ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಮಹಾರತ್ನ ಸಿ.ಪಿ.ಎಸ್.ಇ. ಗಳಿಗೆ ಅಧಿಕಾರ ನಿಯೋಜನೆಯ ಮೇಲಿನ ಮಾರ್ಗಸೂಚಿಗಳಿಂದ ಪವರ್ ಗ್ರಿಡ್ ಗೆ ನಿಯೋಜನೆಯನ್ನು ಹೆಚ್ಚಿಸಲೋಸುಗ ಈಕ್ವಿಟಿ ಹೂಡಿಕೆ ಮಿತಿಯನ್ನು ಪ್ರತಿ ಅಂಗಸಂಸ್ಥೆಗೆ ರೂ.5000 ಕೋಟಿಯಿಂದ ಪ್ರತಿ ಅಂಗಸಂಸ್ಥೆಗೆ ರೂ.7500 ಕೋಟಿಗೆ ಹೆಚ್ಚಿಸಲು ಈ ಮೂಲಕ ನಿರ್ಧರಿಸಿರುವುದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ
प्रविष्टि तिथि:
24 FEB 2026 3:35PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು, ಮಹಾರತ್ನ ಸಿ.ಪಿ.ಎಸ್.ಇ. ಗಳಿಗೆ ಅನ್ವಯವಾಗುವ ಅಧಿಕಾರ ನಿಯೋಜನೆಯ ಮೇಲಿನ ಸಾರ್ವಜನಿಕ ಉದ್ಯಮಗಳ ಇಲಾಖೆಯ (ಡಿಪಿಇ) ಫೆಬ್ರವರಿ 4, 2010ರ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅಡಿಯಲ್ಲಿ ಪವರ್ ಗ್ರಿಡ್ ಗೆ ನಿಯೋಜನೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ಈ ಅನುಮೋದನೆಯು ಪವರ್ ಗ್ರಿಡ್ ನ ಅನುಮತಿಸಲಾದ ಇಕ್ವಿಟಿ ಹೂಡಿಕೆ ಮಿತಿಯನ್ನು ಪ್ರತಿ ಅಂಗಸಂಸ್ಥೆಗೆ ರೂ.5,000 ಕೋಟಿಯಿಂದ ರೂ.7,500 ಕೋಟಿಗೆ ಹೆಚ್ಚಿಸಿದೆ ಮತ್ತು ಕಂಪನಿಯ ನಿವ್ವಳ ಮೌಲ್ಯದ 15% ರ ಅಸ್ತಿತ್ವದಲ್ಲಿರುವ ಮಿತಿಯನ್ನು ಉಳಿಸಿಕೊಂಡಿದೆ.
ಈ ಅನುಮೋದನೆಯು ದೇಶದ ಅತಿದೊಡ್ಡ ಮತ್ತು ಅತ್ಯಂತ ಅನುಭವಿ ಪ್ರಸರಣ ಸೇವಾ ಪೂರೈಕೆದಾರ ಪವರ್ ಗ್ರಿಡ್ ಗೆ ತನ್ನ ಪ್ರಮುಖ ವ್ಯವಹಾರದಲ್ಲಿ ಹೂಡಿಕೆಯನ್ನು ವಿಸ್ತರಿಸಲು ಮತ್ತು ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸ್ಥಳಾಂತರಿಸುವಿಕೆಯನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ, ಇದು ಪಳೆಯುಳಿಕೆ-ಆಧಾರಿತವಲ್ಲದ ಮೂಲಗಳಿಂದ 500 ಗಿಗಾವ್ಯಾಟ್ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.
ಪವರ್ ಗ್ರಿಡ್ ಈಗ ಅಲ್ಟ್ರಾ ಹೈ ವೋಲ್ಟೇಜ್ ಆಲ್ಟರ್ನೇಟಿಂಗ್ ಕರೆಂಟ್ (ಯು.ಎಚ್.ವಿ.ಎ.ಸಿ.) ಮತ್ತು ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ (ಎಚ್.ವಿ.ಡಿ.ಸಿ.) ಪ್ರಸರಣ ಜಾಲಗಳಂತಹ ಬಂಡವಾಳ-ತೀವ್ರ ಪ್ರಸರಣ ಯೋಜನೆಗಳಿಗೆ ಬಿಡ್ಗಳಲ್ಲಿ ಭಾಗವಹಿಸಬಹುದು. ಹೆಚ್ಚುವರಿಯಾಗಿ, ನಿರ್ಣಾಯಕ ಪ್ರಸರಣ ಯೋಜನೆಗಳಿಗೆ ಬಿಡ್ಡರ್ಗಳ ಆಯ್ಕೆಗಾಗಿ ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ (ಟಿಬಿಸಿಬಿ) ನಲ್ಲಿ ಸ್ಪರ್ಧೆಯನ್ನು ವಿಸ್ತರಿಸುತ್ತದೆ. ಇದು ಉತ್ತಮ ಬೆಲೆ ಅನ್ವೇಷಣೆಯನ್ನು ಖಚಿತಪಡಿಸುತ್ತದೆ ಮತ್ತು ಅಂತಿಮವಾಗಿ ಗ್ರಾಹಕರಿಗೆ ಕೈಗೆಟುಕುವ ಮತ್ತು ಶುದ್ಧ ಇಂಧನ( ಶಕ್ತಿ) ಲಭ್ಯತೆಗೆ ಕಾರಣವಾಗುತ್ತದೆ.
*****
(रिलीज़ आईडी: 2232196)
आगंतुक पटल : 58
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam