು ಮತ್ತು ಪೋಸ್ಟ್‌ಗಳು ದಿನದ 24 ಗಂಟೆಗಳ ಕಾಲ ಸಹಾಯವಾಣಿಗಳನ್ನು ನಿರ್ವಹಿಸುತ್ತಿವೆ ಮತ್ತು ಭಾರತೀಯ ಸಮುದಾಯ ಸಂಘಗಳು, ಸಂಸ್ಥೆಗಳು ಮತ್ತು ಕಂಪನಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ; ಪ್ರಜೆಗಳು, ವಿದ್ಯಾರ್ಥಿಗಳು, ನಾವಿಕರು ಮತ್ತು ನಿವಾಸಿ ಭಾರತೀಯ ಸಮುದಾಯಗಳಿಗೆ ನಿಯಮಿತ ಸಲಹೆಗಳನ್ನು ನೀಡಲಾಗುತ್ತಿದೆ, ಆದರೆ ಮಿಷನ್‌ಗಳು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಮತ್ತು ವೀಸಾಗಳು, ಕಾನ್ಸುಲರ್ ಸೇವೆಗಳು, ವಾಯುಪ್ರದೇಶ ನಿರ್ಬಂಧಗಳು ಅನ್ವಯವಾಗುವ ನೆರೆಯ ದೇಶಗಳ ಮೂಲಕ ಸಾಗಣೆ ಮತ್ತು ಅಗತ್ಯವಿರುವಲ್ಲೆಲ್ಲಾ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸುತ್ತಿವೆ.

· ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮ ಹೆಚ್ಚಿನ ಆದ್ಯತೆಯಾಗಿದ್ದು, ಶೈಕ್ಷಣಿಕ ವರ್ಷ ಪ್ರಭಾವಿತವಾಗದಂತೆ ರಾಯಭಾರ ಕಚೇರಿಗಳು ಮತ್ತು ಸ್ಥಳೀಯ ಪ್ರಾಧಿಕಾರಗಳು, ಭಾರತೀಯ ಶಾಲೆಗಳು ಮತ್ತು National Testing Agency (JEE ಮತ್ತು NEET ಗಾಗಿ) ಯೊಂದಿಗೆ ನಿಕಟ ಸಮನ್ವಯ ನಡೆಸುತ್ತಿವೆ.

• ಪ್ರದೇಶದಾದ್ಯಂತ ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಗಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮಿಷನ್‌ಗಳು ಅವರೊಂದಿಗೆ ನಿರಂತರ ಸಂಪರ್ಕದಲ್ಲಿವೆ, ಕಾನ್ಸುಲರ್ ಸಹಾಯವನ್ನು ಒದಗಿಸುವುದು, ಕುಟುಂಬಗಳೊಂದಿಗೆ ಸಂವಹನವನ್ನು ಸುಗಮಗೊಳಿಸುವುದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಭಾರತಕ್ಕೆ ಮರಳಲು ಬಯಸುವವರಿಗೆ ಸಹಾಯ ಮಾಡುವುದು.

· ಒಟ್ಟಾರೆ ವಿಮಾನ ಪರಿಸ್ಥಿತಿ ಸುಧಾರಿಸುತ್ತಿದ್ದು, ಆ ಪ್ರದೇಶದಿಂದ ಭಾರತದ ವಿವಿಧ ಗಮ್ಯಸ್ಥಾನಗಳಿಗೆ ಹೆಚ್ಚುವರಿ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ; ಫೆಬ್ರವರಿ 28ರಿಂದ ಸುಮಾರು 6,49,000 ಪ್ರಯಾಣಿಕರು ಆ ಪ್ರದೇಶದಿಂದ ಭಾರತಕ್ಕೆ ತೆರಳಿದ್ದಾರೆ.

• ಯುಎಇ: ಕಾರ್ಯಾಚರಣೆ ಮತ್ತು ಸುರಕ್ಷತಾ ಪರಿಗಣನೆಗಳ ಆಧಾರದ ಮೇಲೆ ವಿಮಾನಯಾನ ಸಂಸ್ಥೆಗಳು ಸೀಮಿತ ನಿಗದಿತವಲ್ಲದ ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರಿಸಿವೆ, ಯುಎಇಯಿಂದ ಭಾರತಕ್ಕೆ ಸುಮಾರು 90 ವಿಮಾನಗಳು ನಿರೀಕ್ಷಿಸಲಾಗಿದೆ.

• ಸೌದಿ ಅರೇಬಿಯಾ ಮತ್ತು ಓಮನ್: ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

• ಕತಾರ್: ವಾಯುಪ್ರದೇಶವನ್ನು ಭಾಗಶಃ ಪುನಃ ತೆರೆಯುವುದರೊಂದಿಗೆ, ಕತಾರ್ ಏರ್ವೇಸ್ ಭಾರತಕ್ಕೆ ಸುಮಾರು 8–10 ವಿಮಾನಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

· ಕುವೈತ್: ವಾಯುಪ್ರದೇಶ ಮುಚ್ಚಲ್ಪಟ್ಟಿದೆ; ಜಜೀರಾ ಏರ್ವೇಸ್ ದಮ್ಮಾಮ್ (ಸೌದಿ ಅರೇಬಿಯಾ) ನಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿದೆ ಮತ್ತು ಕುವೈತ್ ಏರ್ವೇಸ್ ಸಹ ಇದೇ ರೀತಿಯ ಕಾರ್ಯಾಚರಣೆಗಳನ್ನು ಘೋಷಿಸಿದೆ.

• ಬಹ್ರೇನ್: ವಾಯುಪ್ರದೇಶ ಮುಚ್ಚಲ್ಪಟ್ಟಿದೆ; ಗಲ್ಫ್ ಏರ್ ದಮ್ಮಾಮ್ (ಸೌದಿ ಅರೇಬಿಯಾ) ನಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿದೆ.

• ಇರಾನ್: ವಾಯುಪ್ರದೇಶ ಮುಚ್ಚುವಿಕೆಯ ದೃಷ್ಟಿಯಿಂದ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತೀಯ ಪ್ರಜೆಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ; ಇಲ್ಲಿಯವರೆಗೆ, 1,267 ಭಾರತೀಯರು (860 ವಿದ್ಯಾರ್ಥಿಗಳು ಸೇರಿದಂತೆ) ಮಿಷನ್ ಬೆಂಬಲದೊಂದಿಗೆ ಇರಾನ್‌ನಿಂದ ನಿರ್ಗಮಿಸುತ್ತಿದ್ದಾರೆ.

• ಇಸ್ರೇಲ್: ವಾಯುಪ್ರದೇಶ ನಿರ್ಬಂಧಗಳಿಂದಾಗಿ ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ ಭಾರತೀಯ ಪ್ರಜೆಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ.

• ಇರಾಕ್: ವಾಯುಪ್ರದೇಶ ಮುಚ್ಚಿರುವುದರಿಂದ ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಭಾರತೀಯ ಪ್ರಜೆಗಳ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.

· ಕುವೈತ್ ಮತ್ತು ಬಹ್ರೇನ್‌ನಲ್ಲಿ ವಾಯುಪ್ರದೇಶ ಮುಚ್ಚಿರುವುದರಿಂದ, ಭಾರತೀಯ ಪ್ರಜೆಗಳಿಗೆ ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

 

*****

 

 


(ಪ್ರಕಟಣೆ ಐ.ಡಿ.: 2248922) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , Assamese , Bengali , Gujarati , Odia , Tamil , Telugu , Malayalam