ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೈಬ್ರಿಡ್ ಅನ್ಯುಯಿಟಿ ಮೋಡ್ ಅಡಿಯಲ್ಲಿ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯ ದೆಹಲಿ-ಫರಿದಾಬಾದ್-ಬಲ್ಲಭಗಢ-ಸೋಹ್ನಾ ಸ್ಪರ್ ನಿಂದ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ರೀನ್ ಫೀಲ್ಡ್ ಸಂಪರ್ಕದ ನಿರ್ಮಾಣಕ್ಕಾಗಿ ಪರಿಷ್ಕೃತ ವೆಚ್ಚದ ಅಂದಾಜಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
10 MAR 2026 4:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೈಬ್ರಿಡ್ ಅನ್ಯುಯಿಟಿ ಮೋಡ್ ಅಡಿಯಲ್ಲಿ ದೆಹಲಿ-ಮುಂಬೈ ಎಕ್ಸ್ ಪ್ರೆಸ್ವೇಯ ದೆಹಲಿ-ಫರಿದಾಬಾದ್-ಬಲ್ಲಭಗಢ-ಸೋಹ್ನಾ ಸ್ಪರ್ ನಿಂದ ಜೇವರ್ ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ರೀನ್ಫೀಲ್ಡ್ ಸಂಪರ್ಕದ ನಿರ್ಮಾಣಕ್ಕಾಗಿ 3630.77 ಕೋಟಿ ರೂಪಾಯಿಗಳ ಪರಿಷ್ಕೃತ ಒಟ್ಟು ಬಂಡವಾಳ ವೆಚ್ಚಕ್ಕೆ ಅನುಮೋದನೆ ನೀಡಿದೆ.
31.42 ಕಿಮೀ ಉದ್ದದ ಈ ಯೋಜನಾ ಕಾರಿಡಾರ್ ದಕ್ಷಿಣ ದೆಹಲಿ, ಫರಿದಾಬಾದ್ ಮತ್ತು ಗುರುಗ್ರಾಮದಿಂದ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮತ್ತು ಅತಿ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಆ ಮೂಲಕ ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಆರ್ಥಿಕ ಬೆಳವಣಿಗೆ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಉತ್ತೇಜಿಸುತ್ತದೆ.
ಈ ಕಾರಿಡಾರ್ ಈಸ್ಟರ್ನ್ ಪೆರಿಫೆರಲ್ ಎಕ್ಸ್ ಪ್ರೆಸ್ ವೇ, ಯಮುನಾ ಎಕ್ಸ್ ಪ್ರೆಸ್ ವೇ ಮತ್ತು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC) ಗಳನ್ನು ಸಂಧಿಸುವ ಮೂಲಕ ಬಹುಮಾದರಿ ಸಾರಿಗೆ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. ಈ ಎಲಿವೇಟೆಡ್ ಕಾರಿಡಾರ್ ಕೇವಲ ಒಂದು ರಚನಾತ್ಮಕ ಸುಧಾರಣೆಯಲ್ಲ, ಬದಲಾಗಿ ಇದು ನಗರ ರೂಪಾಂತರ, ಪ್ರಾದೇಶಿಕ ಸಂಪರ್ಕ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ದಕ್ಷತೆಗೆ ಪೂರಕವಾದ ಕಾರ್ಯತಂತ್ರದ ಸೌಲಭ್ಯವಾಗಿದೆ. ಜೇವರ್ ವಿಮಾನ ನಿಲ್ದಾಣ–ದೆಹಲಿ–ಮುಂಬೈ ಎಕ್ಸ್ ಪ್ರೆಸ್ ವೇ ಕಾರಿಡಾರ್ ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಫರಿದಾಬಾದ್ ನಲ್ಲಿ ಸುಸ್ಥಿರ ನಗರಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇದರ ನಿರ್ಮಾಣವು ಅನಿವಾರ್ಯವಾಗಿದೆ.
ಈ ಯೋಜನೆಯ ಸುಮಾರು 11 ಕಿಮೀ ಉದ್ದವನ್ನು ಎಲಿವೇಟೆಡ್ ಹೈವೇ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಡಿ.ಎನ್.ಡಿ (DND)-ಬಲ್ಲಭಗಢ ಬೈಪಾಸ್ ಮತ್ತು ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಗ್ರೀನ್ ಫೀಲ್ಡ್ ಸಂಪರ್ಕದ ನಿರ್ಣಾಯಕ ಭಾಗವಾಗಿದ್ದು, ಇದನ್ನು ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಗೆ ಜೋಡಿಸುತ್ತದೆ. ಈ ಕಾರಿಡಾರ್ ಫರಿದಾಬಾದ್ ಮಾಸ್ಟರ್ ಪ್ಲಾನ್ 2031ರ ಅಡಿಯಲ್ಲಿ ಹೆಚ್ಚಿನ ಸಾಂದ್ರತೆಯ ನಗರಾಭಿವೃದ್ಧಿ ಮತ್ತು ಭವಿಷ್ಯದ ಮೂಲಸೌಕರ್ಯ ವಿಸ್ತರಣೆಗಾಗಿ ಗುರುತಿಸಲಾದ ಪ್ರದೇಶದ ಮೂಲಕ ಹಾದುಹೋಗುತ್ತದೆ. ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್ ನ ಹೆಚ್ಚುವರಿ ವೆಚ್ಚ 689.24 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 450 ಕೋಟಿ ರೂಪಾಯಿಗಳನ್ನು ಭರಿಸಲು ಹರಿಯಾಣ ಸರ್ಕಾರ ಒಪ್ಪಿಗೆ ನೀಡಿದೆ.
ದೆಹಲಿ-ಮುಂಬೈನ ದೆಹಲಿ-ಫರಿದಾಬಾದ್-ಬಲ್ಲಭಗಢ-ಸೋಹ್ನಾ ಸ್ಪರ್ ನಿಂದ ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ರೀನ್ಫೀಲ್ಡ್ ಸಂಪರ್ಕಕ್ಕಾಗಿ ಯೋಜನೆಯ ಜೋಡಣೆ ನಕ್ಷೆ

*****
(ಪ್ರಕಟಣೆ ಐ.ಡಿ.: 2237637)
ವಿಸಿಟರ್ ಕೌಂಟರ್ : 10