ಪ್ರಧಾನ ಮಂತ್ರಿಯವರ ಕಛೇರಿ
ಫೆಬ್ರವರಿ 28 ರಂದು ರಾಜಸ್ಥಾನಕ್ಕೆ ಪ್ರಧಾನಮಂತ್ರಿ ಭೇಟಿ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14 ವರ್ಷ ವಯಸ್ಸಿನ ಬಾಲಕಿಯರಿಗೆ ರಾಷ್ಟ್ರವ್ಯಾಪಿ HPV ಲಸಿಕೆ ಅಭಿಯಾನಕ್ಕೆ ಪ್ರಧಾನಮಂತ್ರಿ ಚಾಲನೆ
ಅಜ್ಮೀರ್‌ನಲ್ಲಿ 16,680 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ
ನಗರಾಭಿವೃದ್ಧಿ, ಕುಡಿಯುವ ನೀರು ಸರಬರಾಜು, ರಸ್ತೆಗಳು, ನೀರಾವರಿ, ಇಂಧನ, ಕೈಗಾರಿಕಾ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ ಯೋಜನೆಗಳು
ರಾಜಸ್ಥಾನದಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 21,800ಕ್ಕೂ ಹೆಚ್ಚು ಮಂದಿ ನೇಮಕಾತಿ ಪತ್ರ ವಿತರಿಸಲಿರುವ ಪ್ರಧಾನಮಂತ್ರಿ
प्रविष्टि तिथि:
27 FEB 2026 3:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 28, 2026 ರಂದು ರಾಜಸ್ಥಾನದ ಅಜ್ಮೀರ್‌ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:30ರ ಸುಮಾರಿಗೆ, ಪ್ರಧಾನಮಂತ್ರಿ ₹16,680 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಗರಾಭಿವೃದ್ಧಿ, ಕುಡಿಯುವ ನೀರು ಸರಬರಾಜು, ರಸ್ತೆಗಳು, ನೀರಾವರಿ, ಇಂಧನ, ಕೈಗಾರಿಕಾ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಈ ಯೋಜನೆಗಳು ಒಳಗೊಂಡಿವೆ.
ಆರೋಗ್ಯ ರಕ್ಷಣೆಯನ್ನು ಬಲಪಡಿಸುವ ಮತ್ತು ಮಹಿಳೆಯರ ಯೋಗಕ್ಷೇಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಅವರು 14 ವರ್ಷ ವಯಸ್ಸಿನ ಬಾಲಕಿಯರಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆಯ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಈ ಉಪಕ್ರಮವು ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಕಾಯಿಲೆಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಮತ್ತು ದೇಶಾದ್ಯಂತ ಹುಡುಗಿಯರು ಮತ್ತು ಮಹಿಳೆಯರ ದೀರ್ಘಕಾಲೀನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
ರಸ್ತೆ ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ಮೂಲಕ, ಬಂಡಿಕುಯಿಯಿಂದ ಜೈಪುರಕ್ಕೆ 4-ಲೇನ್ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ, ಅಮೃತಸರ-ಜಾಮ್‌ನಗರ ಆರ್ಥಿಕ ಕಾರಿಡಾರ್‌ನ ಪ್ಯಾಕೇಜ್ 7 ವಿಭಾಗದಲ್ಲಿ 6-ಲೇನ್ ಪ್ರವೇಶ ನಿಯಂತ್ರಿತ ಹಸಿರು ಹೆದ್ದಾರಿ ಮತ್ತು ದೆಹಲಿ-ವಡೋದರಾ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯ ಪ್ಯಾಕೇಜ್ 14 ವಿಭಾಗದಲ್ಲಿ 8-ಲೇನ್ ಕ್ಯಾರೇಜ್‌ವೇ ಸೇರಿದಂತೆ ಹಲವಾರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಜೋಧ್‌ಪುರ ನಗರದಲ್ಲಿ 4-ಲೇನ್ ಎಲಿವೇಟೆಡ್ ರಸ್ತೆ, ಬರಾನ್ ಜಿಲ್ಲೆಯ ಮಲಬ್ಮೋರಿ-ಮಂಗೋಲ್-ಬರಾನ್ ರಾಜ್ಯ ಹೆದ್ದಾರಿ ಸೇರಿದಂತೆ ಇತರ ಯೋಜನೆಗಳಿಗೆ ಪ್ರಧಾನಿ ಅಡಿಪಾಯ ಹಾಕಲಿದ್ದಾರೆ.
ಎಲ್ಲರಿಗೂ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿಗಳು ನೊನೆರಾ ಪ್ರಮುಖ ಕುಡಿಯುವ ನೀರಿನ ಯೋಜನೆಯ ನಾಲ್ಕು ಪ್ಯಾಕೇಜ್‌ಗಳಿಗೆ ಮತ್ತು ಪರ್ವಾನ್ ಅಕವದ್ ಪ್ರಮುಖ ಕುಡಿಯುವ ನೀರಿನ ಯೋಜನೆಯ ಐದು ಪ್ಯಾಕೇಜ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನವೀಕರಿಸಬಹುದಾದ ಇಂಧನ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ರಾಜಸ್ಥಾನದಲ್ಲಿನ ಉತ್ಪಾದನಾ ಕೇಂದ್ರಗಳಿಂದ ತಡೆರಹಿತ ಪ್ರಸರಣವನ್ನು ಖಚಿತಪಡಿಸಿಕೊಳ್ಳಲು, ಪ್ರಧಾನಮಂತ್ರಿಗಳು ರಾಜಸ್ಥಾನದಲ್ಲಿ ನವೀಕರಿಸಬಹುದಾದ ಇಂಧನ ವಲಯಗಳಿಂದ (REZ) ವಿದ್ಯುತ್ ಸ್ಥಳಾಂತರಿಸುವ ಪ್ರಸರಣ ವ್ಯವಸ್ಥೆಗಳನ್ನು ಉದ್ಘಾಟಿಸಲಿದ್ದಾರೆ. ಐದು 220 ಕೆವಿ ಗ್ರಿಡ್ ಸಬ್‌ಸ್ಟೇಷನ್‌ಗಳು ಮತ್ತು ಎರಡು 400 ಕೆವಿ ಗ್ರಿಡ್ ಸಬ್‌ಸ್ಟೇಷನ್‌ಗಳು ಮತ್ತು ಸಂಬಂಧಿತ ಪ್ರಸರಣ ಮಾರ್ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಉದ್ಯೋಗ ಸೃಷ್ಟಿ ಮತ್ತು ಯುವ ಸಬಲೀಕರಣಕ್ಕೆ ತಮ್ಮ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ಪ್ರಧಾನ ಮಂತ್ರಿಗಳು ರಾಜಸ್ಥಾನದ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 21,800ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ.
*****
(रिलीज़ आईडी: 2233565)
आगंतुक पटल : 49
इस विज्ञप्ति को इन भाषाओं में पढ़ें:
Assamese
,
Odia
,
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Punjabi
,
Gujarati
,
Tamil
,
Telugu
,
Malayalam