ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಉತ್ತರ ಪ್ರದೇಶದ ಬಾರಾಬಂಕಿಯಿಂದ ಬಹ್ರೈಚ್‌ವರೆಗೆ (101.515 ಕಿ.ಮೀ.) 6,969.04 ಕೋಟಿ ರೂಪಾಯಿ ವೆಚ್ಚದಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ (ಹೈಬ್ರಿಡ್ ಆನ್ಯುಯಿಟಿ ಮಾಡೆಲ್) ನಾಲ್ಕು ಪಥದ ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿ-927 ನಿರ್ಮಾಣಕ್ಕೆ ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
18 MAR 2026 4:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯು, ಉತ್ತರ ಪ್ರದೇಶದ ಬಾರಾಬಂಕಿಯಿಂದ ಬಹ್ರೈಚ್‌ವರೆಗೆ (101.515 ಕಿ.ಮೀ.) 6,969.04 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಪಥದ ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿ-927 ಅನ್ನು ಸರಕಾರಿ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ (ಹೈಬ್ರಿಡ್ ಆನ್ಯಯಿಟಿ ಮಾಡೆಲ್- ಎಚ್‌ಎಎಂ) ನಿರ್ಮಿಸಲು ಅನುಮೋದನೆ ನೀಡಿದೆ.
ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ -927ರ ಬಾರಾಬಂಕಿ-ಬಹ್ರೈಚ್ ವಿಭಾಗದ ಉದ್ದೇಶಿತ ಉನ್ನತೀಕರಣವು ಬಾರಾಬಂಕಿ ಮತ್ತು ಬಹ್ರೈಚ್ ಜಿಲ್ಲೆಯಾದ್ಯಂತ ರಸ್ತೆ ನಿರ್ಮಾಣ ಕುರಿತಾದ ಲೋಪಗಳು, ತೀಕ್ಷ್ಣವಾದ ತಿರುವುಗಳು ಮತ್ತು ವಾಹಣ ದಟ್ಟಣೆಯನ್ನು ಪರಿಹರಿಸುತ್ತದೆ. ನಿರಂತರ ಸೇವಾ ರಸ್ತೆಗಳೊಂದಿಗೆ ಪ್ರವೇಶ-ನಿಯಂತ್ರಿತ 4-ಪಥದ ಹೆದ್ದಾರಿಯಾಗಿ ವಿನ್ಯಾಸಗೊಳಿಸಲಾದ ಈ ಯೋಜನೆಯು ಪ್ರಮುಖ ಜನವಸತಿಗಳನ್ನು ತಪ್ಪಿಸಿ (ಬೈಪಾಸ್) ಹಾದುಹೋಗುತ್ತದೆ. ಆ ಮೂಲಕ ಸರಾಸರಿ ಪ್ರಯಾಣದ ವೇಗವನ್ನು ಹೆಚ್ಚಿಸುತ್ತದೆ, ಪ್ರಯಾಣದ ಸಮಯವನ್ನು ಸುಮಾರು ಒಂದು ಗಂಟೆಗೆ ಕಡಿಮೆ ಮಾಡುತ್ತದೆ. ಜೊತೆಗೆ ಒಟ್ಟಾರೆ ರಸ್ತೆ ಸುರಕ್ಷತೆ, ಇಂಧನ ದಕ್ಷತೆ ಮತ್ತು ವಾಹನ ನಿರ್ವಹಣಾ ವೆಚ್ಚವನ್ನು ಸುಧಾರಿಸುತ್ತದೆ. ಆ ಮೂಲಕ ಪ್ರಾದೇಶಿಕ ಸಾರಿಗೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
ಈ ಯೋಜನೆಯು ಉತ್ತರ ಪ್ರದೇಶದಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಸರಕುಸಾಗಣೆ ಕೇಂದ್ರಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ನವೀಕರಿಸಿದ ಕಾರಿಡಾರ್ 03 ಆರ್ಥಿಕ ನೋಡ್‌ಗಳು, 02 ಸಾಮಾಜಿಕ ನೋಡ್‌ಗಳು ಮತ್ತು 12 ಸರಕುಸಾಗಣೆ ನೋಡ್‌ಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಬಹು-ಮಾದರಿ ಏಕೀಕರಣವನ್ನು ಹೆಚ್ಚಿಸುತ್ತದೆ. ʻರುಪೈದಿಹಾʼ ಭೂ ಬಂದರು ಮತ್ತು ವಿಮಾನ ನಿಲ್ದಾಣಗಳೊಂದಿಗೆ ವರ್ಧಿತ ಬಹುಮಾದರಿ ಸಂಪರ್ಕವನ್ನು ಒದಗಿಸುತ್ತದೆ. ಆ ಮೂಲಕ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ವೇಗದ ಚಲನೆಗೆ ಅನುಕೂಲವಾಗುತ್ತದೆ. ಇದು ಪೂರ್ಣಗೊಂಡ ನಂತರ, ಯೋಜನೆಯು ನೇಪಾಳಗಂಜ್ ಗಡಿಯ ಮೂಲಕ ಭಾರತ ಮತ್ತು ನೇಪಾಳದ ನಡುವೆ ಪ್ರಮುಖ ಗಡಿಯಾಚೆಗಿನ ವ್ಯಾಪಾರ ಮತ್ತು ಸಾರಿಗೆ ಕಾರಿಡಾರ್ ಅನ್ನು ರೂಪಿಸುತ್ತದೆ. ಇದು ʻರುಪೈದಿಹಾʼ ಭೂ ಬಂದರಿಗೆ ಪ್ರವೇಶವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಇದು ಬಹ್ರೈಚ್ ಜಿಲ್ಲೆ ಮತ್ತು ಶ್ರಾವಸ್ತಿ ಜಿಲ್ಲೆಯಂತಹ ದೂರದ ಜಿಲ್ಲೆಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ʻಪಿಎಂ ಗತಿಶಕ್ತಿʼ ಆರ್ಥಿಕ ಮತ್ತು ಸರಕು-ಸಾಗಣೆ ನೋಡ್‌ಗಳನ್ನು ಬೆಂಬಲಿಸುತ್ತದೆ ಜೊತೆಗೆ ಕೃಷಿ, ವ್ಯಾಪಾರ, ಪ್ರವಾಸೋದ್ಯಮ, ಗಡಿಯಾಚೆಗಿನ ವಾಣಿಜ್ಯ ಮತ್ತು ಪ್ರಾದೇಶಿಕ ಹೂಡಿಕೆಯನ್ನು ಉತ್ತೇಜಿಸುತ್ತದೆ.
ಕಾರಿಡಾರ್ ನಕ್ಷೆ

ಯೋಜನೆಯ ವಿವರಗಳು:
|
ವೈಶಿಷ್ಟ್ಯ
|
ವಿವರಗಳು
|
|
ಯೋಜನೆಯ ಹೆಸರು
|
ಬಾರಾಬಂಕಿಯಿಂದ ಬಹ್ರೈಚ್ ವರೆಗಿನ 4-ಪಥ ಪ್ರವೇಶ-ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿ-927
|
|
ಕಾರಿಡಾರ್
|
ಲಕ್ನೋ - ರುಪೈದಿಹಾ
|
|
ಉದ್ದ (ಕಿಮೀ)
|
101.515
|
|
ಒಟ್ಟು ನಾಗರಿಕ ವೆಚ್ಚ (ಕೋಟಿ ರೂ.)
|
3,485.49
|
|
ಭೂಸ್ವಾಧೀನ ವೆಚ್ಚ (ಕೋಟಿ ರೂ.)
|
1,574.85
|
|
ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.)
|
6,969.04
|
|
ಮಾದರಿ
|
ಸರಕಾರಿ-ಖಾಸಗಿ ಸಹಭಾಗಿತ್ವ (ಹೈಬ್ರಿಡ್ ಆನ್ಯುಯಿಟಿ ಮೋಡ್-ಎಚ್‌ಎಎಂ)
|
|
ಬೈಪಾಸ್ ಗಳು
|
48.28 ಕಿ.ಮೀ.
|
|
ಸಂಪರ್ಕ ಹೊಂದಿದ ಪ್ರಮುಖ ರಸ್ತೆಗಳು
|
ರಾಷ್ಟ್ರೀಯ ಹೆದ್ದಾರಿಗಳು - ರಾಷ್ಟ್ರೀಯ ಹೆದ್ದಾರಿ -27, ರಾಷ್ಟ್ರೀಯ ಹೆದ್ದಾರಿ -330 ಬಿ, ಮತ್ತು ರಾಷ್ಟ್ರೀಯ ಹೆದ್ದಾರಿ -730
ರಾಜ್ಯ ಹೆದ್ದಾರಿಗಳು - ಎಸ್ಎಚ್-13 ಮತ್ತು ಎಸ್ಎಚ್-30ಬಿ
|
|
ಆರ್ಥಿಕ / ಸಾಮಾಜಿಕ / ಸಾರಿಗೆ ನೋಡ್ ಗಳು ಸಂಪರ್ಕ ಹೊಂದಿವೆ
|
ವಿಮಾನ ನಿಲ್ದಾಣಗಳು: ಲಕ್ನೋ ಮತ್ತು ಶರಾವಸ್ತಿ
ರೈಲು ನಿಲ್ದಾಣಗಳು: ಬಾರಾಬಂಕಿ, ರಸೌಲಿ, ಜಂಗೀರಾಬಾದ್, ರಫಿನಗರ್, ಬಿಂದೌರಾ, ಬುರ್ಹ್ವಾಲ್, ಚೌಕಾಘಾಟ್, ಘಘ್ರಾಘಾಟ್, ಜರ್ವಾಲ್ ಮತ್ತು ಬಹ್ರೈಚ್
ಭೂ ಬಂದರು: ರೂಪೈದಿಹ
ಆರ್ಥಿಕ ನೋಡ್‌ಗಳು: 01 ಎಸ್‌ಇಝಡ್ ಮತ್ತು 02 ಮೆಗಾ ಫುಡ್ ಪಾರ್ಕ್
ಸಾಮಾಜಿಕ ನೋಡ್‌ಗಳು: 02 ಮಹತ್ವಾಕಾಂಕ್ಷೆಯ ಜಿಲ್ಲೆಗಳು.
|
|
ಸಂಪರ್ಕ ಹೊಂದುವ ಪ್ರಮುಖ ನಗರಗಳು / ಪಟ್ಟಣಗಳು
|
ಬಾರಾಬಂಕಿ, ರಾಮನಗರ, ಜರ್ವಾಲ್, ಕೈಸರ್ಗನ್, ಕುಂದಾಸರ್, ಫಖರ್ಪುರ್ ಮತ್ತು ಬಹ್ರೈಚ್
|
|
ಉದ್ಯೋಗ ಸೃಷ್ಟಿ ಸಾಮರ್ಥ್ಯ
|
36.54 ಲಕ್ಷ ಮಾನವ ದಿನಗಳು (ನೇರ) ಮತ್ತು 43.04 ಲಕ್ಷ ಮಾನವ ದಿನಗಳು (ಪರೋಕ್ಷ)
|
|
ಹಣಕಾಸು ವರ್ಷ -28ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ದಟ್ಟಣೆ (ಎಎಡಿಟಿ)
|
28,557 (ಪ್ಯಾಕೇಜ್ -1) ಮತ್ತು 21,270 (ಪ್ಯಾಕೇಜ್ -2) ಪ್ಯಾಸೆಂಜರ್ ಕಾರು ಘಟಕಗಳು (ಪಿಸಿಯು) ಎಂದು ಅಂದಾಜಿಸಲಾಗಿದೆ.
|
*****
(ಪ್ರಕಟಣೆ ಐ.ಡಿ.: 2241838)
ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Telugu