ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು" ಕುರಿತು ಫೆಬ್ರವರಿ 27 ರಂದು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ 


ಕೇಂದ್ರ ಬಜೆಟ್ ನ ಪ್ರಮುಖ ವಿಷಯಗಳ ಕುರಿತು ಆಯೋಜಿಸಲಾಗುವ ಬಜೆಟ್ ನಂತರದ ವೆಬಿನಾರ್ ಗಳ ಸರಣಿಯಲ್ಲಿ ಇದು ಮೊದಲನೆಯದು

ಪ್ರಕಟಣಾ ದಿನಾಂಕ: 26 FEB 2026 8:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ಬೆಳಗ್ಗೆ 11:30ರ ಸುಮಾರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ "ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು" ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವಜನಿಕ ಬಂಡವಾಳ ವೆಚ್ಚ ಹೂಡಿಕೆ, ಮೂಲಸೌಕರ್ಯ, ಬ್ಯಾಂಕಿಂಗ್ ವಲಯದ ಸುಧಾರಣೆಗಳು, ಹಣಕಾಸು ವಲಯದ ಸಂರಚನೆ, ಬಂಡವಾಳ ಮಾರುಕಟ್ಟೆಗಳ ಆಳಗೊಳಿಸುವಿಕೆ ಮತ್ತು ತೆರಿಗೆ ಸುಧಾರಣೆಗಳ ಮೂಲಕ ಜೀವನ ಸುಗಮಗೊಳಿಸುವಿಕೆಯ ಕುರಿತ ಚರ್ಚೆಗಳನ್ನು ಈ ವೆಬಿನಾರ್ ಒಳಗೊಂಡಿರಲಿದೆ. 

2026–27ರ ಕೇಂದ್ರ ಬಜೆಟ್ ನಿಂದ ಹೊರಹೊಮ್ಮಿರುವ ಪ್ರಮುಖ ವಿಷಯಗಳ ಕುರಿತು ಆಯೋಜಿಸಲಾಗಿರುವ ಬಜೆಟ್ ನಂತರದ ವೆಬಿನಾರ್‌ ಗಳ ಸರಣಿಯಲ್ಲಿ ಈ ವೆಬಿನಾರ್ ಮೊದಲನೆಯದು. ಹಿಂದಿನ ಅನುಭವಗಳ ಆಧಾರದ ಮೇಲೆ ಪಾಠ ಕಲಿಯುತ್ತಾ, 2026-27ನೇ ಹಣಕಾಸು ವರ್ಷದ ಬಜೆಟ್ ಘೋಷಣೆಗಳ ಫಲಿತಾಂಶ - ಆಧಾರಿತ ಅನುಷ್ಠಾನ ಖಾತರಿಪಡಿಸುವ ಮತ್ತು ಭಾಗವಹಿಸುವವರಿಂದ ರಚನಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವ ಗುರಿಯನ್ನು ಈ ವೆಬಿನಾರ್ ಗಳು ಹೊಂದಿವೆ. ಇದು ವೈವಿಧ್ಯಮಯ ಪಾಲುದಾರರ ಪ್ರಾಯೋಗಿಕ ಅನುಭವ ಮತ್ತು ಒಳನೋಟಗಳಿಂದ ಕೂಡಿರಲಿದೆ.   ಪ್ರಮುಖ ಬಜೆಟ್ ಘೋಷಣೆಗಳ ಪರಿಣಾಮಕಾರಿ ಅನುಷ್ಠಾನ ಮಾರ್ಗಗಳ ಕುರಿತು ಚರ್ಚಿಸಲು ಉದ್ಯಮ, ಹಣಕಾಸು ಸಂಸ್ಥೆಗಳು, ಮಾರುಕಟ್ಟೆ ಭಾಗೀದಾರರು, ಸರ್ಕಾರ, ಕೈಗಾರಿಕಾ ನಿಯಂತ್ರಕರು ಮತ್ತು ಶಿಕ್ಷಣ ತಜ್ಞರನ್ನು ಈ ವೆಬಿನಾರ್‌ ಒಂದುಗೂಡಿಸಲಿದೆ.

 

*****


(ಪ್ರಕಟಣೆ ಐ.ಡಿ.: 2233405) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , Malayalam , Assamese , English , Urdu , Marathi , हिन्दी , Bengali , Gujarati