ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ  ಅವರನ್ನು ಭೇಟಿ ಮಾಡಿದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ರಸ್ಟಿಗಳು

ಪ್ರಕಟಣಾ ದಿನಾಂಕ: 19 MAR 2026 9:13PM by PIB Bengaluru

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಇಂದು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (ಐ ಜಿ ಎನ್ ಸಿ ಎ) ಟ್ರಸ್ಟಿಗಳನ್ನು ಭೇಟಿ ಮಾಡಿ, ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಬಗ್ಗೆ ವಿವಿಧ ಅಂಶಗಳನ್ನು ಚರ್ಚಿಸಿದರು.  

ಪ್ರಧಾನಮಂತ್ರಿ ಅವರು, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ರಸ್ಟಿಗಳನ್ನು ಭೇಟಿ ಮಾಡಿದರು ಮತ್ತು ಸಾಂಸ್ಕೃತಿಕ ಉತ್ತೇಜನ ಪಯಣಕ್ಕೆ ಹೆಚ್ಚಿನ ಜನರನ್ನು ಕರೆತರುವ ಮಾರ್ಗಗಳನ್ನು ಬಗ್ಗೆ ಸಮಾಲೋಚನೆ ನಡೆಸಿದರು. ಸಂವಾದದ ವೇಳೆ,  ಪ್ರಧಾನಮಂತ್ರಿ  ಮತ್ತು ಟ್ರಸ್ಟಿಗಳು ಡಿಜಿಟಲ್ ಮತ್ತು ತಳಮಟ್ಟದ ಉಪಕ್ರಮಗಳ ಮೂಲಕ ಜನ ಸಂಪರ್ಕವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು ಮತ್ತು ಭಾರತದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಕಲಾವಿದರು ಮತ್ತು ವಿದ್ವಾಂಸರನ್ನು ಬೆಂಬಲಿಸುವ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ  X  ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಐ ಜಿ ಎನ್ ಸಿ ಎ ಟ್ರಸ್ಟಿಗಳನ್ನು ಭೇಟಿ ಮಾಡಿ ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಬಗ್ಗೆ ವಿವಿಧ ಅಂಶಗಳನ್ನು ಚರ್ಚಿಸಿದೆನು. ಈ ಪಯಣಕ್ಕೆ ಹೆಚ್ಚಿನ ಜನರನ್ನು ಕರೆತರುವ, ಡಿಜಿಟಲ್ ಮತ್ತು ತಳಮಟ್ಟದ ಉಪಕ್ರಮಗಳ ಮೂಲಕ ಜನ ಸಂಪರ್ಕವನ್ನು ಬಲಪಡಿಸುವ ಮತ್ತು ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಕಲಾವಿದರು ಮತ್ತು ವಿದ್ವಾಂಸರನ್ನು ಬೆಂಬಲಿಸುವ ಮಾರ್ಗಗಳನ್ನು ಸಹ ನಾವು ಅನ್ವೇಷಿಸಿದ್ದೇವೆ.’’

 

*****


(ಪ್ರಕಟಣೆ ಐ.ಡಿ.: 2242834) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Manipuri , Bengali , Punjabi , Gujarati , Telugu