ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇರಳಂ ಎಂದು ಮರುನಾಮಕರಣ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಖ್ಯಾತ ಮಲಯಾಳಿ ಸಾಹಿತಿಗಳು 

प्रविष्टि तिथि: 27 FEB 2026 7:34PM by PIB Bengaluru

ಕೇರಳ ರಾಜ್ಯವನ್ನು “ಕೇರಳಂ” ಎಂದು ಮರುನಾಮಕರಣ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಖ್ಯಾತ ಮಲಯಾಳಿ ಸಾಹಿತಿಗಳ ಗುಂಪೊಂದು ಇಂದು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದೆ.

ಖ್ಯಾತ ಮಲಯಾಳಿ ಸಾಹಿತಿಗಳನ್ನು ಸ್ವಾಗತಿಸಿದುದು ಅತ್ಯಂತ ಸಂತೋಷಕರ ಮತ್ತು ಅವರೊಂದಿಗಿನ ಸಂವಾದವು ಅತ್ಯಂತ ಒಳನೋಟವುಳ್ಳದ್ದಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಕೇರಳಂ ಮತ್ತು ಮಲಯಾಳಂ ಭಾಷೆಯ ಬಗ್ಗೆ ಸಾಹಿತಿಗಳ ಉತ್ಕಟ ಬದ್ಧತೆಯನ್ನು ಈ ಸಭೆ ಪ್ರತಿಬಿಂಬಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್‌ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

ಕೇರಳ ರಾಜ್ಯವನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಆಗಮಿಸಿದ ಖ್ಯಾತ ಮಲಯಾಳಿ ಸಾಹಿತಿಗಳ ಗುಂಪನ್ನು ಸ್ವಾಗತಿಸಲು ತುಂಬಾ ಸಂತೋಷವಾಯಿತು.

ಈ ಸಂವಾದವು ಅತ್ಯಂತ ಒಳನೋಟವುಳ್ಳದ್ದಾಗಿತ್ತು ಹಾಗೂ ಇದು ಕೇರಳಂ ಮತ್ತು ಮಲಯಾಳಂ ಬಗ್ಗೆ ಅವರ ಬದ್ಧತೆಯ ಒಲವನ್ನು ಪ್ರತಿಬಿಂಬಿಸಿದೆ.

 

*****


(रिलीज़ आईडी: 2233940) आगंतुक पटल : 52
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Assamese , Manipuri , Punjabi , Gujarati , Odia , Tamil , Telugu , Malayalam