ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಕಚ್ಚಾ ಸೆಣಬಿಗೆ 2026-27ರ ಹಂಗಾಮಿನ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
24 FEB 2026 3:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026-27ನೇ ಸಾಲಿನ ಮಾರುಕಟ್ಟೆ ಋತುವಿಗಾಗಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್ ಪಿ) ಇಂದು ಅನುಮೋದನೆ ನೀಡಿದೆ.
2026-27ರ ಹಂಗಾಮಿನಲ್ಲಿ ಕಚ್ಚಾ ಸೆಣಬಿಗೆ (ಟಿಡಿ-3 ದರ್ಜೆ) ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್ ಗೆ ರೂ. 5,925/- ನಿಗದಿಪಡಿಸಲಾಗಿದೆ. ಇದು ಭಾರತದಾದ್ಯಂತದ ಮೌಲ್ಯ ಹೊಂದಿಸಿದ ಸರಾಸರಿ ಉತ್ಪಾದನಾ ವೆಚ್ಚದ ಶೇ. 61.8 ರಷ್ಟು ಆದಾಯವನ್ನು ಖಚಿತಪಡಿಸಲಿದೆ. 2026-27ನೇ ಸಾಲಿಗೆ ಘೋಷಿಸಲಾದ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯು, 2018-19ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರ ಘೋಷಿಸಿದಂತೆ ಅಖಿಲ ಭಾರತ ಉತ್ಪಾದನಾ ವೆಚ್ಚದ ವೇಟೆಡ್ ಆ್ಯವರೇಜ್ ನ ಕನಿಷ್ಠ 1.5 ಪಟ್ಟಿನಷ್ಟು ಎಂಎಸ್‌ಪಿಯನ್ನು ನಿಗದಿಪಡಿಸಬೇಕೆಂಬ ಮಾನದಂಡಕ್ಕನುಗುಣವಾಗಿದೆ.
2026-27ರ ಮಾರುಕಟ್ಟೆ ಋತುವಿನಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯು 2025-26ರ ಮಾರುಕಟ್ಟೆ ಋತುವಿಗಿಂತ ಪ್ರತಿ ಕ್ವಿಂಟಾಲ್ ಗೆ ರೂ.275/- ರಷ್ಟು ಹೆಚ್ಚಾಗಿದೆ. ಸರ್ಕಾರವು 2014-15 ರಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ.2400/- ರಷ್ಟಿದ್ದ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು 2026-27 ರಲ್ಲಿ ಕ್ವಿಂಟಾಲ್ ಗೆ ರೂ.5,925/- ಕ್ಕೆ ಹೆಚ್ಚಳ ಮಾಡಿದ್ದು, ಪ್ರತಿ ಕ್ವಿಂಟಾಲ್ ಸೆಣಬಿನ ಎಂ ಎಸ್ ಪಿ ರೂ.3,525/- ರಷ್ಟು (2.5 ಪಟ್ಟು) ಹೆಚ್ಚಳವನ್ನು ದಾಖಲಿಸಿದೆ.
ಸೆಣಬು ಬೆಳೆಯುವ ರೈತರಿಗೆ 2014-15 ರಿಂದ 2025-26 ರ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ ರೂ.1,342 ಕೋಟಿಗಳಷ್ಟನ್ನು ಪಾವತಿಸಿದ್ದು, 2004-05 ರಿಂದ 2013-14 ರ ಅವಧಿಯಲ್ಲಿ ಪಾವತಿಸಿದ ಮೊತ್ತ ರೂ.441 ಕೋಟಿಗಳಾಗಿತ್ತು.
ಭಾರತೀಯ ಸೆಣಬು ನಿಗಮ (ಜೆಸಿಐ) ಬೆಲೆ ಬೆಂಬಲ ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಮುಂದುವರಿಯಲಿದ್ದು, ಅಂತಹ ಕಾರ್ಯಾಚರಣೆಗಳಲ್ಲಿ ಯಾವುದಾದರೂ ನಷ್ಟ ಉಂಟಾದಲ್ಲಿ, ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಮರುಪಾವತಿ ಮಾಡಲಿದೆ.
*****
(ಪ್ರಕಟಣೆ ಐ.ಡಿ.: 2232194)
ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
Telugu
,
Malayalam
,
Marathi
,
Assamese
,
Bengali
,
Odia
,
English
,
Urdu
,
हिन्दी
,
Punjabi
,
Gujarati