ಸಂಪುಟ
azadi ka amrit mahotsav

ಪತ್ರಿಕಾ ಪ್ರಕಟಣೆ

ಪ್ರಕಟಣಾ ದಿನಾಂಕ: 01 MAR 2026 11:30PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದಿಂದಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪರಿಶೀಲಿಸಲು ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಭದ್ರತಾ ಸಚಿವ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಯಿತು.

ಇರಾನ್‌ನಲ್ಲಿ ಫೆಬ್ರವರಿ 28 ರಂದು ನಡೆದ ವಾಯುದಾಳಿಗಳು ಮತ್ತು ನಂತರದ ಹಲವು ಕೊಲ್ಲಿ ರಾಷ್ಟ್ರಗಳಲ್ಲಿನ ದಾಳಿಗಳು ಸೇರಿದಂತೆ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಸಮಿತಿಗೆ ವಿವರಿಸಲಾಯಿತು. ಆ ಪ್ರದೇಶದಲ್ಲಿ ನೆಲೆಸಿರುವ ದೊಡ್ಡ ಸಂಖ್ಯೆಯ ಭಾರತೀಯ ವಲಸಿಗ ಸಮುದಾಯದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಸಭೆ ಗಂಭೀರ ಕಳವಳ ವ್ಯಕ್ತಪಡಿಸಿತು.

ಆ ಪ್ರದೇಶದಿಂದ ಪ್ರವಾಸದಲ್ಲಿರುವ ಭಾರತೀಯ ಪ್ರಯಾಣಿಕರು ಮತ್ತು ನಿಗದಿತ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳು ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ಅಗಲಿರುವ ವ್ಯಾಪಕ ಪರಿಣಾಮಗಳನ್ನು ಕುರಿತು ಸಿಸಿಎಸ್ ಪರಾಮರ್ಶೆ ನಡೆಸಿತು.

ಈ ಬೆಳವಣಿಗೆಗಳಿಂದ ಬಾಧಿತರಾದ ಎಲ್ಲಾ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ಅಗತ್ಯ ಮತ್ತು ಕಾರ್ಯಸಾಧ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಸಿಎಸ್ ಎಲ್ಲಾ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿತು. ಯುದ್ಧವನ್ನು ಬೇಗನೆ ನಿಲ್ಲಿಸುವ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳುವ ಮಹತ್ವವನ್ನು ಸಭೆ ಬಲವಾಗಿ ಪ್ರತಿಪಾದಿಸಿತು.  

 

*****


(ಪ್ರಕಟಣೆ ಐ.ಡಿ.: 2234383) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Assamese , Gujarati